Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.08.2025
Share:

By Village Missionary Movement

Wednesday, 06-Aug-2025

ಧೈನಂದಿನ ಧ್ಯಾನ(Kannada) – 06.08.2025

 

ಜೀವನದ ಅರ್ಥ

 

"ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು;..." - ಯೆರೆಮಿಯ 1:5

 

ಕಾಡಿನಲ್ಲಿ, ಪ್ರಾಣಿಗಳು ಮತ್ತು ಪಕ್ಷಿಗಳು ಸಮ್ಮೇಳನವನ್ನು ನಡೆಸಿದವು. "ಜೀವನದ ಅರ್ಥವೇನು?" ಎಂಬುದು ಚರ್ಚೆಯ ವಿಷಯವಾಗಿತ್ತು. ಜೀವನವೆಂದರೆ ಹಾಡುವುದು ಎಂದು ಕೋಗಿಲೆ ಹೇಳಿತು. ಜೀವನವೆಂದರೆ ನೃತ್ಯ ಮಾಡುವುದು ಎಂದು ನವಿಲು ಹೇಳಿತು. ಜೀವನವೆಂದರೆ ಓಡುವುದು ಎಂದು ಜಿಂಕೆ ಹೇಳಿತು. ಜೀವನವೆಂದರೆ ಹುಡುಕುವುದು ಎಂದು ಜೇನುನೊಣ ಹೇಳಿತು. ಜೀವನವೆಂದರೆ ಕೂಡುವುದೇ ಎಂದು ಕಾಗೆ ಹೇಳಿತು. ಜೀವನವೆಂದರೆ ಸಂಗ್ರಹಿಸುವುದು ಎಂದು ಇರುವೆ ಹೇಳಿತು. ಜೀವನವೆಂದರೆ ಮೋಸ ಮಾಡುವುದು ಎಂದು ನರಿ ಹೇಳಿತು. ಹೀಗೆ, ಪ್ರತಿಯೊಬ್ಬರೂ ಒಂದೊಂದು ಮಾತನ್ನು ಹೇಳಿದರು, ಮತ್ತು ಚರ್ಚೆ ಮುಂದುವರೆಯಿತು. ಅಂತಿಮವಾಗಿ ಎಲ್ಲರು ಒಟ್ಟಾಗಿ ದೇವರ ಬಳಿ ಕೇಳೋಣ ಬನ್ನಿ, ಹೋಗೋಣ..." ಎಂದು ಹೇಳಿಕೊಂಡು ಇಂದಿನವರೆಗೂ ನಡೆಯುತ್ತಲೇ ಇವೆ.

 

ಅನೇಕ ಜನರು ಜೀವನದ ಅರ್ಥವನ್ನು ತಿಳಿಯದೆ ಬದುಕುತ್ತಿದ್ದಾರೆ. ಅವರಿಗೆ ಅರ್ಥವನ್ನು ಯಾರು ಹೇಳುತ್ತಾರೆ ಮತ್ತು ಅದನ್ನು ಸ್ಪಷ್ಟಪಡಿಸುತ್ತಾರೆ? ಅದು ನಮ್ಮ ಮೇಲೆ ಬಿದ್ದ ಕರ್ತವ್ಯ. ಅದಕ್ಕಾಗಿಯೇ ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನೂ ತಾಯಿಯ ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆಯೇ ತಿಳಿದುಕೊಂಡರು. ಅನಾರೋಗ್ಯದಿಂದಾಗಿ ಸಾವು ಖಚಿತ ಎಂದು ನಾನು ಭಾವಿಸಿದಾಗ, ಒಬ್ಬ ತಾಯಿ ನನಗೆ ಹೇಳಿದರು, "ಯೇಸು ಕ್ರಿಸ್ತನು ನಿಮ್ಮನ್ನು ಅನಾರೋಗ್ಯದಿಂದ ಸಾಯಲು ಸೃಷ್ಟಿಸಲಿಲ್ಲ, ಆದರೆ ಅನಾರೋಗ್ಯದಿಂದ ಮುಕ್ತರಾಗಿ ಅನೇಕ ವರ್ಷಗಳ ಕಾಲ ಬದುಕುವುದಕ್ಕಾಗಿಯೇ ಸೃಷ್ಟಿಸಿದ್ದಾರೆ ಎಂದರು. ಆಗ ನಾನು ಅರಿತುಕೊಂಡೆ ಜೀವನದ ಅರ್ಥ ಅನಾರೋಗ್ಯದಿಂದ ಸಾಯುವುದಲ್ಲ, ಆದರೆ ಅನಾರೋಗ್ಯದಿಂದ ಮುಕ್ತರಾಗಿ ಬದುಕುವುದು ಎಂದು.

 

ಕೆಲವರು ಪ್ರತಿದಿನ ಅನೇಕ ಕಷ್ಟಗಳು ಮತ್ತು ನಷ್ಟಗಳಲ್ಲಿ ಬದುಕುತ್ತಿದ್ದಾರೆ. ಅವರೆಲ್ಲರೂ ಹೇಳುವುದು ನನ್ನ ಜೀವನವು ಕಷ್ಟಗಳಿಂದ ತುಂಬಿದೆ ಎಂದು. ಇಲ್ಲ, ನನ್ನ ಪ್ರೀತಿಯ ಜನರೇ, ನಮ್ಮ ಕಷ್ಟಗಳಿಂದ ಮುಕ್ತರಾಗಿ ಸಂತೋಷದಿಂದ ಬದುಕಲು ಯೇಸು ಕ್ರಿಸ್ತನ ಬಳಿಗೆ ಬನ್ನಿ. ಅನಾರೋಗ್ಯ ಪೀಡಿತರಿಗೆ ಮತ್ತು ಸಾಲದ ಹೊರೆಯಿಂದ ಕಣ್ಣೀರು ಸುರಿಸುತ್ತಿರುವವರಿಗೆ, ಕರ್ತನು "ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ನೀಡುತ್ತೇನೆ" ಎಂದು ಹೇಳುತ್ತಿದ್ದಾರೆ. ನಮ್ಮ ಜೀವನವು ಹೇಗೆ ಬದಲಾಗಿದೆ ಎಂದು ನಾವು ಇತರರಿಗೆ ಹೇಳಿದಾಗ, ಅವರು ತಮ್ಮ ಜೀವನದ ಅರ್ಥವನ್ನು ಕರ್ತನೂ ರಕ್ಷಕನೂ ಆದ ಯೇಸುವಿನ ಬಳಿ ಕೇಳುತ್ತಾರೆ. ಖಂಡಿತವಾಗಿಯೂ ಮನಮರುಗುವ ನಮ್ಮ ದೇವರು ಅವರ ಜೀವನವನ್ನು ಅರ್ಥಪೂರ್ಣಗೊಳಿಸುತ್ತಾರೆ.

 

ಜೀವನದ ಅರ್ಥವನ್ನು ಕಂಡುಕೊಂಡ ನಾವು ಮೌನವಾಗಿರದೇ ಅದನ್ನು ಮತ್ತೊಬ್ಬರಿಗೆ ಹೇಳೋಣ. ತಾಯಿಯ ಗರ್ಭದಲ್ಲಿ ನಮ್ಮನ್ನು ತಿಳಿದುಕೊಂಡದ್ದಕ್ಕೆ ಕಾರಣವೇ ಜೀವನದ ಅರ್ಥದ ಬಗ್ಗೆ ವಿಳಂಬ ಮಾಡದೇ ಇತರರಿಗೆ ಹೇಳುವುದಕ್ಕಾಗಿಯೇ. (2 ಕೊರಿಂಥ 6:2) ರ ಪ್ರಕಾರ "ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ" ಇಂದೇ ಮಾಡಬೇಕು, ನಾಳೆ ನೋಡೋಣ ಎಂದು ಹೇಳದಿರೋಣ. (ಜ್ಞಾನೋಕ್ತಿ 27:1) ರಲ್ಲಿ "...ಒಂದು ದಿನದೊಳಗೇ ಏನಾಗುವದೋ ನಿನಗೆ ತಿಳಿಯದು" ನಾಳೆ ಏನು ನಡೆಯುತ್ತದೆ ಎಂದೇ ನಮಗೆ ಗೊತ್ತಿಲ್ಲ. ಆದ್ದರಿಂದ, ನಾವು ಕರ್ತನಿಗಾಗಿ ಏನು ಮಾಡಿದರೂ, ಅದನ್ನು ಇಂದೇ ಮಾಡೋಣ. ಕರ್ತನು ನಿಮ್ಮನ್ನು ಆಶೀರ್ವದಿಸಲಿ. 

- Mrs. ಹೆಪ್ಸಿಬಾ ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ಅಬಿನಯ್ಯ ನೃತ್ಯ, ನಾಟಕ ಮತ್ತು ಸಾಕ್ಷಿಗಳ ಮೂಲಕ ಅನೇಕ ಯುವ ಹೃದಯಗಳು ಸ್ಪರ್ಶಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino