Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.08.2025
Share:

By Village Missionary Movement

Tuesday, 19-Aug-2025

ಧೈನಂದಿನ ಧ್ಯಾನ(Kannada) – 19.08.2025

 

ತಗ್ಗಿಸಿಕೊಳ್ಳುವಿಕೆ

 

"ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು" - ಯಾಕೋಬ 4:10

 

ಬುಕರ್ ಟಿ. ವಾಷಿಂಗ್ಟನ್, ಎಂಬ ಒಬ್ಬ ಅತ್ಯುತ್ತಮ ವಿದ್ಯಾರ್ಥಿ Hampton institute, Varginia ದಲ್ಲಿ ಸೇರಲು ಸಂದರ್ಶನಕ್ಕೆ ಹೋಗಿದ್ದರು. ಆ ಪ್ರಸಿದ್ಧ institute ನಲ್ಲಿ ಸ್ಥಾನ ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಆ ಸಮಯದಲ್ಲಿ, ಅಲ್ಲಿಗೆ ಬಂದ ಮುಖ್ಯೋಪಾಧ್ಯಾಯಿನಿ ಅಲ್ಲಿ ತರಗತಿಯನ್ನು ತೊಳೆದು, ಬೆಂಚುಗಳನ್ನು ಒರೆಸು ಎಂದು ಹೇಳಿ ಹೊರಟುಹೋದರು. ಅವರು ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆಂದು ನಿರೀಕ್ಷಿಸಿದ್ದರಿಂದ, ಈ ಕೆಲಸವನ್ನು ಹೇಳಿದಾಗ ಅವರಿಗೆ ಬೇಸರವಾದರೂ, ಬೇರೆ ದಾರಿಯಿಲ್ಲದೆ ಅದನ್ನು ಮಾಡಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ, ಅಲ್ಲಿಗೆ ಬಂದ ಮುಖ್ಯೋಪಾಧ್ಯಾಯಿನಿ, ನಿನ್ನ ಕೈಯಿಂದ ಎಲ್ಲಾ ಬೆಂಚುಗಳನ್ನು ಒರೆಸಿ ಉತ್ತಮವಾದ ಕೆಲಸವನ್ನು ಮಾಡಿದ್ದೀಯ ಎಂದು ಹೊಗಳಿ ಅಲ್ಲಿ ಒಂದು ಸ್ಥಾನವನ್ನು ನೀಡಿದರಂತೆ. ಮುಖ್ಯೋಪಾಧ್ಯಾಯಿನಿಯ ಆ ಕ್ರಿಯೆ ಅವರ ಜೀವನವನ್ನು ಬದಲಾಯಿಸಿತು ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

 

ಈ ಘಟನೆಯಂತೆಯೇ, ಸತ್ಯವೇದದಲ್ಲಿ ಒಂದು ಘಟನೆಯನ್ನು ಬರೆಯಲಾಗಿದೆ. ಪಸ್ಕಹಬ್ಬದ ಮೊದಲು, ಯೇಸು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿದೆ ಎಂದು ತಿಳಿದಾಗ, ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ತನ್ನ ಶಿಷ್ಯರ ಪಾದಗಳನ್ನು ತೊಳೆದು, ತಾನು ಕಟ್ಟಿಕೊಂಡಿದ್ದ ಕೈ ಪಾವುಡದಿಂದ ಒರೆಸಲು ಪ್ರಾರಂಭಿಸಿದರು. ಆಕಾಶವು ನನ್ನ ಸಿಂಹಾಸನ, ಭೂಮಿಯು ನನ್ನ ಪಾದಪೀಠ ಎಂದು ಹೇಳುವಂತಹ ಮಹತ್ವದ ಕರ್ತನು. ಆಕಾಶ ಮತ್ತು ಭೂಮಿಯನ್ನು ತನ್ನ ಮಾತಿನ ಮೂಲಕ ಸೃಷ್ಟಿಸಿದ ಸೃಷ್ಟಿಕರ್ತನು, ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ತನ್ನ ತಾಳ್ಮೆಯನ್ನು ತೋರಿಸಿದರು. ಅಷ್ಟೇ ಅಲ್ಲ, ಅವರು ಕಟ್ಟಿಕೊಂಡಿದ್ದ ಕೈ ಪಾವುಡದಿಂದ ಕಾಲುಗಳನ್ನೂ ಸಹ ಒರೆಸಿದರು. ಎಂತಹ ಒಂದು ತಗ್ಗಿಸಿಕೊಳ್ಳುವಿಕೆ!

 

ನನಗೆ ಪ್ರಿಯವಾದವರೇ! ನಮ್ಮ ಕರ್ತನು ತಾನು ಮಾಡಿ ತೋರಿಸದೇ ಯಾವುದನ್ನೂ ನಾವು ಮಾಡಬೇಕೆಂದು ಒತ್ತಾಯಿಸುವ ದೇವರಲ್ಲ. ಅವರು ತನ್ನ ಶಿಷ್ಯರ ಪಾದಗಳನ್ನು ತೊಳೆದು ತಾಳ್ಮೆಯನ್ನು ಪ್ರದರ್ಶಿಸಿದ ಕಾರಣ, ಅವರು ನಮ್ಮಿಂದಲೂ ತಾಳ್ಮೆಯನ್ನು ನಿರೀಕ್ಷಿಸುತ್ತಾರೆ. ತಾಳ್ಮೆಯು ನಮ್ಮ ಆಲೋಚನೆಗಳನ್ನು ತುಂಬಬೇಕು ಮತ್ತು ನಮ್ಮ ಕಾರ್ಯಗಳಲ್ಲಿ ಪ್ರಕಟವಾಗಬೇಕು. ಇಂದಿಗೂ, ಉತ್ತರ ಭಾರತದಲ್ಲಿ ಅನೇಕ ಜನರು ತಮ್ಮ ಮನೆಗಳಿಗೆ ಬರುವ ಸಂಬಂಧಿಕರನ್ನು ಅವರ ಪಾದಗಳನ್ನು ತೊಳೆದು ಒರೆಸುವ ಮೂಲಕ ಸ್ವಾಗತಿಸುತ್ತಾರೆ. ಏಕೆಂದರೆ ನೀವು ನನಗಿಂತ ಶ್ರೇಷ್ಠರು ಮತ್ತು ನಾವು ನಿಮ್ಮನ್ನು ತುಂಬಾ ಗೌರವಿಸುತ್ತೇವೆ ಎಂದು ತೋರಿಸಲು ಅವರು ಹಾಗೆ ಮಾಡುತ್ತಾರೆ. ದೇವರಿಂದ ಕೃಪೆಯನ್ನು ಪಡೆಯಲು ತಗ್ಗಿಸಿಕೊಳ್ಳುವಿಕೆ ಬಹಳ ಮುಖ್ಯ. ಕರ್ತನ ಮುಂದೆ ತಗ್ಗಿಸಿಕೊಳ್ಳೋಣ; ಆಗಲಾತನು ನಮ್ಮನ್ನು ಮೇಲಕ್ಕೆ ತರುವನು.

ತಾಳ್ಮೆಯಿಂದಿದ್ದು ಆತನ ಕೃಪೆಯನ್ನು ಪಡೆಯಲು ಬಯಸೋಣ. 

- Mrs ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಯೌವನಸ್ಥರು ಶಿಬಿರದಲ್ಲಿ ತೆಗೆದುಕೊಂಡ ನಿರ್ಧಾರದಲ್ಲಿ ದೃಢವಾಗಿ ನಿಲ್ಲುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş