Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.05.2021
Share:

By Village Missionary Movement

Wednesday, 26-May-2021

ಧೈನಂದಿನ ಧ್ಯಾನ(Kannada) – 26.05.2021

ಹೀನವಾಗಿ ನೆನೆಸಬಾರದು

 "ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡಬಾರದು ನೋಡಿರಿ;..." - ಮತ್ತಾಯ 18:10 

ಸಾಮಾನ್ಯವಾಗಿ ನಾವು ನಮಗಿಂತ ವಯಸ್ಸಿನಲ್ಲಿ, ವಿದ್ಯಾಭ್ಯಾಸದಲ್ಲಿ, ಅಂತಸ್ತಿನಲ್ಲಿ ಕಡಿಮೆ ಇರುವವರಿಗೆ ಪ್ರಾಮುಖ್ಯತೆಯನ್ನು ಕೊಡಲು ನಮ್ಮ ಜನ್ಮ ಸ್ವಭಾವವು ಸ್ಥಳ ಕೊಡುವುದಿಲ್ಲ. ಸುಲಭವಾಗಿ ಅವರನ್ನು ನಂಬಿ ಯಾವ ಜವಾಬ್ದಾರಿಯನ್ನು ಕೊಡುವುದಿಲ್ಲ. ನಿನ್ನೆ ಬೆಳೆದ ಹಣಬೆ ಎಂದು ಹೇಳಿ ಅವರ ವಿವೇಕವನ್ನು ನೋಡದೆ ಸುಲಭವಾಗಿ ಹೀನವಾಗಿ ಮಾತನಾಡಿ ಬಿಡುತ್ತೇವೆ. ಆದರೆ ಸತ್ಯವೇದವು "ಒಬ್ಬನನ್ನಾದರೂ ತಾತ್ಸಾರಮಾಡಬಾರದು ನೋಡಿರಿ; ಎಂದು ಎಚ್ಚರಿಸುತ್ತಿದೆ. 18 ವಯಸ್ಸು ಕೂಡ ತುಂಬದ ಯೌವನಸ್ಥನೊಬ್ಬ ಜಗತ್ಪ್ರಸಿದ್ದತೆ ಹೊಂದಿದ ಟಿ.ಎಸ್ ಮೂಡಿಯವರ ಚಿಕಾಗೋ ನಗರದ ಆಲಯದಲ್ಲಿ ಪ್ರಸಂಗ ಮಾಡಲು ಬಯಸುತ್ತಿದ್ದೇನೆ ಎಂದು ಹೇಳಿದರು. ಮೂಡಿಯವರು ಮಾತ್ರ ಆತನು ಒಬ್ಬ ಯೌವ್ವನಸ್ಥನಾಗಿದ್ದದರಿಂದ ಅವನನ್ನು ಅಂಗೀಕರಿಸದೇ  ತಾತ್ಸಾರ ಮಾಡಿದರು. ಆದರೆ ದೇವರ ಯೋಜನೆಯಂತೆ ಹಲವು ತಿಂಗಳುಗಳ ನಂತರ ಮೂಡಿಯವರ ಸಭೆಯಲ್ಲಿ ಅವರು ಪ್ರಸಂಗ ಮಾಡಿದರು. ಅವರ ಪ್ರಸಂಗವನ್ನು ಕೇಳಿದ ಅನೇಕರು ತಮ್ಮ ಹಿಂಜಾರಿ ಹೋದ ಜೀವನದಿಂದ ಮನಸಾಂತರ ಹೊಂದಿದರು. ಡಿ.ಎಸ್. ಮೂಡಿಯವರು ಕಣ್ಣೀರಿನಿಂದ ಸಂದೇಶವನ್ನು ಕೇಳಿದರು. ಅದರ ನಂತರ ಇನ್ನು ಯಾರನ್ನೂ ಹೀನವಾಗಿ ನೋಡುವುದಿಲ್ಲ ಎಂದು ತೀರ್ಮಾನಿಸಿದರು.

ಸತ್ಯವೇದದಲ್ಲಿ ಹೀಗೆ ಕೆಲವು ಯೌವನಸ್ಥರು ತಮಗೆ ಬಹಳ ಹತ್ತಿರವಾದ ಸಂಬಂಧಗಳಿಂದ ಹೀನವಾಗಿ ನೆನೆಸಲ್ಪಟ್ಟರು. ಯೋಸೇಫನ ಕನಸು, ಅವನ ಮಾತು ಅವನ ಸಹೋದರರಿಗೆ ಹೀನವಾಗಿ ಕಾಣಿಸಿತು. ದಾವೀದನು ಯುದ್ಧಸ್ಥಾನದಲ್ಲಿದ್ದ ತನ್ನ ಸಹೋದರರಿಂದ ಹೀನವಾದ ಮಾತುಗಳನ್ನು ಕೇಳಬೇಕಾಯಿತು. ಆದರೂ ದೇವರು ಇವರ ಮುಖಾಂತರ ದೊಡ್ಡ ಕಾರ್ಯಗಳನ್ನು ಮಾಡಿದರು ಎಂಬುದು ನಮಗೆ ತಿಳಿದಿರುವ ಸತ್ಯ. ಅಂದು ಫರಿಸಾಯನು, ಸುಂಕದವನನ್ನು ಹೀನವಾಗಿ ನೆನೆಸಿದನು. ನಾನು ಇವನ ಹಾಗಲ್ಲ ಎಂದು ತನ್ನೊಳಗೆ ಹೇಳಿಕೊಂಡನು. ಆದರೂ ದೇವರ ದೃಷ್ಟಿಯಲ್ಲಿ ಸುಂಕದವನು ವಿಶೇಷವಾಗಿ ಕಾಣಿಸಿದನು.

ಇಂದು ನಮ್ಮ ಕೆಲಸದ ಸ್ಥಳದಲ್ಲಿ, ಸಭೆಯಲ್ಲಿ, ಕುಟುಂಬದಲ್ಲಿ ಮತ್ತೊಬ್ಬರನ್ನು ನಾವು ಹೀನವಾಗಿ ನೆನೆಸಬಹುದು. ನಮ್ಮ ಕ್ರಿಯೆಗಳಿಂದ, ಮಾತುಗಳಿಂದ, ನೋಟದಿಂದ, ನಾನು ನಿನಗಿಂತ ಉನ್ನತನು  ಎಂದು ತೋರಿಸಿಕೊಳ್ಳುತ್ತಿದ್ದೇವಾ? ಇದು ದೇವರ ದೃಷ್ಟಿಯಲ್ಲಿ ಪಾಪವೇ!  "ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ." ( ಫಿಲಿಪ್ಪಿ 2:3 ) ಎಂದು ತಾನೇ ಸತ್ಯವೇದವು ಹೇಳುತ್ತದೆ! ನನ್ನನ್ನು ಬಿಟ್ಟರೆ ಇದನ್ನು ಮಾಡುವುದಕ್ಕೆ ಇನ್ಯಾರೂ ಇಲ್ಲ ಎಂದು ನೆನೆಸುತ್ತಿದ್ದೇವಾ? ದೇವರಿಂದ ಕತ್ತೆಯಿಂದಲೂ ಮಾತನಾಡಿಸಲು ಸಾಧ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಪ್ರಿಯರೇ! ಕ್ರಿಸ್ತಯೇಸುವಿನ ಯೋಚನೆಯು ನಮ್ಮೊಬ್ಬೊಬ್ಬರಲ್ಲಿಯೂ ಇರುವುದಾದರೆ ನಾವು ಯಾರನ್ನೂ ಹೀನವಾಗಿ ನೆನೆಸುವುದಿಲ್ಲ. ವಿದ್ಯಾರ್ಹತೆ ಇಲ್ಲದ ನಮ್ಮ ತಂದೆತಾಯಿಗಳನ್ನು ಹೀನವಾಗಿ ನೆನೆಸದೆ ಇರೋಣ. ನಮ್ಮೊಂದಿಗಿರುವ ಜ್ಞಾನ ಕೊರತೆಯುಳ್ಳ ಸಹೋದರ ಸಹೋದರಿಯರನ್ನು ಹೀನವಾಗಿ ನೆನೆಸದೇ ಇರೋಣ. ಸಭೆಯಲ್ಲಿ ಆತ್ಮೀಯ ಜೀವನದಲ್ಲಿ ಕೊರತೆಯುಳ್ಳ ವಿಶ್ವಾಸಿಗಳನ್ನು ಹೀನವಾಗಿ ನೆನಸದಿರೋಣ. ಕ್ರಿಸ್ತನ ಚಿಂತೆಯೇ ನಮ್ಮಲ್ಲಿರಲಿ. ಮತ್ತೊಬ್ಬರನ್ನು ಶ್ರೇಷ್ಠವಾಗಿ ನೆನೆಸೋಣ. ಆಗ ಕರ್ತನು ನಮ್ಮನ್ನು ಹೆಚ್ಚಿಸುತ್ತಾರೆ.
-    Bro. ಅನೀಶ್ ಸಾಮುವೇಲ್

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆಯನ್ನು ಮುದ್ರಿಸಲು ಅಗತ್ಯವಾದ ಅವಶ್ಯಕತೆಗಳು ಪೂರೈಸಲ್ಪಡಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş