Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.08.2025 (Kids Special)
Share:

By Village Missionary Movement

Sunday, 31-Aug-2025

ಧೈನಂದಿನ ಧ್ಯಾನ(Kannada) – 31.08.2025 (Kids Special)

 

ಪುಟಾಣಿ Hero

 

"...ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು." - 2 ಕೊರಿಂಥ. 9:7

 

Hello ಪುಟಾಣಿಗಳೇ, ಸಮುದ್ರ ತೀರಕ್ಕೆ ಹೋಗಿ ಸಮುದ್ರದಲ್ಲಿ ಸ್ನಾನ ಮಾಡಿ, ಅಲೆಗಳಲ್ಲಿ ಆಟವಾಡಿ ತುಂಬಾ ಜಾಲಿಯಾಗಿ Enjoy ಮಾಡಿರುತ್ತೀರ. ಸಮುದ್ರ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋಲ್ಲ. ಎಲ್ಲರಿಗೂ ಇಷ್ಟ ಅಲ್ವಾ! ಯೇಸು ಕೂಡ ಈ ಲೋಕದಲ್ಲಿ ವಾಸಿಸುತ್ತಿದ್ದಾಗ ಸಮುದ್ರ ತೀರದಲ್ಲಿ ಮತ್ತು ಪರ್ವತಗಳಲ್ಲಿ ಬಹಳಷ್ಟು ಪ್ರಸಂಗಗಳನ್ನು ಮಾಡಿದ್ದಾರೆ. ನನಗೂ ಈ ಸ್ಥಳಗಳು ತುಂಬಾ ಇಷ್ಟ ಪುಟಾಣಿಗಳೇ. ಯೇಸಪ್ಪ ಮಾಡಿದ ಅದ್ಭುತಗಳನ್ನು ನೋಡಿದ ಜನರು ಯೇಸುವನ್ನು ಹುಡುಕುತ್ತಾ ಗುಂಪು ಗುಂಪಾಗಿ ಬಂದರು. ಯೇಸು ಪರ್ವತವನ್ನು ಹತ್ತಿ ಬೋಧಿಸಲು ಪ್ರಾರಂಭಿಸಿದರು. ಇದನ್ನು ಕೇಳಿದ ಜನರು ಯೇಸುವನ್ನು ಹುಡುಕುತ್ತಾ ಬರುತ್ತಿದ್ದರು. ಚಿಕ್ಕ ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರು ಎಲ್ಲರೂ ಯೇಸಪ್ಪನ ಬಳಿಗೆ ಬಂದರೆ ಏನಾದರೂ ಒಳ್ಳೆಯದು ಸಿಗುತ್ತದೆ ಎಂದು ಭಾವಿಸಿದ್ದರು. 

 

ಆ ಗುಂಪಿನಲ್ಲಿ, ಒಬ್ಬ ಚಿಕ್ಕ ಹುಡುಗ ಅಲ್ಲಿ ಕುಳಿತು, ಯೇಸು ಹೇಳುತ್ತಿದ್ದ ಮಾತುಗಳನ್ನು ಕೇಳುತ್ತಿದ್ದನು, ಅವನು ತಂದಿದ್ದ ಆಹಾರವನ್ನು ಮರೆತುಬಿಟ್ಟನು. ನಂತರ "ನಿಮ್ಮ ಬಳಿ ತಿನ್ನಲು ಏನಾದರೂ ಇದೆಯೇ?" ಎಂದು ಕೇಳುವ ಧ್ವನಿ ಅವನಿಗೆ ಕೇಳಿಸಿತು. ಅವನು ತಕ್ಷಣ ತನ್ನ ಚೀಲದಲ್ಲಿದ್ದ ಆಹಾರವನ್ನು ಯೇಸುವಿನ ಶಿಷ್ಯನಾದ ಅಂದ್ರೆಯನಿಗೆ ಕೊಟ್ಟನು. ಸ್ನೇಹಿತರಿಗೆ ನಿಮ್ಮ ನೆಚ್ಚಿನ ತಿಂಡಿಗಳನ್ನು ನೀಡಲು ನಿಮಗೆ ಮನಸೇ ಬರೋದಿಲ್ಲ, ಅಲ್ವಾ? ಈ ಚಿಕ್ಕ ಹುಡುಗನಿಗೆ ಮೀನು ತುಂಬಾ ಇಷ್ಟ. ಆದರೆ ಅವನು ಅದನ್ನು ಯೇಸಪ್ಪನಿಗೆ ಕೊಟ್ಟನು. ಅದರಲ್ಲಿ 5 ರೊಟ್ಟಿಗಳು ಮತ್ತು 2 ಮೀನುಗಳಿದ್ದವು. ಯೇಸಪ್ಪ ಅವನ ಭುಜವನ್ನು ತಟ್ಟಿ ಎಲ್ಲರೂ ಸಾಲಾಗಿ ಕುಳಿತುಕೊಳ್ಳಲು ಹೇಳಿದರು. ನಂತರ ಅವರು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತೆ ಸಲ್ಲಿಸಿ, ಶಿಷ್ಯರಿಗೆ ಕೊಟ್ಟರು. ಅವರು ಅವುಗಳನ್ನು ಪಂಕ್ತಿಯಲ್ಲಿ ಕುಳಿತ್ತಿದ್ದವರಿಗೆ ಬಡಿಸುತ್ತಾ, ಬಡಿಸುತ್ತಾ ಇದ್ದರೂ ಅದು ಕಡಿಮೆಯಾಗದೇ, ಹೆಚ್ಚುತ್ತಲೇ ಇತ್ತು. ಎಂತಹ ಆಶ್ಚರ್ಯ! ಹೆಚ್ಚು ಕಡಿಮೆ ಪುರುಷರು ಮಾತ್ರವೇ 5,000 ಜನರು. ಮಹಿಳೆಯರು ಮತ್ತು ಮಕ್ಕಳ ಲೆಕ್ಕ ಬರೆಯಲ್ಪಟ್ಟಿಲ್ಲ. ಸುಮಾರು 10,000 ಕ್ಕೂ ಹೆಚ್ಚು ಜನರು ತಮ್ಮ ಹೃದಯಕ್ಕೆ ತೃಪ್ತಿಯಾಗುವಷ್ಟು ತಿಂದಿರಬೇಕು ಅಲ್ವಾ ಪುಟಾಣಿಗಳೇ. 12 ಬುಟ್ಟಿಗಳಲ್ಲಿ ಉಳಿದವುಗಳನ್ನು ಸಹ ತೆಗೆದುಕೊಂಡರು. 

 

ಈ ಮಹಿಮೆಯಾದ ಅದ್ಭುತವನ್ನು ನೋಡಿದ ಜನರು ಯೇಸುವಿನ ಮೇಲೆ ಹೆಚ್ಚಿನ ನಂಬಿಕೆ ಇಟ್ಟರು. ಯೇಸುವಿನಿಂದ ಏನನ್ನಾದರೂ ಪಡೆಯಲು ಬಂದ ಜನರ ಗುಂಪಿನಲ್ಲಿ ಯೇಸುವಿಗೆ ತನ್ನೆಲ್ಲವನ್ನೂ ನೀಡಿದ ಹುಡುಗನಂತೆ, ನೀವು ಸಹ ನಿಮ್ಮನ್ನು ಯೇಸುವಿಗೆ ನೀಡಬಹುದು. ಇನ್ನೂ ನೀವು ಸೇರಿಸಿಟ್ಟಿರುವ ಹಣ, ಪ್ರತಿಭೆ ಅಥವಾ ಸಮಯವನ್ನು ನೀಡುವ ಮೂಲಕ ಯೇಸುವನ್ನು ಸಂತೋಷಪಡಿಸಿ ಮುದ್ದು ಪುಟಾಣಿಗಳೇ!

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al