By Village Missionary Movement
Saturday, 19-Jul-2025ಧೈನಂದಿನ ಧ್ಯಾನ(Kannada) – 19.07.2025
ದೇವರ ಭದ್ರತೆ
"ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು;.." - ಯೆಶಾಯ 43:2
ನಮ್ಮ ದೇವರು ಪ್ರೀತಿ, ಕರುಣೆ ಮತ್ತು ದಯೆಯುಳ್ಳವರು. ಆತನು ನಮಗೆ "ನಾನೇ ನಿನ್ನೊಂದಿಗಿದ್ದೇನೆ" ಎಂದು ಎಲ್ಲಾ ಕಾಲಕ್ಕೂ ಬೇಕಾದ ವಾಗ್ದಾನವನ್ನು ನೀಡಿದ್ದರೂ, ಕೆಲವು ನಿರ್ದಿಷ್ಟ ವಾಗ್ದಾನಗಳನ್ನು ನಮಗೆ ಮುಂಚಿತವಾಗಿಯೇ ಕೊಟ್ಟು ನಮ್ಮನ್ನು ಬಲಪಡಿಸುತ್ತಿದ್ದಾರೆ.
ಕಳೆದ ಡಿಸೆಂಬರ್ 2023 ರಲ್ಲಿ ತಿರುನಲ್ವೇಲಿಯಲ್ಲಿ ಸುರಿದ ಭಾರೀ ಮಳೆ ಮತ್ತು ಉಂಟಾದ ಹಾನಿಯ ಬಗ್ಗೆ ನೀವು ಕೇಳಿರಬೇಕು. ಆ ದಿನ ಸುರಿದ ಭಾರೀ ಮಳೆಯಿಂದಾಗಿ, ನನ್ನ ಮಗಳ ಮನೆ ಜಲಾವೃತವಾಯಿತು. ಆದ್ದರಿಂದ ನಾವು ಮೊದಲ ಮಹಡಿಗೆ ಹೋದೆವು. ಅಲ್ಲಿ ನಿಭಾಯಿಸಬಹುದೆಂದು ಭಾವಿಸಿದೆವು. ಆದರೆ ನೀರಿನ ಮಟ್ಟ ಏರುತ್ತಲೇ ಇತ್ತು. ಆದ್ದರಿಂದ ನಾವು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದೆವು. ಅವರು ಬಂದು ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆತಂದಾಗ, ಪ್ರವಾಹದ ನೀರು ನಮ್ಮ ಕುತ್ತಿಗೆಯವರೆಗೆ ಇತ್ತು. ನಾನು ನನ್ನ ಮಗಳು, ಅಳಿಯ ಮತ್ತು ಮೊಮ್ಮಕ್ಕಳು ಸೇರಿದಂತೆ ನಾವು 6 ಜನರನ್ನು ಬಹಳ ಸುರಕ್ಷಿತವಾಗಿ ರಕ್ಷಿಸಲಾಯಿತು. ಅಂದು ಭಾನುವಾರ ರಜೆದಿನವಾಗಿದ್ದದರಿಂದಲೂ, ಮಧ್ಯಾಹ್ನ 3-5 ಗಂಟೆಯ ನಡುವೆ ಪ್ರವಾಹ ಬಂದದ್ದರಿಂದಲೂ, ಸುರಕ್ಷಿತವಾಗಿ ಹೊರಬರಲು ಸಾಧ್ಯವಾಯಿತು.
ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು; ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ, ಜ್ವಾಲೆಯು ನಿನ್ನನ್ನು ದಹಿಸದು.
ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು; ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು ಎಂಬ ವಾಕ್ಯದ ಪ್ರಕಾರ ದೇವರು ನಮ್ಮೊಂದಿಗಿದ್ದು ಅದ್ಭುತವಾಗಿ ರಕ್ಷಿಸಿದರು. ನಾನು ಕರ್ತನನ್ನು ಸ್ವೀಕರಿಸಿದ ದಿನಗಳಲ್ಲಿ ಕರ್ತನು ನನ್ನೊಂದಿಗೆ ಮಾತನಾಡಿ ನನಗೆ ನೀಡಿದ ವಾಗ್ದಾನವು ಯೆಶಾಯ 43:2. ನನಗೆ ಅದು ಮೊದಲಿಗೆ ಅರ್ಥವಾಗಲಿಲ್ಲ. ಆದರೆ ಹಲವು ವರ್ಷಗಳ ನಂತರ, ಆ ವಚನದ ಪ್ರಕಾರ ನಾನು ನೀರನ್ನು ದಾಟಬೇಕಾದ ಪರಿಸ್ಥಿತಿ ಬಂದಾಗ, ಅದನ್ನು 100ರಷ್ಟು ಅರಿತುಕೊಂಡು ಕರ್ತನಿಗೆ ಕೃತಜ್ಞತೆ ಸಲ್ಲಿಸಿದೆ.
ಇನ್ನೊಂದು ಬಾರಿ ನಾನು ನನ್ನ 90 ವರ್ಷದ ತಾಯಿಯನ್ನು ತಿರುನಲ್ವೇಲಿಯಲ್ಲಿರುವ ನನ್ನ ಮಗಳ ಮನೆಯಲ್ಲಿ ಬಿಟ್ಟು ಬಂದೆ. ಆ ರಾತ್ರಿ, ವಿದ್ಯುತ್ ದೋಷ ಸಂಭವಿಸಿ ಬೆಂಕಿ ಹೊತ್ತಿಕೊಂಡಿತು. ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಅವರು ಬಂದು ಬೆಂಕಿಯನ್ನು ನಂದಿಸಿದರು ಮತ್ತು ನನ್ನ ದೇವರು ಯಾವುದೇ ದೊಡ್ಡ ಘಟನೆಗಳಿಲ್ಲದೆ ನನ್ನ ಕುಟುಂಬವನ್ನು ಅದ್ಭುತವಾಗಿ ರಕ್ಷಿಸಿದರು. ಏನಾಯಿತು ಎಂದು ತಿಳಿದ ನಂತರ ನಾನು ದೇವರನ್ನು ಸ್ತುತಿಸಿದೆ. ಕೇವಲ ಭೌತಿಕ ಹಾನಿ ಸಂಭವಿಸಿತ್ತು. ಈ ರೀತಿಯಾಗಿ, ದೇವರು ನನ್ನನ್ನು ನೀರು ಮತ್ತು ಬೆಂಕಿ ಎರಡರಿಂದಲೂ ರಕ್ಷಿಸಿದರು. ನನ್ನ ಜೀವನದಲ್ಲಿ ದೇವರು ನನ್ನನ್ನು ಅದ್ಭುತವಾಗಿಯೇ ಕಾಪಾಡುತ್ತಾ ಬಂದಿದ್ದಾರೆ.
ಇದನ್ನು ಓದುತ್ತಿರುವ ಸ್ನೇಹಿತರೇ! ನಾವು ಬೆಂಕಿ ಮತ್ತು ನೀರನ್ನು ದಾಟಿ ಬಂದಿದ್ದೇವೆ. ಫಲವತ್ತಾದ ಸ್ಥಳಕ್ಕೆ ನಮ್ಮನ್ನು ಕರೆತಂದಿದ್ದೀರಿ ಎಂದು ದಾವೀದನು ಹೇಳಿದಂತೆ, ನನ್ನ ಜೀವನದಲ್ಲಿ ಅದ್ಭುತಗಳನ್ನು ಮಾಡಿದ ದೇವರು, ನಿಮ್ಮ ಪರಿಸ್ಥಿತಿ ಏನೇ ಇರಲಿ, ನಿಮ್ಮನ್ನೂ ತಪ್ಪಿಸುತ್ತಾರೆ, ಹಲ್ಲೇಲೂಯಾ.
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
ಎಲ್ಲಾ ಸೇವಾ ಕ್ಷೇತ್ರಗಳಲ್ಲಿ ಮಿಷನರಿ ತರಬೇತಿ ಕೇಂದ್ರಗಳನ್ನು ನಿರ್ಮಿಸಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482