Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.08.2025
Share:

By Village Missionary Movement

Thursday, 07-Aug-2025

ಧೈನಂದಿನ ಧ್ಯಾನ(Kannada) – 07.08.2025

 

ಬುದ್ಧಿಯುಳ್ಳ ಕ್ರೈಸ್ತರು

 

"...ನೀವು ನನ್ನನ್ನು ಸ್ವಾಮೀ ಸ್ವಾಮೀ ಅಂತ ಕರೆದು ನಾನು ಹೇಳುವದನ್ನು ನಡಿಸದೆ ಇರುವದೇಕೆ?" - ಲೂಕ 6:46

 

ಯೋಹಾನನ ಸುವಾರ್ತೆಯಲ್ಲಿ, ಯೇಸು, "ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವದಿಲ್ಲ ಎಂದು ಹೇಳಿಬಿಟ್ಟರು. ನಾವು ಯಾರನ್ನಾದರೂ ಪ್ರೀತಿಸಿದರೆ, ಅವರು ಹೇಳಿದಂತೆ ಮಾಡುತ್ತೇವೆ. ನಾವು ಯೇಸುವನ್ನು ಪ್ರೀತಿಸಿದರೆ, ಅವರು ಹೇಳಿದಂತೆ ಮಾಡುತ್ತೇವೆ. ನಾವು ದೇವರ ವಾಕ್ಯಗಳನ್ನು ಅನುಸರಿಸಿದರೆ, ನಾವು ದೇವರ ಚಿತ್ತದ ಪ್ರಕಾರ ಜೀವಿಸುತ್ತೇವೆ ಮತ್ತು ದೇವರಿಗೆ ಇಷ್ಟವಾದದ್ದನ್ನು ಮಾಡುತ್ತೇವೆ. ಆದ್ದರಿಂದ, ನಾವು ಪರಿಶುದ್ಧತೆಯ ಮೇಲೆ ಪರಿಶುದ್ಧತೆಯನ್ನು ಪಡೆಯುತ್ತೇವೆ. ನಾವು ಪರಿಶುದ್ಧರಾಗುವುದೇ ದೇವರ ಚಿತ್ತವಾಗಿದೆ. ಪರಿಶುದ್ಧತೆ ಎಂಬುದು ನಮ್ಮ ಜೀವನದುದ್ದಕ್ಕೂ ಪ್ರತಿದಿನ ಶ್ರಮಿಸಬೇಕಾದ ಕಾರ್ಯವಾಗಿದೆ. ಅದಕ್ಕಾಗಿಯೇ ಸತ್ಯವೇದವು, "ಪರಿಶುದ್ಧನು ಇನ್ನೂ ಪರಿಶುದ್ಧನಾಗಲಿ" ಎಂದು ಹೇಳುತ್ತದೆ.

 

ನಾವು ದೇವರ ಚಿತ್ತವನ್ನು ಮಾಡದಿದ್ದರೆ, ನಾವು ಪರಲೋಕ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಸತ್ಯವೇದವು ನಮಗೆ ಎಚ್ಚರಿಸುತ್ತಿದೆ. ಆದ್ದರಿಂದ, ನಾಮಧೇಯ ಕ್ರೈಸ್ತರಾಗಿದ್ದು ಯೇಸುವೇ, ಕರ್ತನೇ! ದೇವರೇ! ಎಂದೆಲ್ಲಾ ಕರೆಯುವುದು ನಿಷ್ಪ್ರಯೋಜಕ. ವಾಕ್ಯಗಳಿಗೆ ವಿಧೇಯರಾಗಿ ದೇವರ ಚಿತ್ತ ಏನೆಂದು ತಿಳಿದುಕೊಂಡು ನಮ್ಮ ಜೀವನದಲ್ಲಿ ಅದನ್ನು ಮಾಡುವುದು ಅತ್ಯಂತ ಮುಖ್ಯವಾಗಿದೆ.

 

ಒಂದು ದೃಷ್ಟಾಂತದಲ್ಲಿ, ಯೇಸು ಕ್ರಿಸ್ತನು ವಾಕ್ಯಗಳಿಗೆ ವಿಧೇಯರಾಗಿ ಬಂಡೆಯ ಅಡಿಪಾಯದ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತ ವ್ಯಕ್ತಿಗೆ ಹೋಲಿಸುತ್ತಾರೆ. ಬಂಡೆಯ ಮೇಲೆ ಕಟ್ಟಲಾದ ಮನೆಯು ಬಲವಾದ ಪ್ರವಾಹ ಬಂದು ಅದರ ಮೇಲೆ ಬೀಸಿದರೂ ನಾಶವಾಗುವುದಿಲ್ಲ. ಲೋಕದ ಯಾವುದೇ ಶೋಧನೆ, ಸಮಸ್ಯೆ ಅಥವಾ ಹೋರಾಟವು ಬಂದರೂ ವಾಕ್ಯಗಳ ಪ್ರಕಾರ ಬದುಕುವವರನ್ನು ದೇವರಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ. ದೇವರ ವಾಕ್ಯಗಳ ಪ್ರಕಾರ ಬದುಕದವರನ್ನು ಯೇಸು, ಮರಳಿನ ಅಡಿಪಾಯದ ಮೇಲೆ ತನ್ನ ಮನೆಯನ್ನು ಕಟ್ಟಿದ ಮೂರ್ಖ ಮನುಷ್ಯನಿಗೆ ಹೋಲಿಸುತ್ತಾರೆ. ಶೋಧನೆಗಳು, ಸಮಸ್ಯೆಗಳು, ಮತ್ತು ಹೋರಾಟಗಳು ಬರುವ ಕಾಲದಲ್ಲಿ ಅವರು ಸುಲಭವಾಗಿ ದೇವರಿಂದ ದೂರ ಸರಿಯುತ್ತಾರೆ. ಅವರು ಪರಲೋಕ ರಾಜ್ಯವನ್ನು ಸ್ವತಂತ್ರಿಸಿಕೊಳ್ಳುವುದಿಲ್ಲ.

 

ಪ್ರಿಯರೇ, ಯೇಸುವನ್ನು ತಿಳಿದಿದ್ದೇವೆಂದು ಹೇಳಿಕೊಂಡು ಆತನ ಆಜ್ಞೆಗಳನ್ನು ಪಾಲಿಸದವರು ಸುಳ್ಳುಗಾರರು ಮತ್ತು ಸತ್ಯವು ಅವರಲ್ಲಿಲ್ಲ. ಆತನಲ್ಲಿ ನೆಲೆಗೊಂಡಿರುವವರು ಆತನು ನಡೆದಂತೆ ನಡೆಯಬೇಕೆಂದು ಸತ್ಯವೇದವು ಇಂದು ನಮಗೆ ಎಚ್ಚರಿಸುತ್ತಿದೆ. ಇದನ್ನು ಓದುತ್ತಿರುವ ನಿಮ್ಮಲ್ಲಿ ಯಾರಾದರೂ ವಾಕ್ಯಕ್ಕೆ ನಡುಗುವವರಾಗಿ, ವಾಕ್ಯಕ್ಕೆ ಪ್ರಾಮುಖ್ಯತೆಯನ್ನು ನೀಡದೇ ಇರುವುದಾದರೆ, ಇಂದೇ ನಿಮ್ಮ ಮಾರ್ಗದ ಬಗ್ಗೆ ಯೋಚಿಸಿ. ಪರಿಶುದ್ಧಾತ್ಮನು ವಾಕ್ಯಗಳ ಪ್ರಕಾರ ನಡೆಯಲು ಮತ್ತು ದೇವರ ಆಶೀರ್ವಾದಗಳನ್ನು ಸ್ವತಂತ್ರಿಸಿಕೊಳ್ಳಲು ನಿಮಗೆ ಕೃಪೆ ನೀಡಲಿ!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಸಂದೇಶವನ್ನು ನೀಡುವ ದೇವಸೇವಕರುಗಳನ್ನು ಗಾಳಿಗಳಾಗಿಯೂ ಮತ್ತು ಬೆಂಕಿಯ ಜ್ವಾಲೆಗಳಾಗಿಯೂ ದೇವರು ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al