Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.07.2025
Share:

By Village Missionary Movement

Monday, 28-Jul-2025

ಧೈನಂದಿನ ಧ್ಯಾನ(Kannada) – 28.07.2025

 

ಅನಾಥರ ದೇವರು

 

"ನಾನು ನಿಮ್ಮನ್ನು ಅನಾಥರಾಗಿ ಬಿಡುವದಿಲ್ಲ; ನಿಮ್ಮ ಬಳಿಗೆ ಬರುತ್ತೇನೆ." - ಯೋಹಾನ 14:18

 

ನನ್ನ ಕುಟುಂಬವು ಕರ್ತನನ್ನು ಅರಿಯದ ಕುಟುಂಬ. ನಾನು ನನ್ನ ತಾಯಿಯ ಗರ್ಭದಲ್ಲಿರುವಾಗಲೇ ನನ್ನ ತಂದೆ ನಿಧನರಾದರು. ನಾನು ನನ್ನ ತಂದೆಯ ಮುಖವನ್ನು ನೋಡೇ ಇಲ್ಲ. ಕೂಲಿ ಕೆಲಸ ಮಾಡಿ ನನ್ನನ್ನು ಬೆಳೆಸಿದ ನನ್ನ ತಾಯಿಯೇ ನನ್ನ ಪ್ರಪಂಚ! ನಾನು 8 ನೇ ತರಗತಿ ಮುಗಿಸಿದಾಗ, ನಾನು VBS ಮೂಲಕ ಕರ್ತನನ್ನು ನನ್ನ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದೆ. ನಾನು ಸಿಹಿತಿಂಡಿಗಳಿಗಾಗಿ ಮಾತ್ರ VBS ಗೆ ಹೋಗಿದ್ದೆ ಆದರೆ ನಾನು ಅವುಗಳಿಗಿಂತ ಹೆಚ್ಚು ಸಿಹಿಯಾದ ವ್ಯಕ್ತಿಯನ್ನು ಸ್ವೀಕರಿಸಿದೆ. ನಾನು 10 ನೇ ತರಗತಿಯಲ್ಲಿದ್ದಾಗ ದೀಕ್ಷಾಸ್ನಾನ ಪಡೆದೆ.

 

ನಾನು 12 ನೇ ತರಗತಿಯಲ್ಲಿದ್ದಾಗ ನನ್ನ ತಾಯಿ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ನನ್ನ ನೆರೆಹೊರೆಯವರು ನನ್ನ ಬಳಿ, "ಯೇಸು, ಯೇಸು ಎಂದು ಹೋದಲ್ಲಾ, ಈಗ ಅನಾಥ ಆಗಿಬಿಟ್ಟೆಯಲ್ಲಾ" ಎಂದು ಮಾತನಾಡಿದರು. ನನಗೆ ನೋವಿನ ಮೇಲೆ ನೋವು! ನಾನು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಯೋಚಿಸಿದಾಗ ನಾನು ಯೇಸು ಕ್ರಿಸ್ತನನ್ನು ತಿಳಿದುಕೊಂಡಿದ್ದದರಿಂದ,

ಅದು ತಪ್ಪು ಎಂದು ನನಗೆ ತಿಳಿದಿತ್ತು.

 

ನಮ್ಮ ಚರ್ಚ್‌ನಲ್ಲಿರುವ ಒಬ್ಬ ಆಧ್ಯಾತ್ಮಿಕ ತಾಯಿ ನನಗೆ ಸಾಂತ್ವನ ಹೇಳಿದರು ಮತ್ತು ಸಹಾಯ ಮಾಡಿದರು. ಅವರು ಒಂದು ಸಂತೋಷದ ಸುದ್ದಿಯನ್ನು ಸಹ ಹಂಚಿಕೊಂಡರು. ನನ್ನ ತಾಯಿ ಸಾಯುವ ಒಂದು ವಾರದ ಮೊದಲು, ಅವರು ನಮ್ಮ ಮನೆಗೆ ಬಂದದ್ದಾಗಿಯೂ ಕರ್ತನನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದ್ದಾಗಿಯೂ ಹೇಳಿದರು. ಅವರ ರಕ್ಷಣೆಗಾಗಿ ನಾನು ಮಾಡಿದ ಪ್ರಾರ್ಥನೆಗಳಿಗೆ ದೇವರು ಉತ್ತರಿಸಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿದೆ. ನಮ್ಮ ಚರ್ಚ್‌ನ ಬೋಧಕರು ನನ್ನನ್ನು ಉನ್ನತ ವ್ಯಾಸಂಗವನ್ನು ಮಾಡಲು ಸಹಾಯ ಮಾಡಿದರು. ಬೈಬಲ್ ಕಾಲೇಜಿಗೆ ಹೋಗಿ ಓದಿದೆ ಮತ್ತು ನಂತರ BCA ಪದವಿಯನ್ನು ಸಹ ಪೂರ್ಣಗೊಳಿಸಲು ದೇವರು ಕೃಪೆ ನೀಡಿದರು. ಆದರೆ ಅವರು ಸಹ COVID-19 ಕಾರಣದಿಂದಾಗಿ ನಿಧನರಾದರು. ಒಂದು ದಿನ, ನಾನು ಎಲ್ಲಿಗೆ ಹೋಗಬೇಕೆಂದು ತಿಳಿಯದೆ ನನ್ನ ಕೈಯಲ್ಲಿ ಕೇವಲ ಇಪ್ಪತ್ತು ರೂಪಾಯಿಗಳೊಂದಿಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಅನಾಥರನ್ನು ಎಂದಿಗೂ ಕೈಬಿಡದ ದೇವರು, ಆ ಆಧ್ಯಾತ್ಮಿಕ ತಾಯಿಯ ಮೂಲಕ ನನಗೆ ಪ್ರೀತಿ ಮತ್ತು ಆದರಣೆಯನ್ನು ಕೊಟ್ಟರು.

 

ಅವರು 2021 ರಲ್ಲಿ ನಮ್ಮ ಗ್ರಾಮ ಮಿಷನರಿ ಕ್ಯಾಂಪಸ್‌ಗೆ ನನ್ನನ್ನು ಕರೆದೊಯ್ದರು. ನಂತರ 2013 ರಲ್ಲಿ ನಡೆದ ಯೌವನಸ್ಥರ ಶಿಬಿರದಲ್ಲಿ ಮಿಷನರಿ ಸೇವೆಗೆ ನನ್ನನ್ನು ಒಪ್ಪಿಸಿಕೊಟ್ಟದ್ದನ್ನು ನನಗೆ ನೆನಪಿಸಿದರು. ಆ ವಾರದ ಭಾನುವಾರದ ಸೇವೆಯ ಸಮಯದಲ್ಲಿ, ಡೇವಿಡ್ ಗಣೇಶನ್ ಅಣ್ಣನವರು, "ನೀನು ದೇವರ ಬಳಿ ಕೇಳಿಕೊಂಡ ಸಾಂತ್ವನದ ಸ್ಥಳ ಇದೇ" ಎಂದರು. ನನ್ನ ಮದುವೆಯ ಬಗ್ಗೆ 1% ಸಹ ಯೋಚಿಸದೆ ಇದ್ದ ನನಗೆ 

ಒಳ್ಳೆಯ ಸೇವೆ ಮಾಡುವ ಗಂಡ, ಪ್ರೀತಿಯ ಮಾವ ಮತ್ತು ಅತ್ತೆಯನ್ನು ದೇವರು ಕೊಟ್ಟರು. ಒಂದು ಹೆಣ್ಣು ಮಗುವನ್ನೂ ಸಹ ಕೊಟ್ಟರು. ಎಷ್ಟು ಒಳ್ಳೆಯ ದೇವರು ನೋಡಿರಿ.

 

ನನಗೆ ಪ್ರಿಯರಾದವರೇ! ಕರ್ತನು ನನ್ನನ್ನು ಕೈ ಬಿಡಲೂ ಇಲ್ಲ, ತೊರೆಯಲೂ ಇಲ್ಲ. ನಾವು ಈಗ ಒಂದು ಕುಟುಂಬವಾಗಿ ಸೇವೆ ಸಲ್ಲಿಸುತ್ತಿದ್ದೇವೆ, ಇದರಂತೆ ನೀವು ಸಹ ಅನೇಕ ನಷ್ಟಗಳನ್ನು ಅನುಭವಿಸಿರಬಹುದು ಮತ್ತು ಅನಾಥರಾಗಿರಬಹುದು. ಚಿಂತಿಸಬೇಡಿ, ಕರ್ತನು ಸ್ವತಃ ನಿಮಗೆ ಸಹಾಯ ಮಾಡುತ್ತಾರೆ ಆಮೆನ್. 

- ಶ್ರೀಮತಿ ಎಸ್ತೇರ್ ಮನೋಜ್ 

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಶಿಬಿರದಲ್ಲಿ ಭಾಗವಹಿಸುವ ಯೌವನಸ್ಥರು ಯೇಸುವಿನ ಪ್ರೀತಿಯನ್ನು ಮತ್ತು ಅವರ ಹೃದಯ ಬಡಿತವನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş