Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.09.2025
Share:

By Village Missionary Movement

Tuesday, 09-Sep-2025

ಧೈನಂದಿನ ಧ್ಯಾನ(Kannada) – 09.09.2025

 

ಎಲ್ಲವನ್ನೂ ಮಾಡಲು ಶಕ್ತನು

 

"ನಿನಗೆ ಎಲ್ಲಾ ಸಾಧ್ಯವಾಗಿದೆ; ನಿನಗೆ ಯಾವ ಆಲೋಚನೆಯೂ ತಡೆಯಲ್ಪಡುವದಿಲ್ಲವೆಂದು ತಿಳಿದಿದ್ದೇನೆ" - ಯೋಬ 42:2

 

ಕರ್ತನು ಎಲ್ಲವನ್ನೂ ಮಾಡಲು ಶಕ್ತನು ಎಂಬುದನ್ನು ಮತ್ತು ಆತನು ಮಾಡಲು ಉದ್ದೇಶಿಸಿದ್ದು ತಡೆಯಾಗುವುದಿಲ್ಲ ಎಂಬುದನ್ನು ಸತ್ಯವೇದವು ನಮಗೆ ಬೋಧಿಸುತ್ತಿದೆ. ದೇವರು ಇಸಾಕನ ಜನನವನ್ನು ಘೋಷಿಸಿದಾಗ, ಸಾರಳು ನಕ್ಕ ಕೂಡಲೇ, ಕರ್ತನಿಗೆ ಅಸಾಧ್ಯವಾದದ್ದು ಏನಾದರೂ ಉಂಟೋ? ಎಂದು ಅಬ್ರಹಾಮನ ಬಳಿ ದೇವರು ಕೇಳುತ್ತಾರೆ. ರಕ್ಷಿಸಲ್ಪಡುವವರು ಯಾರು ಎಂದು ಶಿಷ್ಯರು ಕೇಳಿದಾಗ, "ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ" ಎಂದು ಯೇಸು ಉತ್ತರಿಸಿದರು. ಯೇಸುವಿನ ಅತಿಶಯವಾದ ಜನನವನ್ನೂ, ಬಂಜೆಯೆಂದು ಪರಿಗಣಿಸಲ್ಪಟ್ಟ ಎಲಿಜಬೆತ್‌ಗೆ ವೃದ್ಧಾಪ್ಯದಲ್ಲಿ ಸ್ನಾನಿಕನಾದ ಯೋಹಾನನು ಹುಟ್ಟುವುದನ್ನೂ ಘೋಷಿಸಿದ ಗೇಬ್ರಿಯಲ್ ದೂತನು, ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಮರಿಯಳಿಗೆ ಹೇಳುತ್ತಾರೆ. ಶತ್ರುಗಳಿಂದ ಧ್ವಂಸಗೊಂಡು ನಿರ್ಜನವಾಗಿದ್ದ ಯೆರೂಸಲೇಮಿನ ಬೀದಿಗಳು ಮತ್ತೊಮ್ಮೆ ಎಲ್ಲಾ ವಯಸ್ಸಿನ ಜನರಿಂದ ತುಂಬಿರುತ್ತವೆ ಎಂದು ದೇವರು ಪ್ರವಾದಿಯಾದ ಜೆಕರ್ಯನಿಗೆ ಘೋಷಿಸಿದಾಗ, "ಆ ಕಾಲದ ಸ್ಥಿತಿಯು ಈ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ" ಎಂದು ಸೇನಾಧೀಶ್ವರನಾದ ಯೆಹೋವನು ಹೇಳುತ್ತಾರೆ.

 

ಜೀವನದಲ್ಲಿ ಹತಾಶರು, ದಣಿದವರು ಮತ್ತು ಪಾರ್ಶ್ವವಾಯುವಿಗೆ ಒಳಗಾದವರ ಮುರಿದ ಜೀವನವನ್ನು ಪುನಃ ಕಟ್ಟಿ ಎಬ್ಬಿಸಿ, ಸಂತೋಷಪಡಿಸುವುದು ದೇವರಿಗೆ ಆಶ್ಚರ್ಯವೇನೂ ಅಲ್ಲ. ಅನಾಥಳಾದ ಎಸ್ತೇರಳನ್ನು ರಾಣಿಯನ್ನಾಗಿ ಮಾಡಿದ್ದು ದೇವರಿಗೆ ಆಶ್ಚರ್ಯವೇನೂ ಅಲ್ಲ. ದೇವರ ಚಿತ್ತಕ್ಕೆ ನಮ್ಮ ಕಾರ್ಯಗಳನ್ನು ಸಂಪೂರ್ಣವಾಗಿ ಒಪ್ಪಿಸಿದಾಗ, ದೇವರಿಗೆ ಚಿತ್ತವಾದದ್ದು ಆತನ ಕೈಯ ಮೂಲಕ ನಮಗೆ ಬರುತ್ತದೆ. ಅದು ನಮಗೆ ಆಶೀರ್ವಾದವಾಗಿಯೂ, ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿಯೂ ಇರುತ್ತದೆ. ಅಬ್ರಹಾಮನ ಹಾಗೆ, ದೇವರು ತಾನು ವಾಗ್ದಾನ ಮಾಡಿದ್ದನ್ನು ಪೂರೈಸಲು ಸಮರ್ಥನೆಂದು ನಾವು ಸಂಪೂರ್ಣ ಖಚಿತತೆಯಿಂದ ನಂಬಿದಾಗ, ದೇವರು ನಮ್ಮ ಜೀವನದಲ್ಲಿ ಮಾಡಲು ಯೋಜಿಸಿರುವುದು ಖಂಡಿತವಾಗಿಯೂ ನೆರವೇರುತ್ತದೆ.

 

ಪ್ರಿಯರೇ! ನೀವು ಸಹ ಎಲ್ಲರಿಂದಲೂ ಅತ್ಯಲ್ಪವಾಗಿ ಎಣಿಸಲ್ಪಟ್ಟು, ನಿರ್ಲಕ್ಷಿಸಲ್ಪಟ್ಟ ಪರಿಸ್ಥಿತಿಯಲ್ಲಿದ್ದೀರಾ? ದಾವೀದನನ್ನು ಎಬ್ಬಿಸಿದ ದೇವರು, ಯೋಸೇಫನನ್ನು ಎಬ್ಬಿಸಿದ ದೇವರು ಇದನ್ನು ಓದುವ ಪ್ರತಿಯೊಬ್ಬರನ್ನೂ ಎಬ್ಬಿಸಲು ಸಮರ್ಥರಾಗಿದ್ದಾರೆ. ಆತನಿಂದ ಎಲ್ಲವೂ ಸಾಧ್ಯ. ಆತನು ಅಪ್ರಮೇಯ ಮಹಾಕಾರ್ಯಗಳನ್ನೂ ಅಸಂಖ್ಯವಾದ ಅದ್ಭುತಕೃತ್ಯಗಳನ್ನೂ ಮಾಡಲು ಶಕ್ತನಾಗಿದ್ದಾರೆ. ಆದ್ದರಿಂದ, ನಾವು ದೇವರ ಬಳಿ ದೇವರೇ, ನೀನು ಎಲ್ಲವನ್ನೂ ಮಾಡಲು ಸಮರ್ಥ. ನೀನು ನನ್ನ ಜೀವನದಲ್ಲಿ ಮಾಡಲು ಯೋಜಿಸಿರುವುದು ತಡೆಯಾಗುವುದಿಲ್ಲ" ಎಂದು ಅರಿಕೆ ಮಾಡೋಣ. ದೇವರ ಮಾತುಗಳನ್ನು ನಂಬಿ, ನಮ್ಮ ಕಾರ್ಯಗಳನ್ನು ಆತನಿಗೆ ಒಪ್ಪಿಸಿ ಆಶೀರ್ವಾದಗಳನ್ನು ಪಡೆಯೋಣ. 

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಪ್ರತಿ ಜಿಲ್ಲೆಯಲ್ಲೂ ಪ್ರಾರಂಭಿಸಲಾಗಿರುವ ಟ್ಯೂಷನ್ ಸೆಂಟರ್ ಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al