Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.09.2025
Share:

By Village Missionary Movement

Wednesday, 03-Sep-2025

ಧೈನಂದಿನ ಧ್ಯಾನ(Kannada) – 03.09.2025

 

ದೇವರು ಪ್ರತಿಫಲ ನೀಡುವವನು 

 

"...ನಾನು (ಅದೋನೀಬೆಜೆಕನು) ಮಾಡಿದಂತೆಯೇ ದೇವರು ನನಗೆ ಮಾಡಿದ್ದಾನೆ ಅಂದನು..." - ನ್ಯಾಯಸ್ಥಾಪಕರು 1:7

 

ಒಂದು ದಿನ ಒಬ್ಬ ಧರ್ಮನಿಷ್ಠ, ಶ್ರೀಮಂತ ವೃದ್ಧೆ ಒಂದು ಕನಸು ಕಂಡು ಎಚ್ಚರಗೊಂಡರು. ಆ ಕನಸಿನ ಮೂಲಕ ತಾನು ಕಲಿತದ್ದನ್ನು ಮುದ್ರಿಸಿ ಅನೇಕ ಜನರಿಗೆ ಕೊಟ್ಟರು. ಅವರು ಕಂಡ ಕನಸು ಏನೆಂದರೆ, ಅವರು ಸತ್ತ ನಂತರ, ದೇವದೂತನು ಅವರನ್ನು ಪರಲೋಕಕ್ಕೆ ಕರೆದೊಯ್ದು ಒಂದು ಸಣ್ಣ ಮನೆಯನ್ನು ತೋರಿಸಿ, ಇದು ದೇವರು ನಿಮಗೆ ಕೊಟ್ಟ ಪ್ರತಿಫಲ ಎಂದರಂತೆ. ಆದರೆ ಅವರ ಮನೆಯ ಮುಂದೆ, ಬಹಳ ಭವ್ಯವಾಗಿ ನಿರ್ಮಿಸಲಾದ ದೊಡ್ಡ ಮನೆಯಲ್ಲಿ, ಅವರಿಗೆ ತಿಳಿದಿರುವ ಒಬ್ಬ ತಾಯಿ ಇದ್ದರು. ಆ ತಾಯಿ ಭೂಮಿಯ ಮೇಲೆ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದವರು. ಆದರೆ ಅವರು ಇಂತಹ ಭವ್ಯವಾದ ಮನೆಯನ್ನು ಪಡೆಯಲು ಅವರು ಏನು ಮಾಡಿದ್ದಾರೆ ಎಂದು ದೇವದೂತನನ್ನು ಕೇಳಿದರು. 

 

ಅದಕ್ಕೆ ಆ ದೇವದೂತನು ಈ ಬಡ ತಾಯಿ ತನ್ನ ಶಕ್ತಿಗೆ ಮೀರಿದ ಎಲ್ಲವನ್ನೂ ದೇವರ ಸೇವೆಗೆ ಕೊಟ್ಟರು. ಅವರು ತಮ್ಮ ಶಕ್ತಿಗೆ ಮೀರಿ ಸೇವೆ ಸಲ್ಲಿಸಿದರು ಮಾತ್ರವಲ್ಲದೆ, ದೀರ್ಘಕಾಲ ಅಂತರಂಗದಲ್ಲಿ ದೇವರನ್ನು ಪ್ರಾರ್ಥಿಸಿದರು. ಇದನ್ನು ಕೇಳಿ ಆಕೆ ಎಚ್ಚರಗೊಂಡಾಗ, ತಾವು ಕಂಡದ್ದು ಕನಸೆಂದು ಅರಿತುಕೊಂಡರು ಮತ್ತು ತುಂಬಾ ಸಂತೋಷಪಟ್ಟರು. "ದೇವರೇ, ನನ್ನ ಮೇಲೆ ಪ್ರೀತಿಯಿಟ್ಟು ನಾನು ಸೇವೆ ಮಾಡುವಂತೆ ನನ್ನನ್ನು ಪ್ರೇರೇಪಿಸಿದ್ದಕ್ಕಾಗಿ ಸ್ತೋತ್ರ. ಎಂದು ಹೇಳಿದರು. ಆದ್ದರಿಂದ ತಾನು ಮಾತ್ರ ಈ ಮೂರು ಕೆಲಸಗಳನ್ನು ಮಾಡದೇ ಅದನ್ನು ಮತ್ತೊಬ್ಬರೂ ಮಾಡುವಂತೆ ಕರಪತ್ರಗಳನ್ನು ಮುದ್ರಿಸಿ ಅನೇಕರಿಗೆ ಕೊಟ್ಟು ಸಹಾಯ ಮಾಡಿದರು. 

 

ಸತ್ಯವೇದದಲ್ಲಿ ನ್ಯಾಯಸ್ಥಾಪಕರ ಪುಸ್ತಕದ ಮೊದಲ ಅಧ್ಯಾಯದಲ್ಲಿ, ಅದೋನೀಬೆಜೆಕನ ಸಾಕ್ಷಿಯ ಮಾತು ಚಿನ್ನದ ಅಕ್ಷರಗಳಲ್ಲಿ ಬರೆಯಲ್ಪಡಬೇಕಿತ್ತು: "ನಾನು ಮಾಡಿದಂತೆಯೇ, ದೇವರು ನನಗೆ ಮಾಡಿದ್ದಾನೆ. ನನ್ನಿಂದ ಎಪ್ಪತ್ತು ರಾಜರ ಕೈಕಾಲುಗಳ ಹೆಬ್ಬೆರಳುಗಳು ಕತ್ತರಿಸಲ್ಪಟ್ಟವು; ನನ್ನ ಮೇಜಿನ ಕೆಳಗೆ ಬೀಳುವ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು. ನಾನು ಅವರಿಗೆ ಮಾಡಿದಂತೆಯೇ ದೇವರು ನನಗೆ ಮಾಡಿದ್ದಾನೆ" ಅಂದನು. ಅರಸನಾದ ಸೌಲನು ಸಹ ಸ್ವಾರ್ಥ ಮತ್ತು ಪಕ್ಷಪಾತದಿಂದಾಗಿ ರಾಜ್ಯಾಧಿಕಾರದಿಂದ ತಿರಸ್ಕರಿಸಲ್ಪಟ್ಟರು. ನಾವು ಮಾಡುವ ಒಳ್ಳೆಯದಕ್ಕೆ ಪ್ರತಿಫಲ ಉಂಟು, ಕೆಟ್ಟದ್ದಕ್ಕೆ ಪ್ರತಿಫಲವುಂಟು. ನಮ್ಮಿಂದ ಯಾರಿಗೂ ಹಾನಿಯಾಗಬಾರದು. 

 

ಎಲ್ಲಾ ಮನುಷ್ಯರು ದೇವರಿಂದ ಸೃಷ್ಟಿಸಲ್ಪಟ್ಟವರು. ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ಎಂದರು. ದೇವರ ಆತ್ಮದಿಂದ ನಡೆಸಲ್ಪಡುವವರು ದೇವರ ಮಕ್ಕಳಾಗಿದ್ದಾರೆ. ಅವರು ಪರಲೋಕದಲ್ಲಿ ದೇವದೂತರುಗಳಂತೆ ಇರುತ್ತಾರೆ. ವಿಶೇಷವಾಗಿ ವಿಶ್ವಾಸಿಗಳ ಕುಟುಂಬಕ್ಕೂ ಒಳ್ಳೆಯದನ್ನು ಮಾಡೋಣ. ವಿಶ್ವಾಸಿಗಳಿಗೆ ಮಾಡಿದ ಉಪಕಾರಕ್ಕೂ ಕೆಟ್ಟದ್ದಕ್ಕೂ ತಕ್ಕ ಪ್ರತಿಫಲವನ್ನು ಪಡೆಯುತ್ತೇವೆ. ಪ್ರತಿಫಲವನ್ನು ನೀಡುವವನು ದೇವರೇ. ಆಮೆನ್. 

- Rev. D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಕೂಟದಂದು ಯೌವನಸ್ಥರು ತಾವು ತೆಗೆದುಕೊಂಡ ನಿರ್ಧಾರದಲ್ಲಿ ದೃಢವಾಗಿ ನೆಲೆಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al