Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.06.2021
Share:

By Village Missionary Movement

Tuesday, 01-Jun-2021

ಧೈನಂದಿನ ಧ್ಯಾನ(Kannada) – 01.06.2021

 

ಬೆಟ್ಟದ ತುದಿಗೆ ಹತ್ತೋಣ

 

"ಆತನು (ಯೇಸು) ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೋಗಿ ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲೇ ಕಳೆದನು." - ಲೂಕ 6:12

 

ಕತ್ತಲೆಯ ಖಂಡವಾದ ಆಫ್ರಿಕಾದಿಂದ ಯೂರೋಪ್ ಗೆ ಹೊರಡುವ ವಿಮಾನವವೊಂದರಲ್ಲಿ ವಿಷಸರ್ಪಗಳು ಅಡಗಿದ್ದ ದೊಡ್ಡ ಪೆಟ್ಟಿಯೊಂದು ಬೀಗ ಹಾಕದೆ ಮರೆತು ಹಾಗೆ ಇಡಲಾಗಿತ್ತು. ವಿಮಾನವು ಕೆಳಗಿಂದ ಮೇಲೆ ಹಾರುವಾಗ ಎದುರು ನೋಡದ ರೀತಿಯಲ್ಲಿ ಆ ಪೆಟ್ಟಿಗೆಯು ತೆರೆದುಕೊಳ್ಳಲು, ಅದರ ಒಳಗೆ ಇದ್ದ ಹಾವುಗಳು ಒಂದೊಂದಾಗಿ ಪ್ರಯಾಣಿಕರು ಇದ್ದ ಸ್ಥಳಕ್ಕೆ ಬರಲು ಪ್ರಾರಂಭಿಸಿತು. ಧಿಡೀರ್ ಎಂದು ಪ್ರಯಾಣಿಕರ ಬಳಿಯಿಂದ ದೊಡ್ಡ ಕೂಗಾಟ ಕೇಳಿಸಿತು. ಕೆಲವರು ತಲೆಸುತ್ತಿ ಬಿದ್ದು ಹೋದರು. ಕೆಲವರು ಹಾವಿನಿಂದ ಕಚ್ಚಲಟ್ಟು ಪ್ರಾಣಕ್ಕೆ ಹೋರಾಡಿದರು. ಹಾವುಗಳ ಬಗ್ಗೆ ಸಮಾಚಾರ ವಿಮಾನ ಓಡಿಸುತ್ತಿದ್ದವರಿಗೆ ತಿಳಿಸಿದ ಕೂಡಲೇ ಅವರು ಬಹಳ ಹೆದರಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯವನ್ನು ಹೇಳಿ, "ವಿಮಾನವನ್ನು ಎಲ್ಲಿ ಕೆಳಗಿಳಿಸಬೇಕು" ಎಂದು ಗಾಬರಿಯಿಂದ ಕೇಳಿದರು. ಅದಕ್ಕೆ ಅವರು "ಕೆಳಗೆ ಇಳಿಸಬೇಡಿ, ಒಂದು ಕ್ಷಣ ನಾನು ಯೋಚಿಸಬೇಕು" ಎಂದು ಹೇಳಿ ಅದರ ನಂತರ "ನೀವು ಎಷ್ಟು ಎತ್ತರದಲ್ಲಿ ಇದ್ದೀರ?" ಎಂದು ಕೇಳಿದರು. ಅದಕ್ಕೆ ವಿಮಾನ ಓಡಿಸುತ್ತಿದ್ದ ಪೈಲಟ್, "4000 ಅಡಿ ಎತ್ತರದಲ್ಲಿ" ಎಂದು ಹೇಳಲು, "ಇನ್ನೂ ಎತ್ತರಕ್ಕೆ ಹೋಗಿರಿ" ಎಂದರು. ಏನೂ ನಡೆಯಲಿಲ್ಲ, "ಇನ್ನೂ ಎತ್ತರ, ಇನ್ನೂ ಎತ್ತರ" ಎಂದು ಸೂಚಿಸುತ್ತಲೇ ಇದ್ದರು. ಕೊನೆಗೆ, ಹಾವುಗಳು ಆಕ್ಸಿಜನ್ ಇಲ್ಲದ್ದರಿಂದ ಮೂರ್ಛೆ ಹೋಗಿ ಸುಮ್ಮನಾದವು. ಎಲ್ಲಾ ಹಾವುಗಳನ್ನು ಪುನಃ ಪೆಟ್ಟಿಯಲ್ಲಿ ಹಾಕಿ ಮುಚ್ಚಿಟ್ಟು ನಂತರ ದೊಡ್ಡ ಬೀಗವನ್ನು ಹಾಕಲಾಯಿತು. ಮೂರ್ಛೆ ಹೋದವರಿಗೆ ಪ್ರಥಮ ಚಿಕಿತ್ಸೆ ಮಾಡಿ, ಸ್ವಲ್ಪ ಜನರನ್ನು ಬಿಟ್ಟು ಮಿಕ್ಕ ಎಲ್ಲರೂ ಗಾಯಗೊಂಡಿದ್ದರು.

 

ಪ್ರಿಯರೇ! ಸೈತಾನನ ಶಕ್ತಿಗೆ ನಾವು ತಪ್ಪಿಸಿಕೊಳ್ಳ ಬೇಕಾದರೆ ನಾವು ಎತ್ತರಕ್ಕೆ ಹೋಗಲೇಬೇಕು. ಈ ಲೋಕದ ಅಧಿಪತಿಯಾದ ಸೈತಾನನು ನಾವು ಈ ಲೋಕದಲ್ಲಿರುವವರೆಗೂ ಹಾಳು ಮಾಡುತ್ತಲೇ ಇರುತ್ತಾನೆ. ಆದರೆ ನಾವು ನಮ್ಮ ಪ್ರಾರ್ಥನೆಯಲ್ಲಿ ಕರ್ತನನ್ನು ನೋಡಿ ಎತ್ತರಕ್ಕೆ ಹೋಗುತ್ತಾ ಹೋಗುತ್ತಾ ಅವನು ಸುಮ್ಮನಾಗುತ್ತಾನೆ. ಅವನ ತಂತ್ರಗಳು, ಅಗ್ನಿ ಅಸ್ತ್ರಗಳು ದೇವರನ್ನು ನೋಡಿ ಮೇಲೆ ಮೇಲೆ ಹೋಗುವವರ ಬಳಿ ಫಲಿಸುವುದಿಲ್ಲ.

 

ಆ ದಿನಗಳಲ್ಲಿ, ಯೇಸು ಪ್ರಾರ್ಥನೆ ಮಾಡಲು ಒಂದು ಬೆಟ್ಟದ ಮೇಲೆ ಹತ್ತಿ, ರಾತ್ರಿಯೆಲ್ಲಾ ದೇವರನ್ನು ನೋಡಿ ಪ್ರಾರ್ಥಿಸುತ್ತಲೇ ಇದ್ದರು. ಅವರು ಕೆಳಗಿದ್ದೆ ಪ್ರಾರ್ಥಿಸಬಹುದಿತ್ತು, ಏಕೆ ಬೆಟ್ಟಕ್ಕೆ ಹೋದರು ? ಅಲ್ಲಿ ಯಾರ ತೊಂದರೆಯೂ ಇಲ್ಲದೆ, ರಾತ್ರಿ ಪೂರ್ತಿ ದೇವರನ್ನು ನೋಡಿ ಪ್ರಾರ್ಥಿಸಿ, ಬಲದ ಮೇಲೆ ಬಲವನ್ನು ಹೊಂದಿಕೊಳ್ಳಲು. ನಾವು ನಾಶವಾಗದಂತೆ ನಮ್ಮ ಬೆಟ್ಟವಾಗಿರುವ ಯೇಸುಕ್ರಿಸ್ತನ ಬಳಿಗೆ ಓಡಿಹೋಗಿ, ಅವರನ್ನು ಹಿಡಿದು ಕೊಳ್ಳುವಾಗ, ಲೋಕದ ಯಾವುದೇ ರೀತಿಯ ನಾಶನಕ್ಕೂ, ವ್ಯಾಧಿಗೂ, ಸೈತಾನನ ಶೋಧನೆಗಳಿಗೂ ತಪ್ಪಿಸಿಕೊಳ್ಳಬಹುದು.ನಾವು ಈ ವರ್ಷಪೂರ್ತಿ ಎಷ್ಟು ಸಮಯ ಪ್ರಾರ್ಥನೆಯಲ್ಲಿದ್ದೆವು ಎಂದು ನೋಡುವುದಾದರೆ, ಅದು ಎಷ್ಟು ಕಡಿಮೆಯಾಗಿ ಕಾಣುತ್ತಿದೆ? ಒಬ್ಬರು ಹೀಗೆ ಬರೆದಿದ್ದರು, "ಒಂದು ದಿನಕ್ಕೆ ಐದು ನಿಮಿಷ ಪ್ರಾರ್ಥಿಸಿದರೆ ಒಂದು ವರ್ಷಕ್ಕೆ ಒಂದೇ ಒಂದು ದಿನ ಪ್ರಾರ್ಥಿಸಿರುತ್ತೇವೆ" ಎಂದು. ಒಂದೊಂದು ಲೋಕದ ಕಾರ್ಯಕ್ಕೂ ಗಂಟೆಗಟ್ಟಲೆ ಸಮಯ ಕಳೆಯುವ ನಾವು ಪ್ರಾರ್ಥನೆಗೆ ಎಷ್ಟು ಸಮಯ ಖರ್ಚು ಮಾಡುತ್ತಿದ್ದೇವೆ? ನಮ್ಮ ಪ್ರಾರ್ಥನೆ ಎಷ್ಟಿದೆಯೋ ಅದಕ್ಕೆ ಹಾಗೆಯೇ ನಾವು ಲೋಕದ ಮೇಲೆ ಜಯ ಹೊಂದುವುದು ಅಡಗಿರುತ್ತದೆ.ಒಂದು ದಿನಕ್ಕೆ ಒಂದು ಗಂಟೆಯಾದರೂ ಪ್ರಾರ್ಥಿಸಿದೆ ಇದ್ದರೆ ಹೇಗೆ ನಾವು ಸೈತಾನನನ್ನು ಜಯಿಸಲು ಸಾಧ್ಯ? ನಾವು ನಮ್ಮನ್ನು ಒಂದು ಸಾರಿ ಶೋಧಿಸಿ ನೋಡಿಕೊಂಡು, ಪ್ರಾರ್ಥಿಸುವುದಕ್ಕೆ ನಮ್ಮನ್ನು ಒಪ್ಪಿಸಿಕೊಡೋಣವಾ?

- Bro. ಅನೀಶ್ ಸಾಮುವೇಲ್

 

ಪ್ರಾರ್ಥನಾ ಅಂಶ:-

ನಮ್ಮ ಗೆತ್ಸೇಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಕಟ್ಟಡದ ಕೆಲಸಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş