Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.07.2025
Share:

By Village Missionary Movement

Wednesday, 16-Jul-2025

ಧೈನಂದಿನ ಧ್ಯಾನ(Kannada) – 16.07.2025

 

ನಂಬಿಕೆ ಇಲ್ಲದ ನನ್ನ ಜೀವನದಲ್ಲಿ...

 

"ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು" - ಕೀರ್ತನೆ 65:2

 

ಕ್ರೈಸ್ತ ಕುಟುಂಬದಲ್ಲಿ ಜನಿಸಿದ ನನ್ನನ್ನು ನನ್ನ ಹೆತ್ತವರು ಭಕ್ತಿಯಿಂದ ಬೆಳೆಸಿದರು. ಬೈಬಲ್ ಓದುವುದು, ಪ್ರಾರ್ಥಿಸುವುದು ಮತ್ತು ಚರ್ಚ್‌ಗೆ ಹೋಗುವುದು ಮುಂತಾದ ಎಲ್ಲವನ್ನೂ ನಾನು ಕ್ರಮವಾಗಿ ಮಾಡುತ್ತಿದ್ದೆ. ನಾನು 11 ನೇ ತರಗತಿಯಲ್ಲಿದ್ದಾಗ, ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದ ಸ್ನೇಹಿತರೊಂದಿಗೆ ಸೇರಿ ತರಗತಿಗಳನ್ನು ಬಿಟ್ಟುಬಿಡುವುದು, ಶಾಲಾ ಸಮವಸ್ತ್ರದಲ್ಲಿ ಅವರಿಗೆ ಬಿಯರ್ ತೆಗೆದುಕೊಡುವುದು ಹೀಗೆ ಮಾಡುತ್ತಿದ್ದೆ. ನಾನು 12 ನೇ ತರಗತಿಯಲ್ಲಿದ್ದಾಗ, ನನಗೆ ಒಂದರ ನಂತರ ಒಂದರಂತೆ ಸೋಲುಗಳು ಬಂದವು. ನಾನು ಅದನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡಾಗ, ಅವರು, "ನೀನೂ ನಮ್ಮಂತೆ ಗಾಂಜಾ ಸೇದು, ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿದರು. ನಾನು ಬಿಯರ್, ಗಾಂಜಾ ಮತ್ತು ಇತರ ಅನೇಕ ಮಾದಕ ದ್ರವ್ಯಗಳಿಗೆ ವ್ಯಸನಿಯಾಗಿಬಿಟ್ಟೆ. ನಾನು ಒರಟಾದ ಜೀವನವನ್ನು ನಡೆಸುತ್ತಿದ್ದೆ. ನನ್ನನ್ನು ನೋಡಿದ ನೆರೆಹೊರೆಯವರು ನನ್ನ ಹೆತ್ತವರಿಗೆ ಹೇಳಿದರು. ಇದರಿಂದಾಗಿ, ಅವರು ಈ ಸ್ನೇಹಿತರಿಂದ ಬೇರ್ಪಟ್ಟರೆ ಏನಾದರೂ ಬದಲಾವಣೆಯಾಗಬಹುದು ಎಂದು ಯೋಚಿಸಿ ಬಹಳ ನೋವಿನಿಂದ ಬೇರೆ ಪಟ್ಟಣಕ್ಕೆ ಬಂದರು. ನಾನು ಇಲ್ಲಿಗೆ ಬಂದಾಗ, ನನ್ನ ಕೆಟ್ಟ ಅಭ್ಯಾಸಗಳು ಹೆಚ್ಚಾದವೇ ಹೊರತು, ಕಡಿಮೆಯಾಗಲಿಲ್ಲ. ಅನೇಕ ಸ್ನೇಹಿತರು ಮಾದಕ ದ್ರವ್ಯ ಚುಚ್ಚುಮದ್ದಿನಿಂದ ಸತ್ತರೂ, ನನಗೆ ಅದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಮನೆಯಲ್ಲಿದ್ದಾಗ ನಾನು ತುಂಬಾ ಕುಡಿದು ನನ್ನ ಹೆತ್ತವರನ್ನು ಒಳಗೆ ಬೀಗ ಹಾಕಿ, ಕೀಲಿಯನ್ನು ತೆಗೆದುಕೊಂಡು, ಗ್ಯಾಸ್ ಅನ್ನು ತೆರೆದು ಕೊಂದು ಬಿಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದೆ.

 

ಲಾಕ್‌ಡೌನ್ ಸಮಯದಲ್ಲಿ, ನನ್ನ ಹೆತ್ತವರು "ಪ್ರಾರ್ಥಿಸೋಣ ಬನ್ನಿ" ಕಾರ್ಯಕ್ರಮವನ್ನು ನೋಡಲು ಹೇಳಿದರು. ನಾನು ಅದನ್ನು ಬೇಕಾಬಿಟ್ಟಿ ನೋಡುತ್ತಿದ್ದೆ, ಪುನಃ ಮಾದಕ ದ್ರವ್ಯ ಚುಚ್ಚುಮದ್ದು ಹಾಕಿಕೊಳ್ಳುತ್ತಿದ್ದೆ. ಒಂದು ದಿನ, ಅವರು ಅದರಲ್ಲಿ ಸಾಕ್ಷಿಗಳನ್ನು ಓದಿದರು ಮತ್ತು ಪ್ರಾರ್ಥಿಸಲು ಐದು ನಿಮಿಷ ಸಮಯ ಕೊಟ್ಟರು. ಯೇಸುವೇ ನನ್ನನ್ನು ಈ ಮಾದಕ ದ್ರವ್ಯಗಳಿಂದ ಮುಕ್ತಗೊಳಿಸಿ ಎಂದು ಪ್ರಾರ್ಥಿಸಿದೆ. ಕಾರ್ಯಕ್ರಮ ಮುಗಿದ ನಂತರ, ನಾನು ಮನೆಯಲ್ಲಿ ಪ್ರಾರ್ಥನಾ ಕೋಣೆಗೆ ಹೋಗಿ ಯೇಸುವಿನೊಂದಿಗೆ ಒಂಟಿಯಾಗಿ ಮಾತನಾಡಿದೆ. ಆಗ ಒಂದು ಶಬ್ದ ನನ್ನ ಬಳಿ, "ನೀನು ಎರಡು ದಿನಗಳವರೆಗೆ ಯಾವ ಮಾದಕ ದ್ರವ್ಯಗಳನ್ನೂ ಸೇವಿಸಬಾರದು. ನಾನು ನಿನಗೆ ಬಿಡುಗಡೆ ಕೊಡುತ್ತೇನೆ" ಎಂದು ಹೃದಯದಲ್ಲಿ ಮಾತನಾಡುವುದನ್ನು ಗ್ರಹಿಸಿದೆ. ಯೇಸುವೇ, ನನ್ನಿಂದ ಎರಡು ದಿನಗಳವರೆಗೆ ಮಾದಕ ದ್ರವ್ಯಗಳಿಂದ ಮುಕ್ತನಾಗಿರಲು ಸಾಧ್ಯವಿಲ್ಲ. ನೀವೇ ನನಗೆ ಶಕ್ತಿ ಕೊಡಬೇಕು ಎಂದು ಕಣ್ಣೀರಿನಿಂದ ಪ್ರಾರ್ಥಿಸಿದೆ. ಎಷ್ಟು ಅದ್ಭುತ, ದೇವರು ಕೇವಲ ಎರಡೇ ದಿನಗಳಲ್ಲಿ ನನ್ನ ಎಲ್ಲಾ ಮಾದಕ ವ್ಯಸನಗಳಿಂದ ನನಗೆ ಸಂಪೂರ್ಣ ಬಿಡುಗಡೆಯನ್ನು ಕೊಟ್ಟರು. ಯೇಸುವಿಗೆ ಮಹಿಮೆ. ಈಗ ನಾನು ಗ್ರಾಮ ಮಿಷನರಿ ಸೇವೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.

 

ಸ್ನೇಹಿತರೇ! ಬಹುಶಃ ನೀವು ಸಹ ಇಂತಹ ಗುಲಾಮಗಿರಿಯಲ್ಲಿ ಸಿಲುಕಿಕೊಂಡಿರಬಹುದು ಮತ್ತು ಹೊರಬರಲು ಸಾಧ್ಯವಾಗದೇ, ಹೆತ್ತವರನ್ನು ಕುಟುಂಬವನ್ನು ನೋಯಿಸುತ್ತಿದ್ದೀರಾ? ಇದರಿಂದ ಹೊರಬರಬೇಕೆಂಬ ತವಕದಿಂದ ದೇವರನ್ನು ನೋಡಿ ಪ್ರಾರ್ಥಿಸಿರಿ. ನನ್ನ ಶಕ್ತಿ ಮತ್ತು ಪ್ರಯತ್ನದಿಂದ ಅಸಾಧ್ಯವಾದದ್ದನ್ನು ನೀವೇ ನನಗೆ ಮಾಡಿ ಎಂದು ಪ್ರಾರ್ಥಿಸಿ ನೋಡಿ. ಖಂಡಿತವಾಗಿಯೂ ಸ್ವತಂತ್ರರಾಗುತ್ತೀರಿ. ನನ್ನನ್ನು ಬಿಡುಗಡೆ ಮಾಡಿದವರು ನಿಮ್ಮನ್ನೂ ಬಿಡುಗಡೆ ಮಾಡುತ್ತಾರೆ ಎಂಬುದು ಹೆಚ್ಚು ಖಚಿತವಲ್ಲವೇ? 

- B. ಡೇವಿಡ್

 

ಪ್ರಾರ್ಥನಾ ಅಂಶ:

ಜಾರ್ಖಂಡ್ ಸೇವಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş