By Village Missionary Movement
Sunday, 28-Sep-2025ಧೈನಂದಿನ ಧ್ಯಾನ(Kannada) – 28.09.2025
ತಾಳ್ಮೆಯ ಮನೋಭಾವನೆ ಬೇಡ
"ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ" - ಫಿಲಿಪ್ಪಿ 4:4
ಸುಂದರವಾದ ಹಣ್ಣಿನ ಮರಗಳು, ರುಚಿಕರವಾದ ಹಣ್ಣುಗಳು ಮತ್ತು ಎಲ್ಲೆಡೆ ಹಕ್ಕಿಗಳು ಹಾಡುವ ಶಬ್ದ. ಇಂತಹ ಸುಂದರವಾದ ತೋಟದೊಳಗೆ ನಿಮ್ಮನ್ನು ಬಿಟ್ಟರೆ ಹೇಗಿರುತ್ತದೆ? ಹಣ್ಣುಗಳನ್ನು ತಿನ್ನುತ್ತಾ ಮರಗಳನ್ನು ನೋಡಿ ಆನಂದಿಸುತ್ತಾ ಜಾಲಿಯಾಗಿ ಇರ್ತೀರ ಅಲ್ವಾ? ಇಷ್ಟೂ ಹಣ್ಣಿನ ಮರಗಳನ್ನು ನೋಡಿ ಆನಂದಿಸುವ ನೀವು ಎಂದಾದರೂ ಮುಳ್ಳುಗಿಡವನ್ನು ನೋಡಿ ಆನಂದಿಸಿದ್ದೀರಾ? ಯಾರೂ ಆನಂದಪಡುವುದಿಲ್ಲ. ಹೌದು ತಾನೇ!
ಒಂದು ಕಾಲದಲ್ಲಿ, ಅರಣ್ಯದಲ್ಲಿ ಒಂದು ಮುಳ್ಳಿನ ಪೊದೆ ಇತ್ತು. ಆ ಗಿಡ ತನ್ನ ಸುತ್ತಲೂ ನೋಡಿ ಮನನೊಂದಿತು. ಛೇ, ನನಗಿಂತ ಕೆಟ್ಟವರು ಯಾರೂ ಇಲ್ಲ. ಮೇಲೆ ನೋಡಿದರೆ ಸೂರ್ಯನ ಕಿರಣಗಳು, ಅಗ್ನಿ ಬಾಣಗಳಂತೆ ಹರಿಯುತ್ತಿದೆ. ನಾಲ್ಕು ಕಡೆಯಿಂದ ಬಿಸಿ ಗಾಳಿ, ನೀವು ಸ್ವಲ್ಪ ಮುಂದೆ ಹೋದರೆ, ಕೆಲವು ಅರೆ-ಪೊದೆಗಳು, ಇನ್ನೂ ಸ್ವಲ್ಪ ಮುಂದೆ ಹೋದರೆ, ಕುರಿಗಳು ಮೇಯಲು ಕೆಲವು ಎಲೆಗಳು. ಛೇ ಏಕೆ ನನಗೆ ಮಾತ್ರ ಇಂತಹ ಅಲ್ಪವಾದ ಜೀವನವೋ ಎಂದು ನಿಟ್ಟುಸಿರು ಬಿಟ್ಟಿತು. ನಾನು ರಾಜನ ಮನೆಯಲ್ಲಿ ಸುಂದರವಾದ ಗುಲಾಬಿ ಅಥವಾ ದ್ರಾಕ್ಷಿ ಗಿಡವಾಗಿ ಬೆಳೆದಿದ್ದರೆ ಹೇಗಿರುತ್ತಿತ್ತು? ಜನರಿಗೆ ಮತ್ತುಬರಿಸುವ ದ್ರಾಕ್ಷಿ ಹಣ್ಣುಗಳನ್ನೂ ದ್ರಾಕ್ಷಿರಸವನ್ನೂ ನೀಡುತ್ತಿದ್ದೆ, ತೋಟಗಾರ ನನ್ನನ್ನು ನೋಡಿ ನೋಡಿ ಬೆಳೆಸುತ್ತಿದ್ದ. ಛೇ, ಹೋಗಿ ಹೋಗಿ ಒಂದು ಮುಳ್ಳಿನ ಪೊದೆಯಾಗಿ ಬೆಳೆದಿದ್ದೇನಲ್ಲಾ, ಕೊಂಬೆಗಳಲ್ಲಿ ಒಂದು ಗುಬ್ಬಚ್ಚಿ ಕೂಡ ಗೂಡು ಕಟ್ಟೋದಿಲ್ಲ ಅನ್ನುತ್ತಲ್ಲಾ ಎಂದು ಗುಣುಗುಟ್ಟಿತು.
ಈ ಸಮಯದಲ್ಲಿಯೇ, ಮೋಶೆ ಅಣ್ಣ ತನ್ನ ಮಾವನ ಕುರಿಗಳನ್ನು ಮೇಯಿಸುತ್ತಾ ಆ ಅರಣ್ಯಕ್ಕೆ ಬಂದರು. ಅಲ್ಲಿ ನೋಡಿದರೆ ಮುಳ್ಳಿನ ಪೊದೆ ಹೊತ್ತಿ ಉರಿಯುತ್ತಿತ್ತು. ಮೋಶೆ ಅಣ್ಣನಿಗೆ ಆಶ್ಚರ್ಯ, ಯಾರೂ ಇಲ್ಲದ ಕಾಡಿನಲ್ಲಿ ಮುಳ್ಳಿನ ಪೊದೆ ಹೇಗೆ ಹೊತ್ತಿ ಉರಿಯುತ್ತಿದೆ. ಹತ್ತಿರ ಹೋಗಿ ನೋಡೋಣ ಎಂದು ಭಾವಿಸಿ, ಪಕ್ಕದಲ್ಲಿ ಹೋಗಿ ನೋಡಿದರೆ ದೇವರು ಆ ಮುಳ್ಳಿನ ಪೊದೆಯಲ್ಲಿ ಕಾಣಿಸಿಕೊಂಡು ಮೋಶೆಯೊಂದಿಗೆ ಮಾತನಾಡಿದರು. ಹೋಗಿ ಹೋಗಿ ಒಂದು ಮುಳ್ಳಿನ ಪೊದೆ ಎಂದು ನೊಂದುಕೊಂಡ ಆ ಮುಳ್ಳಿನ ಪೊದೆಯಿಂದಲೇ, ಇಸ್ರಾಯೇಲ್ಯರ ವಿಮೋಚನೆಗಾಗಿ ಆಜ್ಞೆ ಹುಟ್ಟಿತು.
ತಮ್ಮ, ತಂಗಿ ನೀನೂ ಕೂಡ ನಾನು ಸಾಮಾನ್ಯನು, ಯಾವುದಕ್ಕೂ ಪ್ರಯೋಜನವಿಲ್ಲದವನು, ಅಂದವಿಲ್ಲದವನು, ಜ್ಞಾನವಿಲ್ಲದವನು, ನಾನೊಬ್ಬ ಬಡವ, ನಾನು ಮಾತ್ರ ಒಂದು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೆ ಹೇಗೆ ಬೆಳೆಯುತ್ತಿದ್ದೆ. ನಾನು ಎಷ್ಟು ಚೆನ್ನಾಗಿ ಇರುತ್ತಿದ್ದೆ ಎಂದು ಪ್ರಲಾಪಿಸುತ್ತಿದ್ದೀಯಾ? ಒಂದು ವೇಳೆ ಅವಳಂತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ಈ ವ್ಯಕ್ತಿಯಂತೆ ಇದ್ದಿದ್ದರೆ, ಯಾವುದೇ ಚಿಂತೆಯಿಲ್ಲದೇ ಇದ್ದಿರಬಹುದೇ ಎಂದು ಭಾವಿಸುತ್ತೀಯೋ? ಬಹುಶಃ ಇತರರ ನೆನಪುಗಳನ್ನು ನೋಡುವ ಸಾಧನವಿದ್ದರೆ, ಅವರು ನಿಮ್ಮಂತೆಯೇ ತನ್ನ ಬಗ್ಗೆ ಅತೃಪ್ತರಾಗಿದ್ದಾರೆಂದು ನೀವು ನೋಡುತ್ತಿದ್ದಿರಿ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿ ಯೇಸು ಕ್ರಿಸ್ತನೊಂದಿಗೆ ಸಂತೋಷದಿಂದ ಬದುಕಲು ಕಲಿ. O.k ನಾ.
- Mrs. ಜೀವಾ ವಿಜಯ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482