Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.08.2025
Share:

By Village Missionary Movement

Friday, 15-Aug-2025

ಧೈನಂದಿನ ಧ್ಯಾನ(Kannada) – 15.08.2025

 

ಬಿಡುಗಡೆ 

 

"...ನೀವು ನನ್ನ ಜನರಾಗುವಂತೆ ನಿಮ್ಮನ್ನು ಇತರ ಜನಾಂಗಗಳಿಂದ ಪ್ರತ್ಯೇಕಿಸಿದ್ದೇನೆ;..." – ಯಾಜಕಕಾಂಡ 20:26

 

ಕ್ರಿಸ್ತನಲ್ಲಿ ಪ್ರಿಯ ಸ್ನೇಹಿತರೇ, ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಇಂದು ನಮ್ಮ ದೇಶದ ಎಲ್ಲಾ ಜನರು ಎಲ್ಲಾ ಸಂಪನ್ಮೂಲಗಳು ಮತ್ತು ಎಲ್ಲಾ ಪ್ರಯೋಜನಗಳನ್ನು ಪಡೆಯಲು ದೇವರು ಕೃಪೆ ನೀಡಲಿ. ಇಂದು ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಪ್ರಧಾನಿ ಮತ್ತು ಮುಖ್ಯಮಂತ್ರಿಯಂತಹ ಪ್ರಮುಖ ನಾಯಕರು ಮತ್ತು ಮಹಾನ್ ಶಿಕ್ಷಕರು ಸೇರಿದಂತೆ ಅನೇಕ ನಾಯಕರು ರಾಷ್ಟ್ರೀಯ ಧ್ವಜವನ್ನು ಹಾರಿಸುವ ಮೂಲಕ ಭಾರತೀಯ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಮ್ಮ ದೇಶದ ವಿಶೇಷತೆಯೆಂದರೆ ನಾವೆಲ್ಲರೂ ವಿವಿಧ ಧರ್ಮಗಳು, ಜನಾಂಗಗಳು ಮತ್ತು ಭಾಷೆಗಳ ಜನರಾಗಿ ಒಟ್ಟುಗೂಡುತ್ತೇವೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಳ್ಳುತ್ತೇವೆ. ನಮ್ಮ ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಣ್ಣವು ತ್ಯಾಗವನ್ನು ಪ್ರತಿನಿಧಿಸುತ್ತದೆ. ಬಿಳಿ ಬಣ್ಣವು ಶುದ್ಧತೆಯನ್ನು ಪ್ರತಿನಿಧಿಸುತ್ತದೆ ಮತ್ತು ಹಸಿರು ಬಣ್ಣವು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತಾರೆ. ನಿಜವಾಗಿಯೂ, ಪ್ರತಿಯೊಬ್ಬ ಯೌವನಸ್ಥರು ಇದನ್ನು ಅರಿತುಕೊಳ್ಳಬೇಕು.

 

ಪವಿತ್ರ ಜೀವನವನ್ನು ನಡೆಸಲು ನಾವು ಕೆಲವು ವಿಷಯಗಳನ್ನು ಮತ್ತು ಲೌಕಿಕ ಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಆಗ ಮಾತ್ರ ನಾವು ಸಮೃದ್ಧ ಜೀವನವನ್ನು ಹೊಂದಬಹುದು. ಎಲ್ಲರಿಗೂ ಪ್ರೀತಿ ತೋರಿಸಲು ಮತ್ತು ಎಲ್ಲರಿಗೂ ಸಹಾಯ ಮಾಡಲು, ನಮಗೆ ತ್ಯಾಗದ ಮನಸ್ಥಿತಿ ಬೇಕು. ಇಂದು, ತಮ್ಮನ್ನು ತಾವು ತ್ಯಾಗ ಮಾಡಿ, ನಮ್ಮನ್ನು ರಕ್ಷಿಸುವ ಸಾವಿರಾರು ಸೈನಿಕರು ಮತ್ತು ಅವರ ಕುಟುಂಬಗಳಿಗಾಗಿ ಇಂದು ನಾವು ಕರ್ತನಿಗೆ ಕೃತಜ್ಞತೆ ಹೇಳೋಣ. ಅವರ ತ್ಯಾಗದಿಂದಾಗಿ, ನಾವು ಸುರಕ್ಷಿತವಾಗಿ ಮತ್ತು ಶಾಂತಿಯುತವಾಗಿ ಬದುಕುತ್ತಿದ್ದೇವೆ. ಅದೇ ರೀತಿ, ನಾವು ಲೌಕಿಕ ಸುಖಗಳನ್ನು ತಪ್ಪಿಸಿ ಕ್ರಿಸ್ತನಿಗಾಗಿ ನಿಲ್ಲುವಾಗ, ಪವಿತ್ರತೆಯು ಸಂರಕ್ಷಿಸಲ್ಪಡುತ್ತದೆ. ಪವಿತ್ರ ಜೀವನವನ್ನು ನಡೆಸಲು ನಮಗೆ ತ್ಯಾಗ ಬೇಕು. ತ್ಯಾಗದ ಜೀವನದ ಮೂಲಕ, ನಾವು ದೇವರ ಆಶೀರ್ವಾದವನ್ನು ಪಡೆಯುತ್ತೇವೆ. ಹೀಗಾಗಿ, ನಾವು ನೀರಿನ ಕಾಲಿವೆಗಳ ಬಳಿ ನೆಡಲ್ಪಟ್ಟು ತಕ್ಕ ಕಾಲದಲ್ಲಿ ತನ್ನ ಫಲಕೊಟ್ಟು ಸಮೃದ್ಧವಾದ ಜೀವನವನ್ನು ಪಡೆಯೋಣ. "ನೀವು ಪವಿತ್ರರಾಗಿರಬೇಕು ಎಂಬುದೇ ದೇವರ ಚಿತ್ತವಾಗಿದೆ" (1 ಥೆಸ. 4:3).

 

ಇಂದಿನ ದಿನದಲ್ಲೂ, ತಿರುಚ್ಚಿಯಲ್ಲಿ 1,20,000 ಯೌವನಸ್ಥರು ಭಾಗವಹಿಸುವ ಯೌವನಸ್ಥರ ಶಿಬಿರವನ್ನು ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ ಭಾಗವಹಿಸುವ ಯೌವನಸ್ಥರು ಪಾಪದಿಂದ ಬಿಡುಗಡೆ ಹೊಂದಿ ರಕ್ಷಿಸಲ್ಪಡುವಂತೆ ಪ್ರಾರ್ಥಿಸಿರಿ. ಈ ಶಿಬಿರದ ಮೂಲಕ ಪರಲೋಕದಲ್ಲಿ ದೊಡ್ಡ ಸಂತೋಷ ಉಂಟಾಗಲಿ. ಇಂದು ಉಜ್ಜೀವನ ಪ್ರಾರಂಭವಾಗುವ ದಿನವಾಗಲಿ ಎಂದು ಪ್ರಾರ್ಥಿಸಿರಿ. ಈ ಶಿಬಿರದಲ್ಲಿ ಭಾಗವಹಿಸುವ ಯೌವನಸ್ಥರನ್ನು ದೇವರು ಉಜ್ಜೀವನದ ಯೋಧರನ್ನಾಗಿ ಪರಿವರ್ತಿಸಲಿ! ಆಮೆನ್. 

- Rev. ಎಲಿಜಬೆತ್

 

ಪ್ರಾರ್ಥನಾ ಅಂಶ:

ಶಿಬಿರ ಮುಗಿದ ನಂತರ ಕೊಡಲ್ಪಡುವ ಆಹಾರವು ಕೊರತೆಯಾಗದಂತೆ ಉಳಿದದ್ದನ್ನು ತೆಗೆದಿಡುವ ಹಾಗೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş