Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.08.2025
Share:

By Village Missionary Movement

Tuesday, 26-Aug-2025

ಧೈನಂದಿನ ಧ್ಯಾನ(Kannada) – 26.08.2025

 

ದೇವರ ಕುಟುಂಬ

 

"...ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು" - ಎಫೆಸ 5:31

 

ಶೇಖರ್-ಮಾಲಾ ಎಂಬ ದಂಪತಿಗಳು ಒಂದು ನಗರದಲ್ಲಿ ವಾಸಿಸುತ್ತಿದ್ದರು. ಶೇಖರ್ ಪದವೀಧರರಾಗಿದ್ದರು. ಅವರು ಗ್ರಾಮೀಣ ಪರಿಸರದಲ್ಲಿ ಜೀವಿಸಿ, ಹತ್ತಿರದ ಕಾಲೇಜಿನಲ್ಲಿ ಓದಿದವರು. ಅವರು ಪ್ರಸ್ತುತ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾ ಉತ್ತಮ ಸಂಬಳ ಪಡೆಯುತ್ತಿದ್ದರು. ಅವರ ಪತ್ನಿ ಮಾಲಾ ನಗರದಲ್ಲಿ ಓದಿ ಬೆಳೆದಿದ್ದರಿಂದ, ಮಾಲಾಳ ಉಡುಗೆ ತೊಡುಗೆ, ನಡವಳಿಕೆ ಮತ್ತು ನಿರರ್ಗಳ ಇಂಗ್ಲಿಷ್ ಅನ್ನು ನೋಡಿದಾಗ ಶೇಖರ್ ಕೀಳರಿಮೆ ಅನುಭವಿಸುತ್ತಿದ್ದರು. ಇದು ಆಗಾಗ್ಗೆ ಇಬ್ಬರ ನಡುವೆ ಜಗಳಗಳು ಮತ್ತು ಅಸಮಾಧಾನಕ್ಕೆ ಕಾರಣವಾಯಿತು. ಮಾಲಾ ಏನೇ ಮಾಡಿದರೂ ಅದರಲ್ಲಿ ಶೇಖರ್ ತಪ್ಪು ಕಂಡುಕೊಳ್ಳುತ್ತಿದ್ದರು. ಇವರಿಬ್ಬರಿಗೂ ಒಂದು ಒಳ್ಳೆಯ ಆಲೋಚನೆ ಬಂತು. ಅದರಂತೆ, ಒಂದು ಸಲಹೆಗಾರರ ಬಳಿಗೆ ಹೋಗಿ ತಮ್ಮ ಶಾಂತಿಯ ಕೊರತೆಗೆ ಕಾರಣಗಳನ್ನು ಹಂಚಿಕೊಂಡರು ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಂಡರು. ಅದರ ನಂತರ ಕೀಳರಿಮೆಯ ಮನೋಭಾವದ ಅಪಾಯವನ್ನು ಮತ್ತು ಮಾಲಾಳ ನಿಜವಾದ ಪ್ರೀತಿಯನ್ನು ಶೇಖರ್ ಅರ್ಥಮಾಡಿಕೊಂಡಾಗಲೇ, ಅವರ ಜೀವನವು ತಿರುವು ಪಡೆದುಕೊಂಡು ಸಂತೋಷದಿಂದ ಬದುಕಿದರು.

 

ಆದಿಯಲ್ಲಿ ದೇವರು ಎಲ್ಲಾ ಸೃಷ್ಟಿಯನ್ನು ಸೃಷ್ಟಿಸಿದರು. ದೇವರಾದ ಕರ್ತನು ಮನುಷ್ಯನನ್ನು ನೆಲದ ಧೂಳಿನಿಂದ ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಮನುಷ್ಯನು ಬದುಕುವ ಪ್ರಾಣಿಯಾದನು. ಆಗ ದೇವರು, "ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಅಂದನು. ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು. ದೇವರು ಜೊತೆಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ ಎಂಬ ಮಾತಿನ ಪ್ರಕಾರ, ಗಂಡ ಹೆಂಡತಿ ಒಬ್ಬರಿಗೊಬ್ಬರು ವಿಧೇಯರಾಗಲು ಮತ್ತು ದೇವರ ನಿಯಮದ ಪ್ರಕಾರ ಒಂದು ಭಕ್ತಿಯುಳ್ಳ ಸಂತತಿಯನ್ನು ಲೋಕದಲ್ಲಿ ಸೃಷ್ಟಿಸಲು ನಾವು ಕರೆಯಲ್ಪಟ್ಟಿದ್ದೇವೆ.

 

ಮೋಕ್ಷ ಪ್ರಯಾಣದ ಓದುಗರೇ! ನಮ್ಮ ಕುಟುಂಬಗಳಲ್ಲಿ ಕೀಳರಿಮೆಯ ಮನೋಭಾವವು ಹಲವು ಕಾರಣಗಳಿಂದ ಉಂಟಾಗಬಹುದು. ಶಿಕ್ಷಣ, ಪೋಷಕರ ಸ್ಥಿತಿ, ಆರ್ಥಿಕ ಅಸಮಾನತೆ, ಸಾಮಾಜಿಕ ಸ್ಥಾನಮಾನ, ಎತ್ತರ, ಬಣ್ಣ, ತೂಕ, ಅಂಗವೈಕಲ್ಯಗಳು, ದಂಪತಿಗಳ ನಡುವಿನ ಸಂಬಳ ವ್ಯತ್ಯಾಸ ಹೀಗೆ ಹಲವು ಕಾರಣಗಳನ್ನು ಹೇಳಿಕೊಂಡೇ ಹೋಗಬಹುದು. ನಮ್ಮ ಎದುರಾಳಿಯು ನಮ್ಮಲ್ಲಿ ಕೀಳರಿಮೆಯ ಮನೋಭಾವನೆಯನ್ನು ಸೃಷ್ಟಿಸುತ್ತಾನೆ. ಆದರೆ ನಾವೋ ಇಂತಹ ವಿಷಯಗಳಿಗೆ ಸ್ಥಳ ಕೊಡದೇ, ದೇವರ ಸಮ್ಮುಖದಲ್ಲಿ ಪ್ರತಿದಿನ ಪ್ರಾರ್ಥಿಸಿ ನಮ್ಮನ್ನು ಸರಿಪಡಿಸಿಕೊಳ್ಳೋಣ. ಅನೇಕ ಕುಟುಂಬಗಳಲ್ಲಿ ವಿಭಜನೆಗೆ ಮುಖ್ಯ ಕಾರಣವೆಂದರೆ ಕ್ಷಮಿಸಲು ಸಾಧ್ಯವಾಗದಿರುವದು ಮತ್ತು ಬಿಟ್ಟುಕೊಡದೇ ಇರುವುದು. ಕ್ರಿಸ್ತನ ರಕ್ತದಿಂದ ವಿಮೋಚನೆಗೊಂಡ ನಾವು ಪರಸ್ಪರ ಕ್ಷಮಿಸಿ, ರಾಜಿ ಮಾಡಿಕೊಂಡು, ಪ್ರೀತಿಯಿಂದ ಬದುಕಿದರೆ, ನಾವು "ಯೇಸುವಿನ ಕುಟುಂಬ" ಎಂಬ ಸಾಕ್ಷ್ಯವನ್ನು ಪಡೆಯುತ್ತೇವೆ.

- Mrs. ಜ್ಞಾನಸೆಲ್ವಂ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಮಾಧ್ಯಮದಲ್ಲಿ ಕೆಲಸ ಮಾಡಲು ವಿದ್ಯಾವಂತ, ಪ್ರತಿಭಾನ್ವಿತ, ಸಮರ್ಪಿತ ಯೌವನಸ್ಥರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş