Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.07.2025 (Kids Special)
Share:

By Village Missionary Movement

Sunday, 06-Jul-2025

ಧೈನಂದಿನ ಧ್ಯಾನ(Kannada) – 06.07.2025 (Kids Special)

 

ವಿಧೇಯತೆಯೇ ಉತ್ತಮ 

 

"ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ." - ಯೋಹಾನ 14:15

 

Hello ಪುಟಾಣಿಗಳೇ! ಹೇಗಿದ್ದೀರಾ, ಹೊಸ ತರಗತಿ ಸೆಟ್ ಆಯ್ತಾ? ಮೊದಲಿನಿಂದಲೇ ಪಾಠಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿ, ಆಗ ಮಾತ್ರ ನೀವು ಪರೀಕ್ಷೆಯ ಸಮಯದಲ್ಲಿ ಹೆದರುವುದಿಲ್ಲ. O.k. ಪುಟಾಣಿಗಳೇ! ಇಂದು ನಾವು ಬೈಬಲ್ ಕಥೆಯನ್ನು ಕೇಳಲಿದ್ದೇವೆ. ನೀವು ಯೇಸುವಿಗೆ ವಿಧೇಯರಾದರೆ, ಹೊಸ ಆಶೀರ್ವಾದ. ಅದರ ಬಗ್ಗೆಯೇ, ಇಂದು ನಿಜವಾಗಿ ನಡೆದ ಬೈಬಲ್ ಕಥೆಯನ್ನು ಕೇಳಲಿದ್ದೇವೆ.

 

ರೇಕಾಬ್ಯರು ಎಂಬ ಕುಟುಂಬವಿತ್ತು. ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದೀರಾ? ಆ ದಿನಗಳಲ್ಲಿ, ಅಜ್ಜ, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ, ಹೀಗೆ ಜಂಟಿ ಕುಟುಂಬವಾಗಿದ್ದರು. ರೇಕಾಬ್ಯರು ಇದೇ ರೀತಿ ವಾಸಿಸುತ್ತಿದ್ದರು. ಇವರು ಏನು ಮಾಡಿದರು ಗೊತ್ತಾ? ಅವರ ತಂದೆ ಯೋನಾದಾಬನು ಅವರಿಗೆ ಏನೆಲ್ಲಾ ಹೇಳಿದರೋ, ಅದನ್ನೆಲ್ಲಾ ಹಾಗೆಯೇ ಮಾಡಿದರು. ನಿಮಗೆ ಆಶ್ಚರ್ಯವಾಗಿದೆಯಾ? ಪೋಷಕರು ಹೇಳುವುದನ್ನು ನೀವು ಹೇಗೆ ಕೇಳುತ್ತೀರಾ? ತಕ್ಷಣ ಪಾಲಿಸುವುದು ಕಷ್ಟವೇ. ಆದರೆ ಕರ್ತನು ರೇಕಾಬ್ಯರ ವಿಧೇಯತೆಗಾಗಿ ಅವರನ್ನು ಹೊಗಳುತ್ತಾರೆ. ಇಸ್ರಾಯೇಲ್ ಜನರನ್ನು ದೇವರು ಆರಿಸಿಕೊಂಡರು. ಪ್ರವಾದಿಯಾದ ಯೆರೆಮಿಯನ ಮೂಲಕ ಅವರಿಗೆ ಕೆಲವು ವಿಷಯಗಳನ್ನು ಹೇಳುವ ಮೂಲಕ ಅವರು ವಿಧೇಯರಾಗಬೇಕೆಂದು ಕರ್ತನು ನಿರೀಕ್ಷಿಸಿದರು. ಆದರೆ ಕರ್ತನು ಇಸ್ರಾಯೇಲಿನ ಅವಿಧೇಯ ಜನರಿಂದ ತುಂಬಾ ದುಃಖಿತರಾದರು ಮತ್ತು ರೇಕಾಬ್ಯರು ವಿಧೇಯರಾದದ್ದನ್ನು ಸಂತೋಷವಾಗಿ ಹೇಳಿದರು. (ಯೆರೆಮಿಯ 35)

 

ಅಂಥದ್ದೇನು ವಿಧೇಯರಾದರು ಎಂದು ತಾನೇ ಯೋಚಿಸುತ್ತಿದ್ದೀರಾ. ಪ್ರವಾದಿಯಾದ ಯೆರೆಮಿಯನು ರೇಕಾಬ್ಯರನ್ನು ದ್ರಾಕ್ಷಾರಸ ತುಂಬಿದ ಜಾಡಿಗಳಿರುವ ಕೋಣೆಗೆ ಕರೆದೊಯ್ದು ದ್ರಾಕ್ಷಾರಸವನ್ನು ಕುಡಿಯಲು ಹೇಳಿದರು. ಅವರು, “ನಾವು ಕುಡಿಯುವುದಿಲ್ಲ, ಏಕೆಂದರೆ ನಮ್ಮ ತಂದೆಯಾದ ಯೋನಾದಾಬನು, ನೀವು ದ್ರಾಕ್ಷಾರಸವನ್ನು ಕುಡಿಯದೆ, ಮನೆಗಳನ್ನು ಕಟ್ಟದೆ, ಗುಡಾರಗಳಲ್ಲಿ ವಾಸಿಸಿ ದ್ರಾಕ್ಷಿತೋಟಗಳನ್ನು ನೆಡದೆ ಇರಿ ಎಂದು ಹೇಳಿದ ತಂದೆಯ ಮಾತಿಗೆ ಇಂದಿನವರೆಗೂ ವಿಧೇಯರಾಗಿದ್ದೇವೆ ಎಂದು ಹೇಳಿದ ಕೂಡಲೇ ಪ್ರವಾದಿಯಾದ ಯೆರೆಮಿಯನು ಆಶ್ಚರ್ಯಚಕಿತನಾದನು. ಆದರೆ ದೇವರ ಮಾತಿಗೆ ಅವರ ಮಕ್ಕಳು ವಿಧೇಯರಾಗಲಿಲ್ಲ. ಇದು ಕರ್ತನಿಗೆ ಎಷ್ಟು ನೋವಿನಿಂದ ಕೂಡಿದೆ ಎಂಬುದನ್ನು ನಮಗೆ ತೋರಿಸುವುದಕ್ಕಾಗಿಯೇ ಸತ್ಯವೇದದಲ್ಲಿ ಬರೆದಿಟ್ಟಿದ್ದಾರೆ.

 

ಮುದ್ದು ಮಕ್ಕಳೇ! ನೀವು ನಿಮ್ಮ ಹೆತ್ತವರಿಗೆ ಅವಿಧೇಯರಾದರೆ ಅವರಿಗೆ ಎಷ್ಟು ಕಷ್ಟಕರವಾಗಿರುತ್ತದೋ, ಅದರಂತೆಯೇ ಯೇಸಪ್ಪನ ಮಾತಿಗೆ ಅವಿಧೇಯರಾದರೆ ಯೇಸಪ್ಪ ಕೂಡ ತುಂಬಾ ದುಃಖಪಡುತ್ತಾರೆ. ಏನು ಪುಟಾಣಿಗಳೇ! ದೇವರ ವಾಕ್ಯಕ್ಕೆ ವಿಧೇಯರಾಗಿ, ಯೇಸಪ್ಪನನ್ನು ಸಂತೋಷಪಡಿಸಲು ನೀವು ಸಿದ್ಧರಿದ್ದೀರಾ? ನಿಮ್ಮ ಕಣ್ಣುಗಳನ್ನು ಮುಚ್ಚಿ ಚಿಕ್ಕ ಪ್ರಾರ್ಥನೆ ಮಾಡಿ. ಯೇಸಪ್ಪಾ, ನಿಮ್ಮ ವಾಕ್ಯವನ್ನು ಪಾಲಿಸಲು ಮತ್ತು ನಿಮ್ಮನ್ನು ಸಂತೋಷಪಡಿಸುವ ಜೀವನವನ್ನು ನಡೆಸಲು ನನಗೆ ಸಹಾಯ ಮಾಡಿ ಯೇಸಪ್ಪಾ ಆಮೆನ್. 

- Sis ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş