By Village Missionary Movement
Thursday, 04-Sep-2025ಧೈನಂದಿನ ಧ್ಯಾನ(Kannada) – 04.09.2025
ಸುಳ್ಳು ಹೇಳಬೇಡಿ
"ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು" - ಯಾಜಕ. 19:11
ಮಧುರಂ ಎಂಬವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಅವರಿಗೆ ನದಿಯ ಬಳಿ ಐದು ಎಕರೆ ಭೂಮಿ ಮತ್ತು ಐದು ಎಕರೆ ಕಲ್ಲಿನ ಭೂಮಿ ಇತ್ತು. ನದಿಯ ಬಳಿಯ ಭೂಮಿ ಚೆನ್ನಾಗಿ ಬೆಳೆದು ಹೇರಳವಾದ ಬೆಳೆಗಳನ್ನು ನೀಡುತ್ತಿತ್ತು. ಆದರೆ ಕಲ್ಲಿನಿಂದ ಕೂಡಿದ ಭೂಮಿಯನ್ನು ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಮಧುರಂ ರವರು ಅನಾರೋಗ್ಯಕ್ಕೆ ಒಳಗಾದರು ಮತ್ತು ಆಸ್ಪತ್ರೆಗೆ ದಾಖಲಾದರು. ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯನ್ನು ನೋಡಿಕೊಳ್ಳಲು ಸರದಿ ತೆಗೆದುಕೊಂಡರು. ಆದರೆ ಅವರ ಆರೋಗ್ಯ ಹದಗೆಟ್ಟಿತು. ಆಗ ಅವರು ತಮ್ಮ ಬಳಿಯಿದ್ದ ಹಿರಿಯ ಮಗನಿಗೆ, ನೀನು ಮತ್ತು ನಿನ್ನ ಸಹೋದರ ಯಾವುದೇ ಜಗಳವಿಲ್ಲದೆ ನದಿಯ ಬಳಿ ಇರುವ ಭೂಮಿಯನ್ನು ಮತ್ತು ಕಲ್ಲಿನ ಭೂಮಿಯನ್ನು ಸಮಾನವಾಗಿ ಹಂಚಿಕೊಳ್ಳಿರಿ ಎಂದು ಹೇಳಿ ನಿಧನರಾದರು.
ಅವರ ಕಿರಿಯ ಮಗ ಆಸ್ಪತ್ರೆಯಲ್ಲಿದ್ದ ಮಗನ ಬಳಿ, ಅಪ್ಪ ಸಾಯುವ ಮೊದಲು ಏನು ಹೇಳಿದರು ಎಂದು ಕೇಳಿದನು. ಅದಕ್ಕೆ ಅವನು ನದಿಯ ದಡದ ಬಳಿ ಇರುವ ಐದು ಎಕರೆ ಭೂಮಿಯನ್ನು ನೀನು ತೆಗೆದುಕೋ ಎಂದು, ಆ ಕಲ್ಲಿನ ಭೂಮಿಯನ್ನು ನಿನ್ನ ತಮ್ಮನಿಗೆ ಕೊಡು ಎಂದು ಹೇಳಿದರು ಅಂದನು. ಮಗನು ತನ್ನ ತಂದೆಯ ಮಾತನ್ನು ಗೌರವಿಸಿ ಕಲ್ಲಿನ ಭೂಮಿಯನ್ನು ದುರಸ್ತಿ ಮಾಡಲು ಪ್ರಾರಂಭಿಸಿದನು. ಅವನು ಕಲ್ಲುಗಳನ್ನು ಕತ್ತರಿಸಿ ದುರಸ್ತಿ ಮಾಡುತ್ತಿದ್ದಾಗ, ಕಲ್ಲುಗಳು ಪ್ರಕಾಶಮಾನವಾಗಿ ಹೊಳೆಯಲು ಪ್ರಾರಂಭಿಸಿದವು. ಅವನು ತಕ್ಷಣ ಅವುಗಳನ್ನು ತನ್ನ ಸ್ನೇಹಿತನಿಗೆ ತೋರಿಸಿದನು. ಇವು ದುಬಾರಿ ಗ್ರಾನೈಟ್ ಕಲ್ಲುಗಳು ಎಂದು ಸ್ನೇಹಿತ ಹೇಳಿದನು. ಅವನು ಅಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸಿದನು, ಕಲ್ಲುಗಳನ್ನು ರಫ್ತು ಮಾಡಿ ಶ್ರೀಮಂತನಾದನು. ಅವನನ್ನು ಮೋಸಗೊಳಿಸಿದ ಹಿರಿಯ ಸಹೋದರನು ತನ್ನ ಕಿರಿಯ ಸಹೋದರನನ್ನು ಮೋಸ ಮಾಡಿದ್ದಕ್ಕಾಗಿ ವಿಷಾದಿಸಿದನು.
ಮೇಲಿನ ವಚನ ಏನು ಹೇಳುತ್ತದೆ? ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ ಎಂದು. ಅಣ್ಣನು ತನ್ನ ತಮ್ಮನನ್ನು ಮೋಸಗೊಳಿಸಲು ಸುಳ್ಳು ಹೇಳಿದನು. ಆದರೆ ನಿಜವಾಗಿಯೂ ಮೋಸ ಹೋದವರು ಯಾರು? ಅಣ್ಣನೇ. ನದಿಯ ದಡದಲ್ಲಿರುವ ಭೂಮಿ ಅಲ್ಪಾವಧಿಯಲ್ಲಿಯೇ ಒಣ ಭೂಮಿಯಾಗಿ ಏಕೆ ಬದಲಾಯಿತು? ತಮ್ಮ ಶ್ರೀಮಂತ ವ್ಯಕ್ತಿಯಾಗಿದ್ದನು. ಆದರೆ ಅಣ್ಣ ಬಡವನಾದನು. ಸತ್ಯವೇದದಲ್ಲಿ, ಸುಳ್ಳು ಹೇಳುವ ಮೂಲಕ ತಮ್ಮ ಜೀವನವನ್ನು ಹಾಳುಮಾಡಿಕೊಂಡ ಅನನೀಯ ಮತ್ತು ಸಫೈರಳ ಬಗ್ಗೆ ನಮಗೆ ಗೊತ್ತು. ನಾವು ಮೋಸ ಮಾಡುತ್ತಿರುವುದು ಪೇತ್ರನಿಗೆ ಗೊತ್ತಿಲ್ಲ ಎಂದು ಭಾವಿಸಿದರು. ಆದರೆ ಅವರು ತಮ್ಮನ್ನು ತಾವೇ ಮೋಸಗೊಳಿಸಿಕೊಂಡರು.
ಜಾಗರೂಕರಾಗಿರಿ! ಮೋಸಮಾಡಬೇಡಿ. ನಾವೂ ಒಂದು ದಿನ ಮೋಸ ಹೋಗುತ್ತೇವೆ. "ಸುಳ್ಳಿನಿಂದ ಸಿಕ್ಕಿದ ಸಂಪತ್ತು ಹಬೆಯಂತೆ ಅಸ್ಥಿರ, ಮೃತ್ಯುಪಾಶದಂತೆ [ನಾಶಕರ]." (ಜ್ಞಾನೋಕ್ತಿ 21:6). ಯೇಸುವಿನ ಮೇಲೆ ನಿಮ್ಮ ನಂಬಿಕೆ ಇಡಿ. ಯೇಸು ನಿಮ್ಮನ್ನು ತಕ್ಕ ಸಮಯದಲ್ಲಿ ಮೇಲಕ್ಕೆತ್ತುತ್ತಾರೆ. ಆದ್ದರಿಂದ ನಾವು ಸುಳ್ಳು ಹೇಳದೆಯೂ, ಇತರರನ್ನು ಮೋಸಗೊಳಿಸದೆಯೂ ಇರೋಣ. ಯೇಸು ನಮ್ಮನ್ನು ಆಶೀರ್ವದಿಸಲಿ. ಆಮೆನ್. ಹಲ್ಲೇಲೂಯಾ!
- Rev. S. A.ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಯೌವನಸ್ಥರ ಉಜ್ಜೀವನ ಶಿಬಿರದಲ್ಲಿ ಭಾಗವಹಿಸಿದವರು ತಾವು ಪಡೆದುಕೊಂಡ ಅಭಿಷೇಕವನ್ನು ಕಾಪಾಡಿಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482