Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.08.2025
Share:

By Village Missionary Movement

Thursday, 14-Aug-2025

ಧೈನಂದಿನ ಧ್ಯಾನ(Kannada) – 14.08.2025

 

ಯೇಸುವೇ ಉತ್ತರ

 

"...ನಾಲ್ಕನೆಯವನ ರೂಪವು ದೇವ ಕುಮಾರನ ಹಾಗಿದೆ ಎಂದು ಹೇಳಿದನು" - ದಾನಿಯೇಲ 3:25

 

ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ನ ಚಾಲಕ ಐನ್‌ಸ್ಟೈನ್‌ಗೆ, "ನಾನು ನಿಮ್ಮ ಭಾಷಣವನ್ನು ಆಗಾಗ್ಗೆ ಕೇಳಿದ್ದರಿಂದ, ನಾನು ಈಗ ನಿಮ್ಮ ವಿಚಾರಗಳನ್ನು ಸುಂದರವಾಗಿ ಪ್ರಸ್ತುತಪಡಿಸುತ್ತೇನೆ" ಎಂದು ಹೇಳಿದರು. ಆ ಸಮಯದಲ್ಲಿ, ಟಿವಿ, ಇಂಟರ್ನೆಟ್ ಸಂಪರ್ಕ ಅಥವಾ ಅಂತಹ ಯಾವುದೇ ಸಂಪರ್ಕವಿಲ್ಲದ ಕಾರಣ, ಕೆಲವೇ ಜನರು ಐನ್‌ಸ್ಟೈನ್‌ರನ್ನು ವೈಯಕ್ತಿಕವಾಗಿ ನೋಡಿದ್ದರು. ಆದ್ದರಿಂದ ಐನ್‌ಸ್ಟೈನ್ ಚಾಲಕನಿಗೆ, ನಾವಿಬ್ಬರೂ ಒಬ್ಬರನ್ನೊಬ್ಬರು ಬದಲಾಯಿಸಿಕೊಳ್ಳೋಣ, ಇಂದು ನನಗೆ ಬದಲಾಗಿ ನೀನು ಮಾತನಾಡು ಎಂದು ಹೇಳಿದರು. ಅವರು ಒಪ್ಪಿಕೊಂಡು ವೇದಿಕೆಯನ್ನು ಹತ್ತಿದರು. ಚಾಲಕನು ತನ್ನ ಭಾಷಣವನ್ನು ಚೆನ್ನಾಗಿ ಮುಗಿಸಿ ನಿಟ್ಟುಸಿರು ಬಿಡುತ್ತಾ ಬಂದು ಕುಳಿತಾಗ ಅವರ ಬಳಿ, "ನಾವು ನಿಮ್ಮ ಬಳಿ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ" ಎಂದರು. ಅವರು ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ, ಅತ್ಯಂತ ಕಷ್ಟಕರವಾದ ಪ್ರಶ್ನೆಯನ್ನು ಕೇಳಿದ ವ್ಯಕ್ತಿಯನ್ನು ನೋಡಿ ಚಾಲಕ, "ನೀವು ಒಬ್ಬ ಮಹಾನ್ ಪ್ರಾಧ್ಯಾಪಕರೇ, ಆದರೆ ನನ್ನ ಚಾಲಕ ಕೂಡ ಉತ್ತರಿಸುವ ಹಾಗೆ ಇಷ್ಟು ಸರಳವಾದ ಪ್ರಶ್ನೆಗಳನ್ನು ಕೇಳಿದ್ದು ನನಗೆ ಆಶ್ಚರ್ಯವಾಗಿದೆ" ಎಂದು ಹೇಳಿ ಇಕ್ಕಟ್ಟಾದ ಸ್ಥಿತಿಯಿಂದ ತಪ್ಪಿಸಿಕೊಂಡರು. ಚಾಲಕನ ಪಾತ್ರದಲ್ಲಿದ್ದ ಐನ್‌ಸ್ಟೈನ್ ಅದಕ್ಕೆಲ್ಲಾ ಉತ್ತರಿಸಿದರಂತೆ. 

 

ದಾನಿಯೇಲನ ಮೂವರು ಸ್ನೇಹಿತರು ಇಕ್ಕಟ್ಟಾದ ಸ್ಥಿತಿಯಲ್ಲಿ ಸಿಲುಕಿಕೊಂಡರು. ರಾಜನು ತಾನು ಮಾಡಿದ ಚಿನ್ನದ ಪ್ರತಿಮೆಯನ್ನು ಪೂಜಿಸದಿದ್ದರೆ ಅವರನ್ನು ಬೆಂಕಿಯ ಕುಲುಮೆಗೆ ಎಸೆಯುವುದಾಗಿ ಬೆದರಿಕೆ ಹಾಕಿದರು. "ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ದೇವರು ಯಾರು?" ಎಂದು ಕೇಳುತ್ತಾರೆ. ದಾನಿಯೇಲನ ಸ್ನೇಹಿತರು ನಮಸ್ಕರಿಸಲು ನಿರಾಕರಿಸಿದರು, ಆದ್ದರಿಂದ ಅವರನ್ನು ಬೆಂಕಿಯ ಕುಲುಮೆಗೆ ಎಸೆಯಲಾಯಿತು. ಆದರೆ ಯೇಸು ಕ್ರಿಸ್ತನು ತಾನೇ ದೇವದೂತನಾಗಿ ಅವರೊಂದಿಗೆ ಬೆಂಕಿಯಲ್ಲಿ ನಡೆದರು, ಅವರನ್ನು ಹಾನಿಯಿಂದ ರಕ್ಷಿಸಿದರು ಮತ್ತು ರಾಜನ ಪ್ರಶ್ನೆಗೆ ನಿರಾಕರಿಸಲಾಗದ ರೀತಿಯಲ್ಲಿ ಉತ್ತರಿಸಿದರು.

 

ನನಗೆ ಪ್ರಿಯವಾದವರೇ! ಕೆಲವೊಮ್ಮೆ ನಮ್ಮ ಜೀವನದಲ್ಲಿ, ಸಂದರ್ಭಗಳು ಕೈ ಮೀರುತ್ತಿವೆ ಎಂದು ನಾವು ಭಾವಿಸಬಹುದು. ಎಲ್ಲವೂ ಮುಗಿದಿದೆ ಇನ್ನು ಅಷ್ಟೆ ಎಂದು ನಾವು ಭಾವಿಸುವ ಸಂದರ್ಭಗಳು ಸಹ ಇರಬಹುದು. ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥರಾಗಿದ್ದಾರೆ. ಆತನು ಒಂದು ವೇಳೆ ತಪ್ಪಿಸದಿದ್ದರೂ ನಾವು ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದು ದೇವರೊಂದಿಗೆ ನಿಂತರು, ನಮ್ಮಿಂದ ಜಯಿಸಲಾಗದ ಸಮಸ್ಯೆಗಳಲ್ಲಿ ಯೇಸು ಕ್ರಿಸ್ತನು ನಮಗಾಗಿ ಉತ್ತರಿಸುತ್ತಾರೆ ಎಂಬ ನಂಬಿಕೆ ನಮಗಿರಬೇಕು. ಆಗ, ಹೀಗೆ ರಕ್ಷಿಸತಕ್ಕ ದೇವರು ಬೇರೆ ಯಾರೂ ಇಲ್ಲ ಎಂದು ಹೇಳಿ, ರಾಜನು ದೇವರನ್ನು ಮಹಿಮೆಪಡಿಸಿದಂತೆಯೇ, ದೇವರು ನಮ್ಮ ಮೂಲಕವೂ ಮಹಿಮೆ ಹೊಂದುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಗ್ನಿಜ್ವಾಲೆಯಂತಹ ಪರಿಸ್ಥಿತಿಗಳು ಎದುರಾದರೂ, ಅವರೇ ನಮಗೆ ಉತ್ತರವಾಗಿರುತ್ತಾರೆ. ಆಮೆನ್! 

- Mrs. A. ಬ್ಯೂಲಾ 

 

ಪ್ರಾರ್ಥನಾ ಅಂಶ:

ಶಿಬಿರಕ್ಕೆ ಬರುವ ಪ್ರತಿಯೊಬ್ಬ ಯೌವನಸ್ಥರು ದೇವರಿಗಾಗಿ ಕಾರ್ಯಮಾಡುವವರಾಗಿ ಬದಲಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al