Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.07.2025
Share:

By Village Missionary Movement

Tuesday, 29-Jul-2025

ಧೈನಂದಿನ ಧ್ಯಾನ(Kannada) – 29.07.2025

 

ಕೇಳಿರಿ, ಕೊಡಲ್ಪಡುವುದು

 

"...ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು" - ಯೋಹಾನ 16:24

 

ನಾನು ಕ್ರಿಸ್ತನನ್ನು ಅರಿಯದ ಕುಟುಂಬದಲ್ಲಿ ಜನಿಸಿದೆ ಮತ್ತು ಬಹಳ ಭಕ್ತಿ ಮತ್ತು ಉತ್ಸಾಹದಿಂದ ಬೆಳೆದೆ. ನನ್ನ ಯೌವ್ವನದಲ್ಲಿ, ಸ್ಟೆಲ್ಲಾ ನಮ್ಮ ಸ್ನೇಹಿತರಲ್ಲಿ ಒಬ್ಬಳು. ಅವಳು ಬಾಯಿ ತೆರೆದಾಗಲೆಲ್ಲಾ, "ಸ್ತೋತ್ರ" ಎಂದು ಹೇಳುತ್ತಿದ್ದಳು. ನನಗೆ ಅವಳನ್ನು ನೋಡಿದ್ರೇನೆ ಇಷ್ಟ ಆಗೋದಿಲ್ಲ ಗೇಲಿ ಮಾಡುತ್ತಿದ್ದೆ. ಅದೇ ರೀತಿ, ಕ್ರೈಸ್ತರು ನಮ್ಮ ಪಟ್ಟಣಕ್ಕೆ ಯೇಸುವಿನ ಬಗ್ಗೆ ಬೋಧಿಸಲು ಬಂದಾಗಲೆಲ್ಲಾ, ನಾನು ಕೋಪಗೊಳ್ಳುತ್ತಿದ್ದೆ. ನಾನು ಕೂಡ ಮದುವೆಯಾದೆ, ನನ್ನ ಪತಿ ಕೂಡ ತುಂಬಾ ಭಕ್ತಿಯುಳ್ಳವರು. ನಾವು ದೇವಾಲಯದ ನಂತರ ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಿದ್ದೆವು. ಒಮ್ಮೆ, ಅವರು ವಿದೇಶದಲ್ಲಿರುವ ದೇವಾಲಯಕ್ಕೆ ಹೋದರು ಆದರೆ ಹಿಂತಿರುಗಲು ಬಹಳ ವಿಳಂಬವಾಯಿತು. ಈಗಿರುವಂತೆ ಅವರನ್ನು ತಕ್ಷಣ ಸಂಪರ್ಕಿಸಲು ಯಾವುದೇ ಸೌಲಭ್ಯವಿರಲಿಲ್ಲ. ನಾನು ನನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಮನೆಯ ಬಾಗಿಲಲ್ಲಿ ಕಣ್ಣೀರಿನೊಂದಿಗೆ ಕುಳಿತಿದ್ದೆ. ಆ ಸಮಯದಲ್ಲಿ, ನಮ್ಮ ಮನೆಯ ಹತ್ತಿರದ ಸಹೋದರಿ ನಮ್ಮ ಮನೆಯಲ್ಲಿ ಪ್ರಾರ್ಥನಾ ಕೂಟ ನಡೆಯುತ್ತಿದೆ ಬನ್ನಿ ಎಂದು ಕರೆದಾಗ, ನಾನು ಹೋಗಿ ಮನಭಾರದಿಂದ ಕುಳಿತೆ. ನನ್ನ ಗಂಡ ಮನೆಗೆ ಬೇಗ ಬರಲಿ ಎಂದು ಪ್ರಾರ್ಥಿಸಿದೆ. ಕೂಟದ ಕೊನೆಯಲ್ಲಿ ನನ್ನ ಮನಸ್ಸಿನಲ್ಲಿ ಏನೋ ಒಂದು ತರಹದ ನೆಮ್ಮದಿ ಉಂಟಾಯಿತು. ಮರುದಿನ ಬೆಳಿಗ್ಗೆ, ನನ್ನ ಗಂಡ ಮನೆಗೆ ಬಂದುಬಿಟ್ಟರು. ಯೇಸು ಕ್ರಿಸ್ತನ ಮೇಲೆ ನನಗೆ ನಂಬಿಕೆ ಹುಟ್ಟಿತು.

 

ಸ್ವಲ್ಪ ದಿನಗಳ ನಂತರ, ಅವರು ಅಸ್ವಸ್ಥರಾದರು. ಅದರ ಪರಿಣಾಮವಾಗಿ, ತಮ್ಮ ಕೆಲಸವನ್ನೂ ಕಳೆದುಕೊಂಡರು. ಈ ಪರಿಸ್ಥಿತಿಯಲ್ಲಿ, ನಮ್ಮ ಮನೆಯ ಬಳಿ ನಡೆದ ಕ್ರೈಸ್ತ ಕೂಟದಲ್ಲಿ ಹಾಡಿದ "ನಿಮ್ಮ ದುಃಖವು ಸಂತೋಷವಾಗುವುದು" ಎಂಬ ಹಾಡು ನನ್ನನ್ನು ಮುಟ್ಟಿತು. ನನಗೆ ಹೇಗೆ ಪ್ರಾರ್ಥಿಸಬೇಕೆಂದು ತಿಳಿದಿರಲಿಲ್ಲ, ಆದರೆ ನಾನು ನನ್ನ ಗಂಡನಿಗೆ ಯೇಸುವನ್ನು ಕೇಳಿದರೆ, ಖಂಡಿತವಾಗಿಯೂ ಕೆಲಸ ಸಿಗುತ್ತದೆ ಕರ್ತನು ನಮಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ಹೇಳಿದೆ, ಹಾಗೆಯೇ ನಾವು ಒಟ್ಟಿಗೆ ಪ್ರಾರ್ಥಿಸಿದೆವು, ಮತ್ತು ಕರ್ತನು ನನ್ನ ಗಂಡನಿಗೆ ಉತ್ತಮ ಆರೋಗ್ಯವನ್ನು ಕೊಟ್ಟರು. ಅವರಿಗೆ ಗೊತ್ತಿರುವ ಒಂದು ಕೆಲಸವೂ ಸಿಕ್ಕಿತು. ನಾವಿಬ್ಬರೂ ಕರ್ತನನ್ನು ಸ್ವೀಕರಿಸಿ ದೀಕ್ಷಾಸ್ನಾನ ಪಡೆದೆವು. ನಾವು ಚರ್ಚ್‌ಗೆ ಹೋಗಿ ದೇವರನ್ನು ಆರಾಧಿಸಲು ಪ್ರಾರಂಭಿಸಿದೆವು. 2005 ರಿಂದ, ಗ್ರಾಮ ಮಿಷನರಿ ಚಳುವಳಿಯೊಂದಿಗೆ 20 ವರ್ಷಗಳ ಕಾಲ ಸೇವೆ ಸಲ್ಲಿಸಲು ಕರ್ತನು ನಮಗೆ ಕೃಪೆಯನ್ನು ನೀಡಿದ್ದಾರೆ. ನಾನು ಸೇವಕರನ್ನು "ಬ್ಯಾಗ್ ತಗುಲಾಕಿಕೊಂಡು ಬಂದು ಬಿಡುತ್ತಾರೆ" ಎಂದು ಗೇಲಿ ಮಾಡುತ್ತಿದ್ದೆ. ಇಂದು, ನಾನು ಅದೇ ಬ್ಯಾಗ್ ತಗುಲಾಕಿಗೊಂಡು ಕರ್ತನ ಸೇವೆ ಮಾಡುತ್ತಿದ್ದೇನೆ.

 

ಪ್ರಿಯ ಸ್ನೇಹಿತರೇ! ನೀವು ಕೂಡ ಹತಾಶೆಯ ಪರಿಸ್ಥಿತಿಯಲ್ಲಿದ್ದೀರಾ? ನಿಮ್ಮ ಚಿಂತೆಗಳು, ಹೊರೆಗಳು ಮತ್ತು ಅಗತ್ಯಗಳನ್ನು ಕರ್ತನಿಗೆ ಹೇಳಿ. ನನ್ನನ್ನು ಭೇಟಿಯಾಗಿ ನನ್ನ ಪ್ರಾರ್ಥನೆಗೆ ಉತ್ತರಿಸಿದ ಕರ್ತನು ಖಂಡಿತವಾಗಿಯೂ ನಿಮ್ಮ ಪ್ರಾರ್ಥನೆಯನ್ನೂ ಕೇಳಿ ಅದಕ್ಕೆ ಉತ್ತರಿಸುತ್ತಾರೆ ಮತ್ತು ನಿಮ್ಮನ್ನು ಸಂತೋಷಪಡಿಸುತ್ತಾರೆ. ಅವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವರು. ನಿಮ್ಮ ಜೀವನವೂ ಬದಲಾಗುತ್ತದೆ, ಹಲ್ಲೇಲೂಯಾ.

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಶಿಬಿರಕ್ಕಾಗಿ 1,20,000 ಪ್ರಾರ್ಥನಾ ಗುಂಪುಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş