Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.09.2025
Share:

By Village Missionary Movement

Friday, 26-Sep-2025

ಧೈನಂದಿನ ಧ್ಯಾನ(Kannada) – 26.09.2025

 

ಯೇಸುವಿನ ಬಯಕೆ 

 

"ಆದದರಿಂದ ಬೆಳೆಯ ಯಜಮಾನನನ್ನು - ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ ಎಂದು ಹೇಳಿದನು" - ಮತ್ತಾಯ 9:38

 

ಸತ್ತಿರಂ ಎಂಬ ಊರಿನಲ್ಲಿ, ಒಬ್ಬ ದೇವಸೇವಕರು ಪ್ರತಿ ಶುಕ್ರವಾರದಂದು ಒಂದು ಮನೆಯಲ್ಲಿ ಪ್ರಾರ್ಥನಾ ಕೂಟ ನಡೆಸುತ್ತಿದ್ದರು. ದೇವರನ್ನು ಅರಿಯದ ಆ ಕುಟುಂಬದವರು ಈ ಪ್ರಾರ್ಥನೆಯ ಮೂಲಕ ಯೇಸುವನ್ನು ಅರಿತುಕೊಂಡರು. ಆದರೆ ಆ ಹಳ್ಳಿಯಲ್ಲಿರುವ ಎಲ್ಲಾ ಜನರು ಈ ಸೇವೆಗೆ ವಿರುದ್ಧವಾಗಿ ವರ್ತಿಸಿದರು. ದೇವಸೇವಕರು ಹಳ್ಳಿಯೊಳಗೆ ಬರಬಾರದು ಎಂದು ಹಲವು ಬಾರಿ ತೊಂದರೆ ನೀಡಿದರು. ಒಂದು ಭಾನುವಾರ, ಅನಿರೀಕ್ಷಿತವಾಗಿ, ಬೇರೊಬ್ಬ ಸೇವಕರು ಆ ಹಳ್ಳಿಗೆ ಬರಬೇಕಾಯಿತು. ತಕ್ಷಣವೇ, ಜನರ ದೊಡ್ಡ ಗುಂಪು ಸೇವಕರನ್ನು ಸುತ್ತುವರೆದು ಅವರನ್ನು ಹೊಡೆಯಲು ಯೋಚಿಸಿದರು. ಈ ಕಾರ್ಯವನ್ನು ತಿಳಿದಾಗ, ಪ್ರಾರ್ಥನಾ ಗುಂಪು ನಡೆದ ಮನೆಯಿಂದ ಒಬ್ಬ ವ್ಯಕ್ತಿಯು ಬಂದು ಕರ್ತನು ಅವರಿಗೆ ಮಾಡಿದ ಅದ್ಭುತಗಳ ಬಗ್ಗೆ ಹೇಳಿದರು. ಹೇಗಂದರೆ ಪ್ರಾರ್ಥನಾ ಗುಂಪು ನಡೆಸಲ್ಪಟ್ಟ ಆ ಮನೆಯ ಯಜಮಾನಿಗೆ ಕಿವಿ ಕೇಳುತ್ತಿರಲಿಲ್ಲ. ಕರ್ತನ ಬಳಿ ಪ್ರಾರ್ಥಿಸಿದಾಗ, ಸಂಪೂರ್ಣ ಗುಣಮುಖಳಾದಳು ಅಷ್ಟು ಮಾತ್ರವಲ್ಲದೇ ಮನೆಯ ಬಡತನವೂ ಬದಲಾಯಿತು. ಅವರು ಯೇಸುವನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದ ನಂತರವೇ ಇದೆಲ್ಲವೂ ಅವರಿಗೆ ಸಂಭವಿಸಿತು ಎಂದು ಅವರು ಹೇಳಿದರು. ಅಲ್ಲಿ ಸೇರಿದ್ದವರು ಏನೂ ಮಾತನಾಡಲಾಗದೇ ಮೂಕರಾಗಿ ನಿಂತರು.

 

ಹೊಸ ಒಡಂಬಡಿಕೆಯಲ್ಲಿ, ಅಶುದ್ಧಾತ್ಮ ಹಿಡಿದಿದ್ದ ಒಬ್ಬ ಮನುಷ್ಯನ ಬಗ್ಗೆ ನಮಗೆ ಗೊತ್ತು. ಆ ಮನುಷ್ಯನ ವಾಸಸ್ಥಾನವು ಸಮಾಧಿಗಳ ನಡುವೆ ಇತ್ತು. ಯಾರೂ ಅವನನ್ನು ಸರಪಣಿಗಳಿಂದಲೂ ಬಂಧಿಸಲು ಸಾಧ್ಯವಾಗಲಿಲ್ಲ. ಯೇಸು ಅಂತಹ ಮನುಷ್ಯನಿಗೆ ಅದ್ಭುತವಾದ ಸ್ವಸ್ಥತೆಯನ್ನು ನೀಡಿದರು. ಅಶುದ್ಧಾತ್ಮ ಹಿಡಿದಿದ್ದ ಆ ಮನುಷ್ಯನು ತಕ್ಷಣ ಎದ್ದು ಕುಳಿತುಕೊಂಡದ್ದನ್ನು ಸ್ದಸ್ಥನಾಗಿದ್ದದ್ದನ್ನು ಕಂಡ ಜನರು ಭಯಭೀತರಾದರು. ಯೇಸು ಅವನಿಗೆ, “ನಿನ್ನ ಸ್ವಂತ ಜನರ ಬಳಿಗೆ ಹೋಗಿ ಕರ್ತನು ನಿನಗೆ ಕರುಣೆ ತೋರಿಸಿ, ನಿನಗೆ ಮಾಡಿದ್ದೆಲ್ಲವನ್ನು ತಿಳಿಸು ಎಂದು ಹೇಳಿದರು. ಆದ್ದರಿಂದ ಅವನು ಹೋಗಿ ಯೇಸು ಅವನಿಗೆ ಮಾಡಿದ್ದನ್ನೆಲ್ಲಾ ಪ್ರಸಿದ್ಧಪಡಿಸಲು ಪ್ರಾರಂಭಿಸಿದನು.

 

ಇದನ್ನು ಓದುತ್ತಿರುವ ಪ್ರಿಯರೇ, ನಾವು ಇಂತಹ ಘಟನೆಗಳ ಬಗ್ಗೆ ಹಲವು ಬಾರಿ ಕೇಳಿದ್ದೇವೆ ಮತ್ತು ಓದಿದ್ದೇವೆ. ಆದರೆ ಹಲವು ಬಾರಿ ಕರ್ತನ ಬಗ್ಗೆ ಪ್ರಕಟಿಸಲು ನಾವು ಮುಂದೆ ಬರುವುದೇ ಇಲ್ಲ. ಇನ್ನೂ ವಿಳಂಬ ಮಾಡುತ್ತಲೇ ಇದ್ದೇವೆ. ಇದನ್ನು ಓದುತ್ತಿರುವ ನೀವು ಸಹ, ಇದನ್ನು ಓದುವುದರೊಂದಿಗೆ ಸುಮ್ಮನಾಗದೇ, ನಿಮ್ಮಿಂದ ಸಾಧ್ಯವಾಗುವುದನ್ನು ಕರ್ತನ ನಾಮ ಮಹಿಮೆ ಹೊಂದುವಂತೆಯೂ ಸ್ಥಿರವಾದ ನಿತ್ಯಜೀವವನ್ನು ಹೊಂದುವಂತೆಯೂ ಕರ್ತನು ಕೊಟ್ಟಿರುವ ಸಮಯವನ್ನು ಅವರಿಗಾಗಿ ಉಪಯೋಗಿಸಿ ತೀವ್ರವಾಗಿ ಕಾರ್ಯಮಾಡಿರಿ. ಇದು ಯೋಚಿಸುವ ಸಮಯ. ಆದ್ದರಿಂದ ಮೌನವಾಗಿರಬೇಡಿರಿ. ಯೋಚಿಸುತ್ತೀರಿ! ಕಾರ್ಯನಿರ್ವಹಿಸುತ್ತೀರಿ!

- V.P. ಭಾಗ್ಯಮುತ್ತು

 

ಪ್ರಾರ್ಥನಾ ಅಂಶ:

50 ಸಾವಿರ ಹಳ್ಳಿಗಳಿಗೆ ಸುವಾರ್ತೆ ಸಾರುವ ಯೋಜನೆಯಲ್ಲಿ, ವಾರದಲ್ಲಿ ಮೂರು ದಿನ ನಮ್ಮೊಂದಿಗೆ ಸೇರಿ ಸೇವೆ ಮಾಡುವ ಸಹಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al