Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.08.2025
Share:

By Village Missionary Movement

Monday, 11-Aug-2025

ಧೈನಂದಿನ ಧ್ಯಾನ(Kannada) – 11.08.2025

 

ಮರೆತುಬಿಟ್ಟಿರಾ?

 

"ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ." - ಯೆಶಾಯ 49:15

 

ಸಂಜೆ ವೇಳೆ, ಒಂದು ಹಾಸ್ಟೆಲ್‌ಗೆ ಸೇವೆ ಸಲ್ಲಿಸಲು ಹೋಗಿದ್ದೆ. ಒಂದು ಪುಟ್ಟ ಹುಡುಗಿ ಹಾಸ್ಟೆಲ್‌ನ ಬಾಗಿಲಿನ ಬಳಿ ನಿಂತು ಅಳುತ್ತಿದ್ದಳು. ಏಕೆ ಅಳುತ್ತಿದ್ದೀಯ ಎಂದು ಕೇಳಿದೆ. ಆ ಪುಟ್ಟ ಹುಡುಗಿ ನೀಡಿದ ಉತ್ತರ ನನ್ನನ್ನು ಆಳವಾಗಿ ಕಲಕಿತು. ನನ್ನ ತಾಯಿ ಮತ್ತು ತಂದೆ ನನ್ನನ್ನು ಈ ಶಾಲಾ ಹಾಸ್ಟೆಲ್‌ನಲ್ಲಿ ಬಿಟ್ಟು, "ಪ್ರತಿ ಶುಕ್ರವಾರ ಸಂಜೆ ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತೇವೆ. ಆದ್ದರಿಂದ ಚಿಂತಿಸಬೇಡ, ಧೈರ್ಯದಿಂದ ಈ ಹಾಸ್ಟೆಲ್‌ನಲ್ಲಿ ಇರು" ಎಂದು ನನಗೆ ಹೇಳಿ ಹೊರಟುಹೋದರು. ಈಗ ಒಂದು ವರ್ಷವಾಗಿದೆ. ಆದರೆ ಇಲ್ಲಿಯವರೆಗೆ, ಯಾರೂ ನನ್ನನ್ನು ಕರೆದುಕೊಂಡು ಹೋಗಲು ಬಂದಿಲ್ಲ. ನನ್ನ ತಾಯಿ ಮತ್ತು ತಂದೆ ನನ್ನನ್ನು ಮರೆತುಹೋದರು ಎಂದು ಕಣ್ಣೀರಿನಿಂದ ಹೇಳಿದಳು. 

 

ಇದೇ ರೀತಿಯ ಘಟನೆಯನ್ನು ಸತ್ಯವೇದದಲ್ಲಿಯೂ ಬರೆಯಲಾಗಿದೆ. ಇಷಯನ ಮಗನನ್ನು ಇಸ್ರಾಯೇಲಿನ ರಾಜನನ್ನಾಗಿ ಅಭಿಷೇಕಿಸಲು ಕರ್ತನು ಪ್ರವಾದಿಯಾದ ಸಮುವೇಲನನ್ನು ಕಳುಹಿಸಿದರು. ಅವರು ಅಲ್ಲಿಗೆ ಬಂದಾಗ, ಇಷಯನು ತನ್ನ ಏಳು ಗಂಡು ಮಕ್ಕಳನ್ನು ಸಮುವೇಲನ ಮುಂದೆ ಹಾದುಹೋಗುವಂತೆ ಮಾಡಿದನು. ಆಗ ಸಮುವೇಲನು ಇಷಯನಿಗೆ, ಕರ್ತನು ಇವರಲ್ಲಿ ಯಾರನ್ನೂ ಆರಿಸಿಕೊಂಡಿಲ್ಲ ಎಂದು ಹೇಳಿ ಇಷಯನ ಬಳಿ ನಿನ್ನ ಮಕ್ಕಳು ಇಷ್ಟೇನಾ ಎಂದು ಕೇಳಿದಾಗಲೇ ಇಷಯನು ತನ್ನ ಕಿರಿಯ ಮಗ ದಾವೀದನನ್ನು ಮರೆತಿದ್ದನ್ನು ನೆನಪಿಸಿಕೊಂಡನು. ಇಷಯನು ತಕ್ಷಣ, "ಇನ್ನೂ ಎಲ್ಲರಿಗೂ ಕಿರಿಯವನು ಒಬ್ಬನಿದ್ದಾನೆ. ಅವನು ಕುರಿಗಳನ್ನು ಮೇಯಿಸುತ್ತಿದ್ದಾನೆ." ಎಂದು ಹೇಳಿದನು. ಹೀಗೆ ತನ್ನ ಸ್ವಂತ ಮಗನನ್ನೇ ಮರೆತ ತಂದೆಯನ್ನು ನಾವು ನೋಡುತ್ತೇವೆ.

 

ಪ್ರಿಯರೇ! ಈ ಚಿಕ್ಕ ಹುಡುಗಿಯನ್ನು ಮರೆತ ಹೆತ್ತವರಂತೆ ಮತ್ತು ತನ್ನ ಮಗನನ್ನು ಮರೆತ ತಂದೆಯಂತೆ, ಎಲ್ಲರೂ ನಮ್ಮನ್ನು ಮರೆತಿರುವ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿರಬಹುದು. ನಮ್ಮ ಕುಟುಂಬವು ನಮ್ಮನ್ನು ಮರೆಯುವುದು ಎಷ್ಟು ನೋವಿನ ಸಂಗತಿ. "ಮರೆತುಬಿಡುವುದು" ಎಷ್ಟು ನೋವಿನ ಸಂಗತಿ ಎಂಬುದು ನಮಗೆ ಗೊತ್ತು. ನಾವು ದೇವರನ್ನು ಎಷ್ಟು ಬಾರಿ ಮರೆತುಬಿಡುತ್ತೇವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಾವು ಕರ್ತನೊಂದಿಗೆ ಮಾಡಿದ ಪ್ರತಿಜ್ಞೆ ಮತ್ತು ಒಡಂಬಡಿಕೆಗಳನ್ನು ಮರೆತುಬಿಡುತ್ತೇವೆ. ಕರ್ತನು ನಮ್ಮನ್ನು ರಕ್ಷಿಸಿದ್ದು, ನಮ್ಮನ್ನು ಅಭಿಷೇಕಿಸಿದ್ದು ಮತ್ತು ನಮ್ಮನ್ನು ಆರಿಸಿಕೊಂಡ ವಿಧವನ್ನು ನಾವು ಮರೆತು ನಮ್ಮ ಹೃದಯಗಳ ಪ್ರಕಾರ ಬದುಕುತ್ತಿದ್ದೇವೆ. ಆತನು ಮಾಡಿದ ಒಳ್ಳೆಯ ಉಪಕಾರಗಳನ್ನು ಮತ್ತು ಆತನು ನಮಗೆ ನೀಡಿದ ಆಶೀರ್ವಾದಗಳನ್ನು ಮರೆತುಬಿಟ್ಟು ಅನೇಕ ಬಾರಿ ಕೃತಜ್ಞತೆಯಿಲ್ಲದವರಾಗಿದ್ದೇವೆ. ಆಗೆಲ್ಲಾ ದೇವರ ಹೃದಯವು ಹೀಗೆಯೇ ವೇದನೆಪಡುತ್ತದೆಯಲ್ಲವಾ? ಇಂದೇ ಯೋಚಿಸೋಣ. ಯೇಸುವಿಗೆ ಹತ್ತಿರವಾಗಿ ಹೋಗೋಣ.

- Bro. ಎಬಿನೆಜರ್

 

ಪ್ರಾರ್ಥನಾ ಅಂಶ:

ಕುಳಿತುಕೊಳ್ಳುವ ಸ್ಥಳ, ವಾಹನಗಳನ್ನು ನಿಲ್ಲಿಸುವ ಸ್ಥಳವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş