Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.08.2025
Share:

By Village Missionary Movement

Tuesday, 05-Aug-2025

ಧೈನಂದಿನ ಧ್ಯಾನ(Kannada) – 05.08.2025

 

ನಮ್ಮ ಗುರಿ

 

"ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ" - ಫಿಲಿಪ್ಪಿ 3:14

 

ಒಬ್ಬ ರಾಜನು ತನ್ನ ಮಗಳಿಗೆ ಮದುವೆ ಮಾಡಲು ವ್ಯವಸ್ಥೆ ಮಾಡಿ ಒಂದು ಘೋಷಣೆ ಮಾಡಿದರು. ರಾಜಕುಮಾರಿಯನ್ನು ಮದುವೆಯಾಗಲು ಬಯಸುವವರು ನನ್ನ ಮಗಳನ್ನು ಓಟಪಂದ್ಯದಲ್ಲಿ ಸೋಲಿಸಬೇಕು. ಅನೇಕ ಜನರು ರಾಜಕುಮಾರಿಯಲ್ಲಿ ಆಸಕ್ತಿ ಹೊಂದಿದ್ದರು, ಆದ್ದರಿಂದ ಅವರು ಓಟಕ್ಕೆ ಪ್ರವೇಶಿಸಿ ಆಯಾಸವಾಗುವವರೆಗೂ ಓಡಿದರು. ಸೋತವರೆಲ್ಲರೂ ಧರ್ಮದೇಟು ತಿಂದು ಹಿಂತಿರುಗಿದರು. ಒಬ್ಬ ರಾಜಕುಮಾರನು ಓಟಪಂದ್ಯದಲ್ಲಿ ಭಾಗವಹಿಸಲು ಮತ್ತು ರಾಜಕುಮಾರಿಯನ್ನು ಮದುವೆಯಾಗಲು ಸಿದ್ಧನಾಗಿದ್ದನು. ಓಟಪಂದ್ಯವು ಪ್ರಾರಂಭವಾಯಿತು. ಅವನು ರಾಜಕುಮಾರಿಯ ಮುಂದೆ ಓಡುತ್ತಿದ್ದನು. ಅವನ ಮುಂದೆ ಒಂದು ಸುಂದರವಾದ ಚಿನ್ನದ ಸೇಬನ್ನು ಎಸೆಯಲಾಯಿತು. ಅವನು ಅದನ್ನು ತೆಗೆದುಕೊಂಡು ಮತ್ತೆ ಓಡಿದನು. ಎರಡನೇ ಬಾರಿ ಚಿನ್ನದ ಸೇಬನ್ನು ಕೆಳಗೆ ಎಸೆದಾಗ. ರಾಜಕುಮಾರನು ಸಹ ಅದನ್ನು ತೆಗೆದುಕೊಂಡು ಮುಂದೆ ಓಡಿದನು. ಅಂತಿಮ ಗೆರೆಯನ್ನು ತಲುಪುವ ಸ್ವಲ್ಪ ದೂರದಲ್ಲಿ, ಕೊನೆಯ ಸೇಬನ್ನು ಎಸೆಯಲಾಯಿತು. ಚಿನ್ನದ ಹಣ್ಣಿಗೆ ಆಸೆಪಟ್ಟು ಗುರಿಯನ್ನು ಕಳೆದುಕೊಂಡನು. ರಾಜಕುಮಾರಿಯನ್ನು ಮದುವೆಯಾಗುವ ಅವಕಾಶವನ್ನೂ ಕಳೆದುಕೊಂಡನು.

 

ಪ್ರೀತಿಯ ದೇವರ ಮಕ್ಕಳೇ! ಇಂದು ನಾವು ಹೇಗೆ ಬದುಕುತ್ತಿದ್ದೇವೆ? ಲೋಕದ ಆಸೆ ಆಕಾಂಕ್ಷೆಗಳನ್ನು ಕಂಡು ತಮ್ಮ ಗುರಿಯನ್ನು ಕಳೆದುಕೊಂಡ ಅನೇಕರಿದ್ದಾರೆ. ದೇವರು ನಮಗೆ ನಿಗದಿಪಡಿಸಿದ ಗುರಿಯನ್ನು ತಲುಪದಂತೆ ತಡೆಯಲು ಸೈತಾನನು ವಿವಿಧ ತಂತ್ರಗಳನ್ನು ಬಳಸುತ್ತಾನೆ. ನಾವು ಸ್ವಸ್ಥಚಿತ್ತರಾಗಿರಬೇಕು. ರಾಜಕುಮಾರಿಗೆ ಗೊತ್ತು ಅನೇಕ ಜನರು ಸೋತುಹೋಗುತ್ತಾರೆ ಮತ್ತು ಧರ್ಮದ ಹೊಡೆತಗಳನ್ನು ತಿನ್ನುತ್ತಾರೆಂದು. ಮೊದಲ ಚಿನ್ನದ ಹಣ್ಣನ್ನು ನೋಡಿದಾಗಲೇ ಯಾವುದೋ ಪಿತೂರಿ ಪ್ರಾರಂಭವಾಗುತ್ತಿದೆ ಎಂದು ಭಾವಿಸಿರಬೇಕು. ಆದರೆ ಅವನೋ ಅದನ್ನು ತೆಗೆದುಕೊಂಡು ಮುಂದೆ ಸಾಗಿದನು. ಎರಡನೇ ಚಿನ್ನದ ಹಣ್ಣನ್ನು ಅವನ ಮುಂದೆ ಇಟ್ಟಾಗ, ಅದು ಖಂಡಿತವಾಗಿಯೂ ಪಿತೂರಿ ಎಂದು ಭಾವಿಸಿ ಅವನು ಆ ಹಣ್ಣನ್ನು ತೆಗೆದುಕೊಳ್ಳದೆ ಓಡಿಹೋಗಿರಬೇಕು. ಆದರೆ ಅವನೋ ಮೂರನೇ ಹಣ್ಣನ್ನು ತೆಗೆದುಕೊಳ್ಳಲು ಬಾಗಿದಾಗ, ರಾಜಕುಮಾರಿ ಗುರಿಯನ್ನು ಮುಟ್ಟಿಬಿಟ್ಟಳು. ರಾಜಕುಮಾರನು ಸೋತುಹೋದನು.

 

ಪ್ರೀತಿಯ ಸಹೋದರ! ಪ್ರೀತಿಯ ಸಹೋದರಿ! ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಸಂಸೋನನ ಬಗ್ಗೆ ಚೆನ್ನಾಗಿ ಗೊತ್ತು. ಅವನ ಶಕ್ತಿ ಎಲ್ಲಿದೆ ಎಂದು ಕಂಡುಹಿಡಿಯಲು ಫಿಲಿಷ್ಟಿಯರು ದೆಲೀಲಾಳನ್ನು ಬಳಸಿಕೊಂಡರು. ದೆಲೀಲಾ ಅವನನ್ನು ಮೂರು ಬಾರಿ ನಿನ್ನ ಶಕ್ತಿ ಎಲ್ಲಿದೆ ಎಂದು ಕೇಳಿದಳು. ಸಂಸೋನನು ಸ್ವಲ್ಪ ಅದನ್ನು ಗಮನಿಸಿ ಎಚ್ಚತ್ತುಕೊಂಡು ನನ್ನ ವಿರುದ್ಧ ಏನೋ ಪಿತೂರಿ ನಡೆಯುತ್ತಿದೆ ಎಂದು ಅರಿತು ಅವಳನ್ನು ಬಿಟ್ಟು ಹೋಗಿರಬೇಕು. ಅಥವಾ, ಬಾಯಿ ತೆರೆಯದೆ ಇದ್ದಿರಬೇಕು. ಆದರೆ ಅವನು ತನ್ನ ಶಕ್ತಿಯ ಬಗ್ಗೆ ಸತ್ಯವನ್ನು ಹೇಳಿದ ಕಾರಣ ಅವನನ್ನು ಸೋಲಿಸಲಾಯಿತು ಮತ್ತು ಅವನ ಕಣ್ಣುಗಳನ್ನು ಕಿತ್ತುಹಾಕಲಾಯಿತು. ಒಂದು ಬಾರಿ ಅಥವಾ ಎರಡು ಬಾರಿ ನಮ್ಮ ಬಳಿ ವಿಷಯವನ್ನು ಕೇಳುತ್ತಿದ್ದರೆ ನಾವು ಎಚ್ಚತ್ತುಕೊಳ್ಳಬೇಕು. ಮೀಕ 7:5 ರಲ್ಲಿ "ಮಿತ್ರನನ್ನು ನಂಬಬೇಡ; ಆಪ್ತನಲ್ಲಿ ಭರವಸವಿಡದಿರು; ನಿನ್ನ ಎದೆಯ ಮೇಲೆ ಒರಗುವವಳಿಗೂ ನಿನ್ನ ಬಾಯಬಾಗಲನ್ನು ಭದ್ರವಾಗಿಟ್ಟುಕೋ" ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತಿದೆ. ನೀವು ಪರಲೋಕಕ್ಕೆ ಹೋಗಬೇಕಾದವರು. ನಿಮ್ಮ ಗುರಿಯನ್ನು ಕಳೆದುಕೊಳ್ಳಬೇಡಿ. ಎಚ್ಚರಿಕೆ! ಆಮೆನ್, ಹಲ್ಲೇಲೂಯಾ!

- Pr. S. A. ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಶಿಬಿರದಂದು ಗಾಯಕವೃಂದವನ್ನು ದೇವರು ಅಭಿಷೇಕಿಸಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş