Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.08.2025
Share:

By Village Missionary Movement

Saturday, 23-Aug-2025

ಧೈನಂದಿನ ಧ್ಯಾನ(Kannada) – 23.08.2025

 

ಯೇಸುವನ್ನು ನೋಡಿ ಓಡು 

 

"...ದೇವರ ಸಾನ್ನಿಧ್ಯವೇ ಭಾಗ್ಯವು" - ಕೀರ್ತನೆ 73:28 

 

ಅಮೇರಿಕನ್ ಈಜುಗಾರ ಫ್ಲಾರೆನ್ಸ್ ಗ್ಯಾಟ್ವಿಕ್ ಪೆಸಿಫಿಕ್ ಮಹಾಸಾಗರದ ಕ್ಯಾಟಲಿನಾ ದ್ವೀಪದಿಂದ ದಕ್ಷಿಣ ಕ್ಯಾಲಿಫೋರ್ನಿಯಾಗೆ ಈಜುವ ಮೂಲಕ ದಾಖಲೆ ನಿರ್ಮಿಸಲು ಬಯಸಿದ್ದರು. ಒಟ್ಟು ದೂರ 34 ಕಿ.ಮೀ. ಇದು ತುಂಬಾ ಅಪಾಯಕಾರಿ ಪ್ರದೇಶ. ಯಾರನ್ನಾದರೂ ನುಂಗಲು ನೋಡುತ್ತಾ ಸುತ್ತಾಡುತ್ತಿದ್ದ ಶಾರ್ಕ್‌ಗಳು, ಎತ್ತರದ ಅಲೆಗಳು ಮತ್ತು ದೃಷ್ಟಿಯನ್ನು ಮರೆಮಾಚುವ ಮಂಜು ಈ ಪ್ರದೇಶದಲ್ಲಿ ಈಜುವುದನ್ನು ತುಂಬಾ ಕಷ್ಟಕರವಾಗಿಸಿತು. ಆದಾಗ್ಯೂ, ಗ್ಯಾಟ್ವಿಕ್ ಯಾವುದನ್ನೂ ಲೆಕ್ಕಿಸದೆ ಬಹಳ ಧೈರ್ಯದಿಂದ ಈಜಿದರು. ಹಲವಾರು ಗಂಟೆಗಳ ಕಾಲ ಈಜಿದ ನಂತರ, ಅವರ ದೇಹವು ಚಳಿಯಿಂದ ಹೆಪ್ಪುಗಟ್ಟಲು ಪ್ರಾರಂಭಿಸಿತು. ಅವರು ಇನ್ನು ಮುಂದೆ ಈಜಲು ಸಾಧ್ಯವಿಲ್ಲ ಎಂದು ಭಾವಿಸಿ, ನೀರಿನಿಂದ ಹೊರಗೆ ಎಳೆಯಲು ಕೇಳಿದರು. ಹೊರಗೆ ಎಳೆಯಲ್ಪಟ್ಟ ನಂತರವೇ ಅವರು ದಡಕ್ಕೆ ತುಂಬಾ ಹತ್ತಿರದಲ್ಲಿದ್ದಾರೆ ಎಂಬುದು ಮತ್ತು ಇನ್ನು ಸ್ವಲ್ಪ ಮುಂದೆ ಈಜಿದ್ದರೆ, ಅವರು ವಿಶ್ವ ದಾಖಲೆಯನ್ನು ಸ್ಥಾಪಿಸಬಹುದಿತ್ತಲ್ಲಾ ಅಂದುಕೊಂಡು ವೇದನೆಪಟ್ಟರು. 'ಸಾಧನೆಯ ವೀರಳು' ಎಂಬ ಬಿರುದನ್ನು ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದೇನೆ ಎಂದು ಯೋಚಿಸಿ ತುಂಬಾ ದುಃಖಿತರಾದರು.

 

ಲೋಕದಲ್ಲಿ ಬದುಕಿರುವ ಅನೇಕ ಜನರು ತಮ್ಮ ಓಟವನ್ನು ಚೆನ್ನಾಗಿ ಓಡಿದ್ದಾರೆಂದು ತೋರುತ್ತದೆ, ಆದರೆ ಯಾವುದೋ ಕಾರಣಕ್ಕಾಗಿ ಅವರು ಅದನ್ನು ವಿಜಯಶಾಲಿಯಾಗಿ ಮುಗಿಸಿಲ್ಲ. ಸೈತಾನನು ನಮ್ಮ ನಂಬಿಕೆಯ ಓಟದಲ್ಲಿ ನಮ್ಮನ್ನು ಸೋಲಿಸಲು ಪ್ರಯತ್ನಿಸುತ್ತಲೇ ಇರುತ್ತಾನೆ. ಸತ್ಯವೇದದಲ್ಲಿ, ಮೋಶೆಯು ಚೆನ್ನಾಗಿ ಓಡಿದರೂ, ಅವರು ಐಹಿಕ ಕಾನಾನ್‌ಗೆ ಪ್ರವೇಶಿಸಲು ವಿಫಲನಾದದ್ದರಿಂದ ಪರಮ ಕಾನಾನ್ ಗೆ ಹೋಗಲು ಸಾಧ್ಯವಿಲ್ಲ ಎಂದು ಮೋಶೆಯ ಶವದ ವಿಷಯದಲ್ಲಿ ಸೈತಾನನು ವಾಗ್ವಾದಮಾಡಿದ್ದಾಗಿ ಬರೆಯಲಾಗಿದೆ (ಯೂದ 9). ಇದೇ ರೀತಿ, ಎಲೀಯನು ಕೂಡ ಜೀವನದಲ್ಲಿ ಬೇಸರಗೊಂಡು ಮಾತನಾಡಲು ಪ್ರಾರಂಭಿಸಿದರು. ತಾನು ಸಾಯಬೇಕೆಂದು ಯೋನ ಕೂಡ ಹೇಳಿದರು. ಸೊಲೊಮೋನನು ಕೂಡ ವಿಫಲನಾದರು. ಫ್ಲಾರೆನ್ಸ್ ಗ್ಯಾಟ್ವಿಕ್ ಕೂಡ, ದಡವನ್ನು ತಲುಪುವ ದೂರ ಕಡಿಮೆಯಿದ್ದರೂ, ಗೆಲ್ಲುವ ಅವಕಾಶವನ್ನು ಕಳೆದುಕೊಂಡದ್ದು ತನಗೆ ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದರು. 

 

ಇಂದು, ನಾವು ಕೂಡ ಅನೇಕ ಸಂದರ್ಭಗಳಲ್ಲಿ ಸತ್ಯವೇದವನ್ನು ಓದಿ ಧ್ಯಾನಿಸದೆ, ನಂಬಿಕೆಯಲ್ಲಿ ಕೊರತೆಯುಳ್ಳವರಾಗಿ, ನಮ್ಮ ಜೀವನದ ಓಟವನ್ನು ಪೂರ್ಣವಾಗಿ ಮುಗಿಸದೆ, "ಸಾಕು, ಕರ್ತನೇ, ಸಾಕು" ಎಂಬ ಮನಸ್ಥಿತಿಯಲ್ಲಿದ್ದೇವೆ. ಪರಿಸ್ಥಿತಿ ಏನೇ ಇರಲಿ, ನಾವು ನಮ್ಮನ್ನು ಅಥವಾ ಪರಿಸ್ಥಿತಿಯನ್ನು ನೋಡದೆ ಯೇಸುವಿನ ಕಡೆಗೆ ಓಡಿದರೆ, ಖಂಡಿತವಾಗಿಯೂ ಯಾರೂ ನಮ್ಮ ಓಟವನ್ನು ತಡೆಯಲು ಸಾಧ್ಯವಿಲ್ಲ. ಆ ಓಟ ಯಶಸ್ವಿಯಾಗುತ್ತದೆ. ಅಪೊಸ್ತಲರು ಎಚ್ಚರಿಕೆಯಿಂದ ಓಡಿದರು. ನಾವು ದೇವರನ್ನು ಹಿಡಿದುಕೊಂಡು ಯೇಸುವಿನ ಕಡೆಗೆ ಮಾತ್ರ ನೋಡಿದರೆ, ನಾವು ಸೈತಾನನ ಪತನವನ್ನು ಮತ್ತು ನಾವು ಗೆಲ್ಲುವುದನ್ನೂ ನೋಡಬಹುದು. ನಮ್ಮ ಓಟವು ವಿಜಯಶಾಲಿಯಾಗುತ್ತದೆ. ಆಮೆನ್. 

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಎದ್ದೇಳು ಜೋಶುವಾ ಮತ್ತು ಎಸ್ತೇರ್ ಯೋಜನೆಯ ಮೂಲಕ ಸೇವಕರ ಮಕ್ಕಳು ಜೋಶುವಾ ಮತ್ತು ಎಸ್ತೇರ್ ಗಳಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş