Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.05.2021
Share:

By Village Missionary Movement

Monday, 31-May-2021

ಧೈನಂದಿನ ಧ್ಯಾನ(Kannada) – 31.05.2021

 

ಗೊತ್ತಿಲ್ಲದ ಸಮಯ

 

"ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ" - ಮತ್ತಾಯ 24:42

 

ಅಮೆರಿಕಾದ ಮಾಜಿ ಅಧ್ಯಕ್ಷ ಡ್ವೈಟ್ ಡಿ. ಐಸೆನ್‌ಹೋವರ್ ರವರು ಒಮ್ಮೆ ರಜೆಯಲ್ಲಿದ್ದಾಗ ಒಂದು ಪತ್ರ ಬಂತು. ಅದರಲ್ಲಿ ಪಾಲ್ ಎಂಬ 6 ವರ್ಷದ ಬಾಲಕ ಕ್ಯಾನ್ಸರ್ ನಿಂದ ಮರಣ ಸ್ಥಿತಿಯಲ್ಲಿ ಇರುವುದಾಗಿಯೂ, ಅಮೆರಿಕಾದ ಅಧ್ಯಕ್ಷರನ್ನು ನೋಡಲು ಬಯಸುತ್ತಿದ್ದಾನೆ ಎಂಬುದಾಗಿಯೂ ಬರೆಯಲಾಗಿತ್ತು. ಇದು ಅಧ್ಯಕ್ಷರ ಗಮನಕ್ಕೆ ಬಂದಾಗ ಅವರು ಹೋಗಿ ಹುಡುಗನನ್ನು ನೋಡಲು ನಿರ್ಧರಿಸಿ, ಹುಡುಗನ ಮನೆಗೆ ಹೋಗಿ ಬಾಗಿಲು ತಟ್ಟಿದರು. ಬಾಲಕನ ತಂದೆ ಡೊನಾಲ್ಡ್ ಬಂದು ಬಾಗಿಲು ತೆರೆದಾಗ ಅಮೆರಿಕಾದ ಅಧ್ಯಕ್ಷರನ್ನು ನೋಡಿ ಬೆರಗಾದರು. ಹುಡುಗನ ತಂದೆ ಅಧ್ಯಕ್ಷರ ಆಗಮನವನ್ನು ನಿರೀಕ್ಷಿಸಿರಲಿಲ್ಲವಾದ್ದರಿಂದ, ಅವರು ಸರಿಯಾದ ಬಟ್ಟೆ ಧರಿಸಿರಲಿಲ್ಲ, ಶೇವಿಂಗ್ ಮಾಡಿಕೊಂಡಿರಲಿಲ್ಲ, ಮನೆಯ ಸಾಮಾನುಗಳನ್ನು ಕ್ರಮವಾಗಿ ಜೋಡಿಸಿರಲಿಲ್ಲ ಇದರಿಂದ ಅವರಿಗೆ ಬಹಳ ಸಂಕಟವಾಯಿತು. ಆದರೂ ಅವರು ಅಧ್ಯಕ್ಷರನ್ನು ಒಳಗೆ ಕರೆದು ಹುಡುಗನ ಬಳಿಗೆ ಕರೆದುಕೊಂಡು ಹೋದರು. ಅಧ್ಯಕ್ಷರು ಹುಡುಗನೊಂದಿಗೆ ಸ್ವಲ್ಪ ಹೊತ್ತು ಮಾತಾಡಿದ ನಂತರ ಹೊರಟುಹೋದರು. ಅದು ನೆರೆಹೊರೆಯವರಿಗೆ ಆ ದಿನದ ಮಾತುಕತೆಯಾಗಿತ್ತು. ಆದರೆ ಅದು ಡೊನಾಲ್ಡ್ ಗೆ ಸಂತೋಷವಾಗಿರಲಿಲ್ಲ. ಏಕೆಂದರೆ ಅವರು ಬರೆದ ಪತ್ರವು ಅಧ್ಯಕ್ಷರಿಗೆ ತಲುಪುತ್ತದೆ, ಮತ್ತು ಅವರು ಬರುತ್ತಾರೆಂದು ಅವರು ಎದುರು ನೋಡದಿರುವುದೇ ಇದಕ್ಕೆ ಕಾರಣವಾಗಿತ್ತು.

 

10 ಕನ್ಯೆಯರ ಸಾಮ್ಯದಲ್ಲಿ, ಐದು ಮಂದಿ ಬುದ್ಧಿವಂತೆಯರು, ಮತ್ತು ಐದು ಮಂದಿ ಬುದ್ಧಿಯಿಲ್ಲದವರಾಗಿದ್ದರು. ಬುದ್ಧಿಯಿಲ್ಲದವರು ತಮ್ಮ ಆರತಿಗಳನ್ನು ತಕ್ಕೊಂಡರು. ಆದರೆ ಎಣ್ಣೆ ತಕ್ಕೊಳಲಿಲ್ಲ. ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಪಾತ್ರೆಗಳಲ್ಲಿ ಎಣ್ಣೆ ತಕ್ಕೊಂಡರು. ನೆನೆಸಿದ ಗಳಿಗೆಯಲ್ಲಿ ಮದಲಿಂಗನು ಬಂದಾಗ ಬುದ್ಧಿವಂತ ಕನ್ಯೆಯರು ತಮ್ಮ ಆರತಿಗಳನ್ನು ಸಿದ್ಧಪಡಿಸಿದರು. ಮದಲಿಂಗನಾದ ಯೇಸುವಿನ ಮದುವೆಯ ಮನೆಯೊಳಗೆ ಪ್ರವೇಶಿಸಿದರು. ಬುದ್ಧಿಯಿಲ್ಲದವರೋ ಆ ದೊಡ್ಡ ಅವಕಾಶವನ್ನು ಕಳೆದುಕೊಂಡರು.

 

ನಮ್ಮ ಯೇಸು ಕ್ರಿಸ್ತನು ಶೀಘ್ರದಲ್ಲೇ ಬರಲಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ನಾವು ಎಷ್ಟು ದೂರ ಸಿದ್ಧರಾಗಿದ್ದೇವೆ ಎಂಬುದು ಪ್ರಶ್ನಾರ್ಹವಾಗಿದೆ. ಎಷ್ಟೋ ವರ್ಷಗಳಿಂದ ಇದನ್ನೇ ಹೇಳುತ್ತಿದ್ದಾರೆ. ಆದರೆ ಇನ್ನೂ ಬಂದಿಲ್ಲವೇ ಎಂಬ ಭಾವನೆ ಜನರಲ್ಲಿದೆ. ಆದ್ದರಿಂದ ಅಜಾಗರೂಕತೆಯಿಂದ ಸಿದ್ಧತೆಯಿಲ್ಲದೆ ಜೀವಿಸುತ್ತಿರುವ ಸ್ಥಿತಿ ಇದೆ. ಈ ಮನಸ್ಥಿತಿಯು ಬದಲಾಗಬೇಕು. ಹೌದು ಪ್ರಿಯರೇ! ನಮ್ಮ ಕರ್ತನು ನಾವು ನೆನೆಸದ ಸಮಯದಲ್ಲಿ ಬರುತ್ತಾರೆ. ನಾವು ಸಿದ್ಧರಾಗಿದ್ದೇವಾ? ಕಳಂಕವಿಲ್ಲದ ರಕ್ಷಣೆಯ ಉಡುಪನ್ನು ಧರಿಸಿದ್ದೇವಾ? ಅಥವಾ ನಾವು ಅನೇಕ ಪಾಪ ಕಲೆಗಳೊಂದಿಗೆ ಕಾಣುತ್ತಿದ್ದೇವಾ? ಶೀಘ್ರವಾಗಿ ಯೇಸುಕ್ರಿಸ್ತನ ಬರೋಣಕ್ಕೆ ಸಿದ್ಧರಾಗೋಣ. ನಾವು ನೆನೆಸದ ಗಳಿಗೆಯಲ್ಲಿ ಅವರು ಬರುತ್ತಾರೆ. ಅವರನ್ನು ಭೇಟಿ ಮಾಡಲು ಸಿದ್ಧರಾಗೋಣ.

- Mrs.ಜೀವಾ ವಿಜಯ್

 

ಪ್ರಾರ್ಥನಾ ಅಂಶ:-

ಕಚೇರಿ ಕೆಲಸಕ್ಕೆ ಅಗತ್ಯವಾದ ಜೆರಾಕ್ಸ್ ಮಿಶಿನ್ ನನ್ನು ಖರೀದಿಸಲು ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş