Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.08.2025 (Kids Special)
Share:

By Village Missionary Movement

Sunday, 10-Aug-2025

ಧೈನಂದಿನ ಧ್ಯಾನ(Kannada) – 10.08.2025 (Kids Special)

 

ಕೆಟ್ಟದ್ದನ್ನು ಮಾಡಬೇಡಿ

 

"ದ್ವೇಷವು ಜಗಳಗಳನ್ನೆಬ್ಬಿಸುತ್ತದೆ; ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ" - ಜ್ಞಾನೋಕ್ತಿ 10:12 

 

ಒಂದು ಸುಂದರವಾದ ಕಾಡಿನಲ್ಲಿ ಅನೇಕ ಪ್ರಾಣಿಗಳು ವಾಸಿಸುತ್ತಿದ್ದವು. ನೀವು ಚಲನಚಿತ್ರದಲ್ಲಿ ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳನ್ನು ನೋಡಿರಬೇಕು ಅಲ್ವಾ! ಎಲ್ಲಿ ಹೇಳಿ ನೋಡೋಣ. ಸಿಂಹ, ಹುಲಿ, ಕರಡಿ, ಒಂಟೆ, ಜಿಂಕೆ, ಕುದುರೆ O.k...O.k.... ತುಂಬಾ ಸುಂದರವಾಗಿ ಹೇಳಿದ್ದೀರಿ. ಈ ಕಾಡಿನಲ್ಲಿ, ಕುದುರೆಗಳು ಮತ್ತು ಜಿಂಕೆಗಳು ಆಗಾಗ್ಗೆ ಜಗಳವಾಡುತ್ತಿದ್ದವು. ಕುದುರೆ ಈ ಜಿಂಕೆಯನ್ನು ಹೇಗಾದರೂ ಒಂದು ಗತಿ ಮಾಡಬೇಕು ಅಂತ ಅಂದುಕೊಂಡಿತು. ಅದಕ್ಕೆ ಯಾರ ಬಳಿ ಸಹಾಯ ಕೇಳೋದು ಎಂದು ಯೋಚಿಸುತ್ತಿರುವಾಗ, ಆಕಸ್ಮಿಕವಾಗಿ ಒಬ್ಬ ಮನುಷ್ಯನನ್ನು ಭೇಟಿಯಾಯಿತು. ಆಗ ಆ ಮನುಷ್ಯನ ಬಳಿ ತನ್ನ ಪರಿಸ್ಥಿತಿಯ ಬಗ್ಗೆ ಹೇಳಿ ಸಹಾಯ ಕೇಳಿತು. ಅವನು ಕೂಡ O.k. ಹೇಳಿಬಿಟ್ಟು ನಾಳೆ ಭೇಟಿಯಾಗೋಣ ಎಂದು ಹೇಳಿದನು. ಪುಟಾಣಿಗಳೇ, ಎಂದಿಗೂ ಮತ್ತೊಬ್ಬರನ್ನು ಹೊಡೆಯಲು ಅಥವಾ ನಾಶಮಾಡಲು ಯೋಚಿಸಬಾರದು. ಇವು ಸೈತಾನನ ಕೆಲಸಗಳು. ನೀವು ಅವನನ್ನು ವಿರೋಧಿಸಿ ನಿಲ್ಲಬೇಕು O.k ನಾ. ಮುಂದೆ ಏನಾಯಿತು? ಆ ಮನುಷ್ಯನು ತಾನು ಲಾಭ ಗಳಿಸಿದ್ದೇನೆ ಎಂದು ಭಾವಿಸಿ ಜಿಂಕೆಯನ್ನು ಕೊಂದು ಅದನ್ನು ತಿಂದನು. ನಂತರ ಕುದುರೆಯನ್ನು ನಮಗೆ ಸ್ವಂತಮಾಡಿಕೊಳ್ಳಬಹುದು ಎಂದು ಭಾವಿಸಿದನು. ಜಿಂಕೆಯನ್ನು ಹಿಡಿಯಲು ಕುದುರೆಗೆ ತರಬೇತಿ ನೀಡುವುದಾಗಿ ಹೇಳಿದನು ಮತ್ತು ಅದಕ್ಕೆ ಸಾಕಷ್ಟು ತರಬೇತಿ ನೀಡಿದನು. ಅದು ವಿಶ್ರಾಂತಿ ಇಲ್ಲದೆ ಓಡುತ್ತಲೇ ಇತ್ತು. 

 

ಸರಿಯಾದ ಸಮಯದಲ್ಲಿ ಆಹಾರ ಸಿಗಲಿಲ್ಲ. ಅವನ ಮಾತು ಕೇಳುವುದು ತುಂಬಾ ಕಷ್ಟವಾಗಿತ್ತು. ನಾನು ಕಾಡಿನಲ್ಲಿದ್ದಾಗ ಎಷ್ಟು ಸ್ವತಂತ್ರನಾಗಿದ್ದೆ. ಆದರೆ ಈಗ ನಾನು, ನನ್ನ ಸ್ನೇಹಿತರು ಮತ್ತು ಕುಟುಂಬವನ್ನು ಕಳೆದುಕೊಂಡಿದ್ದೇನೆ ಮತ್ತು ಈ ಮನುಷ್ಯನ ಗುಲಾಮನಾಗಿದ್ದೇನೆ! ನನಗೆ ಸರಿಯಾದ ಆಹಾರವೂ ಸಿಗುತ್ತಿಲ್ಲ! ಆ ಜಿಂಕೆಯನ್ನು ನಾಶಮಾಡಲು ಪ್ರಯತ್ನಿಸಿದ್ದಕ್ಕಾಗಿ ನನಗೆ ಸಿಕ್ಕ ಶಿಕ್ಷೆ ಇದು. ಛೇ, ಸಮಾಧಾನವಾಗಿ ಜೀವಿಸಿರಬಹುದು ಎಂದು ಕುದುರೆ ವೇದನೆಪಟ್ಟು ತನ್ನ ಪರಿಸ್ಥಿತಿಯನ್ನು ಅರಿತುಕೊಂಡಿತು. ತಪ್ಪು ಮಾಡುವ ಪ್ರತಿಯೊಬ್ಬರಿಗೂ ಶಿಕ್ಷೆ ಇದೆ ಎಂದು ಅದು ಅರ್ಥಮಾಡಿಕೊಂಡಿತು.

 

ಏನು ಪುಟಾಣಿಗಳೇ! ನೀವು ಪ್ರಾಣಿಗಳಿಂದ ಒಳ್ಳೆಯ ಪಾಠ ಕಲಿತುಕೊಂಡ್ರಾ? ನಿಮ್ಮ ನಡುವೆ ಸಣ್ಣ ಜಗಳವಾದರೂ, ನೀವು ಸಮಾಧಾನ ಮಾಡಿ ಅದನ್ನು ತಕ್ಷಣ ಸರಿಪಡಿಸಬೇಕು. ಅದು ಬಿಟ್ಟು, ನಿಮ್ಮ ಹೃದಯದಲ್ಲಿ ದ್ವೇಷವನ್ನು ಇಟ್ಟುಕೊಂಡು ಯೇಸಪ್ಪನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಚಿಕ್ಕ ವಯಸ್ಸಿನಲ್ಲೇ ಯೇಸುವಿನ ಪ್ರೀತಿಯಿಂದ ತುಂಬಿರಬೇಕು. ಪ್ರತಿದಿನ ಯೇಸಪ್ಪನ ಬಳಿ ಪ್ರಾರ್ಥಿಸಿ ಕೋಪ, ದ್ವೇಷ, ಕಹಿತನ ಹೀಗೆ ಯೇಸಪ್ಪನಿಗೆ ವಿರುದ್ಧವಾದ ಕಾರ್ಯಗಳನ್ನು ಬಿಟ್ಟು ಬಿಡಲು ಸಹಾಯವನ್ನು ಕೇಳಿ. O.k ನಾ ಪುಟಾಣಿಗಳೇ. ನಿಮ್ಮ ಕಣ್ಣುಗಳನ್ನು ಮುಚ್ಚಿ ಹೇಳಿ, "ಯೇಸಪ್ಪಾ, ನೀವು ದ್ವೇಷಿಸುವ ವಿಷಯಗಳು ನನ್ನಲ್ಲಿ ಮರೆಯಾಗಲಿ. ನೀವು ಪ್ರೀತಿಸುವ ವಿಷಯಗಳು ನನ್ನಲ್ಲಿ ಬೆಳೆಯಲಿ ಯೇಸಪ್ಪಾ, ಆಮೆನ್." 

- Mrs ಅನಿತಾ ಅಳಗರಸ್ವಾಮಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al