Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.08.2025
Share:

By Village Missionary Movement

Friday, 29-Aug-2025

ಧೈನಂದಿನ ಧ್ಯಾನ(Kannada) – 29.08.2025

 

ಜಯಿಸಲು ಜನಿಸಿದವರು

 

"…ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ" - ರೋಮಾ 8:37

 

ಒಬ್ಬ ಮಹಾನ್ ಸೇನಾಧಿಪತಿ ತನ್ನ ದೇಶದ ಸಮೀಪವಿರುವ ದ್ವೀಪವನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದ್ದನು. ದ್ವೀಪವನ್ನು ತನ್ನ ಸ್ವಂತ ದೇಶಕ್ಕೆ ಸಂಪರ್ಕಿಸುವ ಒಂದೇ ಒಂದು ಸೇತುವೆ ಇತ್ತು. ಒಂದು ರಾತ್ರಿ, ಅವನು ತನ್ನ ಸೈನಿಕರಿಗೆ ಸಮುದ್ರದ ಮೂಲಕ ದ್ವೀಪವನ್ನು ತಲುಪಲು ಆದೇಶಿಸಿದನು. ಹಾಗೆಯೇ ಅವರು ದ್ವೀಪವನ್ನು ತಲುಪಿದರು. ಸೇನಾಧಿಪತಿ ತನ್ನ ಸೈನಿಕರಿಗೆ ಇಡೀ ಸಮುದ್ರವನ್ನು ನಾಶಮಾಡಲು ಆದೇಶಿಸಿದನು. ಸೈನಿಕರು ದಿಗ್ಭ್ರಮೆಗೊಂಡಾಗ, ಒಬ್ಬ ಸೈನಿಕ ಎದ್ದುನಿಂತು, "ಈ ಒಂದು ಸೇತುವೆಯನ್ನು ಹೊರತುಪಡಿಸಿ ನಮಗೆ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲ. ನಾವು ಇದನ್ನೂ ನಾಶಮಾಡಿದರೆ, ನಾವು ಹೇಗೆ ತಪ್ಪಿಸಿಕೊಳ್ಳುವುದು?" ಎಂದು ಕೇಳಿದನು. ಅದಕ್ಕೆ ಆ ನಾಯಕನು, "ನಾವು ತಪ್ಪಿಸಿಕೊಳ್ಳಲು ಬಂದಿಲ್ಲ; ಜಯಿಸುವುಕ್ಕಾಗಿ ಬಂದಿದ್ದೇವೆ" ಎಂದರು. ಸೇತುವೆ ನಾಶವಾಯಿತು, ಮತ್ತು ಗೆಲುವು ಸಾಧಿಸಲಾಯಿತು. ಆ ಸೇತುವೆಯನ್ನು ವಿಜಯದ ಸೇತುವೆಯಾಗಿ ಪುನರ್ನಿರ್ಮಿಸಲಾಯಿತು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ, ಒಂದು ಕಾರ್ಯವನ್ನು ಮಾಡಲು ಪ್ರಾರಂಭಿಸುವಾಗಲೇ, ಇದು ನಡೆಯದೇ ಹೋದರೆ, ಇದು ಮುಗಿಯದೇ ಹೋದರೆ, ಇದು ಸಾಧ್ಯವಾಗದೇ ಹೋದರೆ ಎಂದು ನಕಾರಾತ್ಮಕವಾಗಿ ಯೋಚಿಸಬಾರದು. ನಾವು ಹಾಗೆ ಯೋಚಿಸಿದಾಗ, ನಾವು ತೆಗೆದುಕೊಂಡ ವಿಷಯದಲ್ಲಿ ಯಶಸ್ವಿಯಾಗುವುದಿಲ್ಲ. "ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ" ಎಂಬ ವಚನದ ಪ್ರಕಾರ, ನಮ್ಮ ಹೃದಯಗಳಲ್ಲಿ ಆಳವಾದ ನಂಬಿಕೆಯನ್ನು ತುಂಬಿಕೊಳ್ಳಬೇಕು.

 

ಮೋಕ್ಷದ ಕಡೆಗೆ ನೋಡಿ ಪ್ರಯಾಣಿಸುತ್ತಿರುವ ನಮ್ಮ ಕ್ರೈಸ್ತ ಓಟದಲ್ಲಿ ನಾವು ಎಂದಿಗೂ ಹಿಂತಿರುಗಿ ನೋಡಬಾರದು. ಸಮೂಹದಂತೆ ಸಾಕ್ಷಿಗಳ ಮೇಘವು ತಮ್ಮ ನಂಬಿಕೆಯ ಓಟವನ್ನು ಪೂರ್ಣಗೊಳಿಸಿದೆ ಎಂದು ನಾವು ಸತ್ಯವೇದದಲ್ಲಿ ನೋಡಬಹುದು. ಇಬ್ರಿಯ 11:15, 16 ರಲ್ಲಿ, ನಮ್ಮ ಪೂರ್ವಿಕರು ಬಿಟ್ಟು ಬಂದ ದೇಶಕ್ಕೆ ಹಿಂತಿರುಗಲು ಬಯಸದೇ, ಪಾಡುಗಳು ಹೋರಾಟಗಳು, ಸಮಸ್ಯೆಗಳ ಮಧ್ಯೆಯೂ ಪರಲೋಕವೆಂಬ ಉತ್ತಮದೇಶವನ್ನು ಬಯಸಿ ದೇವರ ಬಳಿ ಉತ್ತಮ ಸಾಕ್ಷಿಯನ್ನು ಪಡೆದರು. 

 

ಎಲೀಯನು ಎಲೀಷನನ್ನು ಕರೆದಾಗ, ಎಲೀಷನು ತನ್ನ ಉಳುಮೆ ಮತ್ತು ತನ್ನ ಎತ್ತುಗಳನ್ನು ಅಳಿಸಿಯೇ ಬಂದರು. ತನ್ನ ಮನಸ್ಸು ತಾನು ಮಾಡಿದ ಹಳೆಯ ಕೆಲಸಕ್ಕೆ ಹಿಂತಿರುಗಬಾರದು ಎಂಬುದಕ್ಕಾಗಿ ಹೀಗೆ ಮಾಡಿರಬಹುದು. ಕರ್ತನಾದ ಯೇಸು ಕೂಡ, "ನೇಗಿಲಿನ ಮೇಲೆ ಕೈಯಿಟ್ಟು ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ" ಎಂದು ಹೇಳಿದನು. ಇಂದಿನ ಸತ್ಯವೇದಭಾಗದಲ್ಲಿ, ನಮ್ಮನ್ನು ಪ್ರೀತಿಸುವ ಯೇಸು ಕ್ರಿಸ್ತನು ನಮ್ಮನ್ನು ಸಂಪೂರ್ಣವಾಗಿ ವಿಜಯಶಾಲಿಗಳನ್ನಾಗಿ ಮಾರ್ಪಡಿಸುತ್ತಿದ್ದಾರೆ. ಆದ್ದರಿಂದ ಸೋತುಹೋಗದೆ, ಹಿಂದೆ ಸರಿಯದೆ, ನಮ್ಮ ಗುರಿಯತ್ತ ಓಡಿ ಗೆಲ್ಲೋಣ!

- Mrs.ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

“ಇನಿಯವಳೇ” ಎಂಬ ಕಾರ್ಯಕ್ರಮದ ಮೂಲಕ ಮಹಿಳೆಯರು ದೆಬೋರಾಳಂತೆ ಎಸ್ತೇರ್‌ಗಳಂತೆ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al