Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.07.2025
Share:

By Village Missionary Movement

Friday, 25-Jul-2025

ಧೈನಂದಿನ ಧ್ಯಾನ(Kannada) – 25.07.2025

 

ಎಂದಿಗೂ ಕೈಬಿಡದ ಕರ್ತನು

 

"ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು" - ಕೀರ್ತನೆ 27:10

 

ನನ್ನ ಹೆಸರು ಮಾರಿಯಮ್ಮಾಳ್. ನಾವು ಹೆಣ್ಣುಮಕ್ಕಳಾಗಿ ಹುಟ್ಟಿದ್ದರಿಂದಲೇ ನಾನು ಮತ್ತು ನನ್ನ ಅಕ್ಕ ಹೆತ್ತವರಿಂದ ಕೈಬಿಡಲ್ಪಟ್ಟೆವು. ನಾವು ಕೆಲವು ಸಂಬಂಧಿಕರ ಸಹಾಯದಿಂದ ನಮ್ಮ ದಿನಗಳನ್ನು ಕಳೆದೆವು. ನಮ್ಮ ಯೌವನದಲ್ಲಿ ಹಿಂಸೆಗಳು ಮತ್ತು ಬಡತನದಂತಹ ಅನೇಕ ಕಷ್ಟಗಳನ್ನು ನಾವು ಚಿಕ್ಕ ವಯಸ್ಸಿನಲ್ಲೇ ಎದುರಿಸಿದೆವು. ದೇವರ ಮಹಾ ಕೃಪೆಯಿಂದ, ಗ್ರಾಮ ಮಿಷನರಿ ಚಳವಳಿಗೆ ಸೇರಿದ ಮಿಷನರಿ ಸಹೋದರರೊಬ್ಬರು ನಮ್ಮ ಹಳ್ಳಿಗೆ ಬಂದರು. ಆಗ ನಮ್ಮ ಗ್ರಾಮದಲ್ಲಿ ದೇವರ ಪರಿಚಯವಾಯಿತು. ನಮಗೂ ಯೇಸಪ್ಪನ ಪರಿಚಯವಾಯಿತು. 

 

ಆ ಮಿಷನರಿ ಸಹೋದರನ ಮೂಲಕ, ನಾವು ಗ್ರಾಮ ಮಿಷನರಿ ಚಳವಳಿಗೆ ಬಂದು ಸಹೋದರ ಡೇವಿಡ್ ಗಣೇಶನ್ ಅವರನ್ನು ಭೇಟಿಯಾದೆವು. ಅವರೇ ನಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ನಮ್ಮನ್ನು ತಮ್ಮ ಸ್ವಂತ ಮಕ್ಕಳಂತೆ ರಕ್ಷಿಸಿದರು, ನಮಗೆ ಶಿಕ್ಷಣ ನೀಡಿದರು, ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿದರು ಮತ್ತು ಪ್ರೀತಿಯಿಂದ ಬೆಳೆಸಿದರು. ನಾನು ಬಾಲ್ಯದಲ್ಲಿ ಪ್ರಾಥಮಿಕ ಸಂಕೀರ್ಣ ಕಾಯಿಲೆಯಿಂದ ಬಳಲುತ್ತಿದ್ದೆ ತಿನ್ನಲು ಸಹ ಆಗದಂತಹ ಸ್ಥಿತಿಯಲ್ಲಿದ್ದೆ. ಎಲ್ಲರೂ ನನಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದರು. ದೇವರ ಕೃಪೆಯಿಂದ, ನನಗೆ ಸಂಪೂರ್ಣ ಗುಣವಾಯಿತು. ಆತನ ಬಾಸುಂಡೆಗಳಿಂದ ಗುಣವಾದೆನು (ಯೆಶಾಯ 53:5). ನಾನು ಶಾಲೆ ಮುಗಿಸಿದ ನಂತರ, ರಾಕ್‌ಲ್ಯಾಂಡ್ ಬೈಬಲ್ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದೆ ಮತ್ತು ಕಳೆದ ಆರು ವರ್ಷಗಳಿಂದ ನಾನು ಹಳ್ಳಿಗಳಿಗೆ ಹೋಗಿ ಮಕ್ಕಳು ಮತ್ತು ಯುವಕರ ನಡುವೆ ಸೇವೆ ಮಾಡುತ್ತಿದ್ದೇನೆ. ಡೇವಿಡ್ ಡ್ಯಾಡಿ ಮತ್ತು ಜೆಬಾ ಮಮ್ಮಿ ನನ್ನ ಮದುವೆಯನ್ನು ಮುಂದೆ ನಿಂತು ನಡೆಸಿಕೊಟ್ಟರು. ಕ್ರಿಸ್ತನಲ್ಲಿ ನೂರಾರು ಸಂಬಂಧಗಳು ಒಂದಾಗಿದ್ದು ನಮ್ಮ ಮದುವೆ ಅದ್ಭುತವಾಗಿ ನಡೆಯಿತು. ಕರ್ತನು ನನಗೆ ಆಶೀರ್ವದಿಸಿದ ವೈವಾಹಿಕ ಜೀವನವನ್ನು ಮತ್ತು ನನ್ನನ್ನು ಪ್ರೀತಿಸುವ ಕುಟುಂಬವನ್ನು ಕೊಟ್ಟಿದ್ದಾರೆ. ನನ್ನ ಗಂಡ ಮತ್ತು ನಾನು ಮೈಲಾಡುತುರೈನಲ್ಲಿ ಕುಟುಂಬವಾಗಿ ಕರ್ತನ ಸೇವೆಯನ್ನು ಮಾಡುತ್ತಿದ್ದೇವೆ. ಅವರಿಗೆ ಎಲ್ಲಾ ಸ್ತುತಿ, ಘನ ಮಾನ ಮಹಿಮೆ ಉಂಟಾಗಲಿ. 

 

ನನ್ನ ಸಾಕ್ಷಿಯನ್ನು ಓದುತ್ತಿರುವ ಪ್ರಿಯ ಸಹೋದರ ಸಹೋದರಿಯರೇ! ನೀವು ಸಹ ನನ್ನಂತೆಯೇ ಕೈಬಿಡಲ್ಪಟ್ಟ ಸ್ಥಿತಿಯಲ್ಲಿದ್ದೀರಾ? ನಿಮ್ಮ ಹೆತ್ತವರು ಮತ್ತು ಸಂಬಂಧಿಕರು ನಿಮ್ಮನ್ನು ಮರೆತಿದ್ದಾರಾ? ನಿರುತ್ಸಾಹಗೊಳ್ಳಬೇಡಿ. ಕರ್ತನು ನಿಮ್ಮನ್ನು ಮರೆತಿಲ್ಲ. ಅವರು ನಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ. ನಿಮ್ಮ ಭವಿಷ್ಯವನ್ನು ಅವರಿಗೆ ಒಪ್ಪಿಸಿ. ಅವರು ನಿಮ್ಮನ್ನು ಅದ್ಭುತವಾಗಿ ನಡೆಸಿಕೊಳ್ಳುವುದಲ್ಲದೆ ನಿಮ್ಮನ್ನು ಇತರರಿಗೆ ಆಶೀರ್ವಾದವಾಗಿ ಮಾರ್ಪಡಿಸುತ್ತಾರೆ. ಆಮೆನ್. 

- Mrs. ಮಾರಿಯಮ್ಮಾಳ್ ಗುಣಶೀಲನ್

 

ಪ್ರಾರ್ಥನಾ ಅಂಶ:

ತಮಿಳುನಾಡಿನಾದ್ಯಂತ 1 ಲಕ್ಷದ 20 ಸಾವಿರ ಯುವಕರು ಯೌವನಸ್ಥರ ಉಜ್ಜೀವನ ಶಿಬಿರದಲ್ಲಿ ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş pokerklas betpas maximcasino pashagaming pashagaming egebet casibom casinolevant virusbet ultrabet grandpashabet royalbet perabet matbet kralbet perabet perabet giriş meritbet meritbet giriş