Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.08.2025 (Kids Special)
Share:

By Village Missionary Movement

Sunday, 03-Aug-2025

ಧೈನಂದಿನ ಧ್ಯಾನ(Kannada) – 03.08.2025 (Kids Special)

 

ತಕ್ಕ ಸಮಯದಲ್ಲಿ

 

"...ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು" - 1 ಪೇತ್ರ 5:6

 

ಪ್ರತಿಯೊಂದು ಊರಿನಲ್ಲೂ ಏನೋ ಒಂದು ಪ್ರಸಿದ್ಧವಾಗಿರುತ್ತದೆ. ನಾನು ಇರುವ ಮಧುರೈನಲ್ಲಿ, ಜಿಗರ್ತಂಡ, ವಿರುಧುನಗರದಲ್ಲಿ ಪೊರೋಟ, ಸೇಲಂನಲ್ಲಿ ಮಾವಿನಹಣ್ಣು ನೀವು ಇರುವ ಊರಿನಲ್ಲಿ ಏನು famous ಹೇಳಿ ಪುಟಾಣಿಗಳೇ ನೋಡೋಣ! ಅಬ್ಬಬ್ಬಾ... ಕೇಳೋಕೆ ತುಂಬಾ ಸಂತೋಷವಾಗಿದೆಯಲ್ಲಾ... ಹೀಗೆ ಕೇಳಿದ್ರೆ ನೀವು ಹೇಳಿಕೊಂಡೇ ಹೋಗ್ತೀರ. ಇದೇ ರೀತಿ, ನಾರ್ವೆ ದೇಶದಲ್ಲಿರುವ Maple ಮರವು ತುಂಬಾ ವಿಶೇಷವಾಗಿರುತ್ತದಂತೆ. ಇದರ ಎಲೆಗಳು ಕೆಂಪು ಬಣ್ಣದಲ್ಲಿರುತ್ತವೆ. ಇದು 40 ವರ್ಷಗಳ ನಂತರವೇ ಹೂವರಳಿ ಫಲ ನೀಡುತ್ತದಂತೆ. ನೀವು ಈ ಹಣ್ಣನ್ನು ತಿನ್ನಲು ಬಯಸಿದರೆ, ನೀವು ತಾಳ್ಮೆಯಿಂದಿರಬೇಕು. ಇದರ ಬೆಲೆಯೂ ಹೆಚ್ಚು. ನಂತರ ಪೀಚ್ ಮರವು ಯುರೋಪಿನಲ್ಲಿ ವಿಶೇಷವಾಗಿದೆ. ಇದನ್ನೂ ಸಹ 20,000 ಡಾಲರ್‌ ಕೊಟ್ಟು ತೆಗೆದುಕೊಳ್ಳಬೇಕಂತೆ. ಈಗ ನೀವು ನಮಗೆ ಯಾವ ಕಥೆಯನ್ನಾದ್ರೂ ಹೇಳ್ತಿರ ಎಂದು ತಾನೇ ಯೋಚಿಸುತ್ತಿದ್ದೀರ. ಬನ್ನಿ, ಪುಟಾಣಿಗಳೇ!

 

ಒಬ್ಬರು Uncle ನ ತೋಟವನ್ನು ಹೋಗಿ ನೋಡಿ ಬರೋಣ. ನ್ಯೂಯಾರ್ಕ್‌ನಲ್ಲಿರುವ ಆ ತೋಟವು ತುಂಬಾ ಸುಂದರವಾಗಿತ್ತು. ಪೀಚ್ ಮರಗಳು, ಮೇಪಲ್‌ಗಳು ಮತ್ತು ವಿವಿಧ ಬಣ್ಣಗಳ ಇತರ ಮರಗಳು ಇದ್ದವು... ಓಹ್... ನೀವು ತೋಟದಲ್ಲಿ ಬಹಳಷ್ಟು ಸಸ್ಯಗಳನ್ನು ಬೆಳೆಸುತ್ತೀರಾ? ಸೂಪರ್, ಸೂಪರ್ ಆ Uncle ನ ತೋಟವನ್ನು ನೋಡಲು ಒಬ್ಬ ವ್ಯಕ್ತಿ ಬಂದ್ರು. ಎಲ್ಲಾ ಮರಗಳು ನೋಡಲು ಸುಂದರವಾಗಿದ್ದವು. ಅವುಗಳಲ್ಲಿ ಯಾವುದೇ ಕಾಯಿಗಳು ಅಥವಾ ಹಣ್ಣುಗಳು ಇರಲಿಲ್ಲ, ಆದರೆ ಬೆಲೆ ತುಂಬಾ ಹೆಚ್ಚಿತ್ತು. ಆ ತೋಟವನ್ನು ನೋಡಲು ಬಂದ ವ್ಯಕ್ತಿ, ನನ್ನ ತೋಟದಲ್ಲಿ ನಾನು ಬಾಳೆ ಮರ ಇಟ್ಟಿದ್ದೇನೆ. ಅದು ಬೆಳೆದು ಬೇಗನೆ ಫಲ ನೀಡುತ್ತದೆ. ಅದರ ರುಚಿ ಮತ್ತು ಪ್ರಯೋಜನಗಳು ಅದ್ಭುತವಾಗಿದೆ. ಆದರೆ ಬೆಲೆ ಅಗ್ಗವಾಗಿದೆ, ಆದ್ದರಿಂದ ನಾವು ಅದನ್ನು ತಿಂದು ಸಂತೋಷವಾಗಿರುತ್ತೇವೆ ಎಂದರು.

 

ನೀವು ಏನಪ್ಪಾ ಅಂದ್ರೆ ಇಷ್ಟು ವರ್ಷಗಳಿಂದ ಫಲ ನೀಡದ ಮರಗಳನ್ನು ಇಟ್ಟುಕೊಂಡಿದ್ದೀರಲ್ಲಾ ಎಂದು ಕೇಳಿದರು. ಆಗ ಆ Uncle ಹೇಳಿದ್ರು, ದೇವರು ಪ್ರತಿಯೊಂದು ಮರಕ್ಕೂ ಒಂದು ಸಮಯವನ್ನು ಇಟ್ಟಿದ್ದಾರೆ. ಆ ಸಮಯದಲ್ಲಿ ಮಾತ್ರ ಅದು ಫಲ ನೀಡುತ್ತದೆ. ಅಲ್ಲಿಯವರೆಗೆ, ನಾವು ತಾಳ್ಮೆಯಿಂದ ಕಾಯಬೇಕು. ಇದನ್ನು ಕೇಳಿದ ವ್ಯಕ್ತಿ, ದೇವರು ಹೇಗೆ ಸೃಷ್ಟಿಸಿದರೂ ಅದು ಸುಂದರವಾಗಿಯೇ ಇರುತ್ತದೆ. ಮೊದಲು ನಮಗೇ ತಾಳ್ಮೆ ಇರಬೇಕು ಎಂದು ದೇವರ ಸೃಷ್ಟಿಗಳ ಬಗ್ಗೆ ಯೋಚಿಸಿ ಸ್ತುತಿಸುತ್ತಾ ಮನೆಗೆ ಹೋದರು.

 

ಏನು ಪುಟ್ಟ ಮುದ್ದು ಪುಟಾಣಿಗಳೇ! ನೀವು ಏನು ಯೋಚಿಸುತ್ತಿದ್ದೀರಿ? ನನಗೆ ಬೇಕಾಗಿರುವುದು ಏನೂ ಸಿಗುತ್ತಿಲ್ಲ, ನನ್ನ ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತಿಲ್ಲ, ನಾನು ಅಂದುಕೊಂಡದ್ದು ಆಗಲಿಲ್ಲ, ನನ್ನ ಕುಟುಂಬ ಯೇಸುವಿನಿಂದ ಆಶೀರ್ವಾದ ಹೊಂದಿಲ್ಲ ಎಂದು ಸೋತು ಹೋಗಿ ಅದರಿಂದ ಬೇಸತ್ತಿದ್ದೀರಾ ಪುಟಾಣಿಗಳೇ! ನಿಮ್ಮನ್ನು ಮೇಲಕ್ಕೆತ್ತಲು ಮತ್ತು ನಿಮಗೆ ಸಹಾಯ ಮಾಡಲು ದೇವರು ಒಂದು ಸಮಯವನ್ನು ಇಟ್ಟಿದ್ದಾರೆ. ನಾವು ಆತನ ಚಿತ್ತಕ್ಕೆ ನಮ್ಮನ್ನು ಒಪ್ಪಿಸಿಕೊಟ್ಟು ಸರಿಯಾದ ಸಮಯ ಬರುವವರೆಗೆ ತಾಳ್ಮೆಯಿಂದಿದ್ದರೆ, ನಾವು ಯೇಸಪ್ಪನ ಬಳಿಯಿಂದ ಆಶೀರ್ವಾದಗಳನ್ನು ಪಡೆಯಬಹುದು. O.k. All the Best.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet