Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.08.2025
Share:

By Village Missionary Movement

Monday, 25-Aug-2025

ಧೈನಂದಿನ ಧ್ಯಾನ(Kannada) – 25.08.2025

 

ಒಳ್ಳೇತನದಿಂದ ಜಯಿಸು

 

"ಕೆಟ್ಟತನಕ್ಕೆ ಸೋತು ಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು" - ರೋಮಾ 12:21

 

ದೇವರು ತನಗೆ ಕೊಟ್ಟ ಸಂಪತ್ತನ್ನು ತನಗಾಗಿ ಮಾತ್ರವಲ್ಲದೆ ಎಲ್ಲಾ ಜನರಿಗಾಗಿಯೂ ಬಳಸಬೇಕು ಎಂಬ ವಿಶಾಲ ಕಲ್ಪನೆಯನ್ನು ಒಬ್ಬ ಶ್ರೀಮಂತ ವ್ಯಕ್ತಿ ಹೊಂದಿದ್ದರು. ಆದ್ದರಿಂದ ಅವರು ತನ್ನ ಸ್ವಂತ ಸ್ಥಳದಲ್ಲಿ ತನ್ನ ಸ್ವಂತ ಹಣದಿಂದ ಒಂದು ಚರ್ಚ್ ಅನ್ನು ನಿರ್ಮಿಸಿ ಅದರ ಹಿಂದೆ ಸ್ಮಶಾನಕ್ಕಾಗಿ ಒಂದು ಸ್ಥಳವನ್ನು ಸಹ ನೀಡಿ ಅದನ್ನು ಹಳ್ಳಿಯ ಜನರಿಗೆ ಅರ್ಪಿಸಿದರು. ಜನವರಿ ಮೊದಲನೆಯ ದಿನ, ಒಂದೇ ಪಂಕ್ತಿಯಲ್ಲಿ ತಿನ್ನುವ ಐಕ್ಯತೆಯ ಸಮ ಪಂಕ್ತಿಗೆ ಎಲ್ಲರನ್ನೂ ಆಹ್ವಾನಿಸಿ ತನ್ನ ಮನೆಯಲ್ಲೇ ವಿಶೇಷವಾದ ಔತಣವನ್ನು ಕೊಡುತ್ತಾರೆ. ಕರ್ತನು ಸಹ ಇವರನ್ನು ಎಲ್ಲಾ ರೀತಿಯಲ್ಲೂ ಆಶೀರ್ವದಿಸಿದರು. ಇದನ್ನು ಇವರ ಸಂಬಂಧಿಕರಲ್ಲಿ ಒಬ್ಬರು ಸಹಿಸಲಾಗಲಿಲ್ಲ.

 

ಒಳ್ಳೆಯ ಉನ್ನತ ಸ್ಥಾನದಿಂದ ನಿವೃತ್ತಿ ಹೊಂದಿದ ಆ ಸಂಬಂಧಿಗೆ ಸಾಕಷ್ಟು ಹಣ ಮತ್ತು ಸ್ವಂತ ಮನೆ ಇದ್ದರೂ, ಶ್ರೀಮಂತನ ಸಮೃದ್ಧಿಯನ್ನು ಸಹಿಸಲಾಗದೆ ಅವರ ಮೇಲೆ ಹೊಟ್ಟೆಕಿಚ್ಚು ಪಟ್ಟದ್ದರಿಂದ ಅವರ ನಿದ್ರೆ ಹಾಳಾಯಿತು. ಶ್ರೀಮಂತನ ಭೂಮಿಯಲ್ಲಿ ಏನು ಬಿತ್ತಿದರೂ ಅದು ಚೆನ್ನಾಗಿ ಬೆಳೆಯಿತು, ಹೇರಳವಾಗಿ ಇಳುವರಿ ನೀಡಿತು. ಇವರ ವ್ಯಾಪಾರವು ಸಹ ಉತ್ತಮ ಲಾಭ ಗಳಿಸಿ ಬಹಳಷ್ಟು ಹಣ ಸಿಗುತ್ತಿದೆ, ಎಂದು ಯಾವಾಗಲೂ ಊರಲ್ಲೆಲ್ಲಾ ಹೇಳಿಕೊಂಡು ತಿರುಗುತ್ತಿದ್ದರು. ಆ ಶ್ರೀಮಂತನಿಗೆ ಹೇಗಾದರೂ ನಷ್ಟವಾಗಬೇಕು ಎಂಬ ಕೆಟ್ಟ ಯೋಚನೆಯೊಂದಿಗೆ ಕಾಯುತ್ತಿದ್ದರು. ಅವರು ನಿರೀಕ್ಷಿಸಿದಂತೆ, ಒಂದು ದಿನ ಶ್ರೀಮಂತನು ತನ್ನ ಸಂಬಂಧಿಕರಿಗೆ ಕರೆ ಮಾಡಿ, ತನಗೆ ಬಹಳಷ್ಟು ಲಾಭವನ್ನು ನೀಡುತ್ತಿದ್ದ ವ್ಯವಹಾರದಲ್ಲಿ ಇದ್ದಕ್ಕಿದ್ದಂತೆ ನಷ್ಟವು ಏರ್ಪಟ್ಟಿತು ಆದ್ದರಿಂದ ಅದನ್ನು ಸರಿಪಡಿಸಲು ಸ್ವಲ್ಪ ಹಣ ಸಾಲವಾಗಿ ಬೇಕು ಎಂದು ಕೇಳಿದ ಕೂಡಲೇ, ಸಂತೋಷದಿಂದ ಹಣವನ್ನು ಸಾಲವಾಗಿ ನೀಡಿ, ಊರೆಲ್ಲಾ ನಾನು ಶ್ರೀಮಂತನ ನಷ್ಟಕ್ಕೆ ಸಹಾಯ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳಿದರು. ನೋಡಿ, ಇಂದಿಗೂ ನಾವು ಈ ಲೋಕದಲ್ಲಿ ಇಂತಹ ಜನರನ್ನು ನೋಡಬಹುದು. ನಿಜ ಏನೆಂದರೆ ಆ ಶ್ರೀಮಂತನ ಸಂಬಂಧಿಕರ ಮನಸ್ಸು ನೆಮ್ಮದಿಯಾಗಿರಲಿ ಎಂಬುದಕ್ಕಾಗಿಯೇ ಸಾಲವನ್ನು ಕೇಳಿದರು.

 

ಅಪೊಸ್ತಲನಾದ ಪೌಲನು ರೋಮಾಪುರದವರಿಗೆ ಬರೆದ ಪತ್ರಿಕೆಯಲ್ಲಿ, ನಿಮ್ಮ ಪ್ರೀತಿ ಪ್ರಾಮಾಣಿಕವಾಗಿರಲಿ. ಕೆಟ್ಟದ್ದನ್ನು ತೊರೆದು, ಒಳ್ಳೆಯದನ್ನು ಹಿಡಿದುಕೊಳ್ಳಿರಿ ಎಂದೂ, ಕೆಟ್ಟತನಕ್ಕೆ ಸೋತು ಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು ಎಂದೂ ಬರೆದಿದ್ದಾರೆ.

 

ಪ್ರಿಯರೇ! ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು ಎಂದು ನಾವು ಸತ್ಯವೇದದಲ್ಲಿ ನೋಡುತ್ತೇವೆ. ನಮಗೆ ಐಶ್ವರ್ಯವನ್ನು ನೀಡುವವರು ಕರ್ತನು. ಆತನು ಮಾತ್ರವೇ ಯಾರನ್ನಾದರೂ ಶ್ರೀಮಂತರನ್ನಾಗಿ ಅಥವಾ ಬಡವರನ್ನಾಗಿ ಮಾಡಲು ಸಾಧ್ಯ. ನಮ್ಮ ಮನೆಯ ಹತ್ತಿರವಿರುವ ಇತರರನ್ನು, ನಮಗಿಂತ ಹೆಚ್ಚಾಗಿ ಕರ್ತನು ಆಶೀರ್ವದಿಸಿದ್ದರೆ, ನಾವು ಅದಕ್ಕಾಗಿ ದೇವರಿಗೆ ಧನ್ಯವಾದ ಹೇಳಬೇಕು. ಇದಕ್ಕೆ ವಿರುದ್ಧವಾಗಿ, ನಾವು ಅವರ ಮೇಲೆ ಅಸೂಯೆ ಅಥವಾ ಕೋಪಗೊಳ್ಳಬಾರದು. ನಾವು ಆತನ ಮುಂದೆ ಉತ್ತಮವಾಗಿ ನಡೆದುಕೊಂಡರೆ, ಕರ್ತನು ನಮ್ಮನ್ನೂ ಖಂಡಿತವಾಗಿಯೂ ಆಶೀರ್ವದಿಸುತ್ತಾರೆ. ಆದ್ದರಿಂದ, ಇತರರಿಗೆ ಕೆಟ್ಟದ್ದನ್ನು ಮಾಡುವ ಮನೋಭಾವವನ್ನು ತ್ಯಜಿಸಿ, ಒಳ್ಳೇತನದಿಂದ ಕೆಟ್ಟದ್ದನ್ನು ಜಯಿಸಲು ದೇವರ ಸಹಾಯವನ್ನು ಪಡೆಯೋಣ.

- K.S.ಮಾಣಿಕವಾಸಗಂ

 

ಪ್ರಾರ್ಥನಾ ಅಂಶ:

ವಿಲೇಜ್ ಟಿವಿ ಸೇವಕರುಗಳ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş