Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.09.2025
Share:

By Village Missionary Movement

Saturday, 06-Sep-2025

ಧೈನಂದಿನ ಧ್ಯಾನ(Kannada) – 06.09.2025

 

ಶಿಷ್ಯನಾ? ಕ್ರೈಸ್ತನಾ? 

 

"ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು." - ಲೂಕ 14:27

 

ಕ್ರೈಸ್ತ ಹೆಸರುಗಳನ್ನು ಮಾತ್ರ ಇಟ್ಟುಕೊಂಡು ಕ್ರಿಸ್ತನನ್ನು ಅನುಸರಿಸದೆ ಬದುಕುವ ವ್ಯಕ್ತಿಯು ಕ್ರೈಸ್ತನಾಗಿರಲು ಸಾಧ್ಯವಿಲ್ಲ. ಅದೇ ರೀತಿ, ಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿ ಬದುಕಿದರೆ ಮಾತ್ರ ಸಾಕಾಗುವುದಿಲ್ಲ. ಆತನ ಶಿಷ್ಯರಾಗಿ ಬಾಳಬೇಕು ಎಂಬುದೇ ಕ್ರಿಸ್ತನ ಆಜ್ಞೆಯಾಗಿದೆ. ಅದಕ್ಕಾಗಿಯೇ ಯೇಸು ಕ್ರಿಸ್ತನು ತನ್ನನ್ನು ಹಿಂಬಾಲಿಸುತ್ತಾ ಬಂದವರಿಗೆ, ಶಿಷ್ಯನಾಗಲು ಬಯಸುವ ವ್ಯಕ್ತಿಯು ಹೇಗಿರಬೇಕು ಎಂದು ಹೇಳಿದರು. ಯೇಸುವಿನ ಬಳಿಗೆ ಬರುವವನು, ತನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರರು ಮತ್ತು ಸಹೋದರಿಯರು ಮತ್ತು ತನ್ನ ಸ್ವಂತ ಜೀವನವನ್ನು ಸಹ ನಿರಾಕರಿಸದಿದ್ದರೆ, ಅವನು ನನ್ನ ಶಿಷ್ಯನಾಗಲು ಸಾಧ್ಯವಿಲ್ಲ ಎಂದು ಅವರು ಬಹಳ ಸ್ಪಷ್ಟವಾಗಿ ಹೇಳಿದರು. ಅಷ್ಟೇ ಅಲ್ಲ, ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸದವನೂ ಸಹ ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಅವರುಗಳನ್ನು ನಿರಾಕರಿಸಬೇಕು ಎಂದಲ್ಲ, ಆದರೆ ನಾವು ಎಲ್ಲರಿಗಿಂತ ದೇವರನ್ನು ಮೊದಲು ಇಡಬೇಕು ಎಂಬುದೇ ಅದರ ಅರ್ಥ. ಕ್ರೈಸ್ತ ಜೀವನವು ಸಮಸ್ಯೆಗಳಿಲ್ಲದ ಜೀವನವಲ್ಲ. ಸಮಸ್ಯೆಗಳ ನಡುವೆಯೂ ನಮ್ಮನ್ನು ಮುನ್ನಡೆಸುವ ಕರ್ತನು ನಮಗಿದ್ದಾರೆ.

 

ಯೇಸುವಿನ ಶಿಷ್ಯನಾದ ಯೋಹಾನನ ಸುವಾರ್ತೆಯಲ್ಲಿ, “ಲೋಕದಲ್ಲಿ ನಿಮಗೆ ಸಂಕಟ ಉಂಟು, ಆದರೂ ಧೈರ್ಯವಾಗಿರಿ; ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದರು. ಆತನು ನಮಗೆ ಪ್ರತಿದಿನ ಕೊಡುವ ಶಿಲುಬೆಯನ್ನು ನಾವು ತೆಗೆದುಕೊಂಡು ಆತನನ್ನು ಹಿಂಬಾಲಿಸಬೇಕು. ನಾವು ಆತನೊಂದಿಗೆ ಪಾಡುಗಳನ್ನು ಸಹಿಸಿಕೊಂಡರೆ, ಆತನು ಆಳ್ವಿಕೆ ಮಾಡುವ ಪ್ರಕಾರ, ನಾವು ಸಹ ಆಳ್ವಿಕೆ ಮಾಡುವುದಕ್ಕಾಗಿಯೇ ನಮ್ಮನ್ನೂ ಶಿಲುಬೆಯ ಹಾದಿಯಲ್ಲಿ ನಡೆಸುತ್ತಾರೆ. ಸೇವಕನು ತನ್ನ ಯಜಮಾನನಿಗಿಂತ ದೊಡ್ಡವನಲ್ಲ, ಆದರೆ ಯಜಮಾನನ ಚಿತ್ತವನ್ನು ತಿಳಿದು ಅದನ್ನು ಮಾಡುವವನು ಒಳ್ಳೆಯ ಸೇವಕನೆಂದು ಪರಿಗಣಿಸಲ್ಪಡುವನು. ಅಷ್ಟೇ ಅಲ್ಲ, ನೇಗಿಲಿನ ಮೇಲೆ ಕೈ ಹಾಕಿ ಹಿಂತಿರುಗಿ ನೋಡುವ ಯಾರೂ ದೇವರ ರಾಜ್ಯಕ್ಕೆ ಯೋಗ್ಯರಲ್ಲ ಎಂದು ಯೇಸು ಹೇಳಿದರು.

 

ಆದ್ದರಿಂದ, ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ. ನಾವು ನಾಮಧೇಯ ಕ್ರೈಸ್ತರಾ? ಅಥವಾ ಶಿಷ್ಯರಾ? ಆತನು ನಮ್ಮನ್ನು ತನ್ನ ಶಿಷ್ಯರಾಗಿ ಇರುವುದಕ್ಕಾಗಿಯೇ ಕರೆದಿದ್ದಾರೆ ಮತ್ತು ನಮ್ಮನ್ನು ಪ್ರತ್ಯೇಕಿಸಿದ್ದಾರೆ. ನಾವು ಯೇಸುವಿಗಿಂತ ಬೇರೆ ಯಾವುದನ್ನೂ ಹೆಚ್ಚಾಗಿ ಪ್ರೀತಿಸಬಾರದು. ಯೇಸುವನ್ನು ಈ ಲೋಕದಿಂದ ಕರೆದೊಯ್ಯುವ ಮೊದಲು, ಆತನು ತನ್ನ ಶಿಷ್ಯರಿಗೆ, “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ." ಎಂದರು. ಆತನ ಆಜ್ಞೆಯನ್ನು ಪೂರೈಸಲು ನಾವು ಸಹ ಶಿಷ್ಯರಾಗಿ ಜೀವಿಸಿ, ಇತರರನ್ನೂ ಶಿಷ್ಯರಾಗಿ ಮಾಡೋಣ! ಆಮೆನ್.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಶಿಬಿರದ ಮೂಲಕ ಯೇಸುವಿನ ಪ್ರೀತಿಯೊಳಗೆ ಬಂದವರು ಹತ್ತಿರದ ಸಭೆಗಳಿಗೆ ಹೋಗಿ ದೃಢವಾಗಿ ನಿಲ್ಲುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş betcio jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet