Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.09.2025
Share:

By Village Missionary Movement

Friday, 19-Sep-2025

ಧೈನಂದಿನ ಧ್ಯಾನ(Kannada) – 19.09.2025

 

ಸಮರ್ಪಣೆ

 

"...ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು..." - ಪ್ರಕಟಣೆ. 2:4

 

1873 ರಲ್ಲಿ, ಒಬ್ಬ ಯುವಕ ಕುಷ್ಠರೋಗದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಮೊಲಕೈನ ಒಂದು ದ್ವೀಪಕ್ಕೆ ಹೋದನು. ಅವರೇ ಜೋಸೆಫ್ ಡ್ಯಾಮಿಯನ್ (Damien). ಅನೇಕ ಜನರು ಅವರನ್ನು ಅಲ್ಲಿಗೆ ಹೋಗದಂತೆ ತಡೆದರು. ಆದರೆ ಡ್ಯಾಮಿಯನ್ ತನ್ನ ನಿರ್ಧಾರ ಮತ್ತು ಸಮರ್ಪಣೆಯಲ್ಲಿ ದೃಢವಾಗಿದ್ದರು. ಅಲ್ಲಿನ ಜನರಿಗೆ ಅನೇಕ ವೈದ್ಯಕೀಯ ಸೇವೆಗಳನ್ನು ಒದಗಿಸಿದರು. ಒಂದು ದಿನ, ಕುದಿಯುವ ನೀರು ಆಕಸ್ಮಿಕವಾಗಿ ಅವರ ಮೇಲೆ ಬಿದ್ದಿತು. ನಂತರ ಅವರ ಕೈಗಳು ಮರಗಟ್ಟಿರುವುದನ್ನು ಅರಿತು ಆಘಾತಕ್ಕೊಳಗಾದರು. ಹೌದು, ಅವರೂ ಕುಷ್ಠರೋಗದಿಂದ ಬಳಲುತ್ತಿದ್ದರು. ಆಘಾತದಿಂದ ಚೇತರಿಸಿಕೊಂಡ ನಂತರ, ಡ್ಯಾಮಿಯನ್ ದ್ವೀಪದ ಜನರಿಗೆ ನಾನೂ ನಿಮ್ಮಲ್ಲಿ ಒಬ್ಬನಾಗಿದ್ದೇನೆ ಎಂದು ಹೇಳಿದರು. ಆ ವಾರದ ಭಾನುವಾರದ ಸೇವೆಯ ಸಮಯದಲ್ಲಿ, "ದೇವರು ಕುಷ್ಠರೋಗಿಗಳಾದ ನಮ್ಮನ್ನು ಪ್ರೀತಿಸುತ್ತಾರೆ" ಎಂದು ಹೇಳುತ್ತಾ ದೇವರನ್ನು ಸ್ತುತಿಸಿದರು. ರೋಗದ ತೀವ್ರತೆಯು ಅವರನ್ನು ಸಂಪೂರ್ಣವಾಗಿ ಬಾಧಿಸಿತು, ಅವರು ತುಂಬಾ ಪ್ರೀತಿಸುತ್ತಿದ್ದ ಆ ಜನರನ್ನೆಲ್ಲಾ ಬಿಟ್ಟು 49 ನೇ ವಯಸ್ಸಿನಲ್ಲಿ ನಿಧನರಾದರು. ತನ್ನ ಸಮರ್ಪಣೆಯಿಂದ ಹಿಂದೆ ಸರಿಯದೆ ಕುಷ್ಠರೋಗಿಗಳಿಗಾಗಿ ತನ್ನ ಪ್ರಾಣವನ್ನೇ ಕೊಟ್ಟ ಯುವಕ ಡ್ಯಾಮಿಯನ್ ನ ಸಮರ್ಪಣೆ ಖಂಡಿತವಾಗಿಯೂ ಇತರರಿಗೆ ಒಂದು ಉತ್ತಮ ಮಾದರಿಯಾಗಿದೆ.

 

ಸೌಲನ ಮಗನಾದ ಯೋನಾತಾನನಿಗೆ ಸಮರ್ಪಿತ ಆಯುಧ ಹೊರುವ ಒಬ್ಬ ಯುವಕನಿದ್ದನು, ಆ ಯುವಕನ ಹೆಸರು ಸತ್ಯವೇದದಲ್ಲಿ ಬರೆಯಲ್ಪಟ್ಟಿಲ್ಲ. ಬೇರೆ ಯಾವುದೇ ಪುಸ್ತಕದಲ್ಲಿಯೂ ಆ ಆಯುಧ ಹೊರುವವನ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದಾಗ್ಯೂ, ಆ ಯೌವನಸ್ಥ ಆಯುಧ ಹೊರುವವನ ಸಮರ್ಪಣೆ ಬಹಳ ಶ್ಲಾಘನೀಯ. ರಾಜನ ಮಗನಾದ ಯೋನಾತಾನನಿಗೆ ತನ್ನದೇ ಆದ ಶಕ್ತಿ ಇದೆ. ಆದರೆ ಆಯುಧ ಹೊರುವವನಿಗೆ ಯಾವುದೇ ರೀತಿಯ ಶಕ್ತಿ ಇಲ್ಲ. ಆಯುಧ ಹೊರುವವನು ಯೋನಾತಾನನಿಗೆ, ನಿನ್ನ ಹೃದಯದಲ್ಲಿ ಏನು ಇದೆಯೋ ಅದನ್ನೆಲ್ಲಾ ಮಾಡು. ಹಾಗೆಯೇ ಹೋಗು; ಇಗೋ, ನಿನ್ನ ಇಚ್ಛೆಯಂತೆಯೇ ನಾನೂ ಕೂಡ ನಿಮ್ಮೊಂದಿಗೆ ಬರುತ್ತೇನೆ ಎಂದು ಹೇಳಿದನು. ಅದೇ ರೀತಿಯಲ್ಲಿ, ಯೋನಾತಾನನು ಹಿಂಬಾಲಿಸಿದನು ಆಯುಧ ಹೊರುವವನು ವಿಜಯವನ್ನು ಹೊತ್ತು ತಂದನು. ಆಯುಧ ಹೊರುವವನು ತನ್ನ ಸಮರ್ಪಣೆಯಿಂದ ಎಂದಿಗೂ ಹಿಂದೆ ಸರಿಯಲೇ ಇಲ್ಲ.

 

ಇದನ್ನು ಓದುತ್ತಿರುವ ಪ್ರಿಯರೇ! ನಮ್ಮ ಜೀವನದಲ್ಲಿ ಸಮರ್ಪಣೆ ಬಹಳ ಮುಖ್ಯವಾದದ್ದು. ಯೇಸು ಕ್ರಿಸ್ತನನ್ನು ನಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿ ಆತನ ಪ್ರೀತಿಯನ್ನು ಸವಿದ ಆ ದಿನಗಳಲ್ಲಿ ನಮ್ಮ ಸಮರ್ಪಣೆ ಹೇಗಿತ್ತು? ನಾವು ಅವರೊಂದಿಗೆ ಕಳೆದ ಪ್ರಾರ್ಥನಾ ಸಮಯ, ಸತ್ಯವೇದ ಧ್ಯಾನ, ಆತನಿಗಾಗಿ ಏನನ್ನಾದರೂ ಮಾಡುವುದು, ಯೇಸುವನ್ನು ಮತ್ತೊಬ್ಬರಿಗೆ ಪರಿಚಯಿಸುವುದು ಹೀಗೆ ನಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿದ್ದೆವು ಅಲ್ವಾ? ಆದರೆ ದಿನಗಳು ಮತ್ತು ವರ್ಷಗಳು ಕಳೆದಂತೆ, ಇಂದು ನಾವು ಹೇಗಿದ್ದೇವೆ? ಆರಂಭದಲ್ಲಿ ಆತನೊಂದಿಗೆ ನಮಗಿದ್ದ ಪ್ರೀತಿಯನ್ನು ನಾವು ಬಿಟ್ಟುಬಿಟ್ಟಿದ್ದೇವೆಯೇ? ಅದರ ಬಗ್ಗೆ ಯೋಚಿಸೋಣ. ನಮ್ಮನ್ನು ನಾವು ಪರೀಕ್ಷಿಸಿಕೊಂಡು, ಸರಿಮಾಡಿಕೊಂಡು, ನಮ್ಮ ಸಮರ್ಪಣೆಯನ್ನು ಸರಿಮಾಡಿಕೊಂಡು ಮತ್ತೊಂದು ಬಾರಿ ನಮ್ಮ ಸಮರ್ಪಣೆಯನ್ನು ನವೀಕರಿಸಿಕೊಳ್ಳೋಣವಾ?

- Mrs. ಶಕ್ತಿ ಶಂಕರ್

 

ಪ್ರಾರ್ಥನಾ ಅಂಶ:

50 ಸಾವಿರ ಹಳ್ಳಿಗಳಿಗೆ ಸುವಾರ್ತೆ ಸಾರುವ ಯೋಜನೆಯ ಮೂಲಕ ಒಂದು ಕೋಟಿ ಆತ್ಮಗಳನ್ನು ತಲುಪಲು ಪ್ರಾರ್ಥಿಸಿರಿ. .

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş Enbet enbet giriş enbet güncel giriş perabet perabet perabet giriş deneme bonusu deneme bonusu veren siteler kingroyal kingroyal giriş kingroyal güncel giriş bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş