Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.07.2025 (Kids Special)
Share:

By Village Missionary Movement

Sunday, 13-Jul-2025

ಧೈನಂದಿನ ಧ್ಯಾನ(Kannada) – 13.07.2025 (Kids Special)

 

ಮರೆಯಬೇಡ

 

"ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ" - ಕೀರ್ತನೆ 103:2

 

ಆಸ್ಟಿನ್ ಎಂಬ ಒಬ್ಬ ಶ್ರೀಮಂತ ಅಣ್ಣನಿಗೆ ಅನೇಕ ಸ್ನೇಹಿತರಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ರಸ್ತೆಯ ಪಕ್ಕದಲ್ಲಿರುವ ಕಸದ ತೊಟ್ಟಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದುಕೊಳ್ಳುತ್ತಿರುವ ಒಬ್ಬ ಹುಡುಗನನ್ನು ಕಂಡು ಅವನ ಫೋಟೋ ಹಿಡಿದುಕೊಂಡರು. ಆದರೆ ಆಸ್ಟಿನ್ ಅಣ್ಣ ಅವನನ್ನು ತನ್ನ ಮನೆಗೆ ಕರೆದೊಯ್ದರು. ದಾರಿಯಲ್ಲಿ ಹೋಗುವಾಗ, ಅವನ ಎಲ್ಲಾ ಸ್ನೇಹಿತರು ಇವನಿಗೆ ಸ್ವಲ್ಪ ಹಣ ನೀಡಿ ಸಹಾಯ ಮಾಡು, ನಿನ್ನೊಂದಿಗೆ ಕರೆದುಕೊಂಡು ಹೋಗಬೇಡ, ಅದು ಚೆನ್ನಾಗಿರೋದಿಲ್ಲ ಎಂದು ಬೈದರು. ಆದರೆ ಆಸ್ಟಿನ್ ಅಣ್ಣ ಅವನನ್ನು ಪ್ರೀತಿಯಿಂದ ನಿನ್ನ ಹೆಸರೇನು ಎಂದು ಕೇಳಿದರು. ಹುಡುಗ ತವಕದೊಂದಿಗೆ ನನ್ನ ಹೆಸರು ಕುಮಾರ್, ನನಗೆ ಯಾರೂ ಇಲ್ಲ ಎಂದು ಹೇಳಿದನು. ಸರಿ ಬಾ, ನಾನು ನಿನ್ನನ್ನು ಅಂಗಡಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಅವನಿಗೆ ಹೊಸ ಡ್ರೆಸ್ ತೆಗೆದುಕೊಟ್ಟು, ಸ್ನಾನ ಮಾಡಲು ಹೇಳಿದರು. ನಂತರ ನಾನು ನಿನ್ನನ್ನು ಓದಿಸುತ್ತೇನೆ, ನೀನು ಚಿಂತಿಸದೆ ನನ್ನ ಮನೆಯಲ್ಲೇ ಇರು ಎಂದು ಕುಮಾರ್‌ನನ್ನು ತನ್ನ ಕಿರಿಯ ಸಹೋದರನಂತೆ ಅಕ್ಕರೆಯಿಂದ ನೋಡಿಕೊಂಡರು. 

 

ಕುಮಾರ್ ಶಾಲೆಗೆ ಹೋಗಲು ಪ್ರಾರಂಭಿಸಿದನು. ಅವನು ಚೆನ್ನಾಗಿ ಓದಿದನು, ಹಾಡುಗಳನ್ನು ಹಾಡುತ್ತಿದ್ದನು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಸಹ ಗೆದ್ದನು. ವರ್ಷಗಳು ಕಳೆದವು, ಅವನು ಶಾಲೆ ಮುಗಿಸಿ ಕಾಲೇಜು ಸೇರಿದಾಗ, ಅವನಿಗೆ ಅನೇಕ ಕೆಟ್ಟ ಸ್ನೇಹಿತರು ಸಿಕ್ಕರು. ಅವರೊಂದಿಗೆ ಅವನು ಸಿಗರೇಟ್ ಸೇದಲು ಮತ್ತು ಕೆಟ್ಟ ಅಭ್ಯಾಸಗಳನ್ನು ಕಲಿತುಕೊಂಡನು. ಆಸ್ಟಿನ್ ಅಣ್ಣ ಮಾಡಿದ ಉಪಕಾರಗಳನ್ನು ಮರೆಯಲು ಪ್ರಾರಂಭಿಸಿದನು. ಅವರನ್ನು ಯಾಮಾರಿಸಿ ಹಣ ತೆಗೆದುಕೊಂಡು ಹೋಗಿ ಸಿನಿಮಾ ನೋಡಲು ಪ್ರಾರಂಭಿಸಿದನು. ಒಂದು ದಿನ ಅವನು ಸಿಗರೇಟ್ ಸೇದುತ್ತಲೇ ಮನೆಗೆ ಬಂದನು. ಅಣ್ಣನನ್ನು ನೋಡಿದ ಕೂಡಲೇ ಒಳ್ಳೆಯ ಹುಡುಗನಂತೆ ವರ್ತಿಸಲು ಪ್ರಾರಂಭಿಸಿದನು. ಸತ್ಯ ತಿಳಿದಿದ್ದ ಆಸ್ಟಿನ್ ಅಣ್ಣ ತಪ್ಪು ದಾರಿಯಲ್ಲಿ ಹೋಗಬಾರದು ಎಂದು ಬುದ್ಧಿವಾದ ಹೇಳಿದರು. ಕೆಟ್ಟ ಸ್ನೇಹಿತರಿಂದ ದೂರವಿರು ಎಂದು ಅವರು ಎಷ್ಟೇ ಹೇಳಿದರೂ ಕುಮಾರ್ ಕೇಳಲೇ ಇಲ್ಲ. ನನ್ನ ಸ್ನೇಹಿತರನ್ನು ಟೀಕಿಸಲು ನೀವು ಯಾರು? ಎಂದು ಕುಮಾರ್ ಕೇಳೇಬಿಟ್ಟನು. ಆಸ್ಟಿನ್ ಅಣ್ಣ ತನ್ನ ಮೊಬೈಲ್ ನಲ್ಲಿ ಏನನ್ನೋ ನೋಡುತ್ತಲೇ ಇದ್ದರು. ನನಗೆ ಫೋನ್ ಬೇಕು, ಕೊಡಿ ಎಂದು ತೆಗೆದುಕೊಂಡು ಅದರಲ್ಲಿದ್ದ ಫೋಟೋ ನೋಡಿದಾಗ ಅವನ ಕಣ್ಣಲ್ಲಿ ನೀರು ಬಂತು. ಅದು ಹಳೆಯ ನೆನಪುಗಳನ್ನು ತಂದಿತು. ಕಸದ ತೊಟ್ಟಿಯ ಬಳಿ ನಿಂತು ತೆಗೆದ ಫೋಟೋ. ಅದನ್ನು ನೋಡಿದಾಗ, ಅವನು ತನ್ನ ಪರಿಸ್ಥಿತಿಯನ್ನು ಅರಿತುಕೊಂಡು ಕಸ ಆಯುತಿದ್ದ ನನ್ನನ್ನು ಓದಿಸಿ ಸಂತೋಷಪಡುತಿದ್ದ ಆಸ್ಟಿನ್ ಅಣ್ಣನ ಪ್ರೀತಿಯನ್ನು ನೆನೆದಾಗ, ಹೃದಯ ಮುರಿದು ಅಳಲು ಪ್ರಾರಂಭಿಸಿದನು. ಆಸ್ಟಿನ್ ಅಣ್ಣನ ಬಳಿ ಕ್ಷಮೆಯಾಚಿಸಿದನು. ಅಣ್ಣ ಕುಮಾರ್ ಅನ್ನು ಪ್ರೀತಿಯಿಂದ ಅಪ್ಪಿಕೊಂಡರು.

 

ಪ್ರಿಯ ಪುಟ್ಟ ಮಕ್ಕಳೇ! ಯೇಸು ನಮಗಾಗಿ ಎಷ್ಟೊಂದು ಉಪಕಾರಗಳನ್ನು ಮಾಡಿದ್ದಾರೆ. ನಾವು ಬಹಳಷ್ಟು ಬಾರಿ ಮರೆತುಬಿಡುತ್ತೇವೆ. ಅಲ್ಲವೇ? ಹಾಗೆ ಇರಲೇಬಾರದು ಪುಟಾಣಿಗಳೇ. ಜೀವ, ಸೌಖ್ಯ, ಬಲ... ಇನ್ನೂ ಬಹಳಷ್ಟು ಹೇಳುತ್ತಲೇ ಹೋಗಬಹುದು. ಇಷ್ಟೊಂದು ಉಪಕಾರ ಮಾಡಿದ ಯೇಸುವಿಗೆ ಕೃತಜ್ಞರಾಗಿರುವ ಮಕ್ಕಳಂತೆ ಬದುಕಬೇಕು ಪುಟಾಣಿಗಳೇ o.k ನಾ. 

- Mrs ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel