Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.08.2025
Share:

By Village Missionary Movement

Friday, 08-Aug-2025

ಧೈನಂದಿನ ಧ್ಯಾನ(Kannada) – 08.08.2025

 

"ಆದರೆ ಅವರು ಆತನ ಗುರುತನ್ನು ಹಿಡಿಯಲಿಲ್ಲ; ಅವರ ಕಣ್ಣು ಕಟ್ಟಿದ ಹಾಗಾಯಿತು" - ಲೂಕ 24:16

 

ನಾನು ಶಾಲೆಯಲ್ಲಿ Gold medal ತೆಗೆದುಕೊಂಡಿದ್ದರೂ, ಉನ್ನತ ಶಿಕ್ಷಣದಲ್ಲಿ ವಿಫಲನಾದೆ. ಆ ಸಮಯದಲ್ಲಿ, ನನ್ನ ಭವಿಷ್ಯ ಹೇಗಿರುತ್ತದೆ ಮತ್ತು ನನಗೆ ಯಾರು ಮಾರ್ಗದರ್ಶನ ನೀಡುತ್ತಾರೆ ಎಂದು ನಾನು ಚಿಂತಿತನಾಗಿದ್ದಾಗ, ನನ್ನ ಜೀವನವೇ ಕತ್ತಲೆಯಾಗಿತ್ತು. ಯೇಸು ನನ್ನೊಂದಿಗಿದ್ದಾರೆ ಎಂದು ನಾನು ಅರಿತುಕೊಂಡಾಗ, ನನ್ನ ಮುಚ್ಚಲ್ಪಟ್ಟಿದ್ದ ಕಣ್ಣುಗಳು ತೆರೆಯಲ್ಪಟ್ಟವು. ಕರ್ತನು ನನ್ನನ್ನು ಸಮಾಧಾನಪಡಿಸಿ, ನನಗೆ ಮಾರ್ಗದರ್ಶನ ನೀಡಿ ನನ್ನ ಜೊತೆಯಲ್ಲಿದ್ದರು. ನನ್ನನ್ನು ಆಶೀರ್ವದಿಸಿ ಯಶಸ್ಸಿನ ಹಾದಿಯಲ್ಲಿ ಕರೆದೊಯ್ದರು. ವಿಫಲವಾದ ವಿಷಯಗಳನ್ನು ಪುನಃ ಬರೆಯಲು ಮತ್ತು ಉತ್ತೀರ್ಣನಾಗಲು ಮತ್ತು ನಂತರ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡಲು ಕರ್ತನು ನನಗೆ ಸಹಾಯ ಮಾಡಿದರು. ಅವರು ಇಂದಿಗೂ ನನ್ನನ್ನು ತನ್ನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.

 

ಇದೇ ರೀತಿ, ತುಂಬಾ ತೊಂದರೆಗೊಳಗಾದ ಪರಿಸ್ಥಿತಿಯಲ್ಲಿ, ಶಿಷ್ಯರ ಕಣ್ಣುಗಳು ಮುಚ್ಚಲ್ಪಟ್ಟಿದ್ದವು. ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಏಳು ಅಥವಾ ಎಂಟು ಮೈಲಿ ದೂರದಲ್ಲಿರುವ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಿದ್ದರು. ಅವರು ಹೋಗುವಾಗ, ಪರಸ್ಪರ ಈ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಹೀಗೆ ಅವರು ಮಾತನಾಡುತ್ತಾ ಹೋಗುವಾಗ, ಯೇಸು ಕೂಡ ಅವರೊಂದಿಗೆ ಹೋದರು. ಆದರೆ ಅವರ ಕಣ್ಣುಗಳು ಅವರನ್ನು ಗುರುತಿಸದ ಹಾಗೆ ಮುಚ್ಚಲ್ಪಟ್ಟಿದ್ದವು. ಹೀಗೆ ಯೇಸುಕ್ರಿಸ್ತನು ಶಿಲುಬೆಯಲ್ಲಿ ಪಾಡು ಅನುಭವಿಸಿ, ಸತ್ತು, ಹೂಣಲ್ಪಟ್ಟು, ಮೂರನೆಯ ದಿನದಲ್ಲಿ ಎದ್ದೇಳುತ್ತಾರೆ ಎಂಬ ವಾಕ್ಯಗಳನ್ನು ನುಡಿದು, ಅವರು ದೂರ ಹೋಗುತ್ತಿರುವಂತೆ ತೋರಿದರು. ಅವರು ಅವರನ್ನು ಬಲವಂತ ಮಾಡಿ ಕೇಳಿಕೊಂಡದ್ದರಿಂದ . ಅವರೊಂದಿಗೆ ಇರಲು ಒಳಗೆ ಹೋದರು. ಅವರೊಂದಿಗೆ ಅವರು ಊಟ ಮಾಡುತ್ತಿದ್ದಾಗ, ಅವರು ರೊಟ್ಟಿಯನ್ನು ತೆಗೆದುಕೊಂಡು, ಅದನ್ನು ಆಶೀರ್ವದಿಸಿ, ಅದನ್ನು ಮುರಿದು ಅವರಿಗೆ ಕೊಟ್ಟಾಗ ಅವರ ಕಣ್ಣುಗಳು ತೆರೆಯಲ್ಪಟ್ಟವು, ಮತ್ತು ಅವರು ಅವರನ್ನು ಗುರುತಿಸಿದರು.

 

ಕ್ರಿಸ್ತನಲ್ಲಿ ಪ್ರಿಯರೇ! ನಮ್ಮ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಿದಾಗ, ನಮಗೆ ಯಾರು ಸಹಾಯ ಮಾಡುತ್ತಾರೆ ಎಂಬುದರ ಬಗ್ಗೆ ನಾವು ಚಿಂತಿತರಾಗುತ್ತೇವೆ. ಆದರೆ ಪುನರುತ್ಥಾನಗೊಂಡ ಯೇಸು ಕ್ರಿಸ್ತನು ನಮ್ಮೊಂದಿಗೆ ಬಲದೊಂದಿಗೆ ಇದ್ದಾರೆ ಎಂಬುದನ್ನು ನಾವು ಗುರುತಿಸಲಾಗದಂತೆ ನಮ್ಮ ಕಣ್ಣುಗಳು ಮುಚ್ಚಲ್ಪಟ್ಟಿವೆ. ದೇವರು ಆ ಮುಚ್ಚಲ್ಪಟ್ಟ ಕಣ್ಣುಗಳನ್ನು ತೆರೆದಾಗ ಮಾತ್ರ ನಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದವರ ಶ್ರೇಷ್ಠತೆಯನ್ನು ನಾವು ತಿಳಿಯುತ್ತೇವೆ. ನಮ್ಮ ಜೀವನದಲ್ಲಿ ಸಂಭವಿಸುವ ವೈಫಲ್ಯಗಳು ಮತ್ತು ಅಸಾಮರ್ಥ್ಯಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಯಾವುದೇ ಸಂದರ್ಭದಲ್ಲೂ ನಮ್ಮನ್ನು ಎಂದಿಗೂ ಕೈಬಿಡದ ಪುನರುತ್ಥಾನಗೊಂಡ ಯೇಸು ಕ್ರಿಸ್ತನು ನಮ್ಮೊಂದಿಗಿದ್ದಾರೆ ಎಂಬುದನ್ನು ನಾವು ಮರೆಯಲೇ ಬಾರದು. ಯಾವಾಗೆಲ್ಲಾ ನಮ್ಮ ಮುಚ್ಚಲ್ಪಟ್ಪ ಕಣ್ಣುಗಳು ತೆರೆಯಲ್ಪಡುತ್ತವೋ, ಆಗೆಲ್ಲಾ ಯೇಸುವಿನ ಶಕ್ತಿಯನ್ನೂ ಮತ್ತು ಆತನು ನಮ್ಮೊಂದಿಗೆ ಇದ್ದಾರೆ ಎಂಬುದನ್ನೂ ಅರಿತುಕೊಳ್ಳಬಹುದು. ವಿಜಯದ ಏಣಿಯ ಕಡೆಗೆ ನೇರವಾಗಿ ನಮ್ಮನ್ನು ತಿರುಗಿಸಲು, ನಡೆಸಲು ನಮ್ಮ ಕರ್ತನಾದ ಯೇಸುಕ್ರಿಸ್ತನಿಂದ ಮಾತ್ರವೇ ಸಾಧ್ಯ ಎಂಬುದನ್ನು ಅರಿತು ನಿಮ್ಮ ಜೀವನವನ್ನು ಅವರಿಗೆ ಅರ್ಪಿಸಿ ಆಶೀರ್ವಾದಗಳನ್ನು ಪಡೆದುಕೊಳ್ಳಿರಿ!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಯೌವನಸ್ಥರನ್ನು ಕರೆತರುವ ಚಾಲಕರ ಜ್ಞಾನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş