Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.07.2025 (Kids Special)
Share:

By Village Missionary Movement

Sunday, 27-Jul-2025

ಧೈನಂದಿನ ಧ್ಯಾನ(Kannada) – 27.07.2025 (Kids Special)

 

ಇರುವೆಯ ಬಳಿ... ಒಂದು ಪಾಠ

 

"ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ." - ಜ್ಞಾನೋಕ್ತಿ 6:6

 

ಒಂದು ಸುಂದರವಾದ, ದಟ್ಟವಾದ ಕಾಡು ಎಲ್ಲಾ ರೀತಿಯ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿತ್ತು. ಇರುವೆ ಮತ್ತು ಮಿಡತೆ ಅಲ್ಲಿ ಆಗಾಗ್ಗೆ ಭೇಟಿಯಾಗಿ ಸ್ನೇಹಿತರಾಗಿದ್ದವು. ಇವೆರಡೂ ಭೇಟಿಯಾದಾಗಲೆಲ್ಲಾ ಇರುವೆ, "ಅಯ್ಯೋ! ನನಗೆ ತುಂಬಾ ಕೆಲಸವಿದೆ, ನಾನು ಹೋಗಿಬರುತ್ತೇನೆ ನಾಳೆ ಭೇಟಿಯಾಗೋಣ" ಎಂದು Bye ಹೇಳಿಬಿಟ್ಟು ಹೋಗಿಬಿಡುತ್ತಿತ್ತು. ಒಂದು ಸಾಸಿವೆಯಷ್ಟೂ ಇಲ್ಲದ ಈ ಇರುವೆಗೆ ಅಂತಾ ಮಹಾನ್ ಕೆಲಸ ಏನಿರುತ್ತೆ. ಕೆಲಸ, ಕೆಲಸ ಅಂತ ಜೀವನವನ್ನೇ ಅನುಭವಿಸದೆ ತನ್ನ ಜೀವನವನ್ನೇ ವ್ಯರ್ಥ ಮಾಡಿಕೊಳ್ಳುತ್ತಿದೆಯಲ್ಲಾ! ಎಂದು ಯೋಚಿಸುತ್ತಾ ಮಿಡತೆ ತನ್ನೊಳಗೆ ನಗುತ್ತಿತ್ತು. ಆದರೆ ಇರುವೆ ಯಾವಾಗಲೂ ಕಾರ್ಯನಿರತವಾಗಿರುತ್ತಾ, ಯಾವಾಗಲೂ ತನ್ನ ಕೆಲಸದ ಬಗ್ಗೆ ಗಮನ ಹರಿಸುತ್ತಿತ್ತು. ಅಂತಾ ಕೆಲಸ ಏನಾದ್ರು ಮಾಡುತ್ತಿತ್ತು ಈ ಇರುವೆ ಅಂತ ಯೋಚನೆ ಮಾಡ್ತಾ ಇದ್ದೀರಾ ಪುಟಾಣಿಗಳೇ! ಅದು ತನಗೆ ಬೇಕಾದ ಆಹಾರವನ್ನು ತಾನೇ ಸಂಗ್ರಹಿಸುತ್ತಿತ್ತು. ಮಳೆಗಾಲದಲ್ಲಿ ಆಹಾರವನ್ನು ಹುಡುಕಲು ಹೊರಗೆ ಹೋಗಲು ಸಾಧ್ಯವಿಲ್ಲವಲ್ಲಾ? ಹಾಗೆ ಹೊರಗೆ ಹೋದರೂ, ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿಬಿತ್ತದಲ್ಲಾ? ಹಾಗಾಗಿ ಆ ಇರುವೆಯು ಬೇಸಿಗೆಯಲ್ಲೇ ಮಳೆಗಾಲಕ್ಕೆ ಬೇಕಾದದ್ದನ್ನು ಸೇರಿಸಿ ಸಂಗ್ರಹಿಸಿಬಿಡುತ್ತಿತ್ತು. ನಂತರ ಚಿಂತೆಯಿಲ್ಲದೇ ಇರುತ್ತಿತ್ತು.

 

ನಂತರ ಈ ಮಿಡತೆಯ ಬಗ್ಗೆ ಹೇಳಲೇ ಇಲ್ಲವಲ್ಲ. ಅದು ಏನು ಮಾಡ್ತು ಗೊತ್ತಾ? ಜಾಲಿಯಾಗಿ ಊರು ಸುತ್ತುತ್ತಾ ಇತ್ತು. ಎಂದಿನಂತೆ, ಇರುವೆ ಮತ್ತು ಮಿಡತೆ ಭೇಟಿಯಾದವು. ಯಾವುದೇ ಕೆಲಸ ಮಾಡದೆ ಹೀಗೆ ಊರು ಸುತ್ತುತ್ತಾ ಇದ್ದೀಯಲ್ಲಾ ಮಳೆಗಾಲದಲ್ಲಿ ಏನು ಮಾಡುತ್ತೀಯ? ಎಂದು ಇರುವೆ ಕೇಳಿತು. ಮಳೆ ಬಂದಾಗ ನೋಡಿಕೊಳ್ಳೋಣ. ಓಹ್, ನೀನು ಬೇರೆ! ಜಾಲಿಯಾಗಿ ಇರೋಕೆ ಬಿಡ್ದೇ, ಎಂದು ಮತ್ತೆ ಹಾರಲು ಪ್ರಾರಂಭಿಸಿತು. ಕೆಲವೇ ದಿನಗಳಲ್ಲಿ, ಮಳೆಗಾಲ ಬಂದಿತು. ಇರುವೆ ಮನೆಯೊಳಗೆ ಇದ್ದು, ಸಾಧ್ಯವಾದಷ್ಟು ತಿಂದು ಚಿಂತೆಯಿಲ್ಲದೆ ಬದುಕಿತು. ಆದರೆ ಮಳೆಯಲ್ಲಿ ನೆನೆದು ಆಹಾರ ಹುಡುಕಲು ಹೊರಗೆ ಹೋಗಲು ಸಾಧ್ಯವಾಗದೆ, ಮಿಡತೆ ಚಳಿಯಲ್ಲಿ ನಡುಗುತ್ತಿತ್ತು ಮತ್ತು ಹಸಿವಿನಿಂದ ಮಳೆ ನಿಲ್ಲುತ್ತದಾ ಎಂದು ಕರುಣಾಜನಕವಾಗಿ ಕಾಯುತ್ತಿತ್ತು. ಕಾಡಿನಲ್ಲಿ ಮಳೆ ಅಷ್ಟು ಬೇಗ ನಿಲ್ಲುತ್ತದೆಯೇ? ಮಿಡತೆಯ ಭವಿಷ್ಯವು ಕರಾಳವಾಗಿತ್ತು. ಪರಿಸ್ಥಿತಿಯ ಬಗ್ಗೆ ಯೋಚಿಸಿ ನೋಡಿ, ಪುಟಾಣಿಗಳೇ!

 

ನೀವು ಓದಬೇಕಾದ ಸಮಯವನ್ನು ವ್ಯರ್ಥ ಮಾಡಿ ಆಟವಾಡುತ್ತಿದ್ದರೆ, ಪರೀಕ್ಷೆಯ ಸಮಯದಲ್ಲಿ ನೀವು ಮಿಡತೆಯಂತೆ ಇರುತ್ತೀರಿ. ನಿಮ್ಮ ಹೋಮ್ ವರ್ಕ್ ಬರೆಯದಿದ್ದರೆ, ನೀವು ಸುಳ್ಳು ಹೇಳಬೇಕಾಗುತ್ತದೆ. ಆದರೆ ನೀವು ಸಕ್ರಿಯರಾಗಿದ್ದರೆ ಮತ್ತು ದಿನದ ಪಾಠಗಳನ್ನು ಅಧ್ಯಯನ ಮಾಡಿದರೆ, ನೀವು ಪರೀಕ್ಷೆಯ ಬಗ್ಗೆ ಚಿಂತಿಸಬೇಕಾಗಿಲ್ಲ, ನೀವು ಸಂತೋಷವಾಗಿ ಇರಬಹುದಲ್ಲವಾ? ಪುಟಾಣಿಗಳೇ! ಇಂದಿನಿಂದ, ಪ್ರತಿದಿನ ಪ್ರಾರ್ಥಿಸಿ ಮತ್ತು ಸಕ್ರಿಯರಾಗಿರಿ ಮತ್ತು ಆ ದಿನ ನೀಡಲಾದ ಪಾಠಗಳನ್ನು ಆ ದಿನವೇ ಓದಿ ಮುಗಿಸಿ. ಯೇಸಪ್ಪ ನಿಮಗೆ ಸಹಾಯ ಮಾಡುತ್ತಾರೆ ಮತ್ತು ನಿಮ್ಮನ್ನು ಆಶೀರ್ವದಿಸುತ್ತಾರೆ. 

- Mrs.ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş