Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.09.2025
Share:

By Village Missionary Movement

Thursday, 11-Sep-2025

ಧೈನಂದಿನ ಧ್ಯಾನ(Kannada) – 11.09.2025

 

ಸತ್ಯವೇದದ ಮಹತ್ವ 

 

"ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ" - ಕೀರ್ತನೆ 119:101

 

ಇಂಗರ್ಸಾಲ್ ಎಂಬ ಫ್ರೆಂಚ್ ನಾಸ್ತಿಕ ಮತ್ತು ಅವನ ಸ್ನೇಹಿತರು ಪೂರ್ವ ದೇಶಗಳಿಗೆ ಪ್ರಯಾಣಿಸುತ್ತಿದ್ದರು. ಅವರು ಅನೇಕ ದೇಶಗಳ ದ್ವೀಪಗಳನ್ನು ಸುತ್ತಿ ನೋಡಿದರು. ಒಂದು ಸಣ್ಣ ದ್ವೀಪದಲ್ಲಿ ಮರದ ಕೆಳಗೆ ಒಬ್ಬ ಯುವಕ, ಸತ್ಯವೇದವನ್ನು ಓದುತ್ತಿದ್ದ. ಇಂಗರ್ಸಾಲ್ ಅವನ ಬಳಿಗೆ ಹೋಗಿ, ತಮ್ಮಾ ಯಾಕೆ, ಪುರಾಣಗಳು ಮತ್ತು ನಿಷ್ಪ್ರಯೋಜಕ ಕಾರ್ಯಗಳಿಂದ ತುಂಬಿರುವ ಪ್ರಾಚೀನ ಪುಸ್ತಕವನ್ನು ಓದುತ್ತಿದ್ದೀಯ? ಅದನ್ನು ಎತ್ತಿ ಬಿಸಾಡು. ನಾನು ಕೊಡುವ ಈ ವೈಜ್ಞಾನಿಕ ಪುಸ್ತಕವನ್ನು ಓದು. ನಿನ್ನ ಜ್ಞಾನವೂ ಬೆಳೆಯುತ್ತದೆ ಮತ್ತು ಅದು ನಿನ್ನ ಜೀವನಕ್ಕೆ ಉಪಯುಕ್ತವಾಗಿಯೂ ಇರುತ್ತದೆ ಎಂದರು. ಆ ಯುವಕ ಇಂಗರ್ಸಾಲ್ ಅನ್ನು ಮೇಲೆ ಕೆಳಗೆ ನೋಡಿ ಈ ಸತ್ಯವೇದವನ್ನು ಎತ್ತಿ ಬಿಸಾಡಲು ಹೇಳುತ್ತಿದ್ದೀರ. ಈ ಪುಸ್ತಕವು ನಮ್ಮ ಬಳಿಗೆ ಬರದೇ ಇದ್ದಿದ್ದರೆ, ನಾವು ಈಗ ನಿಮ್ಮೆಲ್ಲರನ್ನೂ ಕೊಂದು, ನಿಮ್ಮನ್ನು ಕುದಿಸಿ, ತಿನ್ನುತ್ತಿದ್ದೆವು ಎಂದರಂತೆ. ನರಭಕ್ಷಕರನ್ನು ನಾಗರಿಕತೆಯಾಗಿ ಪರಿವರ್ತಿಸಿದ್ದು ಸತ್ಯವೇದ.

 

ಪಾಪ, ಅಧರ್ಮ ಮತ್ತು ಉಲ್ಲಂಘನೆಯಂತಹ ಅನ್ಯಾಯಗಳಿಗೆ ಗುಲಾಮನಾಗಿದ್ದ ವ್ಯಕ್ತಿಯನ್ನು ಪರಿವರ್ತಿಸಲು ಸತ್ಯವೇದದ ವಾಕ್ಯವು ಸಮರ್ಥವಾಗಿದೆ. ಸತ್ಯವೇದವು ದೇವರು ನಮಗೆ ದಯಪಾಲಿಸಿದ ಶ್ರೇಷ್ಠ ಉಡುಗೊರೆಗಳಲ್ಲಿ ಒಂದಾಗಿದೆ. ಪ್ರಾಚೀನ ಲೋಕವು ವ್ಯಭಿಚಾರ, ವೇಶ್ಯಾವಾಟಿಕೆ, ಜಾತಿ ವ್ಯತ್ಯಾಸಗಳು, ಕೊಲೆ ಮತ್ತು ದರೋಡೆಗಳಿಂದ ತುಂಬಿತ್ತು. ಕ್ರೈಸ್ತ ಧರ್ಮದ ಮೂಲಕ, ಅಂದರೆ ಸತ್ಯವೇದವನ್ನು ಕೈಯಲ್ಲಿ ಹೊತ್ತ ಅಮೂಲ್ಯ ಮಿಷನರಿಗಳ ಮೂಲಕ ಜಗತ್ತು ಸುಸಂಸ್ಕೃತವಾಯಿತು ಎಂದು ಎಲ್ಲಾ ಇತಿಹಾಸಕಾರರು ಒಪ್ಪುತ್ತಾರೆ ಎಂಬುದು ಸತ್ಯ. ಪಾಪದ ಕತ್ತಲೆಯಲ್ಲಿದ್ದ ಜನರು ಸತ್ಯವೇದವನ್ನು ಓದುವ ಮೂಲಕ ಯೇಸುಕ್ರಿಸ್ತನ ನಿಜವಾದ ಬೆಳಕನ್ನು ನೋಡಿದರು ಮತ್ತು ರಕ್ಷಿಸಲ್ಪಟ್ಟರು.

 

ಸತ್ಯವೇದದ ವಿಚಾರಗಳನ್ನು ದೃಢವಾಗಿ ಹೇಳಲಾಗಿದೆ. ಸತ್ಯವೇದವು ಜಗತ್ತನ್ನು ಪರಿವರ್ತಿಸಿದ ಸರ್ವೋಚ್ಚ ಪುಸ್ತಕವಾಗಿದೆ. ಸತ್ಯವೇದವನ್ನು ಪ್ರೀತಿಸುವವರು ಮತ್ತು ಓದುವವರು ಪವಿತ್ರ ಜೀವನವನ್ನು ನಡೆಸಬಹುದು. ಕರ್ತನಾದ ಯೇಸು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದ ಪ್ರತಿಯೊಬ್ಬರೂ ಅನುದಿನವೂ ದೇವರ ಮಾತುಗಳಾಗಿರುವ ಸತ್ಯವೇದವನ್ನು ನಂಬಿಕೆ ಮತ್ತು ಬಯಕೆಯಿಂದ ಓದಿ, ನಮ್ಮನ್ನು ಶುದ್ಧೀಕರಿಸಿಕೊಂಡು ಬಾಳಲು ದೇವರು ಕರೆಯುತ್ತಿದ್ದಾರೆ. ಹೌದು, ಸತ್ಯವೇದವು ನಮ್ಮ ಜೀವನವನ್ನು ಬದಲಾಯಿಸುತ್ತದೆ, ನಮ್ಮ ಕಾಲುಗಳಿಗೆ ದೀಪವಾಗಿ, ನಮ್ಮ ದಾರಿಗೆ ಬೆಳಕಾಗಿ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ. ಸತ್ಯವೇದದ ಮಹತ್ವವನ್ನು ನಾವು ತಿಳಿದುಕೊಂಡರೆ, ನಮ್ಮಿಂದ ಸತ್ಯವೇದವನ್ನು ಓದದೆ ಇರಲು ಸಾಧ್ಯವೇ ಇಲ್ಲ. 

 

ನನಗೆ ಪ್ರಿಯವಾದವರೇ, ನಿಮ್ಮನ್ನು ಮತ್ತು ನನ್ನನ್ನು ಪಾಪದ ಕತ್ತಲೆಯಿಂದ ರಕ್ಷಿಸಿದ ಯೇಸು ರಾಜನ ಮಾತುಗಳನ್ನು ಒಳಗೊಂಡಿರುವ ಸತ್ಯವೇದವನ್ನು ಪ್ರೀತಿಸುತ್ತಾ, ಓದುತ್ತಾ, ಉಸಿರಾಡುತ್ತಾ, ಧ್ಯಾನಿಸೋಣವಾ? 

 

"ನಿನ್ನ ನುಡಿಯು ಪರಿಶುದ್ಧವಾದದ್ದು; ನಿನ್ನ ಸೇವಕನು ಅದನ್ನೇ ಪ್ರೀತಿಸುತ್ತಾನೆ." (ಕೀರ್ತನೆ 119:140)

- Mrs.ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಸೆಂಟರ್ ನಲ್ಲಿ ಓದುತ್ತಿರುವ ಮಕ್ಕಳು ಯೇಸುವನ್ನು ಸ್ವೀಕರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino perabet perabet giriş meritking meritking giriş meritking meritking giriş matbet matbet giriş superbetin superbetin giriş