Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.05.2021
Share:

By Village Missionary Movement

Saturday, 29-May-2021

ಧೈನಂದಿನ ಧ್ಯಾನ(Kannada) – 29.05.2021

ಒಂದು ಫಲವೂ ಇಲ್ಲ

"...ಮೂರು ವರುಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ" - ಲೂಕ 13:7

90 - ರಲ್ಲಿದ್ದ ವಿದ್ಯಾಭ್ಯಾಸದ ವಿಧಾನವು ವಿದ್ಯಾರ್ಥಿಗಳ ಮನಸ್ಥಿತಿಯೂ ಈಗ ನೆನಪಾಗುತ್ತಿದೆ. ವರ್ಷಪೂರ್ತಿ ಓದಿದ ವಿದ್ಯೆಗೆ ಉತ್ತೀರ್ಣವನ್ನು ಕೊಡುತ್ತಿದ್ದರು. ಅದರಲ್ಲೂ ನೋಡಿ ಒಂದೊಂದು ವಿಷಯಕ್ಕೂ 35 ಅಂಕಗಳನ್ನು ತೆಗೆದುಕೊಳ್ಳಲೇ ಬೇಕಿತ್ತು. ಇಲ್ಲದೇ ಹೋದರೆ ನಾವು ಓದಿದ ಅದೇ ತರಗತಿಯಲ್ಲಿ ಅದೇ ಟೀಚರ್ ಮುಂದೆ ಮತ್ತೆ ಒಂದು ವರ್ಷ ಪೂರ್ತಿ ಓದಬೇಕಿತ್ತು. ಅದೊಂದು ಕಠಿಣವಾದ ಕಾಲವಾಗಿತ್ತು. 35 ಅಂಕಗಳನ್ನು ತೆಗೆದುಕೊಂಡು  ವರ್ಷದ ಕೊನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಹೋದರೆ, ಎರಡು ಅಥವಾ ಮೂರು ವರ್ಷಗಳು ಎಂದು ಅದೇ ತರಗತಿಯಲ್ಲಿರುವ ಪರಿಸ್ಥಿತಿ ಮುಂದುವರೆಯುತ್ತಿತ್ತು, ಜೊತೆಯಲ್ಲಿರುವ ಸಹ ವಿದ್ಯಾರ್ಥಿಗಳು ಫೈಲ್ ಆದ ವಿದ್ಯಾರ್ಥಿಗಳೊಂದಿಗೆ ಸೇರಲು ಬಿಡುತ್ತಿರಲಿಲ್ಲ. ಹಾಗೆ ಅವರೊಂದಿಗೆ ಸೇರಿದರೆ ಅವರೂ ಕೆಟ್ಟು ಹೋಗುತ್ತಾರೆ ಎಂದು!  35 ಅಂಕಗಳು ತೆಗೆದುಕೊಳ್ಳದೇ ಹೋದರೆ ಮನೆಯಲ್ಲೂ ಉತ್ತರ ಹೇಳಲು ಆಗುತ್ತಿರಲಿಲ್ಲ. ಎರಡು-ಮೂರು ವರ್ಷ ಒಂದೇ ತರಗತಿಯಲ್ಲಿ ಮತ್ತೆ ಮತ್ತೆ ಓದುವುದು ಬಹಳ ದುಃಖಕರವಾದ ವಿಷಯ.

ಸತ್ಯವೇದದಲ್ಲಿ ಲೂಕ 13: 6-9 ರ ವರೆಗೂ ಇರುವ ವಾಕ್ಯಗಳಲ್ಲಿ ಯೇಸು ಒಂದು ಸಾಮ್ಯವನ್ನು ಹೇಳಿದರು: ಒಬ್ಬ ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಟ್ಟಿದ್ದನು. ಅವನು ಒಂದೊಂದು ವರ್ಷವೂ ಅದರಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು. ಆದರೆ ಒಂದೂ ಕಾಣಲಿಲ್ಲ. ಹಾಗೆ ಕ್ರಮವಾಗಿ ಮೂರು ವರ್ಷವಾದರೂ ಒಂದು ಹಣ್ಣೂ ಕಾಣಲಿಲ್ಲ. ಎಷ್ಟೊಂದು ದುಃಖಕರ! ಬೆಳೆದು, ಬೆಳೆದು ಒಂದು ಹಣ್ಣನ್ನೂ ಕೊಡದೆ ಹೋದರೆ ಹೇಗಿರುತ್ತದೆ? ಅಷ್ಟು ಮಾತ್ರವಲ್ಲ, ಇದು ಆ ನೆಲವನ್ನೂ ಕೆಡಿಸುತ್ತಿದೆ. ಇದನ್ನು ಕಡಿದುಹಾಕು ಎಂದು ಆ ತೋಟದ ಯಜಮಾನನು ಹೇಳಿದಾಗ ಆ ತೋಟದ ಕೆಲಸದವನು ಆ ಮರಕ್ಕಾಗಿ ಬೇಡಿಕೊಂಡನು. ಈ ಸಾಮ್ಯದ ಮುಕ್ತಾಯವು  ಬರೆಯಲ್ಪಟ್ಟಿಲ್ಲ.

ಇದನ್ನು ಓದುತ್ತಿರುವ ಸ್ನೇಹಿತರೇ! ದೇವರು ನಮಗೆ ಇಂದು ಅನೇಕ ಸೌಕರ್ಯಗಳನ್ನು, ಒಳ್ಳೆಯ ಆತ್ಮೀಕ ಪರಿಸ್ಥಿತಿಗಳನ್ನು ಹೀಗೆ ಅನೇಕ ಅನುಕೂಲಗಳನ್ನು ಕೊಟ್ಟಿದ್ದಾರೆ. ಆದರೆ ನಾವು ಇವೆಲ್ಲವುಗಳನ್ನು ಅನುಭವಿಸಿ ಬಿಟ್ಟು, ದೇವರು ಎದುರು ನೋಡುವ ಯಾವ ಫಲವನ್ನೂ ಕೊಡದೆ  ಜೀವಿಸುವುದೇ ಆದರೆ, ಎಷ್ಟೊಂದು ವೇದನೆ! ನಾವು ನಮಗೆ ಅಗತ್ಯವಾದವುಗಳನ್ನು ದೇವರ ಬಳಿಯಿಂದ ಹೊಂದಿಕೊಂಡರೂ, ಫಲಕೊಡದೆ ವರ್ಷಗಳನ್ನು ಕಳೆಯುತ್ತಿದ್ದರೆ ನಮ್ಮನ್ನು ನಾವೇ ಸ್ವಲ್ಪ ಚಿಂತಿಸಿ ನೋಡೋಣ! ದೇವರು ನಮ್ಮನ್ನು ಇಟ್ಟಿರುವ, ಕರೆದುಕೊಂಡು ಹೋಗುವ ಸ್ಥಳಗಳಲ್ಲಿ ನನ್ನಿಂದ ಸಾಧ್ಯವಾದ ಮಟ್ಟಿಗೆ ದೇವರಿಗಾಗಿ ಏನಾದರೂ ಮಾಡೋಣ! ಆ ಸಾಮ್ಯಕ್ಕೆ ಮುಕ್ತಾಯವಿಲ್ಲ. ಅದರಂತೆ ನಮ್ಮ ಜೀವನವೂ ಇನ್ನೂ ಮುಕ್ತಾಯಗೊಳ್ಳಲಿಲ್ಲ. ಆದ್ದರಿಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳೋಣ! ಫಲಗಳಿಂದ ತುಂಬಿದ ಜೀವನವನ್ನು ಜೀವಿಸಿ ಯಜಮಾನನನ್ನು ಸಂತೋಷಪಡಿಸೋಣ.
-    T. ಶಂಕರ್ ರಾಜ್

ಪ್ರಾರ್ಥನಾ ಅಂಶ:-
1 ಲಕ್ಷ ಗ್ರಾಮಗಳಿಗೆ 2000 ರೂಪಾಯಿಗಳನ್ನು ಕೊಟ್ಟು ದತ್ತು ತೆಗೆದುಕೊಳ್ಳುವ 1ಲಕ್ಷ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet