Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.07.2025
Share:

By Village Missionary Movement

Friday, 04-Jul-2025

ಧೈನಂದಿನ ಧ್ಯಾನ(Kannada) – 04.07.2025

 

ಮುಂತಿಳಿಸಿದವರು 

 

"ಯಾರನ್ನು ಮೊದಲು ನೇವಿುಸಿದನೋ ಅವರನ್ನು ಕರೆದನು;..." - ರೋಮಾ 8:30

 

ಕ್ರೈಸ್ತ ಕುಟುಂಬದಲ್ಲಿ ಜನಿಸಿದ ನನ್ನ ಸಹೋದರ ಮತ್ತು ನಾನು ಕ್ರೈಸ್ತ ಕ್ರಮದ ಪ್ರಕಾರ ಬೆಳೆದೆವು. ನನ್ನ ಸಹೋದರ ತನ್ನ ಸ್ನೇಹಿತರೊಂದಿಗೆ ಈಜಲು ಕಲಿಯುತ್ತಿದ್ದಾಗ, ಅನಿರೀಕ್ಷಿತವಾಗಿ ಮುಳುಗಿ ಸತ್ತುಹೋದನು. ಆದ್ದರಿಂದ ನನ್ನ ಹೆತ್ತವರು ನನ್ನನ್ನು ಮನೆಯಿಂದ ಹೊರಗೆ ಹೋಗಲು ಬಿಡದೆ ಬಹಳ ಕಟ್ಟುನಿಟ್ಟಾಗಿ ಬೆಳೆಸಿದರು. ಆದಾಗ್ಯೂ, ನಾನು ನನ್ನ ಸ್ನೇಹಿತರೊಂದಿಗೆ ಚಲನಚಿತ್ರಗಳನ್ನು ನೋಡುವ ಅಭ್ಯಾಸವನ್ನು ಹೊಂದಿದ್ದೆ.

 

ನಾನು ತಪ್ಪದೇ ಚರ್ಚ್‌ಗೆ ಹೋಗುತ್ತಾ, ಚರ್ಚ್ ನ ಕೆಲಸವನ್ನು ಮಾಡುತ್ತಿದ್ದೆ. ಮಕ್ಕಳು ರಕ್ಷಣೆ ಹೊಂದುವ ಮೊದಲೇ ಅವರಿಗೆ ಕಥೆಗಳು, ವಾಕ್ಯಗಳು ಮತ್ತು ಹಾಡುಗಳನ್ನು ಕಲಿಸಿಕೊಡುತ್ತಿದ್ದೆ. ನಾನು ಚಲನಚಿತ್ರಗಳನ್ನು ನೋಡದಿರಲು ಎಷ್ಟೇ ನಿರ್ಧರಿಸಿದರೂ, ನಾನು ಅವುಗಳನ್ನು ನೋಡದೆ ಇರಲು ಸಾಧ್ಯವಾಗಲಿಲ್ಲ. ಒಂದು ದಿನ, ನಾನು ಚಿತ್ರಮಂದಿರಕ್ಕೆ ಹೋಗುತ್ತಿದ್ದಾಗ, ಆಲಯದೊಳಗಿಂದ ಒಂದು ಹಾಡಿನ ಶಬ್ಧ ಕೇಳಿದೆ, "ಸಮಯವನ್ನು ತಿಳಿದು ಬಾಳದಿದ್ದರೆ, ಕಣ್ಣೀರು ಸುರಿಸುತ್ತೀಯಲ್ಲಾ" ಎಂದು. ಇದನ್ನು ಕೇಳಿದ ಕೂಡಲೇ ನನ್ನ ಕಣ್ಣಲ್ಲಿ ನೀರು ಬಂತು. ಆದಾಗ್ಯೂ, ನಾನು ಚಿತ್ರಮಂದಿರಕ್ಕೆ ಹೋದೆ. ನಾನು ಇಡೀ ಚಲನಚಿತ್ರವನ್ನು ನೋಡಲು ಸಾಧ್ಯವಾಗಲಿಲ್ಲ ಮತ್ತು ಅರ್ಧದಲ್ಲೇ ಎದ್ದು ಬಂದುಬಿಟ್ಟೆ. ಅದರ ನಂತರ, ನಾನು ರಾತ್ರಿಯಲ್ಲಿ ನಡೆಯುವ ಸಮಾವೇಶ ಸಭೆಗಳಿಗೆ ಹಾಜರಾಗಲು ಪ್ರಾರಂಭಿಸಿದೆ. ನಾನು ಸಾಧು ಚೆಲ್ಲಪ್ಪನ ಸಭೆಯಲ್ಲಿ ನನ್ನ ಪಾಪಗಳನ್ನು ಒಪ್ಪಿಕೊಂಡು ಯೇಸುವಿಗೆ ಸಂಪೂರ್ಣವಾಗಿ ನನ್ನನ್ನು ಒಪ್ಪಿಸಿಕೊಟ್ಟೆ. 

 

ನನ್ನ ಅಧ್ಯಯನ ಮುಗಿದ ನಂತರ, ನಾನು ನನ್ನ ಮನೆಯ ಹತ್ತಿರದ ಒಂದು ಕಂಪನಿಗೆ ಸೇರಿಕೊಂಡೆ. ನಾನು ರಾತ್ರಿಯಲ್ಲಿ ಕಂಪನಿಗೆ ಹೋದರೆ, ನಾನು ಅಲ್ಲಿ ನಿದ್ರಿಸುತ್ತಿದ್ದೆ. ಒಂದು ದಿನ, ಎಂದಿನಂತೆ, ಬೆಳಿಗ್ಗೆ 1 ಗಂಟೆಗೆ, ಪ್ರಾರ್ಥಿಸುತ್ತಿರುವಾಗ, "ಬೆತೇಲ್ ಗೆ ಹೋಗು" ಎಂದು ಸ್ಪಷ್ಟವಾಗಿ ಹೇಳುವ ಧ್ವನಿಯನ್ನು ನಾನು ಕೇಳಿದೆ. ಆ ಧ್ವನಿಯನ್ನು ಕೇಳಿದ ನಂತರ, ನನಗೆ ಮತ್ತೆ ನಿದ್ರೆ ಬರಲಿಲ್ಲ. ನಾನು ಒಮ್ಮೆ FMPB ರಾಜ್ಯ ಶಿಬಿರಕ್ಕಾಗಿ ಸೇಲಂ ಜಿಲ್ಲೆಯ ಬೆತೇಲ್, ಮಿಷನರಿ ಸಂಕೀರ್ಣಕ್ಕೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ, ನನ್ನನ್ನು ಪೂರ್ಣ ಸಮಯದ ಸೇವೆಗೆ ನಿಯೋಜಿಸಲಾಗಿದೆ ಎಂದು ನನಗೆ ನೆನಪಾಯಿತು. ತಕ್ಷಣ, ನಾನು ಬೆಳಿಗ್ಗೆ ಬೇಗನೆ ಹೊರಟು ಬೆತೇಲ್ ಗೆ ಹೋದೆ, ಅಲ್ಲಿ ಸಹೋದರ ಸ್ಯಾಮ್‌ನೊಂದಿಗೆ ದೇವರ ಧ್ವನಿಯನ್ನು ಹಂಚಿಕೊಂಡೆ, ಮತ್ತು ಅವರ ಮೂಲಕ, ನಾನು ಬೈಬಲ್ ಕಾಲೇಜಿಗೆ ಸೇರಿದೆ. ದೇವರು ನನ್ನನ್ನು ತನ್ನ ಸೇವೆಗಾಗಿ ಮೊದಲೇ ನಿರ್ಧರಿಸಿದ್ದಾರೆ ಎಂದು ನನಗೆ ಮನವರಿಕೆಯಾಯಿತು. 1979 ರಿಂದ 1989 ರವರೆಗೆ, ನಾನು ಬಿಹಾರ ಮತ್ತು U.P. ದೆಹಲಿಯಲ್ಲಿ FMPB ಮಿಷನರಿಯಾಗಿ ಕೆಲಸ ಮಾಡಿದೆ. 1986 ರಲ್ಲಿ ಮದುವೆಯಾದ ನಂತರ, ನಾವು ಬಿಹಾರದ ಮಾಲ್ಡೋ ಜನರಲ್ಲಿ ಮತ್ತು ನಂತರ ದೆಹಲಿ ಮತ್ತು ವಿಶ್ವವಾಣಿ ಮಿಷನ್‌ನಲ್ಲಿ ಕುಟುಂಬವಾಗಿ ಸೇವೆ ಮಾಡಿದೆವು. ನಿವೃತ್ತಿಯ ನಂತರ, ನಾವು VMM ನಲ್ಲಿ ಕುಟುಂಬವಾಗಿ ಸೇವೆ ಮಾಡುತ್ತಿದ್ದೇವೆ. ಇಲ್ಲಿ ನಿವೃತ್ತ ಮಿಷನರಿಗಳಿಗೆ ಕಲ್ಯಾಣ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಕರ್ತನು ಅವಕಾಶವನ್ನು ನೀಡಿದ್ದಾರೆ. 

 

ನೀವು ದೇವರಿಂದ ಪೂರ್ವನಿರ್ಧರಿತ ಪಾತ್ರೆಯಾ? ನೀವು ಆತನ ಕರೆಯ ಧ್ವನಿಯನ್ನು ಕೇಳಿದ ನಂತರವೂ ಅದಕ್ಕೆ ವಿಧೇಯರಾಗಲು ಮನಸ್ಸಿಲ್ಲದೆ ಇದ್ದೀರಾ? ಇಂದೇ ಕರ್ತನ ಧ್ವನಿಗೆ ವಿಧೇಯರಾಗಿರಿ. ಅನೇಕರಿಗೆ ಆಶೀರ್ವಾದದ ಪಾತ್ರೆಯಾಗಿ ಮಾರ್ಪಡಲು ಒಪ್ಪಿಸಿಕೊಡಿರಿ.

- Rev. D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಡೇ ಕೇರ್ ಸೆಂಟರ್‌ನಲ್ಲಿ ಮಕ್ಕಳನ್ನು ಬೆಂಬಲಿಸುವ ಕುಟುಂಬಗಳು ಆಶೀರ್ವದಿಸಲ್ಪಡಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş