Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.07.2025
Share:

By Village Missionary Movement

Friday, 11-Jul-2025

ಧೈನಂದಿನ ಧ್ಯಾನ(Kannada) – 11.07.2025

 

ಮೂವತ್ತು, ಅರವತ್ತು, ನೂರರಷ್ಟು...

 

"ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡಬಾರದು ನೋಡಿರಿ;..." - ಮತ್ತಾಯ 18:10

 

ನನ್ನ ಸ್ವಂತ ಊರು ವಿರುಧುನಗರ್ ಜಿಲ್ಲೆಯ ಸಾತ್ತೂರ್. ಇಲ್ಲಿ 1990 ರ ದಶಕದಲ್ಲಿ, ಬೆಂಕಿಕಡ್ಡಿ ಉದ್ಯಮವು ಜನರ ಜೀವನೋಪಾಯವಾಗಿತ್ತು. ಬೆಂಕಿಕಡ್ಡಿ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು, ಮನೆ ಬಾಡಿಗೆ ಪಾವತಿಸಲು ಮತ್ತು ಇತರ ಅನೇಕ ಮೂಲಭೂತ ಅಗತ್ಯಗಳನ್ನು ಪೂರೈಸಲು ಜನರು ಹೆಣಗಾಡುತ್ತಿದ್ದ ಸಮಯ ಅದು. ಆ ದಿನಗಳಲ್ಲಿ, 15 ಮಕ್ಕಳು ನಮ್ಮ ಬೀದಿಯಲ್ಲಿ ಒಟ್ಟುಗೂಡಿ ಕ್ರಿಕೆಟ್ ಆಡುವುದು ವಾಡಿಕೆ. ನಮ್ಮೊಳಗೆ ಕೆಟ್ಟ ಮಾತುಗಳು ಮಾತಾಡುವುದು, ಜಗಳವಾಡುವುದು ಮತ್ತು ಮನೆಗೆ ವಿಧೇಯರಾಗದೆ ಇರುವುದು ಮುಂತಾದ ಅನೇಕ ವಿಷಯಗಳು ಸಾಮಾನ್ಯವಾಗಿದ್ದವು. 

 

ಒಮ್ಮೆ, ಶಿವಕಾಶಿಯ ಒಂದು ಅಕ್ಕ ನಗು ಮುಖದೊಂದಿಗೆ ನಮ್ಮ ಬೀದಿಗೆ ಬಂದು ಕರ್ತನಾದ ಯೇಸು ಕ್ರಿಸ್ತನ ಬಗ್ಗೆ ಹೇಳಿದರು. ಅವರು ಮುಂದಿನ ವಾರ ಬಂದು ನಿಮಗೆ ಒಂದು ಕಥೆ ಹೇಳುತ್ತೇನೆಂದು ಹೇಳಿ ಹೊರಟುಹೋದರು. ಮುಂದಿನ ವಾರ ಬಂತು. ಅಲ್ಲಿ ನನ್ನನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಅವರು ನನ್ನನ್ನು ಕೂರಿಸಿ ಯೇಸು ಕ್ರಿಸ್ತನ ಬಗ್ಗೆ ಹೇಳಿದರು ಮತ್ತು ನನಗೆ ಹೊಸ ಒಡಂಬಡಿಕೆಯನ್ನು ನೀಡಿದರು. ಅವರು ನನ್ನ ಮನೆಗೆ ಬಂದು ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಪ್ರಾರ್ಥಿಸಿದರು. ಕೆಟ್ಟ ಮಾತುಗಳನ್ನಾಡಬಾರದು ಎಂದು ನನಗೆ ಹೇಳಿಕೊಟ್ಟರು. 

 

ಅವರು ಪ್ರತಿ ವಾರ ನನ್ನನ್ನು ನೋಡಲು ಬರುತ್ತಿದ್ದರು. ಅವರು ಕರ್ತನಾದ ಯೇಸು ಕ್ರಿಸ್ತನ ಪ್ರೀತಿಯ ಬಗ್ಗೆ ನನಗೆ ಹೆಚ್ಚಿನದನ್ನು ಕಲಿಸಿದರು. ಅವರು ನನಗೆ ನೀಡಿದ ಹೊಸ ಒಡಂಬಡಿಕೆಯನ್ನು ನಾನು ಓದಲು ಪ್ರಾರಂಭಿಸಿದೆ, ಕರ್ತನಾದ ಯೇಸು ಕ್ರಿಸ್ತನನ್ನು ನನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದೆ, ಕೆಟ್ಟ ಮಾತುಗಳನ್ನು ಮಾತನಾಡುವುದನ್ನು ನಿಲ್ಲಿಸಿದೆ ಮತ್ತು ನನ್ನ ಹೆತ್ತವರಿಗೆ ವಿಧೇಯನಾಗಲು ಪ್ರಾರಂಭಿಸಿದೆ. ಎರಡು ತಿಂಗಳುಗಳ ನಂತರ, ಅವರು ಬರುವುದಕ್ಕಿಂತ ಮೊದಲೇ ನಾನು ನನ್ನ ಬೀದಿಯಿಂದ 10 ಚಿಕ್ಕ ಮಕ್ಕಳನ್ನು ಒಟ್ಟುಗೂಡಿಸಿ ಅಕ್ಕನ ಬರೋಣಕ್ಕಾಗಿ ಸಿದ್ಧವಾಗಿದ್ದೆ. ಮತ್ತು ನಾನು 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ನಾನು ಆ ಅಕ್ಕನ ಸೇವಾ ತಂಡದಲ್ಲಿ ಸೇರಿಕೊಂಡು ಮಕ್ಕಳ ಸೇವೆಯನ್ನು ಮಾಡಲು ಹಳ್ಳಿಗಳಿಗೆ ಹೋಗಲು ಪ್ರಾರಂಭಿಸಿದೆ. ಈ ರೀತಿಯಾಗಿ, ನಾನು ಸೇವೆಗೆ ನನ್ನನ್ನು ಅರ್ಪಿಸಿಕೊಂಡೆ, ನಂತರದ ದಿನಗಳಲ್ಲಿ , ಉತ್ತರ ಭಾರತದ ಛತ್ತೀಸ್‌ಗಢ ರಾಜ್ಯಕ್ಕೆ ಮಿಷನರಿಯಾಗಿ ಹೋದೆ. 

 

ಆ ಅಕ್ಕ ನನ್ನೊಬ್ಬನಿಗಾಗಿ ಮಾಡಿದ ಮಕ್ಕಳ ಸೇವೆ ವ್ಯರ್ಥವಾಗಲಿಲ್ಲ. ಇಂದು, ಗ್ರಾಮ ಮಿಷನರಿ ಚಳುವಳಿ ನನ್ನನ್ನು ಉತ್ತರ ಭಾರತದ ಸೇವೆಯನ್ನು ಮಾಡುವ ಮಿಷನರಿಯಾಗಿ ಮತ್ತು ಅಲ್ಲಿ ಸೇವಕರನ್ನು ಅಭಿವೃದ್ಧಿಪಡಿಸುವ ಸೇವಾ ನಾಯಕನನ್ನಾಗಿ ಪರಿವರ್ತಿಸಿದೆ. ಆ ದಿನ ನನ್ನ ಹೃದಯದಲ್ಲಿ ಬಿತ್ತಿದ ಆ ಬೀಜವು 30, 60, 100 ರಷ್ಷು ಫಲ ನೀಡುತ್ತಲೇ ಇದೆ. ಇದನ್ನು ಓದುತ್ತಿರುವ ನೀವು ಸಹ ಮಕ್ಕಳ ಸೇವೆಯನ್ನು ಉತ್ಸಾಹದಿಂದ ಮಾಡಿ. ಉತ್ತಮ ಫಲಿತಾಂಶಗಳನ್ನು ನೋಡಿ. ಆಮೆನ್.

- T. ಶಂಕರ್‌ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಸೇವಕರ ತರಬೇತಿ ಕಟ್ಟಡ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel