By Village Missionary Movement
Sunday, 07-Sep-2025ಧೈನಂದಿನ ಧ್ಯಾನ(Kannada) – 07.09.2025
ಮೈಕ್ರೋಸ್ಕೋಪ್
(Kids special)
"ನಿನಗೆ ವಿರೋಧವಾಗಿ ಪಾಪಮಾಡದಂತೆ ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ" - ಕೀರ್ತನೆ 119:11
ಹಲೋ ಪುಟಾಣಿಗಳೇ! ಹೇಗಿದ್ದೀರಿ? ಶಾಲೆ ಇದೀಗ ಪ್ರಾರಂಭವಾದಂತೆ ಇತ್ತು. ಮಧ್ಯ ವಾರ್ಷಿಕ ಪರೀಕ್ಷೆಯೇ ಬಂದುಬಿಡ್ತು. ನೀವು ಪರೀಕ್ಷೆಗೆ ರೆಡೀನಾ? ನೀವು ದಿನಾಲೂ ಓದುತ್ತಿದ್ದರೆ ಪರೀಕ್ಷೆಯನ್ನು ಸುಲಭವಾಗಿ ಬರೆದು ಬಿಡಬಹುದು o.k. ನಾ ಪುಟಾಣಿಗಳೇ. O.k story ಕೇಳೋಣ್ವಾ?
ಒಂದು ಹಳ್ಳಿಯಲ್ಲಿ, ಒಬ್ಬ ರೈತ ಕೆಲಸವೆಲ್ಲಾ ಮುಗಿಸಿ ಮನೆಗೆ ಹಿಂದಿರುಗುವಾಗ ತುಂಬಾ ದಣಿದಿದ್ದರು. ನದಿಯಲ್ಲಿ ಹರಿಯುತ್ತಿದ್ದ ನೀರನ್ನು ಅವರ ದಾಹ ತೀರುವ ಮಟ್ಟಿಗೆ ಕುಡಿದುಬಿಟ್ಟು ನಡೆಯಲು ಪ್ರಾರಂಭಿಸಿದರು. ಇದನ್ನು ಒಬ್ಬ ಸಂಶೋಧಕ ನೋಡಿದರು. ತಕ್ಷಣ, ಅಯ್ಯಯ್ಯೋ ಈ ನೀರನ್ನು ಏಕೆ ಕುಡುದ್ರಿ? ಇದರಲ್ಲಿ ಎಷ್ಟು ಸೂಕ್ಷ್ಮಜೀವಿಗಳಿವೆ ನಿಮಗೆ ಗೊತ್ತಾ? ಇದು ದೇಹಕ್ಕೆ ಬಹಳಷ್ಟು ಹಾನಿ ಉಂಟುಮಾಡುತ್ತದೆ. ನೀವು ನನ್ನ ಜೊತೆ ಬನ್ನಿ ಈ ನೀರಿನಲ್ಲಿ ಎಷ್ಟು ಸೂಕ್ಷ್ಮಜೀವಿಗಳಿವೆ ಎಂದು ನಾನು ನಿಮಗೆ ತೋರಿಸುತ್ತೇನೆ ಎಂದು ಹೇಳಿ ಅವರನ್ನು ಪ್ರಯೋಗಾಲಯಕ್ಕೆ ಕರೆದೊಯ್ದರು.
ನೀರನ್ನು ಸೂಕ್ಷ್ಮದರ್ಶಕದಡಿಯಲ್ಲಿ ಪರೀಕ್ಷಿಸಿದಾಗ, ಅದರಲ್ಲಿ ಹುಳುಗಳು ಒಡಾಡುತ್ತಿದ್ದವು, ಮತ್ತು ನೋಡಲು ಅಸಹ್ಯಕರವಾಗಿದ್ದವು. ರೈತನಿಗೆ ತುಂಬಾ ಕೋಪ ಬಂತು. ತಾನು ಕುಡಿದ ನೀರಿನಲ್ಲಿ ಹೀಗೆ ಹುಳುಗಳನ್ನು ತೋರಿಸುತ್ತಿದೆಯಲ್ಲಾ ಎಂದು ಭಾವಿಸಿ, ಕಲ್ಲನ್ನು ತೆಗೆದುಕೊಂಡು ಬಂದು 'ಢಮ್' ಎಂದು ಆ ಸೂಕ್ಷ್ಮದರ್ಶಕದ ಮೇಲೆ ಹಾಕಿ ಒಡೆದು ಬಿಟ್ಟರು, ಅಚ್ಚಚ್ಚೋ ಏನಿದು ಹೀಗೆ ಮಾಡಿಬಿಟ್ರಿ ದುಬಾರಿ ವಸ್ತುವನ್ನು ಒಡೆದುಹಾಕಿಬಿಟ್ರಲ್ಲಾ... ಎಂದರು. ರೈತನಿಗೆ ಇದರ ಬಗ್ಗೆ ಏನೂ ತಿಳಿಯದೇ ಇದ್ದುದರಿಂದ, ಇದು ನಾನು ಕುಡಿಯುವ ನೀರಿನಲ್ಲಿ ಅಸಹ್ಯಕರ ಹುಳುಗಳನ್ನು ತೋರಿಸುತ್ತಿದೆಯಲ್ಲಾ ಎಂದು ಹೇಳಿದ ಕೂಡಲೇ, ಸಂಶೋಧಕನು ತನ್ನ ಅಜ್ಞಾನವನ್ನು ಅರಿತುಕೊಂಡು ಅವರಿಗೆ ಅರ್ಥವಾಗುವ ರೀತಿಯಲ್ಲಿ ಅದನ್ನು ವಿವರಿಸಿದರು. ನೋಡಿ, ಈ ಸೂಕ್ಷ್ಮದರ್ಶಕವು ನೀರಿನಲ್ಲಿ ಏನಿದೆಯೋ ಅದನ್ನು ಮಾತ್ರ ತೋರಿಸುತ್ತದೆ. ಇಂತಹ ಅಶುದ್ಧ ನೀರನ್ನು ಕುಡಿಯುವುದರಿಂದ ಅನಾರೋಗ್ಯ ಉಂಟಾಗುತ್ತದೆ ಎಂದು ವಿವರಿಸಿದಾಗ ಅವರೂ ಅದನ್ನು ಅರ್ಥಮಾಡಿಕೊಂಡರು.
ಏನು ಪುಟಾಣಿಗಳೇ, ಸಂಶೋಧಕನು ನಮಗೆ ಸೂಕ್ಷ್ಮದರ್ಶಕದ ಬಗ್ಗೆ ಒಳ್ಳೆಯ ಪಾಠವನ್ನು ಕಲಿಸಿಬಿಟ್ರು. ಸೂಕ್ಷ್ಮದರ್ಶಕವು ಸೂಕ್ಷ್ಮಜೀವಿಗಳನ್ನು ಕಂಡುಹಿಡಿಯಲು ನಮಗೆ ಸಹಾಯ ಮಾಡುವಂತೆಯೇ, ನಮ್ಮೊಳಗಿನ ಪಾಪಗಳನ್ನು ಕಂಡುಹಿಡಿದು ತೋರಿಸುವ ಕನ್ನಡಿ ಯಾವುದು ಎಂದು ನಿಮಗೆ ಗೊತ್ತಾ? ಅದೇ "ಸತ್ಯವೇದ". ಸತ್ಯವೇದದ ವಾಕ್ಯಗಳು ನಮ್ಮ ಪಾಪಗಳ ಬಗ್ಗೆ ನಮಗೆ ಅರಿವು ಮೂಡಿಸಿ ನಾವು ಸರಿಯಾದ ಹಾದಿಯಲ್ಲಿ ನಡೆಯಲು ಸಹಾಯ ಮಾಡುವ ನಿಜವಾದ ಕನ್ನಡಿ. ಪ್ರತಿದಿನ ಬೈಬಲ್ ಓದಿ ಮತ್ತು ವಾಕ್ಯಗಳನ್ನು ಕಂಠಪಾಠ ಮಾಡಿ. ಆಗ ಮಾತ್ರವೇ ನೀವು "ಪಾಪ" ಎಂಬ ಭಯಾನಕ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ. ಯೇಸುಕ್ರಿಸ್ತನ ರಕ್ತವು ನಮ್ಮನ್ನು ಸಕಲ ಪಾಪಗಳಿಂದ ಬಿಡಿಸಿ ನಮ್ಮನ್ನು ಶುದ್ಧೀಕರಿಸುತ್ತದೆ ಪುಟಾಣಿಗಳೇ.
- Sis. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482