By Village Missionary Movement
Saturday, 30-Aug-2025ಧೈನಂದಿನ ಧ್ಯಾನ(Kannada) – 30.08.2025
BATTERY LOW
"ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ" - ಕೀರ್ತನೆ 94:19
ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ತಮ್ಮ ಸೆಲ್ ಫೋನ್‌ನೊಂದಿಗೆ ನಿಕಟ, ರಹಸ್ಯ ಸಂಬಂಧವನ್ನು ಹೊಂದಿದ್ದಾರೆ. ಮನೆಯಲ್ಲಿ ಒಬ್ಬೊಬ್ಬರಿಗೆ ಪ್ರತ್ಯೇಕ ಪ್ಲೇಟ್, ಗ್ಲಾಸ್ ಇರುವ ಹಾಗೆ ಪ್ರತ್ಯೇಕ ಸೆಲ್ ಫೋನ್ ಇರುತ್ತದೆ. ನಾವು ಅದನ್ನು ಪ್ರತಿದಿನ ಚಾರ್ಜ್ ಮಾಡುತ್ತೇವೆ ಮತ್ತು ಬ್ಯಾಟರಿ ಕಡಿಮೆಯಾಗದಂತೆ ನೋಡಿಕೊಳ್ಳುತ್ತೇವೆ. ಏಕೆ? ಬ್ಯಾಟರಿ ಕಡಿಮೆಯಾದರೆ, ಅದು ಶೀಘ್ರದಲ್ಲೇ ಆಫ್ ಆಗುತ್ತದೆ. ಅದನ್ನು ಬಳಸಲಾಗುವುದಿಲ್ಲ. ಬ್ಯಾಟರಿ ಕಡಿಮೆಯಾಗಿ ಆಗಾಗ್ಗೆ ಸ್ವಿಚ್ ಆಫ್ ಆಗುತ್ತಿದ್ದರೆ ಮತ್ತು ಚಾರ್ಜ್ ಹಾಕುತ್ತಿದ್ದರೆ, ಬ್ಯಾಟರಿ ಶೀಘ್ರದಲ್ಲೇ ಹಾಳಾಗುತ್ತದೆ.
ಅಂಗಡಿಗಳಲ್ಲಿ ಕೆಲವು ಸಾವಿರಗಳಿಗೆ ಕೊಂಡುಕೊಳ್ಳುವ ಈ ಫೋನ್ ಅಥವಾ ಬ್ಯಾಟರಿಗೇ ನಾವು ತುಂಬಾ ಗಮನ ನೀಡುತ್ತೇವೆ. ಆದರೆ ಪ್ರತಿದಿನ ಅಂಗಡಿಗಳಲ್ಲಿ ಲಭ್ಯವಿಲ್ಲದ ದುಬಾರಿಯಾದ ಒಂದಕ್ಕೆ ಪ್ರತಿದಿನ ಚಾರ್ಜ್ ಮಾಡಲು ಮರೆತುಬಿಡುತ್ತೇವೆ. ಅದು ಎಲ್ಲರಿಗೂ ಕೊಡಲ್ಪಟ್ಟಿರುವ ಒಂದು. ಅದೇನು ಎಂದು ಕೇಳುತ್ತೀರಾ? ಅದುವೇ ಆತ್ಮ! ಅದನ್ನು ಪ್ರತಿದಿನವೂ ಚಾರ್ಜ್ ಮಾಡಬೇಕು. ಇಲ್ಲದಿದ್ದರೆ, ಆತ್ಮವು ದುರ್ಬಲವಾಗುತ್ತದೆ ಮತ್ತು ಸಣ್ಣ ವಿಷಯಗಳಿಗೂ ಸೋತುಹೋಗುತ್ತದೆ. ಜೀವನವು ಕತ್ತಲೆಯಾಗುತ್ತದೆ. ಇದನ್ನು ಚಾರ್ಜ್ ಮಾಡಲು, ನಾವು ಪ್ರತಿದಿನ ಬೈಬಲ್ ಓದಬೇಕು. ಪ್ರಾರ್ಥಿಸಬೇಕು. ಫೋನ್ ಗೆ ಚಾರ್ಜ್ ಮಾಡಲು ಕರೆಂಟ್, ಚಾರ್ಜರ್ ಹಾಗೆ ಬೈಬಲ್ ಓದುವಿಕೆ ಮತ್ತು ಪ್ರಾರ್ಥನೆ ಇಲ್ಲದಿದ್ದರೆ, ಸಣ್ಣ ಪುಟ್ಟ ಚಿಂತೆಗಳು ಮತ್ತು ತೊಂದರೆಗಳು ಸಹ ನಮ್ಮನ್ನು ದುರ್ಬಲಗೊಳಿಸುತ್ತವೆ ಮತ್ತು ನಮ್ಮನ್ನು ಬೀಳಿಸುತ್ತದೆ. ಪ್ರಾರ್ಥಿಸುವಾಗ, ನಾವು ಆತನ ಸಹಾಯಕ್ಕಾಗಿ ಬೇಡಿಕೊಳ್ಳುತ್ತೇವೆ. ನಮ್ಮನ್ನು ಆತನಿಗೆ ಒಪ್ಪಿಸುತ್ತೇವೆ, ನಾವು ಆತನ ಹತ್ತಿರ ಬರುತ್ತೇವೆ ಮತ್ತು ಆತ್ಮವು ಬಲಗೊಳ್ಳುತ್ತದೆ. ಚಿಂತೆಗಳು ಮತ್ತು ಆಯಾಸ ಬಂದಾಗ ಮಾತ್ರವಲ್ಲ, ನಾವು ದೈನಂದಿನ ಅಭ್ಯಾಸವಾಗಿ ಪ್ರಾರ್ಥಿಸುವುದನ್ನು ಮುಂದುವರಿಸಿದರೆ, ನಮ್ಮ ಆತ್ಮದ ಶಕ್ತಿ ದೇವರಿಗೂ ಮತ್ತು ಇತರರಿಗೂ ಉಪಯುಕ್ತವಾಗಿ ನಮ್ಮ ಜೀವಗಳನ್ನು ಕಾಯ್ದುಕೊಳ್ಳುತ್ತದೆ. ಫೋನ್‌ನಲ್ಲಿಬ್ಯಾಟರಿ ಯಾವಾಗೆಲ್ಲಾ ಕಡಿಮೆಯಾಗುತ್ತದೆಯೋ ಆಗೆಲ್ಲಾ ಚಾರ್ಜ್ ಹಾಕುವ ಹಾಗೆ, ಆತ್ಮಕ್ಕೂ ಚಾರ್ಜಿಂಗ್ ಅಗತ್ಯವಿದೆ. ಇಸ್ರಾಯೇಲ್ಯರು ತಮ್ಮ ಆತ್ಮವು ಸಣ್ಣ ಸಣ್ಣ ವಿಷಯಗಳಿಂದ ಬೇಸತ್ತು ಗೊಣಗಿದ್ದರಿಂದ ಕಾನಾನ್ ಅನ್ನು ಕಳೆದುಕೊಂಡರು. ಆದರೆ ಕಾಲೇಬ್ ಮತ್ತು ಯೆಹೋಶುವಾ, ದೇವರು ಇಲ್ಲಿಯವರೆಗೆ ಮಾಡಿದ್ದನ್ನು ನೆನೆಸಿಕೊಂಡು ತಮ್ಮನ್ನು ಚಾರ್ಜ್ ಮಾಡಿಕೊಂಡದ್ದರಿಂದ, ನಂಬಿಕೆಯ ಹರಕೆಯನ್ನು ಮಾಡಿ ಕಾನಾನ್ ಅನ್ನು ಸ್ವಾಸ್ಥ್ಯವಾಗಿ ಪಡೆದರು.
ಪ್ರಿಯ ಓದುಗರೇ! ಆತ್ಮವು ತುಂಬಾ ಅಮೂಲ್ಯವಾದದ್ದು. ಅದನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಚಿಂತೆ ಮತ್ತು ಆಯಾಸವು ಸಣ್ಣದಾಗಿ ಬರುವಾಗಲೇ ಗಮನ ಕೊಡಿ. ಇಲ್ಲದಿದ್ದರೆ, ಬ್ಯಾಟರಿ ಕಡಿಮೆಯಾಗಿ ಜೀವನವು ಕತ್ತಲೆಯಾಗುತ್ತದೆ. ನಂತರ ಕಣ್ಣೀರು ಮತ್ತು ಚಿಂತೆಗಳು ಮೇಲುಗೈ ಸಾಧಿಸುತ್ತವೆ. ಇದನ್ನು ಮಾಡಲು ಸರಳ ಮಾರ್ಗವೆಂದರೆ ಪ್ರತಿದಿನ ಬೆಳಿಗ್ಗೆ ನಾವು ಎಚ್ಚರವಾದಾಗ ಪ್ರಾರ್ಥಿಸುವುದು, ಸತ್ಯವೇದವನ್ನು ಓದುವುದು ಮತ್ತು ಅದನ್ನು ಚಾರ್ಜ್ ಮಾಡುವುದು. ಈ ಮಧ್ಯೆ ಚಿಂತೆಗಳು ಮತ್ತು ಆಯಾಸ ಬಂದರೆ, ನಾವು ಮತ್ತೊಮ್ಮೆ ಪ್ರಾರ್ಥಿಸಿ ಅದನ್ನು ಕರ್ತನ ಕೈಗಳಲ್ಲಿ ಕೊಟ್ಟು ಚಾರ್ಜ್ ಮಾಡಿಕೊಳ್ಳೋಣ. ಆಗ ನಮ್ಮ ಜೀವನದಲ್ಲಿ ಒಂದು ಬೆಳಕು ಸಿಗುತ್ತದೆ.
- Mrs. ಅನ್ಬುಜೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
"ಕಣ್ಮಣಿಯೇ ಕೇಳ್" ಎಂಬ ಕಾರ್ಯಕ್ರಮದ ಮೂಲಕ ಯುವತಿಯರು ಕ್ರಿಸ್ತನ ಆಯುಧಗಳಾಗಿ ಮಾರ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482