Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.07.2025
Share:

By Village Missionary Movement

Monday, 14-Jul-2025

ಧೈನಂದಿನ ಧ್ಯಾನ(Kannada) – 14.07.2025

 

ಮುನ್ನಡೆಸುವ ದೇವರು

 

"[ಯೆಹೋವನು] - ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು;..." - ಕೀರ್ತನೆ 32: 8

 

ಪ್ರಿಯ ಸ್ನೇಹಿತರೇ! ನನ್ನ ಅಜಾಗರೂಕತೆ ಮತ್ತು ಸ್ವಲ್ಪ ಮೂರ್ಖತನದಿಂದಾಗಿ ನಾನು ಕಳೆದುಕೊಳ್ಳಲಿದ್ದ ನನ್ನ ಜೀವನದಲ್ಲಿನ ಆಶೀರ್ವಾದವನ್ನು ಕರ್ತನು ಹೇಗೆ ರಕ್ಷಿಸಿದರು ಎಂಬುದನ್ನು ಸಾಕ್ಷಿಯಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.

 

ಒಂದು ದಿನ ಬೆಳಿಗ್ಗೆ, ನಾನು ದೇವತಾಶಾಸ್ತ್ರ ಕಾಲೇಜಿನಲ್ಲಿ ಓದುತ್ತಿರುವಾಗ, ನನ್ನ ಫೋನ್‌ಗೆ ಕರೆ ಬಂತು. ನಾನು ಫೋನ್ ಎತ್ತಿಕೊಂಡು ಮಾತನಾಡಲು ಪ್ರಾರಂಭಿಸಿದೆ. ನಾನು ಖಾತೆ ಹೊಂದಿರುವ ಬ್ಯಾಂಕಿನ ವ್ಯವಸ್ಥಾಪಕರು ಮಾತನಾಡುತ್ತಿರುವುದಾಗಿ ಹೇಳಿ, ನಾವು ಖಾತೆಗಳನ್ನು ಡಿಜಿಟಲ್‌ಗೆ ಪರಿವರ್ತಿಸುತ್ತಿದ್ದೇವೆ ಎಂದು ಹೇಳಿದರು. ನಿಮಗೆ OTP ಸಂಖ್ಯೆ ಬರುತ್ತದೆ. ದಯವಿಟ್ಟು ಅದನ್ನು ಪರಿಶೀಲಿಸಿ ನನಗೆ ತಿಳಿಸಿ ಎಂದರು. ನಾನು ಸ್ವಲ್ಪವೂ ಯೋಚಿಸದೆ, ನನ್ನ ಫೋನ್‌ಗೆ ಬಂದ OTP ಸಂಖ್ಯೆಯನ್ನು ಸಹ ಹೇಳಿಬಿಟ್ಟೆ. ನಂತರ ತರಗತಿಗಳ ಪ್ರಾರಂಭದ ಗಂಟೆ ಬಾರಿಸಿತು. ಆ ಸಮಯದಲ್ಲಿ, ದೇವರು ನನಗೆ ಅರಿವನ್ನುಂಟುಮಾಡಿದರು, ಈಗ ಎಷ್ಟು ಸಮಯ? ಬೆಳಿಗ್ಗೆ 9 ಗಂಟೆಗೆ ಯಾರಾದರೂ ಬ್ಯಾಂಕಿನಿಂದ ಕರೆ ಮಾಡುತ್ತಾರಾ? ಎಂದು ಪ್ರೇರೇಪಿಸಿದಾಗ ನನಗೆ ಪ್ರಜ್ಞೆ ಬಂದಂತೆ ಇತ್ತು. ದೇವರ ಬಳಿ ಕ್ಷಮೆಯಾಚಿಸಿ, ಉಸ್ತುವಾರಿ ಶಿಕ್ಷಕರಿಂದ ಅನುಮತಿ ಪಡೆದು, ಬೇಗನೆ ಆಟೋದಲ್ಲಿ ಬ್ಯಾಂಕ್‌ಗೆ ಹೋದೆ.

 

ಆ ಸಮಯದಲ್ಲಿ, ನನ್ನ ಬ್ಯಾಂಕ್ ಖಾತೆಯಲ್ಲಿ ನನ್ನ ಮಗನ ಸ್ಕೂಲ್ ಫೀಸ್ ಗೆ ಮಾತ್ರ ಹಣವಿತ್ತು. ಆ ಹಣವನ್ನು ತೆಗೆದರೆ, ಆ ವರ್ಷದ ಶಾಲಾ ಶುಲ್ಕವನ್ನು ಪಾವತಿಸಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಅಜ್ಞಾನ ಮತ್ತು ಅಜಾಗರೂಕತೆಯಿಂದಾಗಿ, ನನ್ನ ಬ್ಯಾಂಕ್ ವಿವರಗಳನ್ನು ನಾನೇ ನೀಡಿದ್ದೆ, ಈಗ ನಾನು ಏನು ಮಾಡಬೇಕು? ದೇವರೇ ನನಗೆ ಸಹಾಯ ಮಾಡಿ ಎಂದು ಪ್ರಾರ್ಥಿಸುತ್ತಾ ನಾನು ಬ್ಯಾಂಕಿಗೆ ಹೋದೆ. ದೇವರ ಮಹಾ ಕೃಪೆಯಿಂದ, ನಾನು ಬ್ಯಾಂಕಿಗೆ ಹೋಗುವವರೆಗೂ ನನ್ನ ಖಾತೆಯಿಂದ ಯಾವ ಹಣವನ್ನು ತೆಗೆದುಕೊಂಡಿರಲಿಲ್ಲ. ಬ್ಯಾಂಕ್ ಉದ್ಯೋಗಿ ತಕ್ಷಣ ಬೇರೆ ಯಾರೂ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗದಂತೆ ಎಲ್ಲವನ್ನೂ ಸರಿಪಡಿಸಿದರು, ನನಗೆ ಹೊಸ ಎಟಿಎಂ ಕಾರ್ಡ್ ನೀಡಿದರು ಮತ್ತು ಸೂಚನೆಗಳೊಂದಿಗೆ ನನ್ನನ್ನು ಕಳುಹಿಸಿದರು. ಹೀಗಾಗಿ, ಆ ವರ್ಷ ದೇವರ ಕೃಪೆಯಿಂದ ಆ ಹಣ ಕಾಪಾಡಲ್ಪಟ್ಟು ನನ್ನ ಮಗನ ಶಾಲಾ ಶುಲ್ಕವನ್ನು ಪಾವತಿಸಲಾಯಿತು.

 

ಹಲವು ಬಾರಿ, ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ, ಇತರರು ಎಷ್ಟೇ ಸಲಹೆ ನೀಡಿದರೂ, ದೇವರು ನಮಗೆ ತಿಳಿಸುವ ವಿಷಯಗಳಲ್ಲಿಯೂ ಸಹ, ನಾವು ಮೂರ್ಖರಂತೆ ಮರೆತು ಅಸಡ್ಡೆ ತೋರುತ್ತೇವೆ. "ಆಗ ಅವರು ಬೇಡುವದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು." (ಯೆಶಾಯ 65:24) ಎಂಬ ವಾಕ್ಯದ ಪ್ರಕಾರ ಕರ್ತನು ನಮ್ಮನ್ನು ರಕ್ಷಿಸಿ, ಬೋಧಿಸಿ ಮುನ್ನಡೆಸುತ್ತಾರೆ. ನಿಮ್ಮ ಜೀವನದಲ್ಲಿಯೂ ಸಹ ಆತನ ಶಬ್ಧವನ್ನು ಕೇಳಿ, ಆತನ ಮಾರ್ಗದರ್ಶನವನ್ನು ಪಡೆದು ಆತನ ಸಲಹೆಯನ್ನು ಅನುಸರಿಸಿದರೆ, ನಮ್ಮ ಮಾರ್ಗವು ಸಮವಾಗಿ ಆಶೀರ್ವಾದವಾಗಿ ಇರುತ್ತದೆ. ಆಮೆನ್. 

- Rev. ಎಲಿಜಬೆತ್

 

ಪ್ರಾರ್ಥನಾ ಅಂಶ:

ಸೇವಾ ಕ್ಷೇತ್ರಗಳಲ್ಲಿ ಸಂಪೂರ್ಣ ಬೈಬಲ್ ಅನ್ನು ತೆಗೆದುಕೊಂಡವರು, ಅದನ್ನು ಕ್ರಮವಾಗಿ ಓದಿ ನಂಬಿಕೆಯಲ್ಲಿ ಬಲಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş