Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.07.2025
Share:

By Village Missionary Movement

Saturday, 12-Jul-2025

ಧೈನಂದಿನ ಧ್ಯಾನ(Kannada) – 12.07.2025

 

ವೈರಾಗ್ಯ 

 

"...ಯಾವಾಗಲೂ ಒಳ್ಳೇ ವಿಷಯದಲ್ಲಿ ನೀವು ಆಸಕ್ತರಾಗಿರುವದು ಒಳ್ಳೇದು" - ಗಲಾತ್ಯ 4:18

 

ಬೇರೆ ಧರ್ಮದಲ್ಲಿ ಜನಿಸಿದ ನಾನು, ರಜಾದಿನಗಳಲ್ಲಿ ನಡೆದ VBS ಸೇವೆಗಳ ಮೂಲಕ ಯೇಸುವನ್ನು ನನ್ನ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದೆ. ನಂತರ, ನಾನು ಒಂಭತ್ತನೆ ತರಗತಿಯಲ್ಲಿದ್ದಾಗ, ಉತ್ತರ ಭಾರತದ ಪ್ರದೇಶದಲ್ಲಿ ಸೇವೆ ಸಲ್ಲಿಸಲು ನನ್ನ ಜೀವನವನ್ನು ಮುಡಿಪಾಗಿಟ್ಟೆ. ಆದ್ದರಿಂದ, ಆ ದಿನಗಳಲ್ಲಿ ಶಾಲೆಯು ಕಲಿಸುತ್ತಿದ್ದ ಹಿಂದಿ ತರಗತಿಯಲ್ಲಿ ಭಾಗವಹಿಸುವ ಮೂಲಕ ನಾನು ಹಿಂದಿ ಕಲಿಯಲು ಪ್ರಾರಂಭಿಸಿದೆ. ದಿನಗಳು ಕಳೆದಂತೆ, ಒಂದು ದಿನ ಹಿಂದಿ ಶಿಕ್ಷಕರು ಹಿಂದಿಯಲ್ಲಿ ಒಂದು ನಿರ್ದಿಷ್ಟ ಭಾಗವನ್ನು ಓದಲು ಹೇಳಿದರು. ನಾನು ಅದನ್ನು ತಪ್ಪಾಗಿ ಓದಿದಾಗ, ಶಿಕ್ಷಕರು ತುಂಬಾ ಕೋಪಗೊಂಡು ನನ್ನನ್ನು ಬೈದರು. ಆ ದಿನದಿಂದ, ನಾನು ಹಿಂದಿ ಕಲಿಯುವ ಪ್ರಯತ್ನವನ್ನೇ ಬಿಟ್ಟುಬಿಟ್ಟೆ. 

 

ವರ್ಷಗಳು ಕಳೆದವು. ನಾನು ದೇವರನ್ನು ಪ್ರಾರ್ಥಿಸಿದ ಹಾಗೆಯೇ, ದೇವರು ನನಗೆ ಉತ್ತರ ಭಾರತದ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಜೀವನ ಸಂಗಾತಿಯನ್ನು ಕೊಟ್ಟರು. ನಾವು ಕುಟುಂಬವಾಗಿ ಛತ್ತೀಸ್‌ಗಢ ಪ್ರದೇಶಕ್ಕೆ ತೆರಳಿದೆವು. ಆದರೆ ನನಗೆ ಹಿಂದಿ ತಿಳಿಯದ ಕಾರಣ ಯಾರೊಂದಿಗೂ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಆ ದಿನ ಶಿಕ್ಷಕರು ನನ್ನನ್ನು ಬೈದದ್ದರಿಂದ ಇನ್ನು ನಾನು ಹಿಂದಿ ಕಲಿಯುವುದೇ ಇಲ್ಲ ಎಂದು ಅಂದುಕೊಂಡ ನನ್ನ ತಪ್ಪು ವೈರಾಗ್ಯವೇ ಕಾರಣ. ಹಿಂದಿ ಮಾತನಾಡಿದರೆ ಮಾತ್ರ ಸೇವೆ ಸಲ್ಲಿಸಲು ಸಾಧ್ಯ ಎಂಬ ಬಲವಂತದ ಪರಿಸ್ಥಿತಿಯಲ್ಲಿ ನಾನು ಹಿಂದಿಯನ್ನು ವೈರಾಗ್ಯವಾಗಿ ಅಧ್ಯಯನ ಮಾಡಲು ಪ್ರಯತ್ನಿಸಿದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ 40 ದಿನಗಳು ಉಪವಾಸ ದೊಂದಿಗೆ ಪ್ರಾರ್ಥಿಸುತ್ತಲೇ, ಹಿಂದಿ ಓದಲು ಮುಂದುವರೆಸಿದೆ. ನನಗೆ ಬಹಳ ವೈರಾಗ್ಯ, ಒಂದು ದಿನ ಹಿಂದಿಯಲ್ಲಿ ಮಾತನಾಡಿ ಬಿಡುತ್ತೇನೆ ಎಂದು. ನಾವು ಇದ್ದ ಪ್ರದೇಶದಲ್ಲಿ ಬೋಧಿಸಲು ಅವಕಾಶ ಸಿಕ್ಕಾಗ, ನಾನು ಮೊದಲ ಬಾರಿಗೆ ಹಿಂದಿಯಲ್ಲಿ ಬೋಧಿಸಿದೆ. ಆ ದಿನ ಕರ್ತನು ನನ್ನ ನಾಲಿಗೆಯನ್ನು ಮುಟ್ಟಿದರು. ಆ ದಿನದಿಂದ ಇಂದಿನವರೆಗೆ, ದೇವರ ಕೃಪೆಯಿಂದ, ನಾನು ಹಿಂದಿ ಮಾತನಾಡಬಲ್ಲೆ.

 

ಅರಣ್ಯಕಾಂಡ 25 ನೇ ಅಧ್ಯಾಯದಲ್ಲಿ, ನಾವು ಇಸ್ರಾಯೇಲ್ ಜನರಲ್ಲಿ ಅನುಚಿತವಾದ ವಿಷಯವನ್ನು ನೋಡುತ್ತೇವೆ. ಇದರಿಂದಾಗಿ, ಫೀನೆಹಾಸನು ಭಕ್ತಿಪೂರ್ವಕ ವೈರಾಗ್ಯವನ್ನು ತೋರಿಸಿದ್ದರಿಂದ, ಇಸ್ರಾಯೇಲ್ ಪುತ್ರರ ಮೇಲೆ ಉಂಟಾದ ಕರ್ತನ ಕೋಪವನ್ನು ತಿರುಗಿಸಿದರು.

 

ಇದನ್ನು ಓದುತ್ತಿರುವ ಪ್ರಿಯರೇ! ಇಲ್ಲಿ ವೈರಾಗ್ಯ ಎಂದರೆ ದೇವರ ಮೇಲಿನ ಪ್ರೀತಿಯನ್ನು ಸೂಚಿಸುತ್ತದೆ. ಅನಗತ್ಯ ವಿಷಯಗಳಲ್ಲಿ ವೈರಾಗ್ಯಗೊಳ್ಳುವಾಗ, ಅದು ದೇವರನ್ನು ದುಃಖಪಡಿಸುತ್ತದೆ. (ಉದಾಹರಣೆಗೆ, ಮತ್ತೊಬ್ಬರ ಮೇಲಿನ ಕೋಪ, ದ್ವೇಷ, ಕಹಿ). ನೀವು ಮತ್ತು ನಾನು ಅಗತ್ಯ ವಿಷಯಗಳಿಗಾಗಿ ಮತ್ತು ದೇವರಿಗಾಗಿ ಭಕ್ತಿಪೂರ್ವಕ ವೈರಾಗ್ಯವನ್ನು ತೋರಿಸಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇವರ ವಿಷಯಗಳಿಗಾಗಿ ನಿಜವಾಗಿಯೂ ವೈರಾಗ್ಯವನ್ನು ತೋರಿಸುವುದಾದರೆ, ಶೀಘ್ರದಲ್ಲೇ ಭಾರತ ದೇಶವನ್ನು ಯೇಸುವಿಗೆ ಸ್ವಂತವಾದ ದೇಶವಾಗಿ ಪರಿವರ್ತಿಸಬಹುದು. ಆದ್ದರಿಂದ ವೈರಾಗ್ಯವುಳ್ಳವರಾಗಿ ಮಾರ್ಪಡೋಣವಾ?

- Mrs. ಶಕ್ತಿ ಶಂಕರ್

 

ಪ್ರಾರ್ಥನಾ ಅಂಶ:

ಸೇವಕರ ತರಬೇತಿ ಕಟ್ಟಡಕ್ಕೆ ಸರ್ಕಾರದ ಅನುಮತಿ ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel