Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.09.2025 (Kids Special)
Share:

By Village Missionary Movement

Sunday, 14-Sep-2025

ಧೈನಂದಿನ ಧ್ಯಾನ(Kannada) – 14.09.2025 (Kids Special)

 

ಜಿಮ್ಮಿ ಮತ್ತು ಜಾನ್

 

"ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು, ಅವನು ನನ್ನ ಸಂಗಡ ಊಟಮಾಡುವನು" - ಪ್ರಕಟಣೆ.3:20

 

ಒಂದು ಸುಂದರವಾದ ಹಳ್ಳಿಯಲ್ಲಿ ಜಾನ್ ತನ್ನ ಹೆತ್ತವರೊಂದಿಗೆ ಸಂತೋಷದಿಂದ ವಾಸಿಸುತ್ತಿದ್ದನು. ಜಾನ್ ಸಾಕುಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆದ್ದರಿಂದ ಅವನು ಒಂದು ಸುಂದರವಾದ ನಾಯಿಮರಿಯನ್ನು ಖರೀದಿಸಿ ಅದಕ್ಕೆ 'ಜಿಮ್ಮಿ' ಎಂದು ಹೆಸರಿಟ್ಟನು. ನಾಯಿಮರಿ ಬಿಳಿಯಾಗಿತ್ತು, ಕಪ್ಪು ಕಣ್ಣುಗಳನ್ನು ಹೊಂದಿತ್ತು ಮತ್ತು ತುಂಬಾ ಮುದ್ದಾಗಿತ್ತು. ಜಾನ್ ನಾಯಿಮರಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದನು. ಪ್ರತಿದಿನ ಅದರೊಂದಿಗೆ ಆಟವಾಡುತ್ತಿದ್ದನು. ನಂತರ, ನಾಯಿಮರಿ ಸ್ವಲ್ಪ ಬೆಳೆದಾಗ, ಅವನು ನಾಯಿಮರಿಯ ಕುತ್ತಿಗೆಗೆ ಸರಪಣಿಯನ್ನು ಹಾಕಿ ಅದನ್ನು ಆಟವಾಡಲು ಹೊರಗೆ ಬಿಡುತ್ತಿದ್ದನು.

 

ದಿನಗಳು ಕಳೆದವು. ಒಂದು ದಿನ, ಜಾನ್ ಕಣ್ಣೀರಿನೊಂದಿಗೆ ನಿಂತಿದ್ದಾಗ ಅವನ ತಾಯಿ, "ಏನಾಯಿತು, ಜಾನ್? ನೀನು ಯಾಕೆ ಹೀಗೆ ಅಳುತ್ತಿದ್ದೀಯಾ?" ಎಂದು ಕೇಳಿದರು. "ಅಮ್ಮಾ, ನನ್ನ ಜಿಮ್ಮಿ ಕಾಣುತ್ತಿಲ್ಲ ಎಂದನು. ನೀನು ಯಾವಾಗಲೂ ಅದನ್ನು ನಿನ್ನ ಕೈಯಲ್ಲೇ ತಾನೇ ಹಿಡಿದಿಟ್ಟುಕೊಳ್ಳುತ್ತಿದ್ದೆ ಯಾಕೆ ಅದನ್ನು ಓಡಿಹೋಗಲು ಬಿಟ್ಟೆ? ಎಂದರು. ನಾನು ಅದನ್ನು ಹಿಡಿದುಕೊಂಡು ಹೊರಗೆ ಬಂದಾಗ, ಜಿಮ್ಮಿ ಮತ್ತೊಂದು ನಾಯಿಮರಿಯನ್ನು ನೋಡಿ ಅದರೊಂದಿಗೆ ಆಟವಾಡಲು ಪ್ರಾರಂಭಿಸಿತು. ನಾನು ಅದನ್ನು ಕಟ್ಟಿಹಾಕಿದ ಸರಪಣಿಯನ್ನು ಸಹ ಬಿಚ್ಚಿದೆ. ನನ್ನ ಕಣ್ಣುಗಳ ಮುಂದೆಯೇ ಆಟವಾಡುತ್ತಿದ್ದ ಜಿಮ್ಮಿ ಸ್ವಲ್ಪ ಸಮಯದೊಳಗೆ ಕಣ್ಮರೆಯಾಯಿತು.

 

ಆಟವಾಡಿದ ನಂತರ ಅದು ಹಿಂತಿರುಗಿ ಬಂದುಬಿಡುತ್ತದೆ ಅಂದುಕೊಂಡೆ. ನಾನು ಅದನ್ನು ಬಹಳ ಸಮಯದಿಂದ ಜಿಮ್ಮಿ... ಜಿಮ್ಮಿ ಎಂದು ಕರೆದೆ. ಆದರೆ ಜಿಮ್ಮಿ ಬರಲೇ ಇಲ್ಲ ಎಂದು ಅತ್ತನು. ತಕ್ಷಣ ಅಮ್ಮ "ಸರಿ, ಬಾ, ಅಳಬೇಡ, ನಾನು ನಿನಗೆ ಇನ್ನೊಂದು ನಾಯಿಮರಿಯನ್ನು ತೆಗೆದುಕೊಡುತ್ತೇನೆ" ಎಂದು ಹೇಳಿ ಕರೆದುಕೊಂಡು ಹೋದರು. ಆದರೆ ಜಾನ್ "ನನ್ನ ಜಿಮ್ಮಿ ಎಲ್ಲಿಗೆ ಹೋಗಿ ಕಷ್ಟಪಡುತ್ತದೋ ಗೊತ್ತಿಲ್ಲ. ನಾನು ಅದನ್ನು ಆಸೆ ಆಸೆಯಾಗಿ ಬೆಳೆಸಿದೆ" ಎಂದು ಆಗಾಗ ಯೋಚಿಸುತ್ತಿದ್ದನು. ಪ್ರತಿದಿನ, ಜಾನ್ ಜಿಮ್ಮಿಯನ್ನು ಕಳೆದುಕೊಂಡ ಸ್ಥಳದಲ್ಲಿ ಹುಡುಕಲು ಹೋಗುತ್ತಿದ್ದನು. ಒಂದು ದಿನ, ಜಾನ್ ಜಿಮ್ಮಿಯನ್ನು ರಸ್ತೆಯ ಬದಿಯಲ್ಲಿ ತೆಳ್ಳಗಿನ ದೇಹದಿಂದ ಮಲಗಿರುವುದನ್ನು ನೋಡಿದನು, ಅವನು ಓಡಿಹೋಗಿ ಅದನ್ನು ಎತ್ತಿಕೊಂಡು ಸಂತೋಷದಿಂದ ಮನೆಗೆ ಕರೆತಂದನು. ಅವನು ಅದನ್ನು ಮೊದಲಿಗಿಂತ ಹೆಚ್ಚು ನೋಡಿಕೊಳ್ಳಲು ಪ್ರಾರಂಭಿಸಿದನು. ಆ ದಿನದಿಂದ, ಜಿಮ್ಮಿ ಅವನನ್ನು ಎಂದಿಗೂ ಬಿಡಲೇ ಇಲ್ಲ.

 

ಪುಟ್ಟ ಮಕ್ಕಳೇ! ನೀವು ಸಹ, ಜಿಮ್ಮಿಯಂತೆ, ಯೇಸುವಿನ ಮಾತುಗಳನ್ನು ಪಾಲಿಸದೆ ತಪ್ಪು ಮಾಡಿ ಅವರಿಂದ ದೂರ ಹೋಗಿದ್ದೀರಾ? ನಿಮಗಾಗಿ ಹಂಬಲದಿಂದ ಕಾಯುತ್ತಿರುವ ಯೇಸಪ್ಪನ ಬಳಿಗೆ ಓಡಿ ಬನ್ನಿ. ಯೇಸಪ್ಪ ನಿಮ್ಮನ್ನು ಮತ್ತೆ ಅಪ್ಪಿಕೊಂಡು ತನ್ನ ಮಗುವಾಗಿ ಮಾರ್ಪಡಿಸಲು ಸಿದ್ಧವಾಗಿದ್ದಾರೆ. O.k. ನಾ.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al