Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.08.2025
Share:

By Village Missionary Movement

Thursday, 28-Aug-2025

ಧೈನಂದಿನ ಧ್ಯಾನ(Kannada) – 28.08.2025

 

ಹಣದಾಸೆ

 

"ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ..." - 1 ತಿಮೊಥೆ. 6:10

 

ಹತ್ತು ಸಾವಿರ ರೂಪಾಯಿಗಳನ್ನು ಉಳಿಸಿದರೆ, ಒಂದು ವರ್ಷದ ನಂತರ ಐವತ್ತು ಸಾವಿರ ರೂಪಾಯಿಗಳನ್ನು ಪಡೆಯುತ್ತೀರಿ ಎಂದು ಹೇಳುವ "ಮಾರ್ಕೆಟಿಂಗ್" ಹಣದ ವ್ಯವಹಾರವು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ, ಅನೇಕ ಜನರು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲವರು ಹಣವನ್ನು ಕಳೆದುಕೊಳ್ಳುವ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯೋಚಿಸಿ ನೋಡಿ, ನಮ್ಮ ಪ್ರಯತ್ನವಿಲ್ಲದೆ ಹಲವು ಪಟ್ಟು ಬರುವ ಹಣ, ಅದು ಖಂಡಿತವಾಗಿಯೂ ಯಾರೋ ಒಬ್ಬರಿಗೆ ಸೇರಿದ್ದೇ ಆಗಿರಬೇಕು. ನೀವು ಇತರರ ವಸ್ತುಗಳನ್ನು ಅಪೇಕ್ಷಿಸಬಾರದು ಎಂದು ಸತ್ಯವೇದವು ಹೇಳುತ್ತಿದೆ.

 

ಹಣದಾಸೆ ಎಂದು ಹೇಳಿದ ಕೂಡಲೇ, ಅನನೀಯ- ಸಫೈರ ದಂಪತಿಗಳು ನಮ್ಮ ನೆನಪಿಗೆ ಬರುತ್ತಾರೆ. ಇವರು ತಮ್ಮ ಭೂಮಿಯನ್ನು ಮಾರಿದರು. ತನ್ನ ಹೆಂಡತಿಗೆ ಗೊತ್ತಾಗುವಂತೆಯೇ ಅವರ ಕ್ರಯದಲ್ಲಿ ಒಂದು ಭಾಗವನ್ನು ಇಟ್ಟುಕೊಂಡು, ಇನ್ನೊಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿ ಇಟ್ಟನು. ಆಗ ಪೇತ್ರನು ಅನನೀಯನಿಗೆ, “ಸೈತಾನನು ನಿನ್ನ ಹೃದಯದಲ್ಲಿ ತುಂಬಿಕೊಂಡದ್ದೇನು? ನೀನು ಯಾಕೆ ಆ ಹೊಲದ ಕ್ರಯದಲ್ಲಿ ಕೆಲವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸಬೇಕೆಂದಿದ್ದೀ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ ಅಂದನು. ಈ ಮಾತುಗಳನ್ನು ಅನನೀಯನು ಕೇಳಿದ ಕೂಡಲೆ ಬಿದ್ದು ಪ್ರಾಣಬಿಟ್ಟನು. ಯೌವನಸ್ಥರು ಎದ್ದು ಅವನನ್ನು ಹೂಣಿಟ್ಟರು. ಅನನೀಯನ ಹೆಂಡತಿಯೂ ಸಹ ದೇವರ ಮನುಷ್ಯನಿಗೆ, ಭೂಮಿಯನ್ನು ಇಷ್ಟಕ್ಕೇ ಮಾರಿದೆವು ಎಂದು ಸುಳ್ಳು ಹೇಳಿದ್ದರಿಂದ ಅವಳೂ ಸಹ ಕೂಡಲೆ ಬಿದ್ದು ಪ್ರಾಣಬಿಟ್ಟಳು. ಇದನ್ನು ನೋಡಿದ ಎಲ್ಲರಿಗೂ ಮಹಾ ಭಯ ಉಂಟಾಯಿತು. 

 

ಇದನ್ನು ಓದುತ್ತಿರುವ ಪ್ರಿಯ ದೇವರ ಮಕ್ಕಳೇ, ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ ಎಂದು ಸತ್ಯವೇದವು ಎಚ್ಚರಿಸುತ್ತಿದೆ. ಹಣದಾಸೆಯಿಂದಾಗಿ ಇಡೀ ಕುಟುಂಬ ಸತ್ತುಹೋಯಿತು. ಮತ್ತು ಹಣದಾಸೆಯಿಂದಾಗಿ ಗೇಹಜಿಗೆ ಕುಷ್ಠರೋಗವು ಬಂತು. ಹಣದಾಸೆಯಿಂದಾಗಿ ಯೂದನು ತನ್ನ ಸ್ಥಾನವನ್ನು ಕಳೆದುಕೊಂಡನು! ನ್ಯಾಯಯುತ ರೀತಿಯಲ್ಲಿ ಹಣ ಸಂಪಾದಿಸುವುದು ಒಂದು ಆಶೀರ್ವಾದ. ಆದರೆ ದುರಾಶೆಯು ನಮ್ಮನ್ನು ಜಯಿಸದಂತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಣವು ಎಲ್ಲದಕ್ಕೂಸಹಾಯ ಮಾಡುತ್ತದೆ ಎಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ಇದು ನಿಜವೇ, ಆದರೆ ನಾವು ಹಣವನ್ನು ಅತಿಯಾಗಿ ಬಯಸಬಾರದು ಅಥವಾ ನಂಬಬಾರದು. ನಮ್ಮಲ್ಲಿರುವ ಹಣ ನಮಗೆ ಸಾಕು ಎಂಬ ತೃಪ್ತಿಯಿಂದ ಬದುಕಲು ದೇವರ ಸಹಾಯವನ್ನು ಕೋರಬೇಕು. ನಾವು ಅಂತಹ ಉತ್ತಮ ದೃಢಸಂಕಲ್ಪದಿಂದ ಬದುಕಿದಾಗ, ದೇವರು ನಮಗೆ ಸರಿಯಾದ ಸಮಯದಲ್ಲಿ ಅಗತ್ಯವಿರುವ ಹಣವನ್ನು ನೀಡಲು ಸಾಧ್ಯವಾಗುತ್ತದೆ. ಸಾಕು ಎಂಬ ಮನಸ್ಸಿನಿಂದ ನಾವು ತೃಪ್ತಿಯಿಂದ ಬದುಕಲು ಕಲಿತರೆ, ಅದುವೇ ದೊಡ್ಡ ಆಶೀರ್ವಾದ. ನಮ್ಮಲ್ಲಿ ಪ್ರತಿಯೊಬ್ಬರೂ ಈ ಆಶೀರ್ವಾದವನ್ನು ಸ್ವೀಕರಿಸಿ ಬದುಕೋಣ!

- P. ಶಿವ

 

ಪ್ರಾರ್ಥನಾ ಅಂಶ:

ಟಿವಿಯಲ್ಲಿ "ಯೇಸುವಿನ ಸಂತತಿ" ಕಾರ್ಯಕ್ರಮವನ್ನು ವೀಕ್ಷಿಸುವವರು, ಯೇಸುವಿನ ಸಂತತಿಗಳಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin