Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.08.2025
Share:

By Village Missionary Movement

Friday, 22-Aug-2025

ಧೈನಂದಿನ ಧ್ಯಾನ(Kannada) – 22.08.2025

 

ಜೀವ ಕಿರೀಟವನ್ನು ಹೊಂದಲು

 

"….ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು;..." - 2 ತಿಮೊಥೆಯ 4:8

 

ರೊಮೇನಿಯಾದಲ್ಲಿ, ರಿಚರ್ಡ್ ಉಂಬ್ರಾಂಡ್ಟ್ ಎಂಬ ದೇವ ಸೇವಕರು ಕರ್ತನ ಸೇವೆಯನ್ನು ಮಾಡುತ್ತಾ ಕರ್ತನಿಗಾಗಿ ವೈರಾಗ್ಯವಾದ ಜೀವನವನ್ನು ನಡೆಸುತ್ತಿದ್ದರು. ದೇವರ ಕೆಲಸವನ್ನು ಮಾಡುತ್ತಿದ್ದ ಕಾರಣ, ಆ ದೇಶದ ಕಮ್ಯುನಿಸ್ಟ್ ಸರ್ಕಾರವು ಅವರನ್ನು ಬಂಧಿಸಿ ಜೈಲಿಗೆ ಹಾಕಿತು. ಅವರು ಜೈಲಿನಲ್ಲಿ ಹೇಳಲಾಗದಷ್ಟು ನೋವನ್ನು ಅನುಭವಿಸಿದರು. ಅವರ ದೇಹವನ್ನು ಕಬ್ಬಿಣದ ಸರಳುಗಳಿಂದ ಚುಚ್ಚಿದರು. ಅವರನ್ನು ಕತ್ತಲೆಯ ಕೋಣೆಯಲ್ಲಿ ಬಂಧಿಸಿ ವಿವಿಧ ಮಾತುಗಳಿಂದ ಮೆದುಳನ್ನು ಬಾಧಿಸಿದರು. ಅವರಿಗೆ ಸರಿಯಾದ ಆಹಾರವನ್ನು ನೀಡದೆ ಹಿಂಸಿಸಿದರು. ಈ ಪರಿಸ್ಥಿತಿಯಲ್ಲಿ, ಅವರ ಹೆಂಡತಿಯನ್ನೂ ಬಂಧಿಸಲಾಯಿತು. ಅವರ ಒಬ್ಬನೇ ಮಗ ತನ್ನ ತಂದೆ ತಾಯಿಯನ್ನು ಬಿಟ್ಟು ಏಕಾಂಗಿಯಾಗಿದ್ದನು. ಆದಾಗ್ಯೂ, ಅವರು ದೇವರ ಪ್ರೀತಿಯಿಂದ ದೂರ ಸರಿಯಲಿಲ್ಲ. ಕ್ರಿಸ್ತನ ಪ್ರೀತಿಯು ರಿಚರ್ಡ್ ಉಂಬ್ರಾಂಡ್ಟ್ ಅವರ ಹೃದಯವನ್ನು ತುಂಬಿತು. ದೇವರ ಆತ್ಮವು ಅವರನ್ನು ಸಂಪೂರ್ಣವಾಗಿ ಆವರಿಸಿತು. ಅನೇಕ ಹಿಂಸೆಗಳು, ಸಂಕಟಗಳು, ಯಾತನೆಗಳು, ಹಸಿವು, ದಾಹ, ಒಂಟಿತನ, ಯಾವುದೂ ಅವರನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಲು ಸಾಧ್ಯವಾಗಲಿಲ್ಲ. "ನನಗಂತೂ ಬದುಕುವದೆಂದರೆ ಕ್ರಿಸ್ತನೇ, ಸಾಯು ವದು ಲಾಭವೇ", ಎಂದು ವೈರಾಗ್ಯವಾಗಿ ನಿಂತರು. ಕ್ರಿಸ್ತನನ್ನು ನಿರಾಕರಿಸದೆ ಅವರು ಕರ್ತನಲ್ಲಿ ದೃಢವಾಗಿರುವುದನ್ನು ನೋಡಿ, ಸರ್ಕಾರವು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ಅವರನ್ನು ಬಿಡುಗಡೆ ಮಾಡಿತು. ಅವರು ಸೆರೆಮನೆಯಿಂದ ಬಿಡುಗಡೆಯಾದಾಗ, ಕರ್ತನಿಗಾಗಿ ಅನೇಕ ಆತ್ಮಗಳನ್ನು ಸಂಪಾದಿಸಿದರು. ಅವರು ತನ್ನ ಓಟವನ್ನು ಮಹಿಮೆಯಿಂದ ಮುಗಿಸಿ ಎಂದೆಂದಿಗೂ ಇರುವ ಬಾಡದ ಜೀವ ಕಿರೀಟವನ್ನು ಪಡೆದರು.

 

ಅಪೊಸ್ತಲನಾದ ಪೌಲನು ಸಹ ಸತ್ಯಕ್ಕಾಗಿ ವೈರಾಗ್ಯದಿಂದ ಬದುಕಿ ಅನೇಕ ಕಷ್ಟಗಳು, ಹಿಂಸೆಗಳು, ಬಂಧನಗಳು, ಅವಮಾನಗಳು, ಹೊಡೆತಗಳು ಮತ್ತು ಜೈಲು ಅನುಭವಗಳನ್ನು ಸಹಿಸಿಕೊಂಡರು. ಇದೆಲ್ಲದರ ನಡುವೆಯೂ, ಅವರು ದೇವರ ವಾಕ್ಯವನ್ನು ಹೇಳಲು ಶ್ರಮಿಸಿದರು. ಪೌಲನು ಹೀಗೆ ಹೇಳುತ್ತಾರೆ "ನಾನು ಒಳ್ಳೇ ಹೋರಾಟವನ್ನು ಹೋರಾಡಿದ್ದೇನೆ, ನಾನು ನನ್ನ ಓಟ ವನ್ನು ಮುಗಿಸಿದ್ದೇನೆ, ನಾನು ನಂಬಿಕೆಯನ್ನು ಕಾಪಾಡಿ ದ್ದೇನೆ." (2 ತಿಮೊ. 4:7)

 

ಪ್ರಿಯರೇ! ನಾವು ಸಹ, ಯೇಸುಕ್ರಿಸ್ತನ ಪ್ರೀತಿಯಿಂದ ಯಾವಾಗಲೂ ತುಂಬಿದವರಾಗಿ ದೇವರ ಆತ್ಮದೊಂದಿಗೆ ಐಕ್ಯರಾಗಿ, ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ, ಇದರಿಂದ ನಾವು ಅದನ್ನು ಪಡೆಯಬಹುದು. ಪೌಲನು ಹೇಳಿದಂತೆ, ನಾಶವಾಗುತ್ತಿರುವ ಆತ್ಮಗಳಿಗಾಗಿ ನಾವು ಒಡಕಿನಲ್ಲಿ ನಿಲ್ಲೋಣ. ದೇವರು ನಮ್ಮ ಮುಂದೆ ಇಟ್ಟಿರುವ ಓಟವನ್ನು ಮುಗಿಸಿ ನಮ್ಮ ಜೀವಕಿರೀಟವನ್ನು ಪಡೆದುಕೊಳ್ಳೋಣ. 

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ:

ಮಿಷನರಿ ಮನೆಗಳನ್ನು ಕಟ್ಟಿಕೊಡುವ ಶೂನೇಮ್ಯಳಂತವರು, ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş