By Village Missionary Movement
Sunday, 20-Jul-2025ಧೈನಂದಿನ ಧ್ಯಾನ(Kannada) – 20.07.2025 (Kids Special)
ಸಂಪೂರ್ಣವಾಗಿ ಯೇಸುವಿಗೆ
"ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು..." - ಮಾರ್ಕನು 12:30
Hello ಪುಟಾಣಿಗಳೇ! ನೀವೆಲ್ಲರೂ ವಿಮಾನ ನಿಲ್ದಾಣಕ್ಕೆ ಹೋಗಿದ್ದೀರಾ? ಅಲ್ಲಿ ಸುಂದರವಾದ ವಿಮಾನಗಳು ಮತ್ತು ಹೆಲಿಕಾಪ್ಟರ್ ಎಲ್ಲಾ ಇರುತ್ತೆ ಅಲ್ವಾ. ಹೇಳುವಾಗಲೇ ನಿಮಗೆ ಅಲ್ಲಿಗೆ ಹೋಗಬೇಕೆಂಬ ಆಸೆ ಆಗ್ತಿದಿಯಾ. ಪ್ರಾರ್ಥಿಸಿ ಹೋಗಿಬರೋಣ. O.k ನಾ, ಈಗ ಕಥೆಯೊಳಗೆ ಹೋಗೋಣ್ವಾ? ನಿಮ್ಮ ಇಡೀ ಜೀವನವನ್ನು ಯೇಸುವಿಗೆ ಕೊಟ್ಟರೆ ಆಶೀರ್ವಾದ ಎಂಬುದನ್ನು ನೀನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಒಂದು ಕಥೆಯನ್ನು ಹೇಳುತ್ತೇನೆ. ಎಚ್ಚರಿಕೆಯಿಂದ ಆಲಿಸಿ...
ರಾಜನ್ ಅಂಕಲ್ ವಿಮಾನ ನಿಲ್ದಾಣದ ಬಳಿ ಒಂದು ಸ್ಥಳವನ್ನು ಖರೀದಿಸಿ ಅದರ ಮೇಲೆ ಒಂದು ದೊಡ್ಡ ಮಹಲು ನಿರ್ಮಿಸಿದರು. ನಿರ್ಮಿಸುವಾಗ, ಅವರು ಯೇಸಪ್ಪನಿಗೆ ಒಂದು ಪ್ರತ್ಯೇಕ ಕೋಣೆಯನ್ನು ನಿರ್ಮಿಸಿದರು. ಕಷ್ಟಪಟ್ಟು ಮನೆಯನ್ನು ಪೂರ್ಣಗೊಳಿಸಿ ಪ್ರತಿಷ್ಟೆಯನ್ನೂ ಮಾಡಿಬಿಟ್ಟರು. ಇವರ ಎಲ್ಲಾ ಮಕ್ಕಳು ಮನೆಯ ಛಾವಣಿಯ ಮೇಲೆ ನಿಂತು ವಿಮಾನವನ್ನು ಮೆಚ್ಚುತ್ತಿದ್ದರು. ರಾಜನ್ ಅಂಕಲ್ ಯೇಸಪ್ಪನಿಗಾಗಿ ಕಟ್ಟಿದ್ದ ಕೋಣೆಯ ಕೀಲಿಯನ್ನು ಯೇಸಪ್ಪನಿಗೆ ಕೊಟ್ಟು ಆ ಕೋಣೆಯಲ್ಲಿಯೇ ಇರಲು ಒತ್ತಾಯಿಸಿದರು. ಯೇಸಪ್ಪ ಕೂಡ ಒಳಗೆ ಹೋಗಿ ಬಾಗಿಲನ್ನು ಲಾಕ್ ಮಾಡಿಕೊಂಡರು.
ಸ್ವಲ್ಪ ಸಮಯದ ನಂತರ, ಮನೆಯ ಮುಂಭಾಗದ ಬಾಗಿಲನ್ನು ಯಾರೋ ತಟ್ಟಿದರು. ರಾಜನ್ ಅಂಕಲ್ ಬೇಗನೆ ಹೋಗಿ ಬಾಗಿಲು ತೆರೆದರು. ಅಲ್ಲಿ ನೋಡಿದರೆ, ಎರಡು ಕೊಂಬುಗಳನ್ನು ಹೊಂದಿರುವ ಕಪ್ಪು ಬಣ್ಣದಲ್ಲಿರುವ ದಪ್ಪನೆಯ ಸೈತಾನನು ನಿಂತಿರುವುದನ್ನು ನೋಡಿದರು. ತಕ್ಷಣ, ರಾಜನ್ ಅಂಕಲ್ ಅವನು ಒಳಗೆ ಬರದಂತೆ ಬಾಗಿಲು ಮುಚ್ಚಲು ಪ್ರಯತ್ನಿಸಿದರು. ಸೈತಾನನು ಹೊರಗಿನಿಂದ ಬಾಗಿಲನ್ನು ತಳ್ಳಿದನು. ಇವರು ಸಹ ಒಳಗಿನಿಂದ ಬಾಗಿಲನ್ನು ತಳ್ಳಲು ಬಹಳ ಹೆಣಗಾಡಿದರು. ಹೇಗೋ, ಅವರು ಬಾಗಿಲು ಮುಚ್ಚಿ ಭಾರವಾಗಿ ನಿಟ್ಟುಸಿರು ಬಿಟ್ಟರು. ಆಗ ಅವರಿಗೆ ಒಂದು ಯೋಚನೆ ಬಂತು. ಇಷ್ಟೆಲ್ಲಾ ಹೋರಾಟ ನಡೆದರೂ, ಯೇಸಪ್ಪ ಇಣುಕಿ ಸಹ ನೋಡಲಿಲ್ಲವಲ್ಲಾ! ಯೇಸಪ್ಪ ಇದ್ದ ಕೋಣೆಯ ಬಾಗಿಲನ್ನು ತಟ್ಟಿದರು. ಯೇಸು ಕೂಡ ಬಾಗಿಲು ತೆರೆದರು. ತಕ್ಷಣ, ರಾಜನ್ ಅಂಕಲ್, "ಯೇಸುವೇ ಇಲ್ಲಿ ನಡೆದ ಹೋರಾಟ ನಿಮಗೆ ಗೊತ್ತಾಗಲಿಲ್ವಾ? ಸ್ವಲ್ಪ ಬಿಟ್ಟಿದ್ದರೆ, ಸೈತಾನನು ಮನೆಯೊಳಗೆ ಬರುತ್ತಿದ್ದನು. ಈ ಕಠಿಣ ಪರಿಸ್ಥಿತಿಯಲ್ಲಿ ನೀವು ನನಗೆ ಸಹಾಯ ಮಾಡದೇ ಹೋದ್ರಲ್ಲಾ ನನಗೆ ತುಂಬಾ ಬೇಜಾರಾಗ್ತಿದೆ ಎಂದರು. ತಕ್ಷಣ ಯೇಸಪ್ಪ, ರಾಜನ್ ನೀನು ನನಗೆ ಒಂದೇ ಒಂದು ಕೋಣೆಯನ್ನು ತೋರಿಸಿ ಇದು ನಿನ್ನ ಕೋಣೆ ಮತ್ತು ಉಳಿದೆಲ್ಲವೂ ನನ್ನದು ಎಂದು ಹೇಳಿದೆ ಅಲ್ವಾ. ಅದಕ್ಕಾಗಿಯೇ ನಾನು ನನಗೆ ಕೊಟ್ಟ ಕೋಣೆಯಲ್ಲೇ ಇದ್ದುಬಿಟ್ಟೆ. ನಿನ್ನದನ್ನು ನೀನೇ ತಾನೇ ನೋಡಿಕೊಳ್ಳಬೇಕು ಎಂದು ಹೇಳಿದರು. ರಾಜನ್ ಅಂಕಲ್ ಹೆದರುತ್ತಾ, ಯೇಸಪ್ಪಾ, ಇಡೀ ಮನೆ ನಿಮಗೆ ಸೇರಿದ್ದು ಎಂದು ಹೇಳಿ ಮನೆಯ ಸಂಪೂರ್ಣ ಕೀಲಿಯನ್ನು ಅವರಿಗೆ ಕೊಟ್ಟರು. ತಕ್ಷಣ ಯೇಸು ಹೇಳಿದರು, ಇಂದಿನಿಂದ, ಚಿಂತಿಸಬೇಡ, ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ. ನೀನು ಸಂತೋಷವಾಗಿರು ಎಂದರು.
ಪುಟ್ಟ ತಮ್ಮ ತಂಗಿ! ಯೇಸು ನಿಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದಾರೆ. ನೀವು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಯೇಸುವಿನ ಕೈಯಲ್ಲಿ ನೀಡಿದಾಗ, ಯೇಸಪ್ಪ ನಿನ್ನನ್ನು, ನಿನ್ನ ಕುಟುಂಬವನ್ನು, ನಿನ್ನ ಭವಿಷ್ಯವನ್ನು ಮತ್ತು ನಿನ್ನ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. O.k ನಾ.
- Sis. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482