Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.08.2025 (Kids Special)
Share:

By Village Missionary Movement

Sunday, 24-Aug-2025

ಧೈನಂದಿನ ಧ್ಯಾನ(Kannada) – 24.08.2025 (Kids Special)

 

ಕಾಲವನ್ನು ಉಪಯೋಗಿಸು

 

"ದಿನಗಳು ಕೆಟ್ಟವುಗಳಾಗಿರು ವದರಿಂದ ಕಾಲವನ್ನು ಸುಮ್ಮನೆ ಕಳೆಯದೆ ಉಪಯೋಗಿ ಸಿಕೊಳ್ಳಿರಿ" - ಎಫೆಸ 5:16

 

Hello ಪುಟಾಣಿಗಳೇ! ನೀವು ಎಂದಾದರೂ ವ್ಯವಸಾಯ ಮಾಡುವುದನ್ನು ನೋಡಿದ್ದೀರಾ? ಅದರ ಕುರಿತು ಇಂದು ಒಂದು ಕಥೆಯನ್ನು ನೋಡಲಿದ್ದೇವೆ. ಮೈಕೆಲ್ ಮತ್ತು ಮಲ್ಲಿಕಾ ಇಬ್ಬರೂ ವ್ಯವಸಾಯ ಮಾಡಿ ತಮ್ಮ ಕುಟುಂಬವನ್ನು ನಡೆಸುತ್ತಿದ್ದರು. ಅವರ ಏಕೈಕ ಮಗಳು ವಿನ್ಸಿ. ಇವರು ತಮ್ಮ ಮಗಳನ್ನು ಬಹಳ ಪ್ರೀತಿಯಿಂದ ಕರ್ತನಲ್ಲಿ ಬೆಳೆಸುತ್ತಿದ್ದರು. ವಿನ್ಸಿ ತನ್ನ ಚಿಕ್ಕ ವಯಸ್ಸಿನಲ್ಲೇ ಅನೇಕ ವಚನಗಳನ್ನು ಕಂಠಪಾಠವಾಗಿ ಹೇಳುತ್ತಿದ್ದಳು.

 

ದಿನಗಳು ಕಳೆದವು, ವಿನ್ಸಿ ಬೆಳೆದು ದೊಡ್ಡವಳಾದಳು. ಈಗ ಅವಳು 2 ಪಿಯು ಗೆ ಬಂದುಬಿಟ್ಟಳು. ತನ್ನ ಹೆತ್ತವರ ಸಹಾಯವಿಲ್ಲದೆ ಅವಳು ಸ್ವಂತವಾಗಿ ಓದಬಲ್ಲ ಹಂತಕ್ಕೆ ಬೆಳೆದು ಬಿಟ್ಟಳು. ಅಷ್ಟೇ ಅಲ್ಲ, ತನ್ನ ಹೆತ್ತವರನ್ನು ಮೋಸಗೊಳಿಸಲು ಸಹ ಪ್ರಾರಂಭಿಸಿ‌ ಬಿಟ್ಟಳು. ಬೆಳಿಗ್ಗೆ ಎದ್ದ ಕೂಡಲೇ ಫೋನ್ ನೊಂದಿಗೇ ಇರುತ್ತಿದ್ದಳು. ಅಮ್ಮ ಬಂದ ಕೂಡಲೇ, ವೇಗವಾಗಿ ಸತ್ಯವೇದವನ್ನು ಕೈಯಲ್ಲಿ ಇಟ್ಟುಕೊಳ್ಳುತ್ತಿದ್ದಳು, ಅಥವಾ ಪಠ್ಯಪುಸ್ತಕವನ್ನು ಇಟ್ಟುಕೊಳ್ಳುತ್ತಿದ್ದಳು. ಅವಳ ತಾಯಿಯೂ ಸಹ ಮಗು ಅಧ್ಯಯನ ಮಾಡುತ್ತಿದೆ ಎಂದು ಹೇಳುತ್ತಿದ್ದಳು. ಈ ರೀತಿಯಾಗಿ, ಅವಳು ಪ್ರತಿದಿನ ತನ್ನ ಹೆತ್ತವರನ್ನು ಮೋಸ ಮಾಡುತ್ತಿದ್ದಳು. ಅಷ್ಟೇ ಅಲ್ಲ, ಶಾಲೆಗೆ ಹೋದಾಗಲೂ ಸಹ, ಅವಳು ಓದುತ್ತಿರುವಂತೆ ಪುಸ್ತಕ ತೆರೆದಿಟ್ಟುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಳು. ಶಿಕ್ಷಕರು ಬಂದಾಗ, ಅವಳು ಓದುತ್ತಿರುವಂತೆ ವರ್ತಿಸುತ್ತಿದ್ದಳು. ಆದ್ದರಿಂದ ಅವಳು ತನ್ನ ಅಧ್ಯಯನದಲ್ಲಿ ತುಂಬಾ ಹಿಂದುಳಿದಿದ್ದಳು.

 

2 ಪಿಯು ಪೂರ್ಣ ವರ್ಷದ ಪರೀಕ್ಷೆ ಬಂತು. ಈಗ ಅವಳು ಮತ್ತು ಅವಳ ಸ್ನೇಹಿತರು ಪರೀಕ್ಷೆಗೆ ಸಿದ್ಧರಾಗಿ ಪರೀಕ್ಷಾ ಹಾಲ್‌ಗೆ ಹೋದರು. ಪ್ರಶ್ನೆ ಪತ್ರಿಕೆಯನ್ನು ಕೈಯಲ್ಲಿ ತೆಗೆದುಕೊಂಡ ವಿನ್ಸಿಗೆ ಏನೂ ತಿಳಿದಿರಲಿಲ್ಲ. ಅವಳು ಏನೋ ಬರೆದು ಮನೆಗೆ ಮರಳಿದಳು. ಒಂದೆರಡು ತಿಂಗಳ ನಂತರ, ಫಲಿತಾಂಶಗಳು ಬಂದವು. ಆ ಶಾಲೆಯಲ್ಲಿ ವಿನ್ಸಿ ಹೊರತುಪಡಿಸಿ ಎಲ್ಲರೂ ಪಾಸಾಗಿದ್ದಾರೆಂದು ತಿಳಿದುಬಂತು. ಇವಳು ಮಾತ್ರ ಅನುತ್ತೀರ್ಣಳಾಗಿದ್ದಳು. ಮತ್ತು ಅವರೆಲ್ಲರೂ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋದದ್ದರಿಂದ, ಅವರು ಹೊಸ ಸ್ನೇಹಿತರನ್ನು ಮಾಡಿಕೊಂಡರು. ಆದ್ದರಿಂದ ಅವರು ವಿನ್ಸಿಯನ್ನು ಬಿಟ್ಟು ದೂರ ಹೋಗಲು ಪ್ರಾರಂಭಿಸಿದರು. ಒಂದು ದಿನ, ಅವಳು ತನ್ನ ಶಾಲಾ ಸ್ನೇಹಿತರನ್ನು ನೋಡಿ ಮಾತನಾಡಳು ಹೋದಳು. ಆದರೆ ಅವರು ಅವಳನ್ನು ಗುರುತಿಸಲಿಲ್ಲ. ಅವರು ತಮ್ಮ ಹೊಸ ಸ್ನೇಹಿತರೊಂದಿಗೆ ಜಾಲಿಯಾಗಿದ್ದರು. ಆಗ ವಿನ್ಸಿಗೆ ತನ್ನ ತಪ್ಪಿನ ಅರಿವಾಯಿತು. ನಾನು ಮೋಸ ಮಾಡಿದ್ದು ನನ್ನ ಹೆತ್ತವರನ್ನೋ ಅಥವಾ ಶಿಕ್ಷಕರನ್ನೋ ಅಲ್ಲ, ನನ್ನನ್ನು ನಾನೇ ಮೋಸಮಾಡಿಕೊಂಡು ದಿನಗಳನ್ನು ವ್ಯರ್ಥ ಮಾಡಿಕೊಂಡುಬಿಟ್ಟೆ ಎಂದು ತುಂಬಾ ವಿಷಾದಿಸಿದಳು. ನನ್ನ ಹೆತ್ತವರ ಕಷ್ಟಗಳನ್ನು ನಾನು ಅರ್ಥಮಾಡಿಕೊಳ್ಳಲಿಲ್ಲ ಎಂದು ಭಾವಿಸಿ, ಅವಳು ಕಟುವಾಗಿ ಅಳುತ್ತಾ ತನ್ನ ಹೆತ್ತವರಲ್ಲಿ ಕ್ಷಮೆಯಾಚಿಸಿದಳು. ಪುನಃ ಚೆನ್ನಾಗಿ ಓದಲು ಪ್ರಾರಂಭಿಸಿದಳು.

 

ಪ್ರೀತಿಯ ತಮ್ಮ ತಂಗಿ, ನೀನು ಕೂಡ ಈ ವಿನ್ಸಿಯಂತೆಯೇ ಓದುತ್ತಿದ್ದೇನೆ ಎಂದು ಹೇಳಿ ಮೊಬೈಲ್ ಫೋನ್ ಮತ್ತು ಟಿವಿ ನೋಡುತ್ತಾ ಅಪ್ಪ ಅಮ್ಮನನ್ನು ಮೋಸ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದೀರಾ? ಹಾಗೆ ಇರುವುದಾದರೆ, ಈಗಲೇ ಅದನ್ನು ಬಿಟ್ಟು ಬಿಡಿ. ಅವರನ್ನು ಮೋಸ ಮಾಡುತ್ತಿದ್ದೇನೆ ಅಂದುಕೊಂಡು ನಿನ್ನನ್ನು ನೀನೇ ಮೋಸಮಾಡಿಕೊಳ್ಳುತ್ತಿದ್ದೀಯಎಂಬುದನ್ನು ನೆನೆಸಿ ಚೆನ್ನಾಗಿ ಓದು. ನಿನ್ನ ಸಮಯವನ್ನು ವ್ಯರ್ಥ ಮಾಡಿಬಿಡಬೇಡ. O.K ನಾ ಪುಟಾಣಿಗಳೇ!

- Mrs ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş