Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.08.2025
Share:

By Village Missionary Movement

Wednesday, 27-Aug-2025

ಧೈನಂದಿನ ಧ್ಯಾನ(Kannada) – 27.08.2025

 

ಸತ್ಯವೇದದ ಶ್ರೇಷ್ಠತೆ

 

"ನಾನು ನನ್ನ ನ್ಯಾಯಪ್ರಮಾಣದ ದೊಡ್ಡ ಸಂಗತಿ ಗಳನ್ನು ಅವನಿಗೆ ಬರೆದಿದ್ದೇನೆ; ಆದರೆ ಅವುಗಳು ಅನ್ಯವಾದವುಗಳೆಂದು ಎಣಿಸಲ್ಪಟ್ಟಿವೆ" - ಹೋಶೇಯ 8:12

 

ಒಂದು ವೈದ್ಯರ ತಪ್ಪಾದ ಚಿಕಿತ್ಸೆಯಿಂದ ಹುಟ್ಟಿ ಆರು ವಾರಗಳು ತುಂಬಿದ ಫ್ಯಾನಿ ಕ್ರಾಸ್ಬಿ ತನ್ನ ಎರಡು ಕಣ್ಣುಗಳಲ್ಲೂ ದೃಷ್ಟಿ ಕಳೆದುಕೊಳ್ಳಬೇಕಾದ ಪರಿತಾಪ ವಾದ ಸ್ಥಿತಿ ಏರ್ಪಟ್ಟಿತು. ಚಿಕ್ಕ ವಯಸ್ಸಿನಲ್ಲಿ, ಅವರ ಅಜ್ಜಿ ಅವರಿಗೆ ಅನೇಕ ವಿಷಯಗಳ ಕುರಿತು ಹೇಳಿಕೊಟ್ಟರು. ಹೂವುಗಳನ್ನು ಅವುಗಳ ಸುಗಧದಿಂದಲೇ ಯಾವ ಹೂವು ಎಂದು ಕಂಡುಹಿಡಿಯುವ, ಮರವನ್ನು ಮುಟ್ಟಿ ನೋಡಿ ಯಾವ ಮರ ಎಂದು ಹೇಳುವ ಸಾಮರ್ಥ್ಯವನ್ನು ಅವರು ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲೇ ಸತ್ಯವೇದದ ವಾಕ್ಯಗಳನ್ನು ಕಂಠಪಾಠ ಮಾಡಲು ಪ್ರಾರಂಭಿಸಿದರು. ಅವರು 5 ಕಾಂಡಗಳನ್ನು, ಕೀರ್ತನೆಗಳನ್ನು, ಜ್ಞಾನೋಕ್ತಿಗಳನ್ನು ಮತ್ತು ರೂತ್‌ನಂತಹ ಸತ್ಯವೇದದ ಪುಸ್ತಕಗಳನ್ನು ಸಹ ಕಂಠಪಾಠ ಮಾಡಿಕೊಂಡಿದ್ದರು. ಅದು ಅವರ ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಲು ಬಹಳಷ್ಟು ಸಹಾಯ ಮಾಡಿತು.

 

ಹಳೆಯ ಒಡಂಬಡಿಕೆಯಲ್ಲಿ ಕೀರ್ತನೆಗಳ ಪುಸ್ತಕವು ಎಲ್ಲರಿಗೂ ಅತ್ಯಂತ ಪ್ರಿಯವಾದ ಮತ್ತು ನಿರ್ದಿಷ್ಟ ಸಮಯವನ್ನು ಇಟ್ಟುಕೊಂಡು ಓದಬಹುದಾದ ಭಾಗವಾಗಿದೆ. ಈ ಕೀರ್ತನೆಯು ವಯಸ್ಕರಿಂದ ಮಕ್ಕಳವರೆಗೆ ಎಲ್ಲಾರೂ ಇಷ್ಟಪಟ್ಟು ಓದುವಂತಹ ಭಾಗವಾಗಿದೆ. ಅದರಲ್ಲಿ ಹೆಚ್ಚಿನದನ್ನು "ಕೀರ್ತನೆಗಾರ" ಎಂದು ಕರೆಯಲ್ಪಡುವ ದಾವೀದನು ಬರೆದಿದ್ದಾರೆ. ದಾವೀದನು ಬರೆಯುವಾಗ, 'ವಾಕ್ಯದ ಪ್ರಕಾರ ನಿನ್ನ ದಾಸನನ್ನು ಚೆನ್ನಾಗಿ ನಡೆಸಿದ್ದೀರಿ ಎಂದೂ, ನಿನ್ನ ನಿಯಮಗಳನ್ನು ನನಗೆ ಕಲಿಸು. ಯೆಹೋವನ ವಿಧಿಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. ಅವು ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು' ಎಂದು ಬರೆದಿದ್ದಾರೆ.

 

ಪ್ರಿಯ ಸಹೋದರ ಸಹೋದರಿಯರೇ! ಇಂದು ಜಗತ್ತಿನಲ್ಲಿ ಹೆಚ್ಚು ಮುದ್ರಿಸಲ್ಪಟ್ಟು ಮಾರಾಟವಾಗುವ ಏಕೈಕ ಪುಸ್ತಕ ಬೈಬಲ್. ಈ ಸತ್ಯವೇದವು ನಮ್ಮ ಮಾತೃಭಾಷೆಯಲ್ಲಿ ಸಿಗಲು ಅನೇಕರು ರಕ್ತ ಸಾಕ್ಷಿಗಳಾಗಿ ಸಾವನ್ನಪ್ಪಿದ್ದಾರೆ. ಬೈಬಲ್‌ನ ಶ್ರೇಷ್ಠತೆಯನ್ನು ನಾವು ತಿಳಿದಿದ್ದರೆ, ನಾವು ಅದನ್ನು ಓದದೆ ಇರಲು ಸಾಧ್ಯವಿಲ್ಲ. ನಾವು ಪ್ರಾರ್ಥಿಸುವಾಗ, ನಾವು ದೇವರೊಂದಿಗೆ ಮಾತನಾಡುತ್ತೇವೆ. ಬೈಬಲ್ ಅನ್ನು ಓದುವಾಗ, ಕರ್ತನು ನಮ್ಮೊಂದಿಗೆ ಮಾತನಾಡುತ್ತಾರೆ. ಅದನ್ನು ಓದುವ ಪ್ರತಿಯೊಬ್ಬರಿಗೂ ಅದು ಹೊಸ ಜೀವನ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ. ಬೈಬಲ್‌ನಲ್ಲಿರುವ ವಚನಗಳು ಚಿನ್ನ, ಬೆಳ್ಳಿ ಮತ್ತು ವಜ್ರಗಳಂತಹ ಅಮೂಲ್ಯ ವಸ್ತುಗಳಿಗಿಂತ ಹೆಚ್ಚು ಮೌಲ್ಯಯುತವಾಗಿವೆ. ಬೈಬಲ್‌ನ ಈ ವಾಕ್ಯಗಳನ್ನು ಪವಿತ್ರಾತ್ಮನು ನಮಗೆ ಬರೆದುಕೊಟ್ಟಿದ್ದಾರೆ. ನಮ್ಮ ದೃಷ್ಟಿ ಚೆನ್ನಾಗಿರುವ ದಿನಗಳಲ್ಲಿ ನಾವು ಬೈಬಲ್ ಅನ್ನು ಹೆಚ್ಚು ಓದೋಣ. ಕುರುಡ ಹುಡುಗಿ ನೂರಾರು ಅಧ್ಯಾಯಗಳನ್ನು ಕಂಠಪಾಠ ಮಾಡಬಹುದಾದರೆ ನಮ್ಮ ಬಗ್ಗೆ ಏನು? ನಮ್ಮ ಮಕ್ಕಳಿಗೆ ಬೈಬಲ್ ಓದಲು ಕಲಿಸೋಣ. ಬೈಬಲ್ ಅನ್ನು ಧ್ಯಾನಿಸಲು ನಾವು ಹೆಚ್ಚು ಸಮಯವನ್ನು ಕಳೆಯೋಣ, ಏಕೆಂದರೆ ವಾಕ್ಯವು ಸಿಗದ ಕ್ಷಾಮವು ಬರುತ್ತದೆ. ಆದ್ದರಿಂದ ನಾವು ಬೈಬಲ್ ಅನ್ನು ಪ್ರೀತಿಸೋಣ ಮತ್ತು ಓದೋಣ. ಅದನ್ನು ನಮ್ಮ ಜೀವನದಲ್ಲಿ ಅನ್ವಯಿಸೋಣ. ನಮ್ಮ ಹೃದಯಗಳು ದೇವರ ವಾಕ್ಯದಿಂದ ತುಂಬಿದಾಗ, ನಾವು ಮಾತನಾಡುವ ಮಾತುಗಳಿಗೂ ಶಕ್ತಿ ಇರುತ್ತದೆ. ಅವು ಇತರರ ಗಾಯಗಳನ್ನು ಸಹ ಗುಣಪಡಿಸಲು ಸಾಧ್ಯವಾಗುತ್ತದೆ.

- J.P. ಹೆಪ್ಸಿಬಾ

 

ಪ್ರಾರ್ಥನಾ ಅಂಶ:

ನಮ್ಮ ಟಿವಿ ಕಾರ್ಯಕ್ರಮಗಳ ಮೂಲಕ ಅನೇಕರು ನಂಬಿಕೆಯಲ್ಲಿ ಬಲಗೊಳ್ಳುವಂತೆ ಮತ್ತು ದೇವರಿಗಾಗಿ ಕಾರ್ಯ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al