Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.09.2025
Share:

By Village Missionary Movement

Monday, 15-Sep-2025

ಧೈನಂದಿನ ಧ್ಯಾನ(Kannada) – 15.09.2025

 

ಮುತ್ತಿಕೊಳ್ಳುವ...

 

"…ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು" - ಇಬ್ರಿಯ 12:1

 

ಮಾನವರು ನಮ್ಮ ಬಾಹ್ಯ ನೋಟವನ್ನು ನೋಡುತ್ತಾರೆ. ಆದರೆ ದೇವರು ನಮ್ಮ ಹೃದಯಗಳನ್ನು ನೋಡುತ್ತಾರೆ. ಹಾಗೆ ದೇವರು ನೋಡುವ ಹೃದಯವನ್ನು ಪಾಪ ಮಾತ್ರವೇ ಕಲೆ ಹಾಕಬಲ್ಲದು. ಹೃದಯವು ಕೊಳಕಿನೊಂದಿಗೆ, ಕಲ್ಮಷಗಳೊಂದಿಗೆ ಮತ್ತು ಅವಲಕ್ಷಣವಾಗಿ ಇದ್ದರೆ ಹೇಗಿರುತ್ತದೆ? ಪಾಪವು ನಮ್ಮ ಹೃದಯಗಳನ್ನು ಹಾಗೆಯೇ ಬದಲಾಯಿಸುತ್ತದೆ. ಈ ಪಾಪವು ನಮ್ಮ ಕೈ ಮತ್ತು ಕಾಲುಗಳಿಂದ ನಾವು ಮಾಡುವ ಕ್ರಿಯೆಗಳ ಮೂಲಕ ಮಾತ್ರ ನಮ್ಮೊಳಗೆ ಬರುವುದಿಲ್ಲ. ಅದು ಕಣ್ಣುಗಳ ಮೂಲಕ, ಕಿವಿಗಳ ಮೂಲಕ ಮತ್ತು ಆಲೋಚನೆಯ ಮೂಲಕ ಬರುತ್ತದೆ. 

 

ಆಲೋಚನೆ ಎಂದು ಹೇಳುವಾಗ ನಾವು ಯೋಚಿಸಬೇಕಾದದ್ದು , "ಪಾಪ ಎಷ್ಟು ಹತ್ತಿರದಲ್ಲಿದೆ" ಎಂದು! ಸ್ವಲ್ಪ ಯೋಚಿಸಲು ಪ್ರಾರಂಭಿಸಿದರೆ ಸಾಕು, ಅದು ನಮ್ಮ ನಿಯಂತ್ರಣ ಮೀರಿ ಹೋಗುತ್ತದೆ. ನಾವು ನೈಜ ಪ್ರಪಂಚವನ್ನು ಬಿಟ್ಟು ಕಲ್ಪನೆಯ ಜಗತ್ತಿನಲ್ಲಿ ಮುಳುಗುತ್ತೇವೆ. ತಪ್ಪು ಚಿಂತನೆಗೆ ಕಾರಣವಾಗುವ ಅನೇಕ ವಿಷಯಗಳು ನಮ್ಮ ಐದು ಬೆರಳುಗಳಲ್ಲಿವೆ. Cell Phone - ನೊಳಗೇ ಹಲವು ಕಾರ್ಯಗಳಿವೆ. ನೆಬೂಕದ್ನೆಚ್ಚರನು ಇದು ನಾನು ನಿರ್ಮಿಸಿದ ಮಹಾ ಬಾಬಿಲೋನ್ ಅಲ್ಲವಾ ಎಂದು ಯೋಚಿಸಿದನು ಮೃಗವಾಗಿ ಬದಲಾದನು. ದಾವೀದನು ಕಣ್ಣುಗಳಿಂದ ನೋಡಿ ಪಾಪದಲ್ಲಿ ಬಿದ್ದರು. ಎಲ್ಲವನ್ನೂ ತಿಳಿದಿದ್ದ ಸಂಸೋನನು ಸತ್ತ ಸಿಂಹದ ದೇಹದೊಳಗಿದ್ದ ಜೇನುಗೂಡಿನಿಂದ ಜೇನುತುಪ್ಪವನ್ನು ತೆಗೆದುಕೊಂಡು ತಿಂದು ಪಾಪದಲ್ಲಿ ಬಿದ್ದನು. ನಂತರ ಇಚ್ಚೆಯಲ್ಲಿ ಬಿದ್ದನು. ಈ ರೀತಿಯಾಗಿ, ಪಾಪವು ಸಂತೋಷಕರವಾಗಿದ್ದರೂ, ಅದು ನಮ್ಮನ್ನು ಬೀಳುವಂತೆ ಮಾಡುತ್ತದೆ, ಆದ್ದರಿಂದ ನಾವು ಓಡಲು ಸಾಧ್ಯವಿಲ್ಲ. ದೂರದಲ್ಲಿ ಗೋಚರಿಸುವ ದೊಡ್ಡ ಬಂಡೆಯಲ್ಲ, ಆದರೆ ನಮ್ಮ ಪಾದಗಳ ಬಳಿ ಇರುವ ಸಣ್ಣ ಕಲ್ಲು ನಮ್ಮನ್ನು ಎಡವಿ ಬೀಳುವಂತೆ ಮಾಡುತ್ತದೆ! ಅದೇ ರೀತಿ, ನಮ್ಮ ಹತ್ತಿರ ಇರುವ ಸೆಲ್ ಫೋನ್‌ಗಳಂತಹ ಸಣ್ಣ ಸಣ್ಣ ಪಾಪಗಳಲ್ಲಿಯೇ ನಾವು ಬೀಳುವಂತಹ ಅವಕಾಶವಿದೆ.

 

ಇದನ್ನು ಓದುತ್ತಿರುವ ಪ್ರಿಯರೇ! ಸಣ್ಣ ಸಣ್ಣ ಪಾಪಗಳೇ ತಾನೇ ಎಂದು ಅಸಡ್ಡೆ ಮಾಡುತ್ತಿದ್ದೀರಾ? ಅಥವಾ ಸಮೀಪಿಸುತ್ತಿರುವ ಪಾಪಗಳಲ್ಲಿ ನಾನು ಇನ್ನೂ ಬಿದ್ದಿಲ್ಲ ಸ್ವಲ್ಪ ಮಾತ್ರ ಅಂಟಿಕೊಂಡಿದೆ ಎನ್ನುತ್ತೀರಾ? ತಕ್ಷಣ ದೂರ ಸರಿಯಿರಿ ಇಲ್ಲವಾದರೆ ಅದು ಅಪಘಾತಕ್ಕೆ ಕಾರಣವಾಗುತ್ತದೆ. ನಮಗೆ ಹತ್ತಿರವಿರುವ ಪಾಪವು ನಮ್ಮನ್ನು ಬಿಡುವುದಿಲ್ಲ. ಅದು ನಮ್ಮನ್ನು ಆವರಿಸಿ ನಮ್ಮನ್ನು ಮುಚ್ಚಿಬಿಡುತ್ತದೆ. ಜಾಗರೂಕರಾಗಿರಿ. "... ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ." (ಇಬ್ರಿಯ 12:1,2)

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಮಿಷನರಿ ತರಬೇತಿ ಕಟ್ಟಡವನ್ನು ನಿರ್ಮಿಸಲು ಒಟ್ಟಾಗಿ ಸೇರಿ ಕೆಲಸ ಮಾಡುವವರನ್ನು ದೇವರು ಎಬ್ಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al