By Village Missionary Movement
Thursday, 21-Aug-2025ಧೈನಂದಿನ ಧ್ಯಾನ(Kannada) – 21.08.2025
ಕರುಣೆಯ ಕಣ್ಣುಗಳು
"...ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು..." - ಮಾರ್ಕ 6:34
ಒಬ್ಬ ಮನುಷ್ಯನು, ಮಂಜುಗಡ್ಡೆಯಿಂದ ಆವೃತವಾದ ನದಿಯನ್ನು ದಾಟಿ ತನ್ನ ಮನೆಗೆ ಹೋಗಲು ದಾರಿ ತಿಳಿಯದೇ, ಹಿಮದಲ್ಲಿ ಸಿಲುಕಿಕೊಂಡು ಸಾಯುವ ಹಂತದಲ್ಲಿದ್ದನು. ಆ ಕ್ಷಣದಲ್ಲಿ, ಕುದುರೆಗಳ ದೊಡ್ಡ ಗುಂಪು ವೇಗವಾಗಿ ಬರುತ್ತಿರುವುದನ್ನು ನೋಡಿದನು. ಆದರೆ ಕೊನೆಯ ಕುದುರೆ ಸವಾರ ಬರುವವರೆಗೂ ಕಾಯುತ್ತಾ ನದಿಯನ್ನು ದಾಟಲು ಸಹಾಯ ಕೇಳಿದರು. ಕುದುರೆ ಸವಾರನು ಆ ಮನುಷ್ಯನನ್ನು ತನ್ನ ಕುದುರೆಯ ಮೇಲೆ ಕೂರಿಸಿಕೊಂಡು ಮೊಣಕಾಲು ಆಳದ ನದಿಯನ್ನು ದಾಟಿದ್ದಲ್ಲದೆ, ನದಿಯ ಇನ್ನೊಂದು ಬದಿಯಲ್ಲಿ ಕೆಲವು ಮೈಲುಗಳಷ್ಟು ದೂರದಲ್ಲಿರುವ ತನ್ನ ಮನೆಗೆ ಕರೆದೊಯ್ದನು.
ಕುದುರೆ ಸವಾರನು, ಇತರ ಕುದುರೆ ಸವಾರರಿಂದ ಸಹಾಯವನ್ನು ಏಕೆ ಕೇಳಲಿಲ್ಲ ಎಂದು ಆತನ ಬಳಿ ಕೇಳಿದನು. ಆ ಮನುಷ್ಯನು, "ನಾನು ನಿಮ್ಮೆಲ್ಲರ ಕಣ್ಣುಗಳನ್ನು ನೋಡಿದೆ. ಆದರೆ ನಿಮ್ಮ ಕಣ್ಣುಗಳಲ್ಲಿ ಮಾತ್ರ ನಾನು ಕಾಳಜಿಯುಳ್ಳ ಹೃದಯವನ್ನು ನೋಡಲು ಸಾಧ್ಯವಾಯಿತು" ಎಂದು ಉತ್ತರಿಸಿದನು. ಆ ರಾತ್ರಿ ನದಿಯನ್ನು ದಾಟಿದ ಕುದುರೆ ಸವಾರ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಥಾಮಸ್ ಜೆಫರ್ಸನ್ ಎಂದು ಆ ಮನುಷ್ಯನಿಗೆ ತಿಳಿದಿರಲಿಲ್ಲ.
ಹೌದು, ಕೆಲವು ಕಷ್ಟಕರ ಸಂದರ್ಭಗಳು ನಮ್ಮನ್ನು ಮತ್ತು ನಮ್ಮ ಸುತ್ತಮುತ್ತಲಿನವರನ್ನು ಗುರುತಿಸುತ್ತವೆ. ಸ್ನಾನಿಕನಾದ ಯೋಹಾನನ ಜನನ ಮತ್ತು ಕರ್ತನಾದ ಯೇಸು ಕ್ರಿಸ್ತನ ಜನನದ ನಡುವಿನ ಸಮಯದ ಅಂತರ ಕೇವಲ ಆರು ತಿಂಗಳುಗಳು. ಯೋಹಾನನು ಯೇಸು ಕ್ರಿಸ್ತನಿಗೆ ದಾರಿಯನ್ನು ಸಿದ್ಧಪಡಿಸುವವನಾಗಿಯೂ
ಉರಿಯುತ್ತಾ ಹೊಳೆಯುವ ದೀಪವಾಗಿಯೂ ಇದ್ದರು . ಈ ಸಂದರ್ಭದಲ್ಲಿ, ಹೆರೋದನ ಜನನದ ದಿನದಂದು ಸ್ನಾನಿಕನಾದ ಯೋಹಾನನ ತಲೆ ಕಡಿಯಲಾಗಿದೆ ಎಂದು ಅವರು ತಿಳಿದೂ, ಯೇಸು ತನ್ನ ಶಿಷ್ಯರೊಂದಿಗೆ ಏಕಾಂಗಿಯಾಗಿ ನಿರ್ಜನ ಸ್ಥಳಕ್ಕೆ ಹೋದರು. ಈ ಸಂದರ್ಭದಲ್ಲಿ ಅವರಿರುವ ಸ್ಥಳಕ್ಕೆ ಒಂದು ದೊಡ್ಡ ಜನಸಮೂಹವು ಬಂದಿತು. ಯೇಸು ಆ ಜನರ ಗುಂಪನ್ನು ನೋಡಿದಾಗ, ಅವರ ಮೇಲೆ ಕರುಣೆ ತೋರಿಸಿದರು, ಏಕೆಂದರೆ ಅವರು ಕುರುಬನಿಲ್ಲದ ಕುರಿಗಳಂತೆ ಇದ್ದರು. ಆತನು ಅವರಿಗೆ ಅನೇಕ ವಿಷಯಗಳನ್ನು ಕಲಿಸಿದರು. ಅವರು ಅನೇಕ ರೋಗಿಗಳನ್ನು ನೋಡಿದಾಗ, ಅವರ ಮೇಲೆ ಕರುಣೆ ತೋರಿಸಿ ಅವರನ್ನು ಗುಣಪಡಿಸಿದರು. ಎಷ್ಟೇ ಕಷ್ಟಕರ ಸಂದರ್ಭಗಳಿದ್ದರೂ, ಅಗತ್ಯವಿರುವ ಜನರನ್ನು ನೋಡಿದಾಗ ಯೇಸು ಕ್ರಿಸ್ತನು ಕರುಣೆಯಿಂದ ವರ್ತಿಸಿದರು.
ಕ್ರಿಸ್ತನನ್ನು ಅರಿತಿರುವ ದೇವರ ಮಕ್ಕಳೇ! ನಿಮ್ಮ ಕಣ್ಣುಗಳು ಎಂಥವುಗಳಾಗಿವೆ? ಆ ಕಣ್ಣುಗಳಲ್ಲಿ ಕರುಣೆಗಾಗಿ ಕಾಯುತ್ತಿರುವ ಅನೇಕ ಅಸಹಾಯಕ ಜನರು ಈ ಲೋಕದಲ್ಲಿದ್ದಾರೆ. ಬಳಲುತ್ತಿರುವ ನಿಮ್ಮ ಸಹೋದರ ಸಹೋದರಿಯರನ್ನು ನೆನೆಸಿಕೊಳ್ಳಿ. ಅನಾಥರು ಮತ್ತು ಬಡವರನ್ನು ಮರೆಯಬೇಡಿ. ಅನೇಕರು ನಿಮ್ಮಲ್ಲಿ ಮತ್ತು ನಿಮ್ಮ ದೃಷ್ಟಿಯಲ್ಲಿ ಯೇಸು ಕ್ರಿಸ್ತನ ಕರುಣೆಯನ್ನು ನೋಡಲಿ. ನ್ಯಾಯತೀರ್ಪಿನ ಮೊದಲು ಕರುಣೆ ಮೇಲುಗೈ ಸಾಧಿಸುತ್ತದೆ ಎಂದು ತಿಳಿದುಕೊಂಡು ಕ್ರಿಸ್ತನ ಪ್ರತಿರೂಪವು ನಿಮ್ಮಲ್ಲಿ ಪ್ರಕಟವಾಗಲಿ. ಕರ್ತನು ನಿಮ್ಮನ್ನು ಆಶೀರ್ವದಿಸಲಿ.
- R. ಮಂಜುಳಾ
ಪ್ರಾರ್ಥನಾ ಅಂಶ:
ನಮ್ಮೊಂದಿಗೆ ಸೇರಿ ಸೇವೆ ಮಾಡುವ ಸುವಾರ್ತಾಬೋಧಕರು ಮತ್ತು ಅರೆಕಾಲಿಕ ಮಿಷನರಿಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482