By Village Missionary Movement
Tuesday, 01-Jul-2025ಧೈನಂದಿನ ಧ್ಯಾನ(Kannada) – 01.07.2025
ನೆನೆಸಿ ನೋಡುತ್ತೇನೆ
"ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಅಂತ್ಯದ ವರೆಗೆ ಯಾವ ರೀತಿಯಿಂದ ನಡೆದುಕೊಂಡರೆಂದು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ" - ಇಬ್ರಿ. 13:7
ಬಾಲಮುರುಗನ್ ಎಂಬ ನಾನು, ದೇವರನ್ನು ಅರಿಯದ ಕುಟುಂಬ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದವನು. ನಾನು ಅಧ್ಯಯನ ಮಾಡುವಾಗ, ಮಂಗಳವಾರ ಮತ್ತು ಶುಕ್ರವಾರ ನನ್ನ ಮನೆಯ ಹತ್ತಿರದ ದೇವಾಲಯಗಳಿಗೆ ಹೋಗಿ ಪೂಜೆ ಮಾಡುವುದು ನನ್ನ ಪದ್ಧತಿಯಾಗಿತ್ತು. ನನ್ನ ಶಾಲಾ ವರ್ಷಗಳಲ್ಲಿ, ನನ್ನ ಮನೆಯ ಹತ್ತಿರದ ದೇವಾಲಯದಲ್ಲಿ ನನ್ನ ಸ್ನೇಹಿತರೊಂದಿಗೆ ಕುಳಿತು ಅಧ್ಯಯನ ಮಾಡುತ್ತಿದ್ದೆ. ಒಂದು ದಿನ, ನನ್ನ ಸ್ನೇಹಿತನೊಬ್ಬ ಪಕ್ಕದ ಬೀದಿಯಲ್ಲಿರುವ ಒಂದು ಮನೆಯಲ್ಲಿ ಪ್ರಾರ್ಥನಾ ಕೂಟ ನಡೆಯಲಿದೆ, "ಅಲ್ಲಿಗೆ ಬಾ" ಎಂದು ಕರೆದದ್ದರಿಂದ ಅಲ್ಲಿಗೆ ಹೋದೆ. ನನಗೆ ಶಿಕ್ಷಣವನ್ನು ಕಲಿಸುವ ಶಿಕ್ಷಕರೇ ಅದನ್ನು ನಡೆಸುತ್ತಿದ್ದರು. ಅಲ್ಲಿ ಮಾತನಾಡುವ ದೇವರ ವಾಕ್ಯದಿಂದ ನಾನು ಸ್ಪರ್ಶಿಸಲ್ಪಟ್ಟೆ. ನಾನು ಆ ಪ್ರಾರ್ಥನಾ ಗುಂಪಿಗೆ ಹೋಗುವುದನ್ನು ಮುಂದುವರೆಸಿದೆ. ಈ ಅವಧಿಯಲ್ಲಿಯೇ ಒಂದೇ ಊರಿನಲ್ಲಿದ್ದ ಸಹೋದರ ಡೇವಿಡ್ ಗಣೇಶನ್ ಮತ್ತು ನಾನು ರಕ್ಷಣೆ ಹೊಂದಿದೆವು.
ಈ ಸಂದರ್ಭದಲ್ಲಿಯೇ ನನ್ನ ಅಕ್ಕ ನಿರಂತರ ತಲೆನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಸಮಯದಲ್ಲಿ, ಅವರಿಗಾಗಿ ಪ್ರಾರ್ಥಿಸುತ್ತಿರುವಾಗ, ಒಬ್ಬ ಬೋಧಕರ ಮೂಲಕ, "ನಿಮ್ಮ ಪ್ರಾರ್ಥನೆ ನನ್ನ ಸನ್ನಿಧಿಯಲ್ಲಿ ಕೇಳಿಬಂದಿದೆ. ಶಸ್ತ್ರಚಿಕಿತ್ಸೆ ಇಲ್ಲದೆ ನಾನು ನಿಮ್ಮನ್ನು ಗುಣಪಡಿಸುತ್ತೇನೆ" ಎಂದು ಪ್ರವಾದನೆ ಹೇಳಿದರು. ಆ ಮಾತಿನಂತೆ ನಿಜವಾಗಿ, ಅವರು ಶಸ್ತ್ರಚಿಕಿತ್ಸೆಯಿಲ್ಲದೆ ಅದ್ಭುತವಾಗಿ ಗುಣಮುಖರಾದರು. ಈ ಗುಣಪಡಿಸುವಿಕೆಯು ನನ್ನ ನಂಬಿಕೆಯನ್ನು ಬಲಪಡಿಸಿತು. ದೇವರು ನನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಪ್ರಾರ್ಥನೆಯ ಮೂಲಕ ನಿವಾರಿಸಲು ನನಗೆ ಸಹಾಯ ಮಾಡಿದರು.
ದೇವರು ಕನಸಿನ ಮೂಲಕ ನನಗೆ ಸೇವೆಯ ಕರೆಯನ್ನು ಬಹಿರಂಗಪಡಿಸಿದರೂ, ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವುದನ್ನು ನೋಡಿದಾಗಲೆಲ್ಲಾ ಡೇವಿಡ್ ಗಣೇಶನ್ ಈ ರೀತಿಯಾಗಿ ಹೇಳುವುದುಂಟು, "ದೇವರು ಯೋನನನ್ನು ನಿನೆವೆಗೆ ಕಳುಹಿಸಲು ಹಡಗನ್ನು ಅಲುಗಾಡಿಸಿದಂತೆ ನಿನ್ನ ಕಂಪನಿಯನ್ನು ಮುಚ್ಚಿದರೆ ಮಾತ್ರ ನೀನು ಸೇವೆಗೆ ಬರುಗುತ್ತೀಯ ಎಂದು ಭಾವಿಸುತ್ತೇನೆ" ಎಂದು ತಮಾಷೆಯಾಗಿ ಹೇಳುತ್ತಿದ್ದರು. ಅಂತಿಮವಾಗಿ, ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದ ನನ್ನ ಕಂಪನಿಯು ಮುಚ್ಚುವ ಪರಿಸ್ಥಿತಿ ಬಂದಾಗ, ನಾನು ಇನ್ನು ಮುಂದೆ ದೇವರ ಯೋಜನೆಯನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಪೂರ್ಣ ಸಮಯದ ಸೇವೆಗೆ ನನ್ನನ್ನು ಅರ್ಪಿಸಿಕೊಳ್ಳಲು ಮತ್ತು ಗ್ರಾಮ ಮಿಷನರಿ ಸೇವೆಯೊಂದಿಗೆ ಸೇರಿ ಸೇವೆ ಮಾಡಲು ಕರ್ತನು ಕೃಪೆಯನ್ನು ಕೊಟ್ಟರು.
ನನ್ನ ಜೀವನವನ್ನು ಹಿಂತಿರುಗಿ ನೋಡಿದಾಗ, ನನ್ನನ್ನು ಕ್ರಿಸ್ತನ ಬಳಿಗೆ ಕರೆದೊಯ್ದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಪ್ರಾರ್ಥನಾ ಸಭೆಗೆ ನನ್ನನ್ನು ಕರೆದೊಯ್ದ ನನ್ನ ಸ್ನೇಹಿತ, ನನ್ನ ಆಧ್ಯಾತ್ಮಿಕ ಶಿಕ್ಷಕ, ನನ್ನ ಬೋಧಕರು ಮತ್ತು ನನಗೆ ಸೇವೆಯ ಹೊರೆಯನ್ನು ನೀಡಿದ ನನ್ನ ಸಹೋದರ ಡೇವಿಡ್ ಗಣೇಶನ್ ಅವರು ನಾನು ದೇವರ ಪ್ರೀತಿಯನ್ನು ಸವಿಯುವಂತೆ ಮಾಡಿದ ಅದ್ಬುತಗಳಿಗಾಗಿ ನಾನು ದೇವರನ್ನು ಸ್ತುತಿಸುತ್ತೇನೆ. ನಿಮ್ಮ ಜೀವನದಲ್ಲಿ ನೀವು ಎಷ್ಟು ಜನರನ್ನು ಈ ರೀತಿ ಹೊಗಳಬಹುದು? ಅವರನ್ನು ನೆನಸಿಕೊಳ್ಳಿ, ಅವರಿಗೆ ಧನ್ಯವಾದ ಹೇಳಿ ಮತ್ತು ಅವರಿಗಾಗಿ ಪ್ರಾರ್ಥಿಸಿ. ನೀವು ಇತರರನ್ನು ದೇವರ ಕಡೆಗೆ ಕರೆದೊಯ್ಯುವ ಜನರಾಗಿ ಮಾರ್ಪಡಿರಿ.
- Bro.ಫಿಲಿಪ್ ಬಾಲಮುರುಗನ್
ಪ್ರಾರ್ಥನಾ ಅಂಶ:
ಈ ತಿಂಗಳ ಸೇವೆಗಳು ಮತ್ತು ಸೇವೆಗಳ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482